ಕೇಂದ್ರ ಸರ್ಕಾರವು ದೇಶದ ಅಭಿವೃದ್ಧಿಗಾಗಿ ಹಲವು ವಿಧವಾದ ಯೋಜನೆಗಳನ್ನು ರೂಪಿಸಿ ಪ್ರತಿ ವರ್ಗಕ್ಕೂ ಕೂಡ ಆದ್ಯತೆ ನೀಡಿ ಹತ್ತಾರು ಬಗೆಯ ಯೋಜನೆಗಳನ್ನು ಪರಿಚಯಿಸಿದೆ. ಈ ನಿಟ್ಟಿನಲ್ಲಿ ಭಾರತವನ್ನು ಸ್ವಚ್ಛ ಭಾರತ ಮಾಡುವ ಧ್ಯೇಯ ಇಟ್ಟುಕೊಂಡು ಸ್ವಚ್ಛ ಭಾರತ ಮಿಷನ್ ಅಭಿಯಾನ ಆರಂಭಿಸಲಾಯಿತು.
2 ಅಕ್ಟೋಬರ್, 2014ರಂದು ನಡೆದ ಗಾಂಧಿ ಜಯಂತಿ ಅಂಗವಾಗಿ ಸರ್ಕಾರ ಈ ಯೋಜನೆ ಕೈಗೊಂಡಿತು. ಈ ಯೋಜನೆಯ ಮುಖ್ಯ ಧ್ಯೇಯ ಐದು ವರ್ಷಗಳ ಅಂದರೆ 2019ರ ಒಳಗೆ ಭಾರತದ ಪ್ರತಿ ಗ್ರಾಮವನ್ನು ಬಯಲು ಮುಕ್ತ ಗ್ರಾಮವನ್ನಾಗಿಸುವುದು. ಈ ಉದ್ದೇಶದಿಂದ ಪ್ರತಿ ಮನೆಗೂ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳುವುದಕ್ಕೆ ಸರ್ಕಾರವೇ ಗರಿಷ್ಠ ರೂ.10,000 ದವರೆಗೆ ಸಹಾಯ ನೀಡಿ ನೆರವಾಗುತ್ತಿತ್ತು.
ಈ ಸುದ್ದಿ ಓದಿ:- ಕೇಸರಿ ಬೆಳೆಗೆ ಹೈ ಡಿಮ್ಯಾಂಡ್, ಮನೆಯಲ್ಲಿಯೇ ಕೇಸರಿ ಬೆಳೆದು ಲಕ್ಷ ಲಕ್ಷ ಸಂಪಾದಿಸಬಹುದು, ಹೇಗೆ ಅಂತ ನೋಡಿ.!
ಇದುವರೆಗೂ ನಡೆದ ಸರ್ವೆಯ ಪ್ರಕಾರವಾಗಿ 10.5 ಕೋಟಿ ಗೃಹಗಳು ಈ ಯೋಜನೆಯಡಿ ತಮ್ಮ ಮನೆಯೊಳಗೆ ಶೌಚಾಲಯದ ಅನುಕೂಲತೆ ಹೊಂದಿದ್ದಾರೆ. ಸ್ವಚ್ಛತೆ ಮಾತ್ರವಲ್ಲದೇ ಆರೋಗ್ಯದ ದೃಷ್ಟಿಕೋನದಿಂದಲೂ ಕೂಡ ಇದು ಒಂದು ಜವಾಬ್ದಾರಿಯಾಗಿದೆ. ಈಗ ಇಂತಹ ಹೆಸರಾಂತ ಯೋಜನೆಯ ಸಹಾಯಧನದ ಮೊತ್ತವನ್ನು ಹೆಚ್ಚಿಸಲಾಗಿದೆ ಎನ್ನುವ ಸಿಹಿ ಸುದ್ದಿಯನ್ನು ಈ ಲೇಖನದಲ್ಲಿ ತಿಳಿಸ ಬಯಸುತ್ತಿದ್ದೇವೆ.
2019 ರಿಂದ 2024ರ ಅವಧಿಗೆ ಮತ್ತೊಮ್ಮೆ ಈ ಯೋಜನೆಯನ್ನು ವಿಸ್ತರಿಸಲಾಗಿತ್ತು ಈಗ ಈ ಕುರಿತಾದ ಮತ್ತೊಂದು ಅಪ್ಡೇಟ್ ಏನೆಂದರೆ ಇದುವರೆಗೂ ಸಿಗುತ್ತಿದ್ದ ರೂ.10,000 ಸಹಾಯದಿಂದ ಬದಲು ಈಗ ರೂ.12,000 ನೀಡಲು ನಿರ್ಧರಿಸಲಾಗಿದೆ.
ಈ ಸುದ್ದಿ ಓದಿ:- ನಿಮ್ಮ ಮನೆಗೆ ಯಾವ ಟ್ಯಾಂಕರ್ ಸೂಕ್ತ.? 1 ಲೇಯರ್, 2 ಲೇಯರ್ / 3 ಲೇಯರ್ ! ಇದು ಆರೋಗ್ಯದ ವಿಚಾರವೂ ಕೂಡ ತಪ್ಪದೆ ತಿಳಿದುಕೊಳ್ಳಿ.!
ಗ್ರಾಮೀಣ ಭಾಗದಲ್ಲಿರುವ ಪ್ರತಿ ಕುಟುಂಬವು ಕೂಡ ಈ ಯೋಜನೆ ಪ್ರಯೋಜನ ಪಡೆದುಕೊಳ್ಳಬೇಕು ಎನ್ನುವುದೇ ನಮ್ಮ ಲೇಖನದ ಆಶಯ ಹಾಗಾಗಿ ಈ ಅಂಕಣದಲ್ಲಿ ಯಾರು ಅರ್ಜಿ ಸಲ್ಲಿಸಲು ಅರ್ಹರು? ಏನೆಲ್ಲಾ ದಾಖಲೆಗಳನ್ನು ನೀಡಬೇಕು? ಮತ್ತು ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಎನ್ನುವ ಎಲ್ಲಾ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ. ತಪ್ಪದೆ ಈ ಉಪಯುಕ್ತ ಮಾಹಿತಿ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಯೋಜನೆಯ ಹೆಸರು:- ಉಚಿತ ಶೌಚಾಲಯ ಯೋಜನೆ 2024
ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು:-
* ಈ ಯೋಜನೆಯಡಿ ಶೌಚಾಲಯ ಇಲ್ಲದ ಮನೆಗಳಿಗೆ ಉಚಿತವಾಗಿ ಶೌಚಾಲಯ ನಿರ್ಮಿಸಿ ಕೊಡಲಾಗುತ್ತಿದೆ. ಇನ್ನು ಸಹ ಶೌಚಾಲಯದ ಅನುಕೂಲತೆ ಹೊಂದದ ಕುಟುಂಬದ ಮುಖ್ಯಸ್ಥರು ಯೋಜನೆಗೆ ಅರ್ಜಿ ಸಲ್ಲಿಸಬಹುದು
* ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ದೇಶದಾದ್ಯಂತ ಕೈಗೊಂಡಿರುವ ಜನಪ್ರಿಯ ಯೋಜನೆ ಎಂದು ಹೇಳಬಹುದು ಒಬ್ಬರಿಂದ ಮತ್ತೊಬ್ಬರ ಮನಸ್ಸು ಈ ಬಗ್ಗೆ ಬದಲಾಗಿ ಮಹಾ ಪರಿವರ್ತನೆ ಆಗುತ್ತದೆ ಹೀಗಾಗಿ ಸ್ವಚ್ಛ ಭಾರತ ಎನ್ನುವ ವಿಷಯಕ್ಕೆ ಹೆಚ್ಚಿನ ಆದ್ಯತೆಯನ್ನು ಸರ್ಕಾರ ನೀಡುತ್ತಿದೆ.
ಈ ಸುದ್ದಿ ಓದಿ:- ಈ ಲಕ್ಷಣಗಳೇನಾದರೂ ಕಂಡು ಬಂದರೆ ಒಂದು ತಿಂಗಳೊಳಗೆ ಸ್ಟ್ರೋಕ್ ಆಗಬಹುದು ಎಚ್ಚರ.!
ಅರ್ಜಿ ಸಲ್ಲಿಸುವ ವಿಧಾನ:-
* ಸ್ವಚ್ಛ ಭಾರತ್ ಮಿಷನ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು
ವೆಬ್ಸೈಟ್ ವಿಳಾಸ:-
https://swachhbharatmission.gov.in/sbmcms/index.htm
* ಅರ್ಜಿ ಸಲ್ಲಿಸುವ ಲಿಂಕ್ ಕ್ಲಿಕ್ ಮಾಡಿ ವಿವರಗಳನ್ನು ಸರಿಯಾಗಿ ಭರ್ತೀ ಮಾಡಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹತ್ತಿರದಲ್ಲಿರುವ ನಿಮ್ಮ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿಯಾಗಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.
ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* ವಿಳಾಸ ಪುರವೇ
* ಬ್ಯಾಂಕ್ ಪಾಸ್ ಬುಕ್ ವಿವರ
* ಇನ್ನಿತರ ಪ್ರಮುಖ ದಾಖಲೆಗಳು