ಹೈನುಗಾರಿಕೆ ಎನ್ನುವುದು ಕೂಡ ಒಂದು ಆಹಾರದ ಮೂಲವೇ ಆಗಿದೆ. ಹೈನುಗಾರಿಕೆಯಿಂದ ಹಾಲು, ಮೊಸರು, ತುಪ್ಪ, ಬೆಣ್ಣೆ ಮುಂತಾದ ಇನ್ನೂ ಅನೇಕ ಹಾಲಿನ ಉತ್ಪನ್ನಗಳನ್ನು ತಯಾರಿಸುತ್ತಾರೆ. ಹಾಲು ಒಂದು ಪೌಷ್ಟಿಕಾಂಶಯುಕ್ತ ಆಹಾರವಾದ ಕಾರಣ ಹುಟ್ಟಿದ ಮಗುವಿನಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರ ಆರೋಗ್ಯಕ್ಕೂ ಒಳ್ಳೆಯದು. ಹೀಗಾಗಿ ಪೂರ್ಣ ಆಹಾರ ಎಂದು ಕರೆಸಿಕೊಳ್ಳುವ ಈ ಹಾಲಿಗೆ ಸದಾ ಕಾಲ ಬೇಡಿಕೆ ಇದ್ದೇ ಇರುತ್ತದೆ.
ಹಾಗಾಗಿ ಹೈನುಗಾರಿಕೆ ಅವಲಂಬಿಸುವ ರೈತರಿಗೆ ಖಂಡಿತವಾಗಿಯೂ ಅವರ ಶ್ರದ್ಧೆ ಹಾಗೂ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎನ್ನುವುದನ್ನು ನಂಬಬಹುದು. ಸರ್ಕಾರಗಳು ಕೂಡ ಈಗ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೈತರಿಗೆ ಅನುಕೂಲತೆ ಮಾಡಿ ಕೊಡುವ ಉದ್ದೇಶದಿಂದ ಅನೇಕ ಯೋಜನೆಗಳ ಮೂಲಕ ನೆರವಾಗುತ್ತಿವೆ.
ಈ ಸುದ್ದಿ ಓದಿ:- ತುಳಸಿ ಕೃಷಿ ಎಷ್ಟು ಲಾಭದಾಯಕ ನೋಡಿ.! ಎಕರೆಗೆ 3 ಲಕ್ಷ ಆದಾಯ, 8-10 ಬಾರಿ ಕಟಾವು, ಈ ಬೆಳೆ ಬೆಳೆಯಲು ಸರ್ಕಾರದಿಂದ ಸಹಾಯಧನ ಕೂಡ ಲಭ್ಯ.!
ಪಶುಗಳ ಶೆಡ್ ನಿರ್ಮಾಣಕ್ಕೆ ಸಬ್ಸಿಡಿ ನೆರವು, ಹಸುಗಳಿಗೆ ವಿಮೆ ಮತ್ತು ಹಸುಗಳ ಖರೀದಿಗೆ ಸಬ್ಸಿಡಿ ಅಥವಾ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯ, ಕೊಟ್ಟಿಗೆ ನಿರ್ಮಾಣಕ್ಕೆ ಧನ ಸಹಾಯ, ರಿಯಾಯಿತಿ ದರದಲ್ಲಿ ಹಸುವಿಗೆ ಆಹಾರ, ಹಾಲಿಗೆ ಹೆಚ್ಚುವರಿ ಪ್ರೋತ್ಸಾಹ ಧನ ಇನ್ನು ಮುಂತಾದ ಅನೇಕ ಯೋಜನೆಗಳನ್ನು ಮಾಡಿ ಕೊಟ್ಟಿದೆ.
ಇವುಗಳನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಯಾವುದೇ ನಗರ ಪ್ರದೇಶದಲ್ಲಿ ಕಾರ್ಪೊರೇಟ್ ಕಂಪನಿಯಲ್ಲಿ ದುಡಿಯುವ ವ್ಯಕ್ತಿಗಿಂತ ಕಡಿಮೆ ಇಲ್ಲದಂತೆ ಹಳ್ಳಿಗಳಲ್ಲಿ ಬದುಕುವ ಯುವಕನೂ ಕೂಡ ಆದಾಯ ಮಾಡಬಹುದು. ಇದನ್ನು ಮಳವಳ್ಳಿ ಸಮೀಪದ ಗ್ರಾಮವೊಂದರ ಯುವಕ ಸಾಬೀತು ಪಡಿಸಿದ್ದಾನೆ.
ಈ ಯುವಕ ಹಂಚಿಕೊಂಡ ಅನುಭವದ ಮಾತಿನೊಂದಿಗೆ ಹೈನುಗಾರಿಕೆ ಬಗ್ಗೆ ಕೆಲವು ಉಪಯುಕ್ತ ಮಾಹಿತಿಗಳನ್ನು ಈ ಲೇಖನದಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತಿದ್ದೇವೆ. ಈ ಯುವಕ ಹೇಳುವ ಮಾತೇನೆಂದರೆ, ಕಷ್ಟಪಟ್ಟು ದುಡಿಯುವುದಾದರೆ ಹೈನುಗಾರಿಕೆ ಖಂಡಿತ ಕೈಹಿಡಿಯುತ್ತದೆ ಆದರೆ ಎಲ್ಲಾ ಕೆಲಸಕ್ಕೂ ಆಳುಕಾಳು ಇಟ್ಟರೆ ಮಾತ್ರ ಹೆಚ್ಚು ಖರ್ಚಾಗುವುದು.
ಈ ಸುದ್ದಿ ಓದಿ:- ಬರ ಪರಿಹಾರದ ಹಣ ಬರದೇ ಇರುವವರಿಗೆ ಹಣ ಪಡೆಯಲು ಈ ಕೆಲಸ ಕಡ್ಡಾಯ, ಜೂನ್ 1 ರಿಂದಲೇ ಆರಂಭ.!
ನಾವು ನಮಗಿರುವ ಒಂದು ಗುಂಟೆ ಜಮೀನಿನಲ್ಲಿ 2.5ಲಕ್ಷ ವೆಚ್ಚದಲ್ಲಿ ಶೆಡ್ ನಿರ್ಮಾಣ ಮಾಡಿಕೊಂಡಿದ್ದೇನೆ. ಇದರಲ್ಲಿ 20 ಹಸುಗಳಿವೆ, ಈ ಹಸುಗಳಿಂದ ಬೆಳಗ್ಗೆ 100lt, ಸಂಜೆ 100lt ಒಟ್ಟು ಒಂದು ದಿನಕ್ಕೆ 200lt ಹಾಲು ಕೊಡುತ್ತವೆ. ಈಗ ಲೀಟರ್ ಗೆ ರೂ.29 ಇದೆ ಮತ್ತು 5 ರೂಪಾಯಿ ಹೆಚ್ಚು ಪ್ರೋತ್ಸಾಹ ಧನ ಸಿಗುತ್ತಿದೆ.
ಒಟ್ಟು ಒಂದು ಲೀಟರ್ ಗೆ 34 ರೂಪಾಯಿ ದೊರೆತ ರೀತಿ ಆಯಿತು ನಾವು ಬೆಳಿಗ್ಗೆ 5 ಗಂಟೆಗೆ ಫೀಡ್ಸ್ ಕೊಡುತ್ತೇವೆ ಮತ್ತು ಡೈರಿಯಿಂದ ಹಾಲಿನ ಇಳುವರಿ ಮತ್ತು ಹಸುಗಳ ಆರೋಗ್ಯಕ್ಕಾಗಿ ಮಿನರಲ್ ಪೌಡರ್ ಕೊಡುತ್ತಾರೆ, ಅದನ್ನು ಫೀಡ್ ಜೊತೆ ಮಿಕ್ಸ್ ಮಾಡುತ್ತೇವೆ. ಇದನ್ನು ತಿಂದ ಮೇಲೆ ಹಸುಗಳು ಹಾಲು ಕೊಡುತ್ತವೆ ನಂತರ ಅವುಗಳಿಗೆ ಹಸಿರು ಮೇವು ಹಾಕುತ್ತೇವೆ.
ನಾವು ಟೈಮಿಂಗ್ ಸೆಟ್ ಮಾಡಿಕೊಂಡಿದ್ದೇವೆ ಆ ಟೈಮ್ ನಲ್ಲಿ ಮೇವು, ನೀರು, ಫೀಡ್ ಕೊಡುವುದು. ಫೀಡ್ ಕೊಟ್ಟ ನಂತರ ಹಾಲು ಕರೆಯುವುದು ಮಾಡುತ್ತೇವೆ ಡೈರಿಯಿಂದ ಕೂಡ ಸಹಾಯವಾಗುತ್ತದೆ. ಹಾಲು ಕರೆಯುವ ಮಿಷನ್ ಸಬ್ಸಿಡಿಗೆ ಕೊಡುತ್ತಾರೆ ನಾನು ಬೆಳಗಿನ ಜಾವ 4-5 ಘಂಟೆ ಮತ್ತು ಸಂಜೆ ಸಮಯ 4 ಘಂಟೆ ಕಾಲ ಕೆಲಸ ಮಾಡುತ್ತೇನೆ ಅಷ್ಟೇ.
ಈ ಸುದ್ದಿ ಓದಿ:- ನಿಮ್ಮ ಆಸ್ತಿ ಮತ್ತು ಜಮೀನಿಗೆ ಪೋಡಿ ಮಾಡುವುದು ಹೇಗೆ.? ಅರ್ಜಿ ಹಾಕಲು ಏನೆಲ್ಲ ದಾಖಲೆಗಳು ಬೇಕು ಈ ಪ್ರಕ್ರಿಯೆ ಹೇಗೆ ನಡೆಯುತ್ತೆ ನೋಡಿ.!
ಹಸು ಖರೀದಿಸುವಾಗಲೇ ಹೆಚ್ಚು ಹಾಲು ಕೊಡುವ ತಳಿ ನೋಡಿ ಅವುಗಳ ಆರೋಗ್ಯ, ಕಾಲು, ಹಲ್ಲು, ಹಾಲಿನನರ ಇವುಗಳನ್ನು ಗುರುತಿಸಿ ತರುತ್ತೇನೆ. ಲೋಕಲ್ ನಲ್ಲೇ ನಾನು ಹಸುಗಳನ್ನು ತರುವುದು. ನನಗೆ ಈ ಉದ್ಯಮ ಕೈ ಹಿಡಿದಿದೆ. ಒಂದು ತಿಂಗಳಿಗೆ ರೂ.1,80,000 ದುಡಿಯುತ್ತೇನೆ. 50-60 ಸಾವಿರ ಖರ್ಚಾದರೂ ಉಳಿದ ಹಣ ಲಾಭವಾಗುತ್ತದೆ, ಈ ರೀತಿ ಸಕ್ಸಸ್ ಆಗಬೇಕು ಎಂದರೆ ಹೆಚ್ಚಿನ ಪ್ರಮಾಣದಲ್ಲಿ ಹಸು ಇಟ್ಟುಕೊಂಡೇ ಆರಂಭಿಸಬೇಕು ಎನ್ನುವ ಸಲಹೆ ನೀಡುತ್ತಿದ್ದಾರೆ.