ರಾಹುಲ್ ಗಾಂಧಿ ಅವರು ನೆನ್ನೆ ರಾಯಚೂರನ್ನು ತಲುಪಿ ಭಾರತ್ ಜೋಡೋ ಪಾದಯಾತ್ರೆ ಮುಂದುವರಿಸಿದ್ದು ತುಂಬಾ ವಿಶೇಷವಾಗಿ ಕಂಡಿದೆ ಹೌದು ರಾಹುಲ್ ಗಾಂಧಿಯವರ ಜೊತೆಗೆ ಮಾಜಿ ಸಂಸದೆ ನಟಿ ರಮ್ಯಾ ಅವರು ಕಾಣಿಸಿಕೊಂಡಿದ್ದು ತುಂಬಾ ವಿಶೇಷವಾಗಿ ಕಂಡಿದೆ. ಹೌದು ರಮ್ಯಾ ಅವರು ರಾಹುಲ್ ಗಾಂಧಿಯವರ ಕೈಯನ್ನು ಹಿಡಿದುಕೊಂಡು ಈ ಒಂದು ಪಾದಯಾತ್ರೆಯಲ್ಲಿ ಅವರಿಗೆ ಸಾತ್ ನೀಡಿದ್ದಾರೆ ಈ ಒಂದು ಫೋಟೋ ಮತ್ತು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಕ್ಟೋಬರ್ 23 ಸಂಜೆ ಭಾರತ್ ಜೋಡು ಯಾತ್ರೆ ರಾಯಚೂರನ್ನು ತಲುಪಿದ್ದು ಜನಸಾಗರವೇ ಹರಿದು ಬಂದಿದೆ ಕಿಲೋ ಮೀಟರ್ ಗಳಷ್ಟು ಉದ್ದದ ಜನಸಾಗರ ನೆರೆದಿದೆ.
ನಗರದ ರಾಷ್ಟ್ರೀಯ ಹೆದ್ದಾರಿ ಜಾತ್ರೆಯ ರೀತಿಯಲ್ಲಿ ಜನರಿಂದ ಕಿಕ್ಕಿರಿದು ತುಂಬಿ ಹೋಗಿತ್ತು. ಲಕ್ಷಾಂತರ ಜನರ ಮಧ್ಯೆ ರಾಹುಲ್ ಗಾಂಧಿ ಅವರು ತಮ್ಮ ನಡಿಗೆ ಹೆಜ್ಜೆಗಳನ್ನು ಹಾಕುತ್ತಾ, ವಾಲ್ಕಟ್ ಮೈದಾನಕ್ಕೆ ಬಂದು ಸೇರಿದರು. ಮಹಾರಾಷ್ಟ್ರ ಸೇರಿದಂತೆ ಇನ್ನಿತರ ಭಾಗಗಳಿಂದ ಕರೆತರಲಾಗಿದ್ದ ಕಲಾ ತಂಡಗಳು ಆಕರ್ಷಕ ನೃತ್ಯದ ಮಧ್ಯೆ ಮುಗಿಲು ಮುಟ್ಟುವ ಧ್ವಜಗಳೊಂದಿಗೆ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಜನವೋ ಜನ ಸಾಗರ ಎನ್ನುವಂತೆ ಭಾರತ್ ಜೋಡೋ ನಡೆಸಲಾಯಿತು. ಅದೆಷ್ಟೋ ದೂರದ ವರೆಗು ಜನರಿಂದ ರಸ್ತೆ ತುಂಬಿ ಹೋಗಿತ್ತು. ರಾಷ್ಟ್ರಧ್ವಜ ಎಲ್ಲೆಡೆ ಹಾರಾಡುವ ರೀತಿಯಲ್ಲಿ ಪಾದಯಾತ್ರೆಯನ್ನು ವೈವಿಧ್ಯಮಯವಾಗಿ ನಡೆಸಲಾಯಿತು. ರಾಹುಲ್ ಗಾಂಧಿ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ, ಸೇರಿದಂತೆ ಅನೇಕ ಘಟಾನುಘಟಿ ನಾಯಕರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರಿಗೆ ಮತ್ತಷ್ಟು ಹುಮ್ಮಸ್ಸು ಬರುವಂತೆ ಮಾಡಿದರು.
ಮುಂದುವರೆದಂತೆ ನಟಿ ರಮ್ಯಾ ಅವರ ಆಗಮನ ಪಾದಯಾತ್ರೆಗೆ ಮತ್ತಷ್ಟು ಮಹತ್ವ ಪಾತ್ರ ಬರುವಂತೆ ಮಾಡಿತು. ಅಡಿಕೆ ಶಿವಕುಮಾರ್ ಅವರು ಪ್ರೀತಿಯಿಂದ ರಮ್ಯಾ ಅವರ ಕೆನ್ನೆಗೆ ಒಡೆಯುವ ಮೂಲಕ ಪಾದಯಾತ್ರೆಗೆ ಸೇರ್ಪಡೆ ಮಾಡಿಕೊಂಡರು ರಮ್ಯಾ ಅವರು ಬಿಳಿ ವಸ್ತ್ರವನ್ನು ಧರಿಸಿ ಈ ಒಂದು ಕಾರ್ಯಕ್ರಮಕ್ಕೆ ಮೆರಗುಗೊಳಿಸಿದರು ರಾಹುಲ್ ಗಾಂಧಿ ಅವರ ಕೈ ಹಿಡಿದು, ರಮ್ಯಾ ಅವರು ಪಾದಯಾತ್ರೆಗೆ ಹೆಜ್ಜೆ ಹಾಕಿದರು. ಡಿ. ಕೆ. ಶಿವಕುಮಾರ್, ರಾಹುಲ್ ಗಾಂಧಿ ಹಾಗು ರಮ್ಯಾ ಅವರ ಪಾದಯಾತ್ರೆಯ ನಡಿಗೆ ನೋಡಲು ಜನ ಕಿಕ್ಕಿರುದು ನೆರೆದಿದ್ದರು. ತಮ್ಮ ಬಿಡುವಿಲ್ಲದ ಸಮಯದಲ್ಲೂ ಮಾಜಿ ಸಂಸದೆ ರಮ್ಯಾ ಅವರು ರಾಹುಲ್ ಗಾಂಧಿಯವರ ಜೊತೆ ರಾಯಚೂರಿನಲ್ಲಿ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಕೈಯನ್ನು ಹಿಡಿದು ಪಾದಯಾತ್ರೆಗೆ ಸಾತ್ ಕೊಟ್ಟಿರುವುದು ಎಲ್ಲರಲ್ಲಿಯೂ ಸಹ ಆಶ್ಚರ್ಯವನ್ನು ಉಂಟು ಮಾಡಿದೆ.
ರಮ್ಯ ಮತ್ತು ರಾಹುಲ್ ಗಾಂಧಿ ಅವರನ್ನು ನೋಡಲು ಅದೆಷ್ಟೋ ಜನ ಸಾಗರ ಅಲ್ಲಿ ಪಾಲ್ಗೊಂಡಿದ್ದಾರೆ ಅಷ್ಟೇ ಅಲ್ಲದೆ ದಾರಿಯುದ್ಧಕ್ಕೂ ಮಹಿಳೆಯರು ಹಾಗೂ ವಯೋವೃದ್ಧರನ್ನು ಕರೆದು ಮಾತನಾಡುತ್ತಾ, ಭಾರತ್ ಜೋಡೋ ಯಾತ್ರೆಯ ವಿಶೇಷತೆ ಈ ರೀತಿಯಲ್ಲಿ ವಹಿಸಿಕೊಂಡಿದ್ದರು. ಅಲ್ಲದೇ ಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಕನ್ಯಾಕುಮಾರಿಯಿಂದ ಭಾರತ್ ಜೋಡೋ ಪಾದಯಾತ್ರೆ ಆರಂಭಿಸಿರುವ ರಾಹುಲ್ ಗಾಂಧಿ ಅವರು ಕಳೆದ ಮೂರು ವಾರಗಳಿಂದ ಕರ್ನಾಟಕದಲ್ಲಿ ಪಾದಯಾತ್ರೆ ನಡೆಸಿದ್ದಾರೆ. ಕರ್ನಾಟಕದಿಂದ ಇನ್ನೂ ಕಾಶ್ಮೀರದವರೆಗೂ ಈ ಯಾತ್ರೆ ಮುಂದುವರಿಯಲಿದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ