ಮನೆ ಕಟ್ಟಿಸುವುದು ಸುಲಭವಾದ ವಿಚಾರವೇ ಅಲ್ಲವೇ ಅಲ್ಲ. ಅದುವರೆಗೂ ಕಷ್ಟಪಟ್ಟು ಒಂದೊಂದು ರೂಪಾಯಿ ಕೂಡಿಟ್ಟ ಹಣವನ್ನು ಅಥವಾ ಮನೆ ಕಟ್ಟಬೇಕು ಎನ್ನುವ ಕಾರಣಕ್ಕಾಗಿಯೇ ದೊಡ್ಡ ಮಟ್ಟದಲ್ಲಿ ಸಾಲವನ್ನು ಮಾಡಿಕೊಂಡು ಮನೆ ಕಟ್ಟುತ್ತಿರುತ್ತೇವೆ ಎಲ್ಲರಿಗೂ ಪದೇ ಪದೇ ಮನೆ ಕಟ್ಟುವ ಯೋಗ ಇರುವುದಿಲ್ಲ.
ಒಂದು ಬಾರಿ ಅಚ್ಚುಕಟ್ಟಾಗಿ ನಮ್ಮ ಆಸೆ ಪ್ರಕಾರ ವ್ಯವಸ್ಥಿತವಾಗಿ ಒಂದು ಮನೆ ಕಟ್ಟಿಸಿಕೊಂಡು ನೆಮ್ಮದಿಯಾಗಿ ಬದುಕಬೇಕು ಎನ್ನುವುದು ಬಹಳ ದೊಡ್ಡ ಸಮಾಧಾನಕರ ಸಂಗತಿ. ಹಾಗಾಗಿ ಮನೆ ಕಟ್ಟುವಾಗ ಪ್ರತಿ ವಿಚಾರದಲ್ಲೂ ಕೂಡ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ಅದು ಮಿಸ್ ಮಾಡಿದೆವು, ಇಲ್ಲಿ ಇದು ಬರಬೇಕಿತ್ತು ಎಂದು ಕನ್ಫ್ಯೂಸ್ ಆಗಿ ಬೇಸರದಲ್ಲಿಯೇ ಬದುಕಬೇಕಾಗುತ್ತದೆ.
ಈ ಸುದ್ದಿ ಓದಿ:-ಸಹಕಾರಿ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ.!
ಹೀಗೆ ನೀವು ಮನೆ ಕಟ್ಟುತ್ತಿದ್ದರೆ ಪಾರ್ಕಿಂಗ್ ವಿಚಾರವಾಗಿ ಮಾಡುವ ಮಿಸ್ಟೇಕ್ ಬಗ್ಗೆ ನಂತರ ದುಃ’ಖಿಸಬಾರದು ಎಂದರೆ ಈ ಪಾಯಿಂಟ್ ಗಳನ್ನು ಅನುಸರಿಸಿ.
* ಉದಾಹರಣೆಗೆ 30*40 ಸೈಟ್ ಆದರೆ 16*30 ಆದರೂ ಪಾರ್ಕಿಂಗ್ ಸ್ಪೇಸ್ ಬಿಡಲೇಬೇಕು.
* ಪಾರ್ಕಿಂಗ್ ಸ್ಪೇಸ್ ಎನ್ನುವುದು ಈಗ ಬಹಳ ಮುಖ್ಯ ವಿಚಾರ ಯಾಕೆಂದರೆ ಆಗ ಮನೆಗೊಂದು ವೆಹಿಕಲ್ ಇರುತ್ತಿತ್ತು ಈಗ ಮನೆಯೊಂದರಲ್ಲೇ ಗಂಡನಿಗೆ ಒಂದು ಬೈಕ್, ಹೆಂಡತಿಗೆ ಸ್ಕೂಟರ್, ಮಕ್ಕಳಿಗೆ ಸೈಕಲ್, ಒಂದು ಎಲೆಕ್ಟ್ರಿಕಲ್ ವೆಹಿಕಲ್, ಒಂದು ಮಾಮೂಲಿ ಫ್ಯುಯಲ್ ಗಾಡಿ, ದೊಡ್ಡ ಕಾರ್, ಚಿಕ್ಕ ಕಾರ್ ಹೀಗೆ ಮುಂದೆ ಮನೆಗೆ ಹತ್ತಾರು ವೆಹಿಕಲ್ ಗಳು ಬರುತ್ತವೆ.
ಇವುಗಳನ್ನು ಗಮನದಲ್ಲಿಟ್ಟುಕೊಂಡು ಮನೆ ಕಟ್ಟುವಾಗಲೇ ಎಷ್ಟು ಪಾರ್ಕಿಂಗ್ ಬೇಕಾಗುತ್ತದೆ ಎಂದು ಸ್ವಂತ ಮನೆ ಕಟ್ಟುವವರು ಪ್ಲಾನಿಂಗ್ ಮಾಡಿಕೊಳ್ಳಬೇಕು.
ಈ ಸುದ್ದಿ ಓದಿ:-ಗ್ರಾನೈಟ್ ಖರೀದಿಸುವಾಗ ಮತ್ತು ಹಾಕಿಸುವಾಗ ಆಗುವ ಸಾಮಾನ್ಯ ತಪ್ಪುಗಳೇನೇನು ಗೊತ್ತಾ.? ಈಗಲೇ ತಿಳಿದುಕೊಂಡರೆ ಮುಂದೆ ಚಿಂತೆ ಪಡುವುದು ತಪ್ಪುತ್ತದೆ.!
* ಮನೆ ಕಟ್ಟುವಾಗ ಪಾರ್ಕಿಂಗ್ ಗೆ ಗ್ರೌಂಡ್ ಫ್ಲೋರ್ ಪೂರ್ತಿ ಬಿಟ್ಟರು ಕಾಲಂಗಳು ಎಲ್ಲೆಲ್ಲಿ ಬರುತ್ತವೆ ಎನ್ನುವುದನ್ನು ಸರಿಯಾಗಿ ಗಮನಿಸಿ ಹಾಕಬೇಕು. ಒಂದು ವೇಳೆ ಕಾಲಂ ಅವಾಯ್ಡ್ ಮಾಡಲು ಆಗದೆ ಇದ್ದಲ್ಲಿ ಟು ವೀಲರ್ ಗೆ ಬೇರೆ, ಫೋರ್ ವೀಲರ್ ಗೆ ಬೇರೆ ರೀತಿ ಸೆಪರೇಟ್ ಆದ ಗೇಟ್ ಆದರೂ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಗಾಡಿಗಳನ್ನು ಟರ್ನಿಂಗ್ ಮಾಡುವುದು ಇತ್ಯಾದಿ ವಿಚಾರಗಳಿಗೆ ಸಮಸ್ಯೆ ಆಗುತ್ತಿರುತ್ತದೆ.
* ಗ್ರೌಂಡ್ ಫ್ಲೋರ್ ನಲ್ಲಿ ಬಾಡಿಗೆಗೆ ಮನೆ ಕೊಟ್ಟು ಫಸ್ಟ್ ಫ್ಲೋರ್ ಇಂದ ಡ್ಯೂಪ್ಲೆಕ್ಸಾ ಹೌಸ್ ಮಾಡಿಕೊಂಡಿದ್ದರೆ ಅವರು ಮೇಲೆ ಬರುವುದು ಕಷ್ಟ ಆಗುತ್ತದೆ ಅಥವಾ ಇಷ್ಟ ಪಡುವುದಿಲ್ಲ. ಆಗ ಕೆಳಗಡೆಯೇ ಅವರಿಗೆ ಬಟ್ಟೆ ಒಣ ಹಾಕಲು ಪುಲ್ ಮಾಡುವ ಆಂಗರ್ ಗಳನ್ನು ಹಾಕಿ ಕೊಡಬೇಕಾಗುತ್ತದೆ. ಇದರ ಬಗ್ಗೆಯೂ ಡ್ಯೂಪ್ಲೆಕ್ಸ್ ಮಾಡುವವರು ಯೋಚಿಸಬೇಕು.
* ಪ್ಲಾಂಟ್ ಗಳನ್ನು ಇಡಲು ಬಾಕ್ಸ್ ಗಳನ್ನು ಮಾಡಿಕೊಟ್ಟರೆ ಹಸಿರನ್ನು ಕೂಡ ಬೆಳೆಸಿದ ರೀತಿ ಆಗುತ್ತದೆ ಜಾಗ ಇದ್ದರೆ ಹೀಗೆ ಮಾಡಿ ಯುಟಿಲೈಜ್ ಮಾಡಿಕೊಳ್ಳಬೇಕು.
ಈ ಸುದ್ದಿ ಓದಿ:-ಭಾರತೀಯ ಸೇನೆಯಲ್ಲಿ ಉದ್ಯೋಗವಕಾಶ, 56,100/- ಸ್ಟೈಫಂಡ್ ಜೊತೆಗೆ ತರಭೇತಿ ಆಸಕ್ತರು ಅರ್ಜಿ ಸಲ್ಲಿಸಿ.!
* ಈಗ ಎಲೆಕ್ಟ್ರಿಕಲ್ ವಾಹನಗಳ ಟ್ರೆಂಡ್ ಶುರುವಾಗಿರುವುದರಿಂದ ಈಗ ವಾಹನ ಇಲ್ಲದಿದ್ದರೂ ಮುಂದೆ ಖರೀದಿಸುವ ಪ್ಲಾನ್ ಬರಬಹುದು. ಹಾಗಾಗಿ ಈಗಲೇ ಎಲೆಕ್ಟ್ರಿಕಲ್ ವಾಹನಗಳನ್ನು ಚಾರ್ಜ್ ಮಾಡಲು ಪಾಯಿಂಟ್ ಗಳನ್ನು ಮಾಡಿಸಬೇಕು.
ಚಾರ್ಜರ್ ಪಾಯಿಂಟ್ ಗಳನ್ನು ಎಲ್ಲಿ ಹಾಕಿಸುತ್ತೇವೆ ಎನ್ನುವುದು ಮುಖ್ಯ. ಹಾಗೆ ಬಾಡಿಗೆಗೆ ಮನೆಗಳನ್ನು ಕೊಡುವುದಾದರೆ ಪ್ರತ್ಯೇಕವಾಗಿ ಅವುಗಳ ಕನೆಕ್ಷನ್ ಅನ್ನು ಅದೇ ಮೀಟಡ್ ಗೆ ಕೊಡಿಸಬೇಕು ಎನ್ನುವುದರ ಬಗ್ಗೆ ನಿಗಾ ವಹಿಸಬೇಕು. ಈ ವಿಚಾರವಾಗಿ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ.