ಪ್ರಧಾನಮಂತ್ರಿ ಉಜ್ವಲ ಯೋಜನೆ (Pradhana Mantri Ujwal Yojane) ಮೂಲಕ ಗ್ಯಾಸ್ ಕನೆಕ್ಷನ್ ಹೊಂದಿರುವ ಕುಟುಂಬಗಳಿಗೆ ಈಗ ಪ್ರತಿ ಬುಕ್ಕಿಂಗ್ ಮೇಲೆ ರೂ.300 ಸಬ್ಸಿಡಿ ಸಿಗುತ್ತಿದೆ ಎನ್ನುವುದು ಭಾರತದಲ್ಲಿ ಅದೆಷ್ಟೋ ಕುಟುಂಬಗಳ ಗೃಹಿಣಿಯರ ಆರ್ಥಿಕ ಹೊರೆ ಕಡಿಮೆಗೊಳಿಸಿದೆ ಆದರೆ ಇದರಲ್ಲಿ ಒಂದು ಸಮಸ್ಯೆ ಇತ್ತೀಚೆಗೆ ಹೆಚ್ಚಿಸುತ್ತಿದೆ.
ಅದೇನೆಂದರೆ, ಈ ರೀತಿ ಸಿಲಿಂಡರ್ ಕಡೆ ಮೇಲೆ ಸಿಗುತ್ತಿರುವ ಸಬ್ಸಿಡಿ ನೆರವು ಪಡೆಯಬೇಕು ಎಂದರೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಕನೆಕ್ಷನ್ ಪಡೆದವರು ತಮ್ಮ ಹತ್ತಿರದ ಏಜೆನ್ಸಿಗಳಿಗೆ ಹೋಗಿ ಅಥವಾ ಆನ್ಲೈನ್ ನಲ್ಲಿ ಆಯಿಲ್ ಕಂಪನಿಗಳಿಗೆ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಇ-ಕೆವೈಸಿ (e-KYC) ಎಂಬ ನಿಯಮ ಜಾರಿಗೆ ತಂದಿದೆ.
ಇದು ಸತ್ಯ ಆದರೆ ಕಳೆದ ಕೆಲ ದಿನಗಳಿಂದ ಮೇ 31, ಈ ರೀತಿ ಗ್ಯಾಸ್ ಸಿಲೆಂಡರ್ ಗೆ e-KYC ಮಾಡಿಸಲು ಕೊನೆಯ ದಿನಾಂಕ ಒಂದು ವೇಳೆ ಯಾರು ಮೇ 31ರ ಒಳಗೆ e-KYC ಮಾಡಿಸುವುದಿಲ್ಲ ಅಂತಹ ಫಲಾನುಭವಿಗಳಿಗೆ ಮುಂದಿನ ತಿಂಗಳಿನಿಂದ ಅವರ ಸಿಲಿಂಡರ್ ಬುಕ್ಕಿಂಗ್ ಮೇಲೆ ಸಿಗಲಾಗುವ ಕೇಂದ್ರ ಸರ್ಕಾರದ 300 ಸಬ್ಸಿಡಿ ಅನುದಾನ ಸಿಗುವುದಿಲ್ಲ ಎಂಬ ಗಾಳಿ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.
ಈ ಸುದ್ದಿ ಓದಿ:- BPNL ನಲ್ಲಿ ಖಾಲಿ ಇರುವ 5250 ಹುದ್ದೆಗಳಿಗೆ ಅರ್ಜಿ ಆಹ್ವಾನ ವೇತನ 31,000 ಆಸಕ್ತರು ಅರ್ಜಿ ಸಲ್ಲಿಸಿ.!
ಅಸಲಿಯತ್ತು ಏನೆಂದರೆ ಕೇಂದ್ರ ಸರ್ಕಾರದ ಪೆಟ್ರೋಲಿಯಂ ವಿಭಾಗವು ಪತ್ರಿಕಾ ಪ್ರಕಟಣೆಗಳಲ್ಲಿ, ಮಾಧ್ಯಮ ಜಾಹೀರಾತುಗಳಲ್ಲಿ ಮತ್ತು ಅಂತರ್ಜಾಲದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ e-KYC ಕಡ್ಡಾಯ ಎಂದು ಜಾಗೃತಿ ಮೂಡಿಸಿರುವುದು ಎಷ್ಟು ಸತ್ಯವೋ, ಈ ಪ್ರಕ್ರಿಯೆ ಪೂರ್ತಿ ಗೊಳಿಸುವುದಕ್ಕೆ ಮೇ 31 ಕಡೆಯ ದಿನಾಂಕ ಎಂದು ಸುದ್ದಿ ಹರಿದಾಡುತ್ತಿರುವುದು ಅಷ್ಟೇ ಸತ್ಯಕ್ಕೆ ದೂರವಾದ ಅಂಶವಾಗಿದೆ.
ಹಾಗಾಗಿ ಯಾವುದೇ ವ್ಯಕ್ತಿಯು ಈ ಬಗ್ಗೆ ಹೆಚ್ಚು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎನ್ನುವ ಸ್ಪಷ್ಟತೆಯು ಈಗ ಇಲಾಖೆ ಮೂಲಗಳಿಂದ ವರದಿಯಾಗಿದೆ. ಆದರೆ ಇದುವರೆಗೂ e-KYC ಮಾಡಿಸಿದವರು ಚಿಂತಿಸಬೇಕಾಗಿಲ್ಲ, ಭಯಪಡುವ ಅಗತ್ಯವೂ ಇಲ್ಲ. ಬಯೋಮೆಟ್ರಿಕ್ ಪರಿಶೀಲನೆಗೆ ಒಳಗಾಗದವರಿಗೆ e-KYC ಆಗದಿದ್ದರೂ ಸಬ್ಸಿಡಿ ನಿಲ್ಲುವುದಿಲ್ಲ ಮತ್ತು e-KYC ಪೂರ್ಣಗೊಳಿಸಲು ಯಾವುದೇ ಅಂತಿಮ ಗಡುವು ನಿಗಧಿ ಪಡಿಸಿಲ್ಲ.
ಸಿಲಿಂಡರ್ ಗ್ರಾಹಕರ ಮನೆಗಳಿಗೆ ತಲುಪಿಸುವಾಗ ಡೆಲಿವರಿ ಸಿಬ್ಬಂದಿ ಆಧಾರ್ ಪರಿಶೀಲಿಸಿ, ಅವರೇ ಬಯೋಮೆಟ್ರಿಕ್ ತೆಗೆದುಕೊಳ್ಳುತ್ತಾರೆ ಎಂದು ಸರ್ಕಾರದ ಇಲಾಖೆ ಮೂಲಗಳು ಮತ್ತೊಮ್ಮೆ ಮಾಹಿತಿ ನೀಡಿವೆ. ಹೀಗೆ LPG ಸಂಪರ್ಕದೊಂದಿಗೆ ಆಧಾರ್ ಲಿಂಕ್ ಮಾಡಲು ಯಾವುದೇ ಶುಲ್ಕವಿಲ್ಲ.
ಈ ಸುದ್ದಿ ಓದಿ:- ಇಂಥವರ ಆಧಾರ್ ಕಾರ್ಡ್ ಬಂದ್ ಸರ್ಕಾರದಿಂದ ನೂತನ ಆದೇಶ ಜಾರಿ.!
ಇದಲ್ಲದೆ ಇಂಡೇನ್ ಆಯಿಲ್ ಗ್ಯಾಸ್ ಹೊಂದಿರುವವರು ಇಂಡಿಯನ್ ಆಯಿಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ಮೂಲಕ ಕೂಡ ಆಧಾರ್ ಪರಿಶೀಲಿಸಿ e-KYC ನ್ನು ಸುಲಭವಾಗಿ ಮಾಡಿಸಬಹುದು ಅಥವಾ ತಮ್ಮ ಕಂಪನಿಗಳ ಗ್ಯಾಸ್ ಡೀಲರ್ ಹತ್ತಿರ ಹೋಗಬಹುದು.
ಹಾಗಾಗಿ ಯಾವುದೇ ಆತಂಕವಿಲ್ಲದೆ ಆದರೆ ಶೀಘ್ರವಾಗಿ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಲ್ಲಿ ಗ್ಯಾಸ್ ಸಿಲೆಂಡರ್ ಕನೆಕ್ಷನ್ ಹೊಂದಿರುವವರು ತಮ್ಮ ಗ್ಯಾಸ್ ಸಂಪರ್ಕಕ್ಕೆ ಇ-ಕೆವೈಸಿ ಮಾಡಿಸುವುದು ಉತ್ತಮ. ಇದರಿಂದ ಗ್ರಾಹಕರು ಹಾಗೂ ಸರ್ಕಾರ ಎರಡಕ್ಕೂ ಕೂಡ ಅನುಕೂಲವಾಗಲಿದೆ ಎನ್ನುವ ಉದ್ದೇಶದಿಂದಲೇ ಈ ರೀತಿ ಒಂದು ನಿಯಮವನ್ನು ಜಾರಿಗೆ ತರಲಾಗಿದೆ. ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರ ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.