ರಾಜ್ಯದ ಎಲ್ಲಾ ರೈತರಿಗೆ ಒಂದು ಪ್ರಮುಖವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸ ಬಯಸುತ್ತಿದ್ದೇವೆ. ಅದೇನೆಂದರೆ, ಕಳೆದ ವರ್ಷ ರಾಜ್ಯದಲ್ಲಿ ಉಂಟಾದ ಬರಗಾಲದ (drought) ಪರಿಸ್ಥಿತಿ ಎಲ್ಲರಿಗೂ ಗೊತ್ತೇ ಇದೆ. ಮುಂಗಾರು ಮಳೆ ವೈಫಲ್ಯದಿಂದ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ ಒಟ್ಟು 223 ತಾಲೂಕುಗಳು ಬರ ಪೀಡಿತ ತಾಲೂಕುಗಳು ಎಂದು NDRF ಕೈಪಿಡಿ ಪ್ರಕಾರವಾಗಿ ಘೋಷಣೆಯಾಗಿವೆ.
ಬರಗಾಲದಲ್ಲಿ ಉಂಟಾದ ನಷ್ಟವನ್ನು ಸಾಧ್ಯವಾದಷ್ಟು ತುಂಬಿಕೊಡಲು ರೈತನಿಗೆ ಸರ್ಕಾರ ಬರ ಪರಿಹಾರದ (Bara Parihara) ಹಣ ನೀಡಲು ಮುಂದಾಗಿದೆ. ಈ ಹಿಂದೆ ರಾಜ್ಯ ಸರ್ಕಾರದ ಕಡೆಯಿಂದ ಮೊದಲ ಕಂತಿನ ಹಣವಾಗಿ ರೂ.2000 ಹಣ ಜಮೆ ಆಗಿತ್ತು. ಈಗ ಕೇಂದ್ರ ಸರ್ಕಾರದಿಂದ ಕೂಡ ಹಣ ಜಮೆ ಆಗುತ್ತಿದ್ದು ಕಳೆದ ಒಂದು ವಾರದಿಂದ ಫಲಾನುಭವಿಗಳ ಖಾತೆಗೆ ಹಂತ ಹಂತವಾಗಿ ತಾಲ್ಲೂಕುವಾರು ಹಣ ಬಿಡುಗಡೆ ಆಗುತ್ತಿದೆ.
ಈ ಸುದ್ದಿ ಓದಿ:- ಮುಂದಿನ 2 ದಿನದಲ್ಲಿ ಎಲ್ಲಾ ಪಿಂಚಣಿ ಬಂದ್.!
ಆದರೆ ಈಗಾಗಲೇ ಹಣ ಸಂದಾಯವಾಗಿರುವ ರೈತರಿಗೆ ಕೆಲ ಸಮಸ್ಯೆ ಆಗಿದೆ. ಕೆಲವು ರೈತರಿಗೆ ಹಣ ಕಡಿಮೆ ಬಂದಿದೆ ಎನ್ನುವ ದೂರು ಇದ್ದರೆ ಇನ್ನು ಕೆಲವು ರೈತರು ನಾನು ಅರ್ಜಿ ಸಲ್ಲಿಸಿದ್ದರೂ ಹಣ ಬಂದಿಲ್ಲ ಎನ್ನುತ್ತಿದ್ದಾರೆ. ನೀವು ಕೂಡ ರೈತರಾಗಿದ್ದು ನಿಮ್ಮ ಖಾತೆಗೆ ಹಣ ಜಮೆ ಆಗಿಲ್ಲ ಎಂದರೆ ನಾವು ತಿಳಿಸುವ ವಿಧಾನದ ಮೂಲಕ ಬರ ಪರಿಹಾರದ ಹಣ ಪಡೆದಿರುವ ಫಲಾನುಭವಿ ರೈತರ ಹೆಸರಿನಲ್ಲಿ ನಿಮ್ಮ ಹೆಸರು ಇದೆ ಎನ್ನುವುದನ್ನು ಚೆಕ್ ಮಾಡಿ. ಈ ಲಿಸ್ಟ್ ನಲ್ಲಿ ಹಣ ಪಡೆಯಲು ಅರ್ಹರೆಂದು ಆಯ್ಕೆ ಆಗಿದ್ದರೆ ಮಾತ್ರ ಆ ರೈತರ ಖಾತೆಗೆ ಹಣ ಜಮೆ ಆಗುವುದು.
ಚೆಕ್ ಮಾಡುವ ವಿಧಾನ:-
* ಮೊದಲಿಗೆ https://parihara.karnataka.gov.in/service89/PaymentDetailsReport.aspx ವೆಬ್ ಸೈಟ್ ಗೆ ಭೇಟಿ ನೀಡಿ
* ಇನ್ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು ಎನ್ನುವ ಪೇಜ್ ಓಪನ್ ಆಗುತ್ತದೆ ಇದರಲ್ಲಿ ವರ್ಷ (2023-24) ಋತು(Season-Khariff), ವಿಪತ್ತಿನ ವಿಧ (Calamity type – drought) ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಇದೆಲ್ಲವನ್ನು ಸೆಲೆಕ್ಟ್ ಮಾಡಿ ಗೆಟ್ ರಿಪೋರ್ಟ್ (get report) ಎನ್ನುವುದರ ಮೇಲೆ ಕ್ಲಿಕ್ ಮಾಡಿದರೆ ನೀವು ಸೆಲೆಕ್ಟ್ ಮಾಡಿದ ಗ್ರಾಮದಲ್ಲಿ ಹಣ ಪಡೆದಿರುವ ಎಲ್ಲಾ ರೈತರ ಲಿಸ್ಟ್ ಬರುತ್ತದೆ.
ಈ ಸುದ್ದಿ ಓದಿ:- ರೈತರಿಗೆ ಇನ್ನು ಮುಂದೆ ಒಣ ಭೂಮಿಯಲ್ಲೂ 100% ನೀರು ಪಕ್ಕಾ, ರೈತರಿಗಾಗಿ ಈ ಮಾಹಿತಿ.!
* ಇದರ ಕೆಳಗೆ ಪಾವತಿ ವಿಫಲ ಪ್ರಕರಣಗಳು (Payment failed Cases) ಪಾವತಿ ಯಶಸ್ವಿ ಪ್ರಕರಣಗಳು (Payment Success Cases) ಎನ್ನುವ ಆಪ್ಷನ್ ಕೂಡ ಇರುತ್ತದೆ. ಇವುಗಳಲ್ಲಿ ಒಂದನ್ನು ಸೆಲೆಕ್ಟ್ ಮಾಡುವ ಮೂಲಕ ನಿಖರವಾಗಿ ಬಗ್ಗೆ ನಿಮಗೆ ಯಾವ ಪಟ್ಟಿ ಬೇಕು ಅದರ ವಿವರ ಸಿಗುತ್ತದೆ. ಪಾವತಿ ವಿಫಲ ಪಟ್ಟಿ ಸೆಲೆಕ್ಟ್ ಮಾಡಿದರೆ ರೈತನ ಹೆಸರಿನ ಮುಂದೆ ಕಾರಣವನ್ನು ಕೂಡ ತಿಳಿಸಲಾಗಿರುತ್ತದೆ.
ಇನ್ನಿತರ ಪ್ರಮುಖ ಸುದ್ದಿಗಳು:-
* ಹಣ ಕಡಿಮೆ ಬಂದಿದೆ, ಎನ್ನುವ ಗೊಂದಲ ಬೇಡ ರಾಜ್ಯ ಸರ್ಕಾರ ನಿಗದಿಪಡಿಸಿರುವ ಪರಿಹಾರದ ಮೊತ್ತ ಹೀಗಿದೆ.
1. ಮಳೆ ಆಶ್ರಿತಾ ಅಥವಾ ಖುಷ್ಕಿ ರೂ.2000
2. ನೀರಾವರಿ ರೂ.17,000
* ಬಹುವಾರ್ಷಿಕ ಅಥವಾ ತೋಟಗಾರಿಕೆ ರೂ.22500
ಈ ಸುದ್ದಿ ಓದಿ:- ಹೊಸ ರೇಷನ್ ಕಾರ್ಡ್ ಪಡೆಯಲು ಈ ಮೂರು ದಾಖಲೆಗಳು ಸಲ್ಲಿಸುವುದು ಕಡ್ಡಾಯ.!
* ಮತ್ತೊಂದು ಮುಖ್ಯವಾದ ವಿಚಾರ ಏನಂದರೆ, ರೈತರ ಈ ಲಿಸ್ಟ್ ನಲ್ಲಿ ಅರ್ಹತೆ ಹೊಂದಿದ್ದು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೆ ಇದ್ದಲ್ಲಿ (ಕಳೆದ ಹತ್ತು ವರ್ಷಗಳಿಂದ ಒಮ್ಮೆ ಕೂಡ ಅಪ್ಡೇಟ್ ಮಾಡಿಸಿದ ಪಕ್ಷದಲ್ಲಿ) ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಮಾಡಿಸದೆ ಇದ್ದರೆ ಹಣ ಬರುವುದಿಲ್ಲ.
* ಪಟ್ಟಿಯಲ್ಲಿ ಹೆಸರಿದ್ದರು ಇನ್ನು ಕೂಡ ಹಣ ಸಂದಾಯವಾಗದ ರೈತರು ಚಿಂತಿಸ ಬೇಕಿಲ್ಲ ಇನ್ನು 2-3 ದಿನಗಳಲ್ಲಿ ಹಣ ವರ್ಗಾವಣೆ ಆಗಲಿದೆ.