ಹಿಂದೆಲ್ಲಾ ಅಡುಗೆ ಮಾಡಲು ಮಣ್ಣಿನ ಮಡಿಕೆಗಳನ್ನು, ಬಳಪದ ಕಲ್ಲಿನ ಪಾತ್ರೆಗಳನ್ನು, ಕಬ್ಬಿಣದ ಕಡಾಯಿಗಳನ್ನು ಅಥವಾ ತಾಮ್ರದ ಪಾತ್ರೆಗಳನ್ನು ಬಳಸುತ್ತಿದ್ದರು ಇದರಿಂದ ಆಹಾರದ ರುಚಿ ಹೆಚ್ಚುತ್ತಿತ್ತು ಈ ಪಾತ್ರೆಗಳಿಂದ ಉಂಟಾಗುವ ರಿಯಾಕ್ಷನ್ ಮನುಷ್ಯನ ದೇಹಕ್ಕೆ ಬೇಕಾದ ಅನೇಕ ವಿಟಮಿನ್ಸ್ ಹಾಗೂ ಮಿನರಲ್ಸ್ ಗಳನ್ನು ಕೊಡುತ್ತಿತ್ತು.
ಹಾಗಾಗಿ ಮನುಷ್ಯ ಬಹಳ ಗಟ್ಟಿಮುಟ್ಟಾಗಿ ಅನೇಕ ವರ್ಷಗಳವರೆಗೆ ಆರೋಗ್ಯವಾಗಿ ಬದುಕಿರುತ್ತಿದ್ದ ಆದರೆ ಇಂದು ಕಾಲ ಬಹಳ ಬದಲಾಗಿದೆ, ಆಧುನಿಕ ಯುಗದ ಸ್ಪರ್ಧಾತ್ಮಕ ಬದುಕಿಗೆ ಹೊಂದಿಕೊಂಡ ನಾವು ಇಂದು ರುಚಿಗಾಗಿ, ಬೇಗ ಅಡುಗೆಯಾಗಲಿ ಎಂದು, ಬಾಳಿಕೆ ಬರಲಿ ಎಂದು ಮತ್ತು ಇಂತಹದೆ ಹತ್ತಾರು ಕಾರಣಗಳಿಂದ ನಾನ್ ಸ್ಟಿಕ್ ಅಥವಾ ಟೆಫ್ಲಾನ್ ಪಾತ್ರೆಗಳನ್ನು ಬಳಸುತ್ತಿದ್ದೇವೆ.
ಈ ಸುದ್ದಿ ಓದಿ:- ಇಂಥವರ ಆಧಾರ್ ಕಾರ್ಡ್ ಬಂದ್ ಸರ್ಕಾರದಿಂದ ನೂತನ ಆದೇಶ ಜಾರಿ.!
ಇದು ಮನುಷ್ಯನ ಆರೋಗ್ಯವನ್ನು ಎಷ್ಟು ಹಾಳುಮಾಡುತ್ತಿದೆ ಗೊತ್ತಾ ನಾವು ಬಳಸುವ ನಾನ್ ಸ್ಟಿಕ್ ಅಡುಗೆ ಸಾಮಾಗ್ರಿಗಳು ಸುಸ್ಥಿತಿಯಲ್ಲಿ ಇಲ್ಲದೆ ಇದ್ದರೆ ಅದರಲ್ಲಿ ಬಿಡುಗಡೆ ಆಗುವ ಬ್ಯಾಡ್ ಕೆಮಿಕಲ್ ನಿಂದ ಮನುಷ್ಯನಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎನ್ನುವುದನ್ನು ಸಂಶೋಧನೆಗಳು ಸಾಬೀತು ಪಡಿಸಿದೆ. ಹಾಗಾಗಿ ನಾನ್ ಸ್ಟಿಕ್ ಪಾತ್ರೆಗಳನ್ನು ಬಳಸಲೇಬೇಕೇ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಿ.
2013 ರಿಂದ ಈಚೆಗೆ ಬಂದಿರುವ ನಾನ್ ಸ್ಟಿಕ್ ಪಾತ್ರೆಗಳಲ್ಲಿ ಇವುಗಳ ಅಂಶ ಕಡಿಮೆಯಾಗಿದೆ ಆದರೂ ಬಳಸಲೇಬೇಕು ಎಂದರೆ ಕೆಲವೊಂದು ನಿರ್ಬಂಧನೆಗೆ ಒಳಪಟ್ಟಿದೆ. ಆ ನಿಯಮ ಮೀರಿ ಇವುಗಳನ್ನು ಬಳಕೆ ಮಾಡಿದರೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ತಪ್ಪಿನಿಂದ ನಮ್ಮ ಆರೋಗ್ಯವನ್ನೇ ಬೆಲೆಯಾಗಿ ಕಟ್ಟಬೇಕಾಗುತ್ತದೆ ಹಾಗಾದರೆ ಇದಕ್ಕೆ ಪರಿಹಾರ ಏನು ಎನ್ನುವುದಕ್ಕೆ ವೈದ್ಯರು ಕೊಟ್ಟ ಕೆಲ ಸಲಹೆಗಳನ್ನು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.
* ವೈದ್ಯರು ನೀಡುವ ಸಲಹೆ ಏನೆಂದರೆ ನಾನ್ ಸ್ಟಿಕ್ ಪಾತ್ರೆಗಳ ಬದಲು ಈಗ ಎಲ್ಲಾ ಪಾತ್ರೆಗಳು ಸ್ಟೀಲ್ ನಲ್ಲಿ ಸಿಗುತ್ತಿದೆ. ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳನ್ನು ಬಳಸಿ ಆದರೆ ಅಲ್ಯೂಮಿನಿಯಂ ಪಾತ್ರೆಗಳನ್ನು ಆದಷ್ಟು ಅವಾಯ್ಡ್ ಮಾಡಿ ಎನ್ನುತ್ತಾರೆ ಈಗ ಮತ್ತೆ ಸ್ಟನ್ ಕುಕ್ ವೇರ್ ಗಳು ಮಾರ್ಕೆಟ್ನಲ್ಲಿ ಟ್ರೆಂಡಿಂಗ್ ಆಗಿದೆ.
ಈ ಸುದ್ದಿ ಓದಿ:- ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ.! ಮೊಬೈಲ್ ನಲ್ಲಿಯೇ ಲಿಂಕ್ ಮಾಡುವ ಸುಲಭ ವಿಧಾನ.!
ಆನ್ಲೈನಲ್ಲಿ ಚೆಕ್ ಮಾಡಿದರೆ ನಿಮ್ಮ ಅನುಕೂಲಕ್ಕೆ ಆಸಕ್ತಿಗೆ ತಕ್ಕ ಹಾಗೆ ಪಾತ್ರೆಗಳು ಸಿಗುತ್ತವೆ ಅವುಗಳನ್ನು ಖರೀದಿಸಿದರೆ ಬೇಗ ಅಡುಗೆಯು ಆಗುತ್ತದೆ ಆರೋಗ್ಯಕ್ಕೂ ಒಳ್ಳೆಯದು ಅಥವಾ ತಾಮ್ರದ ಪಾತ್ರೆಗಳು ಈಗಲೂ ಇವೆ ಮತ್ತು ಕೆಲವು ಆಹಾರಗಳನ್ನು ಮಾಡಲು ಕಬ್ಬಿಣದ ಕಡಾಯಿಗಳನ್ನು ಕೂಡ ಬಳಸಬಹುದು ರೂಢಿ ಮಾಡಿಕೊಳ್ಳಿ ಎನ್ನುತ್ತಾರೆ.
* ಒಂದು ವೇಳೆ ನಾನ್ಸ್ಟಿಕ್ ಪಾತ್ರೆಗಳನ್ನು ಬಳಸುವುದಾದರೆ 250 ಡಿಗ್ರಿಗಿಂತ ಹೆಚ್ಚು ಅದನ್ನು ಬಿಸಿ ಮಾಡುವಂತಿಲ್ಲ
* ಬಹಳ ಹಳೆಯದಾದ ಸ್ಕ್ರ್ಯಾಚಸ್ ಹಾಗಿರುವ ನಾನ್ ಸ್ಟಿಕ್ ಅಡುಗೆ ಪದಾರ್ಥಗಳನ್ನು ಬಳಸಲೇಬಾರದು ಎನ್ನುತ್ತಾರೆ. ಈ ರೀತಿ ಸ್ಕ್ರಾಚಸ್ ಆಗಬಾರದು ಎಂದರೆ ಶಾರ್ಪ್ ಆದ ಸ್ಕ್ರಬ್ ಬಳಸುವ ಬದಲು ಸ್ಪಂಜುಗಳನ್ನ ಬಳಸಿ ಪಾತ್ರೆ ವಾಶ್ ಮಾಡಬೇಕು.
ಮತ್ತು ಎಣ್ಣೆ ಬಳಸದೆ ಇವುಗಳಲ್ಲಿ ಅಡುಗೆ ಮಾಡಬಾರದು ಎನ್ನುವ ನಿಯಮ ಇದೆ ಆದರೆ ನೀವು ಬಳಸುವ ಎಣ್ಣೆಯೂ ಕಳಪೆ ಗುಣ ಪಟ್ಟದಾಗಿದ್ದರೆ ಮತ್ತೆ ಬ್ಯಾಡ್ ಕೆಮಿಕಲ್ ರಿಯಾಕ್ಷನ್ ಆಗುತ್ತದೆ ಅದರ ಬದಲು ನಾನ್ ಸ್ಟಿಕ್ ಅಡುಗೆ ಪಾತ್ರೆಗಳನ್ನು ಬಳಸುತ್ತಿದ್ದರೆ ತುಪ್ಪದ ಅಥವಾ ಗಾಣದಿಂದ ತಯಾರಾದ ಶುದ್ಧವಾದ ಕೊಬ್ಬರಿ ಎಣ್ಣೆ ಅಥವಾ ಕಡಲೆ ಕಾಯಿ ಎಣ್ಣೆ ಬಳಸಿ ಆಗ ಸಮಸ್ಯೆಯಾಗುವುದಿಲ್ಲ ಎನ್ನುವ ಸಲಹೆ ನೀಡುತ್ತಿದ್ದಾರೆ.
ಈ ಸುದ್ದಿ ಓದಿ:- 18 ಲಕ್ಷ ಸಿಮ್ ಕಾರ್ಡ್ ಬಂದ್ ಮಾಡಲು ಆದೇಶ, ನಿಮ್ಮ ನಂಬರ್ ಇದೆಯೇ ಚೆಕ್ ಮಾಡಿ.!
* ನೀವು ಅಡುಗೆ ಮಾಡುವ ಸ್ಥಳದಲ್ಲಿ ವೆಂಟಿಲೇಶನ್ ಇರಬೇಕು ಗಾಳಿ ಆಡುವ ಅಥವಾ ವೆಂಟಿಲೇಶನ್ ಫ್ಯಾನ್ ಇರುವ ಕಿಚನ್ ನಲ್ಲಿ ನಾನ್ ಸ್ಟಿಕ್ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಸಮಸ್ಯೆಯನ್ನು ಸ್ವಲ್ಪ ಕಡಿಮೆ ಮಾಡುತ್ತದೆ.