ಹೈನುಗಾರಿಕೆ ಒಂದು ಯಶಸ್ವಿ ಉದ್ಯಮವಾಗಿದೆ, ಹಿಂದೆಲ್ಲಾ ರೈತರು ತಮ್ಮ ಕೃಷಿ ಚಟುವಟಿಕೆಗೆ ಅನುಕೂಲವಾಗಲಿ ಹಾಗೂ ಕುಟುಂಬದ ಬಳಕೆಗೆ ಹಾಲಿನ ಮತ್ತು ಹಾಲಿನ ಉತ್ಪನ್ನಗಳ ಸೌಕರ್ಯವಾಗಲಿ ಎನ್ನುವ ಉದ್ದೇಶದಿಂದ ಮನೆಗೆ ಒಂದೆರಡು ಹಸುಗಳನ್ನು ತಂದು ಸಾಕುತ್ತಿದ್ದರು. ಈಗ ಕೃಷಿ ಚಟುವಟಿಕೆ ಹೊರತುಪಡಿಸಿ ಕೂಡ ಬರಿ ಹೈನುಗಾರಿಕೆಯನ್ನೇ ನಂಬಿ ಇದನ್ನೇ ಉದ್ಯಮವಾಗಿ ಪರಿಗಣಿಸಿ ತಮ್ಮ ಅದೃಷ್ಟವನ್ನು ಬಲಾಯಿಸಿಕೊಂಡಿರುವ ನೂರಾರು ಜನರ ಉದಾಹರಣೆಗಳು ರಾಜ್ಯದಲ್ಲಿ ಸಿಗುತ್ತದೆ.
ಇಂತಹದ್ದೇ ಒಂದು ಯಶಸ್ಸಿನ ಕಥೆ ಬಗ್ಗೆ ಗೋಮಾತೆಯನ್ನು ನಂಬಿ ಇಂದು ತಿಂಗಳಿಗೆ 7 ಲಕ್ಷದವರೆಗೆ ಆದಾಯ ಪಡೆಯುತ್ತಿರುವ ಕಾರ್ಕಳ ಮೂಲದ ಮಹಿಳೆಯೊಬ್ಬರ ಸಕ್ಸಸ್ ಸ್ಟೋರಿ ಬಗ್ಗೆ ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ. ಹೈನುಗಾರಿಕೆಯಲ್ಲಿ ಖಂಡಿತ ಲಾಭ ಇದೆ, ಆದರೆ ಹೈನುಗಾರಿಕೆಯಲ್ಲಿ ಅಷ್ಟೇ ರಿಸ್ಕ್ ಕೂಡ ಇದೆ ಇದು ನಮ್ಮ ಅಗತ್ಯ ಆಸಕ್ತಿ ಅವಶ್ಯಕತೆ ಎಲ್ಲವೂ ಆಗಿದ್ದಾಗ ಸಕ್ಸಸ್ ಗ್ಯಾರಂಟಿ.
ಆರಂಭದಲ್ಲಿ ಕುಟುಂಬದಲ್ಲಿ ಕೂಡ ವಿರೋಧ ಇತ್ತು ಯಾಕೆಂದರೆ ನಾನು ಹೈನುಗಾರಿಕೆ ಜೊತೆಗೆ ಬೇರೆ ಕ್ಷೇತ್ರಗಳನ್ನು ಕೂಡ ಕಾಣಿಸಿಕೊಳ್ಳುತ್ತಿದ್ದೆ. ಹೀಗಾಗಿ ಸಮಯ ಕೊಡಲು ಆಗುವುದಿಲ್ಲ, ಇದು ಹೊಸದು ನಾನು ಎಡವಿದ್ದೇನೆ ಎಂದೇ ಕುಟುಂಬದವರು ಭಯ ಬಿದ್ದಿದ್ದರು. ಆದರೆ ನಾನು ಐದು ಹಸುಗಳಿಂದ ಆರಂಭಿಸಿ 100 ಹಸುಗಳವರೆಗೆ ತಲುಪಿದ್ದೇನೆ, ಈಗ ಕುಟುಂಬದವರು ಕೂಡ ಹೆಮ್ಮೆ ಪಡುತ್ತಿದ್ದಾರೆ.
ಆರಂಭದಲ್ಲಿ ಎಲ್ಲಾ ಕೃಷಿ ಚಟುವಟಿಕೆಗಳನ್ನು ನಾನೇ ಮಾಡುತ್ತಿದ್ದೆ, ಈಗ ದಿನ ಕಳೆದಂತೆ ಲೇಬರ್ ಗಳನ್ನು ನೇಮಿಸಿಕೊಂಡು ಅವರಿಗೂ ಕೆಲಸ ಕೊಟ್ಟಿದ್ದೇನೆ. ಒಟ್ಟು ಒಂದು ತಿಂಗಳಿಗೆ 800 ರಿಂದ 1000 ಲೀಟರ್ ವರೆಗೆ ನಮ್ಮ ಡೈರಿಯಿಂದ ಹಾಲು ಉತ್ಪಾದನೆ ಆಗುತ್ತದೆ, ಪೂರ್ತಿ ಆರ್ಗೆನಿಕ್ ಆಗಿರುತ್ತದೆ. ಅಮೃತ ಕಲ್ಪ ಅಥವಾ ಆರೋಗ್ಯ ಹೀಗೆ ಅನುಕೂಲಕರ ಬೆಲೆಯಲ್ಲಿ ಕಾಂಟ್ರಾಕ್ಟ್ ಮಾಡಿಕೊಂಡು ಹಾಲು ಕೊಡುತ್ತೇವೆ.
ಕಡಿಮೆ ಎಂದರೂ ತಿಂಗಳಿಗೆ 6-7ಲಕ್ಷ ಖರ್ಚು ಆಗುತ್ತದೆ ಇದರಲ್ಲಿ ಹಸುವಿನ ಮೇವು ಅವುಗಳನ್ನು ನಿರ್ವಹಣೆ ಲೇಬರ್ ಖರ್ಚು ಈ ಎಲ್ಲಾ ಖರ್ಚು ಕಳೆದು 2.5 ಲಕ್ಷದವರೆಗೆ ಗ್ಯಾರಂಟಿ ಉಳಿಯುತ್ತದೆ. ಹಾಗಾಗಿ ಯಾರು ಬೇಕಾದರೂ ಆರಂಭಿಸಬಹುದು, ಧೈರ್ಯದಿಂದ ಆರಂಭಿಸಿ ಹಸುಗಳ ಆರೋಗ್ಯದ ಬಗ್ಗೆ ಗಮನ ಕೊಡಿ ಹೆಚ್ಚು ಸಮಯ ಕೊಟ್ಟು ಜೋಪಾನ ಮಾಡಿಕೊಳ್ಳಿ ಖಂಡಿತ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರೆ.
ಹೈನುಗಾರಿಕೆಂತ ಲಾಸ್ ಆಗುತ್ತದೆ ಎಂದು ಹೇಳುವ ರೈತರು ಮೇವಿನ ವಿಚಾರದಲ್ಲಿ ಎಡವಿರುತ್ತಾರೆ. ಬರಿ ಹಸಿರು ಮೇವು ಕೊಡುವುದರಿಂದ ಹಸುವಿನ ಆರೋಗ್ಯ ಕೆಡುತ್ತದೆ. ಗೊಬ್ಬರ ಕೂಡ ತೆಳುವಾಗುತ್ತದೆ, ಹಸು ಸಣ್ಣ ಆಗುತ್ತದೆ ಇದನ್ನು ಹಿಂಡಿ ಜೊತೆ ಮಿಕ್ಸ್ ಮಾಡಿ ಸೈಲೆಜ್ ಮಾಡಿಕೊಡುವುದರಿಂದ 30 ಡಬ್ಬ ತೆಗೆದುಕೊಳ್ಳುವ ಹಸು 15 ಡಬ್ಬ ತೆಗೆದುಕೊಂಡರೂ ಆರೋಗ್ಯವಾಗಿ ಇರುತ್ತದೆ.
ಇದರಲ್ಲಿ ಹಸುವಿನ ಆರೋಗ್ಯಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ಸೇರಿಸಲಾಗಿರುತ್ತದೆ. ಇಂತಹ ಟ್ರಿಕ್ ಗಳನ್ನು ರೈತರು ಬಳಸಿದರೆ ಖರ್ಚು ಕಡಿಮೆ ಮಾಡಿಕೊಂಡು ಹಸುಗಳ ಆರೋಗ್ಯಕ್ಕೂ ಕೂಡ ವೃದ್ದಿ ಮಾಡಿಕೊಳ್ಳಬಹುದು. ಮುಖ್ಯವಾಗಿ ಹಸುಗಳಿಗೆ ಕೆಚ್ಚಲು ಭಾವು, ಗೊರಸು, ಸೆಲೆ ಇಂತಹ ಆರೋಗ್ಯ ಸಮಸ್ಯೆಗಳು ಬರುತ್ತಿರುತ್ತವೆ.
ಅದರಲ್ಲೂ ಬೇಸಿಗೆ ಕಾಲದಲ್ಲಿ ಜೊತೆಗೆ ಇದ್ದು ನೋಡಿಕೊಳ್ಳಬೇಕು, ಕೊಟ್ಟಿಗೆ ಕ್ಲೀನಾಗಿ ಇಟ್ಟುಕೊಳ್ಳಬೇಕು ಮುಖ್ಯವಾಗಿ ನಾವು ಅನುಸರಿಸಬೇಕಾದ ಇನ್ನೊಂದು ಟೆಕ್ನಿಕ್ ಏನೆಂದರೆ. ಹಾಲು ಕರೆಯುವಾಗ ಮಾತ್ರ ಹಸುಗಳನ್ನು ಕಟ್ಟು ಹಾಕುತ್ತೇವೆ ಅದನ್ನು ಹೊರತು ಪಡಿಸಿ ಅವು ಫುಲ್ ಫ್ರೀ ಆಗಿರುತ್ತವೆ ಇದರಿಂದ ಕೂಡ ಆರೋಗ್ಯ, ಇಳುವರಿ ಹೆಚ್ಚಾಗಿದೆ.
ನಮ್ಮಲ್ಲಿ HF ಜರ್ಮನಿ ತಳಿ ಹೆಚ್ಚಾಗಿದೆ ಇದರೊಂದಿಗೆ ಹಾಲಿನ ಕ್ವಾಲಿಟಿಗಾಗಿ ಒಂದೆರಡು ಗಿರ್, ಹಾಲೋಬ್ಲಾಕ್, ಜೆರ್ಸಿ ಸೇರಿಸಿದ್ದೇವೆ. ಕರುಗಳು, ಗಬ್ಬ ಆಗಿರುವ ಹಸುಗಳು, ಮೂರು ನಾಲ್ಕು ಕರು ಹಾಕಿರುವ ಹಸುಗಳು, ವಯಸ್ಸಾಗಿರುವ ಹಸುಗಳು ಹೀಗೆ ವಿಭಾಗ ಮಾಡಿಕೊಂಡಿದ್ದೇವೆ. ಇದರಿಂದ ಕೆಲಸ ಸರಾಗ ಆಗಿದೆ. ಇದನ್ನು ಇನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಕನಸು ಇದೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಮಾತುಗಳನ್ನು ಪೂರ್ತಿ ಕೇಳಲು ವಿಡಿಯೋವನ್ನು ಕೊನೆಯವರೆಗೂ ನೋಡಿ.