ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ನಿಯಮ ಜಾರಿ.!

 

WhatsApp Group Join Now
Telegram Group Join Now

ರಾಜ್ಯದ ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ (Shakthi Scheme) ಬಗ್ಗೆ ಗೊತ್ತೇ ಇದೆ. ಶಕ್ತಿ ಯೋಜನೆಯ ಮೂಲಕ ಕರ್ನಾಟಕ ರಾಜ್ಯದ ಮಹಿಳೆಯರು ರಾಜ್ಯದ ಗಡಿಯೊಳಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ಬಸ್ ಗಳಲ್ಲಿ ಕೂಡ ಉಚಿತವಾಗಿ (free travel) ಪ್ರಯಾಣಿಸಬಹುದಾಗಿದೆ (ಎಸಿ ಹಾಗೂ ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ).

ಈ ಯೋಜನೆ ರಾಜ್ಯದ ಎಲ್ಲಾ ಮಹಿಳೆಯರ ಮನ ಗೆದ್ದಿದೆ ಅಂತಲೂ ಹೇಳಬಹುದು. ಯಾಕೆಂದರೆ ಈ ಯೋಜನೆ ಜಾರಿಯಾದ ಮೇಲೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಆರಂಭದಲ್ಲಿ ಯೋಜನೆ ಬಗ್ಗೆ ಸಾಕಷ್ಟು ನೆಗೆಟಿವ್ ಮಾತುಗಳು ಕೇಳಿ ಬರುತ್ತಾಲಿತ್ತಾದರೂ ಸರ್ಕಾರ ಮಾತ್ರ ಶಕ್ತಿ ಯೋಜನೆ ಮೂಲಕ ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ, ಧಾರ್ಮಿಕ ಕ್ಷೇತ್ರಗಳು ಮತ್ತು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಡುವ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ.

ಹೀಗಾಗಿ ಯೋಜನೆಯಿಂದ ಮುಜರಾಯಿ ಇಲಾಖೆ ಹಾಗೂ ಸಾರಿಗೆ ಇಲಾಖೆಯು ಲಾಭದಲ್ಲಿದೆ ಎಂದು ಸಮರ್ಥಿಸಿಕೊಂಡಿದೆ. ಆದರೆ ಶಕ್ತಿ ಯೋಜನೆಯಿಂದ ಬಸ್ ಗಳಲ್ಲಿ ಒತ್ತಡ ಹೆಚ್ಚಾಗಿರುವುದು ಸುಳ್ಳಲ್ಲ, ವಿಪರೀತ ಜನಜಂಗುಳಿಯಿಂದ ಜನಸಾಮಾನ್ಯರ ಜೊತೆ ನಿರ್ವಾಹಕರು ಕೂಡ ರೋಸಿ ಹೋಗಿದ್ದಾರೆ, ಇದರ ನಡುವೆ ಇಲಾಖೆಯ ಕರ್ತವ್ಯ ಇವರಿಗೆ ಇನ್ನಷ್ಟು ಚಾಲೆಂಜಿಂಗ್ ಆಗುತ್ತಿದೆ.

ಈ ಸುದ್ದಿ ಓದಿ:- ಬೋರ್ವೆಲ್ ಫೇಲ್ ಆಗಿದೆಯಾ.? ನೀರು ಬರ್ತಾ ಇಲ್ಲಾ ಅಂತ ಚಿಂತೆನಾ.? ಈ ಸಿಂಪಲ್ ಟೆಕ್ನಿಕ್ ಪಾಲಿಸಿ ಸಾಕು, 25 ವರ್ಷ ಗ್ಯಾರೆಂಟಿ ನೀರು ತುಂಬಿ ತುಳುಕುತ್ತದೆ.!

ಶಕ್ತಿ ಯೋಜನೆಯಡಿ ಟಿಕೆಟ್ ಪಡೆಯುವ ಮಹಿಳೆಯರು ಎಲ್ಲೆಂದರಲ್ಲಿ ಮಧ್ಯದಲ್ಲಿ ಇಳಿದು ಹೋಗುತ್ತಿರುವುದು ಕಂಡಕ್ಟರ್ ಗಳ ತಲೆಬಿಸಿಗೆ ಕಾರಣವಾಗಿತ್ತು ಇದು ಸುಧಾರಣೆಯಾಗುವಷ್ಟರಲ್ಲಿ ಇನ್ನಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಅದೇನೆಂದರೆ, ಶಕ್ತಿ ಯೋಜನೆಯಡಿ ಮಹಿಳೆಯು ರಾಜ್ಯ ಅಥವಾ ಭಾರತ ಸರ್ಕಾರ ನೀಡಿರುವ ಯಾವುದೇ ಗುರುತಿನ ಚೀಟಿ ತೋರಿಸಿ ಉಚಿತವಾಗಿ ಎಲ್ಲಿಗೆ ಬೇಕಾದರೂ ಟಿಕೆಟ್ ಪಡೆದು ಪ್ರಯಾಣ ಮಾಡಬಹುದು ಆದರೆ ಟಿಕೆಟ್ ಇಲ್ಲದ ಪ್ರಯಾಣ ಮಾಡಿದರೆ ಅಥವಾ ಟಿಕೆಟ್ ಪಡೆದು ಗುರುತಿನ ಚೀಟಿ ಇಲ್ಲದಿದ್ದರೆ ಸಂಕಷ್ಟ ಎದುರಾಗುತ್ತದೆ.

ಒಂದು ವೇಳೆ ಚೆಕಿಂಗ್ ಗೆ ಬಂದ ಸಮಯದಲ್ಲಿ ಗುರುತಿನ ಚೀಟಿ ಇಲ್ಲದೆ ಟಿಕೆಟ್ ವಿತರಣೆ ಮಾಡಿದ್ದಕ್ಕಾಗಿ ಕಂಡಕ್ಟರ್ ಗೂ ಕೂಡ ದಂಡ ಬೀಳುತ್ತದೆ. ಇದರ ನಡುವೆ ಇತ್ತೀಚೆಗೆ ಟಿಕೆಟ್ ವಿತರಿಸುವ ಮಿಷನ್ ಗಳು ತಾಂತ್ರಿಕ ತೊಂದರೆಗಳಿಂದ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದು ಕಂಡಕ್ಟರ್ ಗಳ ಕೆಲಸದ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ. ಯಾಕೆಂದರೆ ಈ ರೀತಿ ಮಿಷನ್ ಆಕಸ್ಮಿಕವಾಗಿ ಕೆಟ್ಟು ಹೋದ ಸಂದರ್ಭದಲ್ಲಿ ನಿರ್ವಾಹಕನು ಪಿಂಕ್ ಟಿಕೆಟ್ (Pink ticket) ವಿತರಣೆ ಮಾಡಬೇಕು.

ಇದರಲ್ಲಿ ವಿಭಾಗ ಹಾಗೂ ವೇಳಾಪಟ್ಟಿ ಬರೆದಿರುತ್ತದೆ ನಂತರ ಎಲ್ಲಿಯವರೆಗೆ ಎಂದು ನಮೂದಿಸಿ ಸಹಿ ಮಾಡಿ ವಿತರಣೆ ಮಾಡಬೇಕು. ಈಗಾಗಲೇ ಮಹಿಳಾ ಪ್ರಯಾಣಿಕರ ಸಂಖ್ಯೆ ವಿಪರೀತವಾಗಿ ಏರಿಕೆ ಆಗಿದೆ ಇದರ ನಡುವೆ ಟಿಕೆಟ್ ವಿತರಣೆ ಜೊತೆಗೆ ಇಷ್ಟೆಲ್ಲ ವಿವರಗಳನ್ನು ಬರೆದು ನೀಡಬೇಕಾಗಿರುವುದು ಸಾಕಷ್ಟು ತಾಪತ್ರಯದ ಕೆಲಸವೇ ಆಗಿದೆ. ಆದರೂ ಕಂಡಕ್ಟರ್ ಗಳಿಗೆ ಈ ನಿಯಮ ಬಿಗಿಗೊಳಿಸಲಾಗಿದೆ.

ಈ ಸುದ್ದಿ ಓದಿ:- ಅನ್ನಭಾಗ್ಯ ಹಣ ಪಡೆಯದವರಿಗೆ ಹೊಸ ನಿಯಮ ಜಾರಿ, ಈ ರೀತಿ ಮಾಡಿ ಹಣ ನಿಮ್ಮ ಅಕೌಂಟ್ ಗೆ ಜಮೆ ಆಗುತ್ತೆ.!

ಒಂದು ವೇಳೆ ಇಂತಹ ಪಿಂಕ್ ಟಿಕೆಟ್ ಗಳನ್ನು ಮಹಿಳೆಯರು ಕಳೆದುಕೊಂಡಲ್ಲಿ ತಪಾಸಣೆ ವೇಳೆ ಸಿಕ್ಕಿ ಬಿದ್ದರೆ ರೂ.10,000 ದಂಡ ಕಟ್ಟ ಬೇಕಾಗುತ್ತದೆ ಎಂದು ಕೂಡ ಎಚ್ಚರಿಕೆ ನೀಡಲಾಗಿದೆ ಹಾಗಾಗಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಅನುಕೂಲತೆ ಪಡೆಯುತ್ತಿರುವ ಮಹಿಳೆಯರು ಈ ಬಗ್ಗೆ ಎಚ್ಚರದಿಂದ ಇರಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತೆಯರು ಹಾಗೂ ಸಹೋದ್ಯೋಗಿಗಳ ಜೊತೆಗೂ ಹಂಚಿಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now