ರೈತನಿಗೆ ತಮ್ಮ ಭೂಮಿಯಲ್ಲಿ ಕೊಳವೆಬಾವಿ ಕೊರೆಸಿ ನೀರಿನ ಸಂಪನ್ಮೂಲ ಸಮರ್ಪಕವಾಗಿ ಬಳಸಿಕೊಂಡು ಹೆಚ್ಚು ಆಹಾರ ಉತ್ಪಾದನೆ ಮಾಡಬೇಕು ಆ ಮೂಲಕ ಹೆಚ್ಚು ಆದಾಯ ಗಳಿಸಬೇಕು ಎನ್ನುವ ಮಹೋನ್ನತವಾದ ಆಸೆ ಇದ್ದೇ ಇರುತ್ತದೆ. ಪ್ರತಿಯೊಬ್ಬ ರೈತನು ಕೂಡ ಇದಕ್ಕಾಗಿ ಲಕ್ಷಾಂತರ ಹಣ ಸುರಿದು ಬೋರ್ವೆಲ್ ಹಾಕಿಸಲು ಶ್ರಮ ಪಡುತ್ತಾನೆ.
ಆದರೆ ಇದರಲ್ಲಿ ಎಲ್ಲಾ ಪಾಯಿಂಟ್ ಗಳು ಸಕ್ಸಸ್ ಆಗುತ್ತವೆ ಎಂದು ಹೇಳಲು ಆಗುವುದಿಲ್ಲ. ಒಬ್ಬ ರೈತ ಮೊದಲ ಬಾರಿಗೆ ಬೋರ್ವೆಲ್ ಪಾಯಿಂಟ್ ಹಾಕಿಸಿ ಯಶಸ್ವಿ ಆದರೆ ಮತ್ತೊಬ್ಬ ರೈತ ಪದೇ ಪದೇ ಈ ಆಸೆಯಿಂದ ಬೋರ್ವೆಲ್ ಕೊರೆಸಿ ಕೊರೆಸಿ ನೀರು ಬರದೇ ನಷ್ಟ ಹೊಂದಿ ಸಾಲದ ಸುಳಿಯಲ್ಲಿ ಸಿಲುಕಿ ಬದುಕು ಹೈರಾಣಾಗಿಸಿಕೊಂಡ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಸಾಕಷ್ಟು ಸಿಗುತ್ತದೆ.
ಹಾಗಾಗಿ ಸಾಂಪ್ರದಾಯಿಕ ವಿಧಾನಗಳಾದ ರಾಡ್ , ತೆಂಗಿನಕಾಯಿ ಬೀಗದ ಕೀ ಸಹಾಯದಿಂದ ನೀರಿನ ಸೆಲೆ ಗುರುತಿಸುವ ನಂಬಿಕೆಗಳ ಜೊತೆ ಟೆಕ್ನಾಲಜಿ ಕೂಡ ಬಳಸಿಕೊಂಡು ಸರಿಯಾಗಿ ಪಾಯಿಂಟ್ ಗುರುತಿಸಿ ಕೊರೆಸಿದರೆ ನಷ್ಟ ಕಡಿಮೆ ಎನ್ನುವುದು ಅನೇಕರ ಅಭಿಪ್ರಾಯ ಮತ್ತು ತಂತ್ರಜ್ಞರು ಇತ್ತೀಚಿನ ಟೆಕ್ನಾಲಜಿ ಬಳಸಿಕೊಂಡು ಆಧುನಿಕ ಡಿವೈಸ್ ಗಳ ಸಹಾಯದಿಂದ ನಿಖರವಾದ ಮಾಹಿತಿಯನ್ನು ಕೊಡುತ್ತಾರೆ.
ಇಂಥವುಗಳಲ್ಲಿ ನೂರಕ್ಕೆ ನೂರರಷ್ಟು ಸಕ್ಸಸ್ ರೇಟ್ ಇದೆ ಎನ್ನುವುದು ಎಲ್ಲಾ ಕಡೆ ಕೇಳಿ ಬರುವ ಮಾತು. ಹಾಗಾಗಿ ನಾವು ಸಹ ಇಂದು ಈ ಅಂಕಣದಲ್ಲಿ ಈಗಿನ ಟೆಕ್ನಾಲಜಿ ಬಳಸಿಕೊಂಡು ಗ ಪಾಯಿಂಟ್ ಗುರುತಿಸಿ ಕೊಡುವ ಮಂಡ್ಯದ ಶೇಖರ್ ಎನ್ನುವ ತಂತಜ್ಞರ ಬಗ್ಗೆ ಮತ್ತು ಈ ವಿಧಾನದ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ. ಇವರು ಕರ್ನಾಟಕದಾದ್ಯಂತ ಯಾವುದೇ ಭಾಗದ ರೈತರು ಕೇಳಿದರೂ ಕೂಡ ಅವರ ಜಮೀನಿಗೆ ಹೋಗಿ ಈ ರೀತಿ ಪಾಯಿಂಟ್ ಗುರುತಿಸಿ ಕೊಡುತ್ತಾರೆ.
ಇವರ ತಂತ್ರಜ್ಞಾನದ ಬಗ್ಗೆ ಹೇಳುವುದಾದರೆ USA ಮತ್ತು ಜಪಾನ್ ಟೆಕ್ನಾಲಜಿ ಬಳಸಿ ಇವರು ಲೋಕೇಟರ್, ಡಿವೈಡರ್ ಮತ್ತು IP ಎನ್ನುವ ಮೂರು ಡಿವೈಸ್ ಗಳ ಮೂಲಕ ನೀರಿನ ಸೆಲೆಯನ್ನು ಗುರುತಿಸಿ ಪಾಯಿಂಟ್ ಮಾಡಿಕೊಡುತ್ತಾರೆ. ಮೊದಲಿಗೆ ಲೊಕೇಟರ್ ಎನ್ನುವುದು ಜಮೀನಿನ ಸುತ್ತ ಓಡಾಡಿದರೆ ಯಾವ ಕಡೆ ನೀರು ಇದೆ ಎನ್ನುವುದನ್ನು ಮಾಡಿ ತೋರಿಸುತ್ತದೆ, ಇನ್ನು ಎರಡನೇಯದು ಎಲ್ಲಿಂದ ಎಲ್ಲಿವರೆಗೆ ನೀರಿನ ಸೆಲೆ ಹರಿದಿದೆ ಎನ್ನುವುದನ್ನು ಗುರುತಿಸುತ್ತದೆ.
ಪ್ರತಿ ಒಂದು ಮೀಟರ್ ಗೆ ನಾಲ್ಕು ಸುತ್ತಳತೆಗಳಲ್ಲಿ ಲಾಕ್ ಮಾಡಿ ಈ ಸಾಧನದ ಸಹಾಯದಿಂದ ನೀರಿನ ಹರಿವಿನ ಗ್ರಾಫ್ ಕಂಡುಹಿಡಿಯಲಾಗುತ್ತದೆ. ಮೂರನೇಯದು IP ಬಹಳ ಮುಖ್ಯವಾದದ್ದು ಇದು ಎಷ್ಟು ಆಳದಲ್ಲಿ ನೀರು ಸಿಗುತ್ತದೆ ಎನ್ನುವ ನಿಖರ ಮಾಹಿತಿ ನೀಡುತ್ತದೆ. ಮಧ್ಯ ಎಲ್ಲಿ ಇದು ಡಿವೈಡ್ ಆಗಿದೆ ಅಥವಾ ಕಲ್ಲಿದೆಯೇ ಮರಳಿದೆಯೇ ಅಥವಾ ಇನ್ನೇನಾದರೂ ಅಡ್ಡ ಇದೆ ಎನ್ನುವುದು ಎಲ್ಲಾ ಮಾಹಿತಿಯನ್ನು ಗ್ರಾಫ್ ಮೂಲಕ ತಿಳಿಸುತ್ತದೆ.
ಈ ರೀತಿಯ ಸೆನ್ಸಾರ್ ಟೆಕ್ನಾಲಜಿ ಬಳಸಿ ಡಿವೈಸ್ ಮೇಲೆ ಇರುವ ಸ್ಕ್ರೀನ್ ನಲ್ಲಿ ಇವುಗಳನ್ನು ನೋಡಬಹುದು. ಈ ವಾಟರ್ ಪಾಯಿಂಟ್ ಐಡೆಂಟಿ ಫೈಯರ್ ಹೇಳಿದ ರೀತಿಯಲ್ಲಿ ನೀವೇನಾದರೂ ಅದೇ ಜಾಗಕ್ಕೆ ಬೋರ್ವೆಲ್ ಹಾಕಿಸಿದರೆ ನೀರು ಬರುವುದು ಪಕ್ಕ ಗ್ಯಾರಂಟಿ, ಇದಕ್ಕೆ ಇದುವರೆಗೆ ಇವರು ಹೇಳಿದ ಒಂದು ಪಾಯಿಂಟ್ ಕೂಡ ಫೇಲ್ ಆಗದೇ ಇರುವುದೇ ಗ್ಯಾರಂಟಿ.
101% ಪಕ್ಕ ನೀರು ಬರುತ್ತದೆ ಎನ್ನುವ ಕಾನ್ಫಿಡೆನ್ಸ್ ಕೊಡುವ ಇವರ ಮಾತುಗಳೇ ರೈತನ ಸಮಾಧಾನ ಈ ಬಗ್ಗೆ ನೀವು ಆಸಕ್ತರಾಗಿದ್ದರೆ ಈ ವಿಡಿಯೋ ಪೂರ್ತಿಯಾಗಿ ನೋಡಿ ಅಥವಾ ಈ ಕೆಳಕಂಡ ಸಂಖ್ಯೆಗಳಿಗೆ ಸಂಪರ್ಕಿಸಿ ನೀವು ಕೂಡ ಇವರ ಸಹಾಯ ಪಡೆಯಿರಿ.
8073469817