ಪುನೀತಪರ್ವ ಕಾರ್ಯಕ್ರಮ ಅಪ್ಪು ಅವರ ಜೊತೆಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವಂತಹ ಕೆಲಸ ಮಾಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಸಂಗೀತಗಾರ ವಿಜಯ್ ಪ್ರಕಾಶ್ ಅವರ ಜೊತೆಯಲ್ಲಿ ವೇದಿಕೆ ಮೇಲೆ ರಾಜ್‌ಕುಮಾರ್ ಕುಟುಂಬದ ಎಲ್ಲಾ ಸದಸ್ಯರು ಸಹ ನಿಂತು ಅಪ್ಪು ಅವರ ‘ರಾಜಕುಮಾರ’ ಚಿತ್ರದ ‘ಗೊಂಬೆ ಹೇಳುತೈತೆ’ ಎಂಬ ಹಾಡನ್ನು ಹಾಡಿದ್ದಾರೆ ಹಾಡುವಂತಹ ಸಂದರ್ಭದಲ್ಲಿ ವಿಜಯ್ ಪ್ರಕಾಶ್ ಅವರು ತುಂಬಾ ಭಾವುಕರಾಗಿ ಕಣ್ಣಂಚಲ್ಲಿ ನೀರು ಗೊತ್ತಿಲ್ಲದ ಹಾಗೆ ಹೊರ ಬರುತ್ತಿದೆ. ಈ ಹಾಡನ್ನು ವಿಶೇಷವಾಗಿ ಅಪ್ಪು ಅವರಿಗೆ ಸಲ್ಲಿಸುವ ಮೂಲಕ ಅವರಿಗೆ ನಮಿಸಿದ್ದಾರೆ. ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದಂತಹ ಈ ಒಂದು ಪುನೀತ ಪರ್ವ ಕಾರ್ಯಕ್ರಮವು ‘ಗಂಧದಗುಡಿ’ ಸಿನಿಮಾದ ಪ್ರಿ ರಿಲೀಸ್ ಈವೆಂಟ್ ಆಗಿದೆ ಈ ಒಂದು ಕಾರ್ಯಕ್ರಮಕ್ಕೆ ಎಲ್ಲಾ ಅಪ್ಪು ಅಭಿಮಾನಿಗಳು ಹಾಗೆ ಚಿತ್ರದಲ್ಲಿ ರಂಗದಲ್ಲಿ ಇದ್ದಂತಹ ಎಲ್ಲಾ ಗಣ್ಯರು ಸಹ ಆಸೀನರಾಗಿದ್ದರು.
ವಿಜಯ್ ಪ್ರಕಾಶ್ ಅವರು ಹಾಡನ್ನು ಹಾಡುತ್ತಾ ಇರುವಂತಹ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ತುಂಬಾ ಭಾವುಕರಾಗಿ ಸ್ಟೇಜ್ ಮೇಲೆ ಬಿಕ್ಕಿಬಿಕ್ಕಿ ಹತ್ತಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿ ನೆರೆದಿದಂತಹ ಲಕ್ಷಾಂತರ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು ಕಣ್ಣೀರು ಹರಿಸಿದ್ದಾರೆ. ಹೀಗೆ ವಿಜಯ್ ಪ್ರಕಾಶ್ ಅವರು ಹಾಡನ್ನು ಹಾಡುತ್ತಾ ಇರುವಂತಹ ಸಂದರ್ಭದಲ್ಲಿ ಅಶ್ವಿನಿ ಅವರು ಕೈಮುಗಿದು ನಿಂತಿದ್ದರು ಹಾಗೆ ಅಲ್ಲಿ ನೆರೆದಿದಂತಹ ಎಲ್ಲಾ ಗಣ್ಯರು ಹಾಗೂ ಅಭಿಮಾನಿಗಳು ತಮ್ಮ ಮೊಬೈಲ್ ಫೋನ್ ನ ಮೂಲಕ ಟಾರ್ಚ್ ಆನ್ ಮಾಡಿ ಅಪ್ಪು ಅವರಿಗೆ ಈ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಒಬ್ಬರು ನಮ್ಮ ಜೊತೆಯಲ್ಲಿ ಬದುಕಿದ್ದಾಗ ಅವರಿಗೆ ಸಿಗುವಾಗ ಗೌರವ ಸಾಮಾನ್ಯವಾಗಿ ನಾವು ನೋಡಿದ್ದೇವೆ ಆದರೆ ನಮ್ಮನ್ನು ಹಗಲಿದ ನಂತರ ಅವರಿಗೆ ಇಷ್ಟೊಂದು ಗೌರವ ಸಿಗುತ್ತಿರುವುದು ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ.
ಪುನೀತ್ ರಾಜ್‌ಕುಮಾರ್ ಅವರು ಬದುಕಿದ್ದಂತಹ ಸಂದರ್ಭದಲ್ಲಿ ಅವರು ಮಾಡಿದ ಸಾಧನೆಯನ್ನು ಎಲ್ಲಿಯೂ ಸಹ ತೋರಿಸಿ ಕೊಂಡಿರಲಿಲ್ಲ, ಹಾಗೆ ಇವರು ಮಾಡಿದ ಸಾಧನೆ ಯಾವ ವೇದಿಕೆಯ ಮೇಲೆ ಹೇಳಿಕೊಂಡಿರಲಿಲ್ಲ ಆದರೆ ಅವರು ನಮ್ಮನ್ನು ಹಗಲಿದ ನಂತರ ಅವರು ಮಾಡಿರುವಂತಹ ಸಮಾಜಮುಖಿ ಕೆಲಸಗಳು ಹೊರಗೆ ಬರುತ್ತಿದೆ. ಸಾಕಷ್ಟು ಜನ ಇವರನ್ನು ನೋಡಿ ಅವರ ಸಮಾಜಮುಖಿ ಕೆಲಸಗಳನ್ನು ಮೈಗೂಡಿಸಿಕೊಳ್ಳಬೇಕು ಎನ್ನುವಂತಹ ಹಂಬಲವನ್ನು ಇಟ್ಟುಕೊಂಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರಿಗೆ ಎಲ್ಲರೂ ಸೇರಿ ವಿಶೇಷ ರೀತಿಯಲ್ಲಿ ನಮನ ಸಲ್ಲಿಸಲು ಡಾ. ರಾಜ್‌ಕುಮಾರ್ ಕುಟುಂಬದವರು ತುಂಬ ಕಾಳಜಿ ವಹಿಸಿ ಈ ಕಾರ್ಯಕ್ರಮ ಮಾಡಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ರಾಜ್ ಕುಟುಂಬಸ್ಥರು ಭಾಗಿ ಆಗಿ ಯಾವುದೇ ನಿರ್ವಿಘ್ನ ಇಲ್ಲದೆ ಈ ಒಂದು ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಗಾಯಕರೆಲ್ಲರೂ ಸಹ ಪುನೀತ್ ರಾಜ್‌ಕುಮಾರ್ ಅವರ ಹಾಡುಗಳನ್ನು ಹಾಡುವ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಿದ್ದಾರೆ ಹಾಗೆ ವಿಜಯ್ ಪ್ರಕಾಶ್ ಅವರು ತುಂಬಾ ಭಾವುಕರಾಗಿ ಹಾಡನ್ನು ಹಾಡಿರುವ ವೀಡಿಯೋ ಎಲ್ಲೆಡೆ ಈಗ ವೈರಲ್ ಆಗುತ್ತಿದೆ. ನೀವು ಸಹ ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾಗಿದ್ದರೆ ತಪ್ಪದೇ ನಮಗೆ ‘ಮಿಸ್ ಯು ಅಪ್ಪು’ ಎಂದು ಕಮೆಂಟ್ಸ್ ಮೂಲಕ ತಿಳಿಸಿ.