ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಸಿಗಲಿದೆ 12,000 ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!

ಕೇಂದ್ರ ಸರ್ಕಾರವು ದೇಶದ ಅಭಿವೃದ್ಧಿಗಾಗಿ ಹಲವು ವಿಧವಾದ ಯೋಜನೆಗಳನ್ನು ರೂಪಿಸಿ ಪ್ರತಿ ವರ್ಗಕ್ಕೂ ಕೂಡ ಆದ್ಯತೆ ನೀಡಿ ಹತ್ತಾರು ಬಗೆಯ ಯೋಜನೆಗಳನ್ನು ಪರಿಚಯಿಸಿದೆ. ಈ ನಿಟ್ಟಿನಲ್ಲಿ ಭಾರತವನ್ನು ಸ್ವಚ್ಛ ಭಾರತ ಮಾಡುವ ಧ್ಯೇಯ ಇಟ್ಟುಕೊಂಡು ಸ್ವಚ್ಛ ಭಾರತ ಮಿಷನ್ ಅಭಿಯಾನ ಆರಂಭಿಸಲಾಯಿತು.

WhatsApp Group Join Now
Telegram Group Join Now

2 ಅಕ್ಟೋಬರ್, 2014ರಂದು ನಡೆದ ಗಾಂಧಿ ಜಯಂತಿ ಅಂಗವಾಗಿ ಸರ್ಕಾರ ಈ ಯೋಜನೆ ಕೈಗೊಂಡಿತು. ಈ ಯೋಜನೆಯ ಮುಖ್ಯ ಧ್ಯೇಯ ಐದು ವರ್ಷಗಳ ಅಂದರೆ 2019ರ ಒಳಗೆ ಭಾರತದ ಪ್ರತಿ ಗ್ರಾಮವನ್ನು ಬಯಲು ಮುಕ್ತ ಗ್ರಾಮವನ್ನಾಗಿಸುವುದು. ಈ ಉದ್ದೇಶದಿಂದ ಪ್ರತಿ ಮನೆಗೂ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳುವುದಕ್ಕೆ ಸರ್ಕಾರವೇ ಗರಿಷ್ಠ ರೂ.10,000 ದವರೆಗೆ ಸಹಾಯ ನೀಡಿ ನೆರವಾಗುತ್ತಿತ್ತು.

ಈ ಸುದ್ದಿ ಓದಿ:- ಕೇಸರಿ ಬೆಳೆಗೆ ಹೈ ಡಿಮ್ಯಾಂಡ್, ಮನೆಯಲ್ಲಿಯೇ ಕೇಸರಿ ಬೆಳೆದು ಲಕ್ಷ ಲಕ್ಷ ಸಂಪಾದಿಸಬಹುದು, ಹೇಗೆ ಅಂತ ನೋಡಿ.!

ಇದುವರೆಗೂ ನಡೆದ ಸರ್ವೆಯ ಪ್ರಕಾರವಾಗಿ 10.5 ಕೋಟಿ ಗೃಹಗಳು ಈ ಯೋಜನೆಯಡಿ ತಮ್ಮ ಮನೆಯೊಳಗೆ ಶೌಚಾಲಯದ ಅನುಕೂಲತೆ ಹೊಂದಿದ್ದಾರೆ. ಸ್ವಚ್ಛತೆ ಮಾತ್ರವಲ್ಲದೇ ಆರೋಗ್ಯದ ದೃಷ್ಟಿಕೋನದಿಂದಲೂ ಕೂಡ ಇದು ಒಂದು ಜವಾಬ್ದಾರಿಯಾಗಿದೆ. ಈಗ ಇಂತಹ ಹೆಸರಾಂತ ಯೋಜನೆಯ ಸಹಾಯಧನದ ಮೊತ್ತವನ್ನು ಹೆಚ್ಚಿಸಲಾಗಿದೆ ಎನ್ನುವ ಸಿಹಿ ಸುದ್ದಿಯನ್ನು ಈ ಲೇಖನದಲ್ಲಿ ತಿಳಿಸ ಬಯಸುತ್ತಿದ್ದೇವೆ.

2019 ರಿಂದ 2024ರ ಅವಧಿಗೆ ಮತ್ತೊಮ್ಮೆ ಈ ಯೋಜನೆಯನ್ನು ವಿಸ್ತರಿಸಲಾಗಿತ್ತು ಈಗ ಈ ಕುರಿತಾದ ಮತ್ತೊಂದು ಅಪ್ಡೇಟ್ ಏನೆಂದರೆ ಇದುವರೆಗೂ ಸಿಗುತ್ತಿದ್ದ ರೂ.10,000 ಸಹಾಯದಿಂದ ಬದಲು ಈಗ ರೂ.12,000 ನೀಡಲು ನಿರ್ಧರಿಸಲಾಗಿದೆ.

ಈ ಸುದ್ದಿ ಓದಿ:- ನಿಮ್ಮ ಮನೆಗೆ ಯಾವ ಟ್ಯಾಂಕರ್ ಸೂಕ್ತ.? 1 ಲೇಯರ್, 2 ಲೇಯರ್ / 3 ಲೇಯರ್ ! ಇದು ಆರೋಗ್ಯದ ವಿಚಾರವೂ ಕೂಡ ತಪ್ಪದೆ ತಿಳಿದುಕೊಳ್ಳಿ.!

ಗ್ರಾಮೀಣ ಭಾಗದಲ್ಲಿರುವ ಪ್ರತಿ ಕುಟುಂಬವು ಕೂಡ ಈ ಯೋಜನೆ ಪ್ರಯೋಜನ ಪಡೆದುಕೊಳ್ಳಬೇಕು ಎನ್ನುವುದೇ ನಮ್ಮ ಲೇಖನದ ಆಶಯ ಹಾಗಾಗಿ ಈ ಅಂಕಣದಲ್ಲಿ ಯಾರು ಅರ್ಜಿ ಸಲ್ಲಿಸಲು ಅರ್ಹರು? ಏನೆಲ್ಲಾ ದಾಖಲೆಗಳನ್ನು ನೀಡಬೇಕು? ಮತ್ತು ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಎನ್ನುವ ಎಲ್ಲಾ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ. ತಪ್ಪದೆ ಈ ಉಪಯುಕ್ತ ಮಾಹಿತಿ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಯೋಜನೆಯ ಹೆಸರು:- ಉಚಿತ ಶೌಚಾಲಯ ಯೋಜನೆ 2024
ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು:-

* ಈ ಯೋಜನೆಯಡಿ ಶೌಚಾಲಯ ಇಲ್ಲದ ಮನೆಗಳಿಗೆ ಉಚಿತವಾಗಿ ಶೌಚಾಲಯ ನಿರ್ಮಿಸಿ ಕೊಡಲಾಗುತ್ತಿದೆ. ಇನ್ನು ಸಹ ಶೌಚಾಲಯದ ಅನುಕೂಲತೆ ಹೊಂದದ ಕುಟುಂಬದ ಮುಖ್ಯಸ್ಥರು ಯೋಜನೆಗೆ ಅರ್ಜಿ ಸಲ್ಲಿಸಬಹುದು
* ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ದೇಶದಾದ್ಯಂತ ಕೈಗೊಂಡಿರುವ ಜನಪ್ರಿಯ ಯೋಜನೆ ಎಂದು ಹೇಳಬಹುದು ಒಬ್ಬರಿಂದ ಮತ್ತೊಬ್ಬರ ಮನಸ್ಸು ಈ ಬಗ್ಗೆ ಬದಲಾಗಿ ಮಹಾ ಪರಿವರ್ತನೆ ಆಗುತ್ತದೆ ಹೀಗಾಗಿ ಸ್ವಚ್ಛ ಭಾರತ ಎನ್ನುವ ವಿಷಯಕ್ಕೆ ಹೆಚ್ಚಿನ ಆದ್ಯತೆಯನ್ನು ಸರ್ಕಾರ ನೀಡುತ್ತಿದೆ.

ಈ ಸುದ್ದಿ ಓದಿ:- ಈ ಲಕ್ಷಣಗಳೇನಾದರೂ ಕಂಡು ಬಂದರೆ ಒಂದು ತಿಂಗಳೊಳಗೆ ಸ್ಟ್ರೋಕ್ ಆಗಬಹುದು ಎಚ್ಚರ.!
ಅರ್ಜಿ ಸಲ್ಲಿಸುವ ವಿಧಾನ:-

* ಸ್ವಚ್ಛ ಭಾರತ್ ಮಿಷನ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು
ವೆಬ್ಸೈಟ್ ವಿಳಾಸ:-
https://swachhbharatmission.gov.in/sbmcms/index.htm
* ಅರ್ಜಿ ಸಲ್ಲಿಸುವ ಲಿಂಕ್ ಕ್ಲಿಕ್ ಮಾಡಿ ವಿವರಗಳನ್ನು ಸರಿಯಾಗಿ ಭರ್ತೀ ಮಾಡಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹತ್ತಿರದಲ್ಲಿರುವ ನಿಮ್ಮ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿಯಾಗಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.

ಬೇಕಾಗುವ ದಾಖಲೆಗಳು:-

* ಆಧಾರ್ ಕಾರ್ಡ್
* ವಿಳಾಸ ಪುರವೇ
*  ಬ್ಯಾಂಕ್ ಪಾಸ್ ಬುಕ್ ವಿವರ
* ಇನ್ನಿತರ ಪ್ರಮುಖ ದಾಖಲೆಗಳು

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now