ಬಿಗ್ ಬಾಸ್ ಕನ್ನಡ ಸೀಸನ್ 9 ಈ ಒಂದು ಕಾರ್ಯಕ್ರಮ ತುಂಬಾ ಜನರಿಗೆ ನೆಚ್ಚಿನ ಕಾರ್ಯಕ್ರಮವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಸ್ಪರ್ಧಿಗಳು ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಸಹ ಒಳಗೊಂಡಿದ್ದಾರೆ ಅದರಲ್ಲಿ ಆರ್ಯ ವರ್ಧನ್ ಗುರೂಜಿ ಅವರ ನಡವಳಿಕೆ ಅವರ ಮಾತು ಪ್ರೇಕ್ಷಕರನ್ನು ನಕ್ಕು ನಲಿಸುತ್ತಿದೆ. ನಮ್ಮ ಬಿಗ್ ಬಾಸ್ ಮನೆಯಲ್ಲಿ ಒಂದಲ್ಲ ಒಂದು ವಿಚಾರಕ್ಕಾಗಿ ಯಾವಾಗಲೂ ಸುದ್ದಿಯಲ್ಲಿರುವಂತಹ ಗುರೂಜಿ ನಂಬರ್ ಅಂದರೆ ನಾನು, ನಾನು ಎಂದರೆ ನಂಬರ್ ಎನ್ನುವ ಮೂಲಕ ತುಂಬಾ ಹೈಲೆಟ್ ಆಗಿದ್ದಾರೆ.
ಜ್ಯೋತಿಷ್ಯವನ್ನು ನಂಬಿ ಬದುಕಿರುತ್ತಿರುವಂತಹ ಗುರೂಜಿ ಅವರು ಬಿಗ್ ಬಾಸ್ ಮನೆಯಲ್ಲಿ ತುಟಿ ನೋಡಿ ಜ್ಯೋತಿಷ್ಯವನ್ನು ಹೇಳುವಂತಹ ಕೆಲಸ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರುವಂತಹ ಸ್ಪರ್ಧಿಗಳು ಈಗ ಎರಡನೇ ವಾರಕ್ಕೆ ಕಾಲಿಟ್ಟಿದ್ದಾರೆ ಸಾಕಷ್ಟು ತಿರುವುಗಳನ್ನು ಪಡೆದುಕೊಳ್ಳುತ್ತಿರುವಂತಹ ಬಿಗ್ ಬಾಸ್ ಮನೆಯಲ್ಲಿ ಈ ವಾರ ಕಾಲಿಗೆ ಒಂದು ಕಾಲ ಎನ್ನುವಂತಹ ಒಂದು ಟಾಸ್ಕನ್ನು ಕೊಡಲಾಗಿತ್ತು.
ದಿವ್ಯ ಹುಡುಗ ಮತ್ತು ಸಾನಿಯಾ ಒಂದು ಜೋಡಿ ಹಾಗೆಯೇ ದೀಪಿಕಾ ಮತ್ತು ರೂಪೇಶ್ ಅವರು ಒಂದು ಜೋಡಿಯಾಗಿ ಒಂದು ಆಟವನ್ನು ಆಡುತ್ತಿದ್ದರು ಎರಡು ತಂಡಗಳ ಮಧ್ಯೆ ಜಟಾಪಟಿ ನಡೆಯದು ಸಾನಿಯಾ ಮತ್ತು ದಿವ್ಯಾ ಅವರು ಈ ಪಂದ್ಯ ಗೆದ್ದರು ಈ ಮಧ್ಯ ಗುರೂಜಿ ಮತ್ತು ಅಮೂಲ್ಯ ಅವರ ಸಂಭಾಷಣೆ ಗಂಭೀರವಾಗಿತ್ತು ಟಾಸ್ಕ್ ನಡೆಯುವ ಸಂದರ್ಭದಲ್ಲಿ ಗುರೂಜಿಯವರು ಅಮೂಲ್ಯ ಅವರ ತುಟಿ ನೋಡಿ ಭವಿಷ್ಯವನ್ನು ಹೇಳಿದ್ದಾರೆ ನಿಮ್ಮ ತುಟಿ ಮೇಲೆ ಚೂಪಾಗಿದೆ ಹೀಗೆ ಇದ್ದರೆ ಒಳ್ಳೆಯದು ಎಲ್ಲರೂ ನಿಮ್ಮನ್ನು ಇಷ್ಟಪಡುತ್ತಾರೆ ಎಂದು ಗುರೂಜಿ ಹೇಳಿದ್ದಾರೆ ಅವರ ಮಾತಿಗೆ ಅಮೂಲ್ಯ ಅವರು ನಕ್ಕಿದ್ದಾರೆ.
ಈ ಮಧ್ಯೆ ರಾಕೇಶ್ ಅಡಿಗ ಅವರು ಗುರೂಜಿಯವರನ್ನು ಕಾಲು ಎಳೆಯುವ ಸಲುವಾಗಿ ನನ್ನ ತುಟಿಯನ್ನು ನೋಡಿ ಭವಿಷ್ಯ ಹೇಳಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಭವಿಷ್ಯ ನುಡಿದಂತಹ ಗುರೂಜಿ ಅವರು ನಿನ್ನ ಹಿಂದೆ ಯಾರು ಬಿಡುವುದಿಲ್ಲ ಆದರೆ ನೀನು ಎಲ್ಲರ ಹಿಂದೆ ಬೀಳುತ್ತೀಯಾ ಎಂದು ಹೇಳಿ ರಾಕೇಶ್ ಅವರ ಕಾಲೆಳೆದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಗುರೂಜಿ ಅವರು ಹೊಸದೊಂದು ಪ್ರಯೋಗವನ್ನೇ ಮಾಡುತ್ತಿದ್ದಾರೆ ಎಂದು ಹೇಳಬಹುದು, ಗುರೂಜಿ ಅವರು ತುಟಿಯನ್ನು ನೋಡಿ ಭವಿಷ್ಯವನ್ನು ಹೇಳುತ್ತಿರುವುದನ್ನು ನೋಡಿ ಮನೆಯಲ್ಲಿ ಇರುವಂತಹ ಎಲ್ಲಾ ಸ್ಪರ್ಧಿಗಳು ನಗುವಿನ ಮುಖಾಂತರ ಒಪ್ಪಿಕೊಂಡಿದ್ದಾರೆ.
ಈ ಭವಿಷ್ಯ ನಿಜವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಆ ಕ್ಷಣಕ್ಕೆ ಇದು ಎಲ್ಲರ ಮುಖದಲ್ಲಿಯೂ ಸಂತೋಷವನ್ನು ಉಂಟು ಮಾಡಿತು. ಇದರ ನಡುವಲ್ಲಿ ಅರುಣ್ ಸಾಗರ್ ಅವರು ಸಹ ತಮ್ಮ ತುಟಿಯನ್ನು ನೋಡಿ ಭವಿಷ್ಯ ಹೇಳುವುದಾಗಿ ಕೇಳಿದಾಗ ಗುರೂಜಿ ನಿಮ್ಮ ಮೀಸೆಯನ್ನು ತೆಗೆಸಿ ಬನ್ನಿ ನಂತರ ಈ ಭವಿಷ್ಯ ಹೇಳುತ್ತೇನೆ ಎಂದು ಹಾಸ್ಯಸ್ಪದವಾಗಿ ಅದಕ್ಕೆ ಉತ್ತರವನ್ನು ನೀಡಿದ್ದಾರೆ. ಗುರೂಜಿಯವರು ಬಿಗ್ ಬಾಸ್ ಓಟಿಟಿ ಯಲ್ಲಿ ಬಂದಂತಹ ಸಂದರ್ಭದಲ್ಲಿ ಇವರು ಎಲ್ಲರೊಂದಿಗೂ ಸಹ ಇಷ್ಟು ಹತ್ತಿರವಾಗಿ ಮಾತನಾಡುತ್ತಾ ಇರಲಿಲ್ಲ ಹಾಗೆ ಜನರಿಗೂ ಸಹ ಹತ್ತಿರವಾಗಿರಲಿಲ್ಲ ಆದರೆ ಈ ಸೀಸನ್ ನಲ್ಲಿ ಬಂದಿರುವುದರಿಂದ ಗುರೂಜಿಯವರು ಎಲ್ಲರ ಜೊತೆಯಲ್ಲಿ ತುಂಬಾ ಚೆನ್ನಾಗಿ ಒಡನಾಟವನ್ನು ಇಟ್ಟುಕೊಂಡಿದ್ದಾರೆ ಹಾಗೆಯೇ ಜನರನ್ನು ಎಂಟರ್ಟೈನ್ ಮಾಡುವಂತಹ ಒಂದು ಕಲೆಯನ್ನು ಕಲಿತುಕೊಂಡಿದ್ದಾರೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಇವರು ಹೆಚ್ಚು ದಿನಗಳ ಕಾಲ ಉಳಿದುಕೊಳ್ಳುತ್ತಾರೆ ಎನ್ನುವಂತಹ ಎಲ್ಲ ಮುನ್ಸೂಚನೆಗಳು ಕಾಣುತ್ತಿದೆ.