ಕಳೆದ ಒಂದು ವಾರದಿಂದ ಲೋಕಸಭಾ ಚುನಾವಣೆ ಕಾವಿನ ನಡುವೆಯೂ ರಾಜ್ಯದಾದ್ಯಂತ ಬಹಳಷ್ಟು ಚರ್ಚೆಯಲ್ಲಿರುವ ವಿಷಯ ಎಂದರೆ ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಬರ ಪರಿಹಾರದ ಹಣ (drought releif Fund) ಸಂದಾಯವಾಗಿರುವುದು. ರಾಜ್ಯ ಸರ್ಕಾರವು ಕೂಡ ರಾಜ್ಯದ ಅರ್ಹ ರೈತರಿಗೆ (farmers) ಜವಾಬ್ದಾರಿಯುತವಾಗಿ ಬರ ಪರಿಹಾರದ ಹಣ ವರ್ಗಾವಣೆ ಮಾಡುತ್ತಿದೆ.
ಈಗಾಗಲೇ ಜನವರಿ ತಿಂಗಳ ಅಂತ್ಯದಲ್ಲಿ ಮೊದಲನೇ ಕಂತಿನ ಹಣವಾಗಿ ಕೇಂದ್ರ ಸರ್ಕಾರದಿಂದ ಹಣ ಬರುವ ಮುಂಚೆ ರಾಜ್ಯ ಸರ್ಕಾರವು ರೂ.2000 ಹಣವನ್ನು ಜಮೆ ಮಾಡಿತ್ತು, ಈಗ ಇನ್ನುಳಿದ ಹಣವು ರಾಜ್ಯ ಸರ್ಕಾರವು ಪರ ಪರಿಹಾರದ ಹಣವಾಗಿ ನಿಗದಿಪಡಿಸಿದ ಮೊತ್ತದ ಪ್ರಕಾರವಾಗಿ ಜಮೆ ಆಗುತ್ತಿದೆ.
ಈ ಸುದ್ದಿ ಓದಿ:- ಕೇವಲ 18 ಲಕ್ಷಕ್ಕೆ ಯಾವುದೇ ಕ್ವಾಲಿಟಿ ಕಾಂಪ್ರಮೈಸ್ ಇಲ್ಲದೆ ಡುಪ್ಲೆಕ್ಸ್ ಮನೆ ಕಟ್ಟಿದ್ದರೆ ನೋಡಿ.!
NDRF ಕೈಪಿಡಿ ಅನ್ವಯ ನಡೆದ ಬರ ಪರಿಶೀಲನೆ ಅಧ್ಯಯನದಲ್ಲಿ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ 223 ತಾಲೂಕುಗಳು ಬರ ಪೀಡಿತ ತಾಲೂಕುಗಳು ಎಂದು ಘೋಷಣೆಯಾಗಿತ್ತು. ಈಗ ಅಂತೆಯೇ ಹಂತ ಹಂತವಾಗಿ ತಾಲೂಕುವಾರು ಹಣ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಹಲವು ರೈತರು ತಮ್ಮ ಪಾಲಿನ ಬರ ಪರಿಹಾರದ ಹಣ ಪಡೆದು ನಿಟ್ಟುಸಿರು ಬಿಟ್ಟಿದ್ದರೆ.
ಹಲವರು ತಮ್ಮ ತಾಲೂಕಿಗೆ ಹಣ ಬಿಡುಗಡೆ ಆಗಿದ್ದರು ಹಣ ಬಿಡುಗಡೆ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎಂದು ಅನೇಕ ರೈತರು ಚಿಂತಕ್ರಾಂತರಾಗಿದ್ದಾರೆ. ಈಗ ಇಂತಹ ರೈತರ ಸಮಸ್ಯೆ ಇತ್ಯರ್ಥ ಪಡಿಸುವ ಹೊರೆ ಕೂಡ ರಾಜ್ಯ ಸರ್ಕಾರದ ಮೇಲಿದೆ. ಮಾನ್ಯ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರವರು (Ministee Krishne Bairegowda) ಇದಕ್ಕೆ ಉತ್ತರವನ್ನು ಕೊಟ್ಟಿದ್ದಾರೆ.
ಈ ಸುದ್ದಿ ಓದಿ:- IDBI ನೇಮಕಾತಿ 2024, ಬ್ಯಾಂಕ್ ನಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಸುವರ್ಣ ಅವಕಾಶ ತಪ್ಪದೇ ಅರ್ಜಿ ಸಲ್ಲಿಸಿ. ವೇತನ 1.6 ಲಕ್ಷ
ಯಾವೆಲ್ಲ ಕಾರಣಗಳಿಂದ ರೈತರು ಹಣದಿಂದ ವಂಚಿತರಾಗಿದ್ದಾರೆ ಎನ್ನುವುದರ ವಿವರ ನೀಡಿದ್ದಾರೆ ನೀವು ಕೂಡ ಇವುಗಳನ್ನು ಸರಿಪಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಮತ್ತೆ ತೊಂದರೆ ಪಡುವುದು ತಪ್ಪುತ್ತದೆ ಆ ಪಟ್ಟಿ ಹೀಗಿದೆ ನೋಡಿ.
* ಸರ್ಕಾರ ಕಡೆಯಿಂದ ತಾಂತ್ರಿಕ ಸಮಸ್ಯೆಗಳಾಗಿ (technical error) ಹಣ ವರ್ಗಾವಣೆ ವಿಳಂಬವಾಗಿದ್ದರೆ ಅಥವಾ ತೊಡಕುಗಳಾಗಿದ್ದರೆ ಶೀಘ್ರದಲ್ಲಿಯೇ ಸರಿಪಡಿಸಿ ಹಣ ವರ್ಗಾವಣೆ ಮಾಡಲಾಗುತ್ತದೆ
* ಈ ಹಿಂದೆ ಮೊದಲ ಕಂತಿನ ಹಣ ಬಿಡುಗಡೆ ಮಾಡುವ ಸಮಯದಲ್ಲಿಯೇ ರೈತರಿಗೆ ಪ್ರಕಟಣೆ ಹೊರಡಿಸಿ ಒಂದು ಸೂಚನೆ ಕೊಡಲಾಗಿತ್ತು.
ಈ ಸುದ್ದಿ ಓದಿ:- ಬರ ಪರಿಹಾರದ ಹಣ ಇನ್ನು ಬಂದಿಲ್ಲವೇ.? ಆಗಿದ್ರೆ ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!
ಯಾವ ರೈತರು ಬರ ಪರಿಹಾರದ ಹಣಕ್ಕಾಗಿ ಅರ್ಜಿ ಸಲ್ಲಿಸಲು ಬಯಸುತ್ತೀರಾ ಅಥವಾ ಅರ್ಹರಾಗಿದ್ದೀರಾ ಅವರು ಈ ಕೂಡಲೇ ತಮ್ಮ ಜಮೀನಿನ ಪಹಣಿ ಪತ್ರ (RTC), ಬ್ಯಾಂಕ್ ಪಾಸ್ ಬುಕ್ ವಿವರ, ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಗಳನ್ನು ಹತ್ತಿರದಲ್ಲಿರುವ ಸೇವಾ ಸಿಂಧು ಕೇಂದ್ರಗಳಿಗೆ ಹೋಗಿ FRUITS ತಂತ್ರಾಂಶದಡಿ ನೋಂದಾಯಿಸಿಕೊಂಡು FID ಪಡೆದುಕೊಳ್ಳಬೇಕು ಎಂದು ಆಜ್ಞಾಪಿಸಲಾಗಿತ್ತು. ಇದನ್ನು ಪಾಲಿಸಿ FID ಪಡೆಯದ ರೈತರಿಗೆ ಹಣ ವರ್ಗಾವಣೆಯಾಗಿಲ್ಲ.
* ಆಧಾರ್ ಕಾರ್ಡ್ ಲಿಂಕ್ ಮಾಡಿಸಿದರು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗಿರಬೇಕು ಇಲ್ಲವಾದಲ್ಲಿ DBT ಮೂಲಕ ಹಣ ಜಮೆ ಮಾಡಲು ಸಮಸ್ಯೆ ಆಗುತ್ತದೆ.
* ಮತ್ತೊಂದು ವಿಚಾರವೇನೆಂದರೆ ಕಳೆದ ಹತ್ತು ವರ್ಷಗಳಿಂದ ಯಾರು ಕೂಡ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲ ಅಂತಹ ನಿವಾಸಿಗಳು ಆಧಾರ್ ಅಪ್ಡೇಟ್ ಮಾಡಬೇಕೆಂದು UIDAI ಕಳೆದ ಒಂದು ವರ್ಷಗಳಿಂದ ಸೂಚನೆ ನೀಡುತ್ತಲೇ ಇದೆ. ಇದನ್ನು ನಿರ್ಲಕ್ಷಿಸಿದರೆ ಅಂತವರ ಆಧಾರ್ ಕಾರ್ಡ್ ತಾತ್ಕಾಲಿಕವಾಗಿ ರದ್ದಾಗುತ್ತದೆ ಆಗ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮತ್ತು ಆಧಾರ್ ಆಧಾರಿತವಾದ ಯಾವುದೇ ಸೇವೆಗಳ ಪ್ರಯೋಜನ ಪಡೆಯಲು ಆಗುವುದಿಲ್ಲ, ರೈತನಿಗೆ ಹಣ ಬರದೆ ಇರಲು ಈ ಸಮಸ್ಯೆ ಕೂಡ ಆಗಿರಬಹುದು.
ಈ ಸುದ್ದಿ ಓದಿ:- ಮುಂದಿನ 2 ದಿನದಲ್ಲಿ ಎಲ್ಲಾ ಪಿಂಚಣಿ ಬಂದ್.!
ಒಂದು ವೇಳೆ ನಿಮಗೆ ಹಣ ಬಂದಿದೆಯೇ ಇಲ್ಲವೆ ಎನ್ನುವ ಗೊಂದಲ ಆಗಿದ್ದರೆ ಅಥವಾ ನಿಮ್ಮ ಗ್ರಾಮದ ಲಿಸ್ಟ್ ಪಡೆದು ಅದರಲ್ಲಿ ಯಾರಿಗೆ ಹಣ ವರ್ಗಾವಣೆ ಯಶಸ್ವಿಯಾಗಿದೆ ಅಥವಾ ಹಣ ವರ್ಗಾವಣೆ ವಿಫಲವಾಗಿದೆ ಅದಕ್ಕೆ ಕಾರಣ ತಿಳಿದುಕೊಳ್ಳಬೇಕು ಎಂಬ ಅವಶ್ಯಕತೆ ಇದ್ದರೆ ಈ ಕೆಳಗೆ ತಿಳಿಸುವ ವೆಬ್ಸೈಟ್ ಗೆ ಭೇಟಿ ಕೊಟ್ಟು ಮಾಹಿತಿ ಪಡೆಯಿರಿ.
https://parihara.karnataka.gov.in