ನಮ್ಮ ಕರ್ನಾಟಕದಲ್ಲಿ ಡಾಕ್ಟರ್ ರಾಜ್ ಕುಮಾರ್ ಅಂತಹ ದೈತ್ಯ ಪ್ರತಿಭೆಯನ್ನು ನಾವು ಇದುವರೆಗೂ ಸಹ ಕಂಡಿಲ್ಲ ಅಷ್ಟೊಂದು ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಟನೆಯನ್ನು ತಮ್ಮ ಜೀವ ಮತ್ತು ಜೀವನವನ್ನಾಗಿ ಮಾಡಿಕೊಂಡಿದ್ದರು. 1929 ರಲ್ಲಿ ಡಾಕ್ಟರ್ ರಾಜ್ ಕುಮಾರ್ ಅವರ ಜನನವಾಗುತ್ತದೆ. ಒಂದು ಸಾಧಾರಣ ಕುಟುಂಬದಲ್ಲಿ ಜನಿಸಿದಂತಹ ರಾಜ್ ಕುಮಾರ ಅವರು ಪ್ರತಿಭಾನ್ವಿತ ನಟನಾಗಿ ಹೊರಹೊಮ್ಮುದಕ್ಕೆ ಒಂದು ಕಾರಣ ಎಂದರೆ ಅವರಲ್ಲಿ ಇದ್ದಂತಹ ಸರಳತೆ ಹಾಗೆಯೇ ನಟನೆಯಲ್ಲಿ ಇದ್ದಂತಹ ಉತ್ಸಾಹ ಹಾಗು ನಟನೆಯ ಮೇಲಿನ ಪ್ರೀತಿ ಅವರನ್ನು ಇಷ್ಟು ದೊಡ್ಡ ಸ್ಟಾರ್ ನಟನಾಗಿ ಮಾಡಿತು. ಮೂಲತಃ ರಾಜ್ಕುಮಾರ ಅವರ ಹೆಸರು ಮುತ್ತುರಾಜ್ ಎಂದು, ಇವರು ಸಿನಿಮಾ ರಂಗಕ್ಕೆ ಬಂದ ನಂತರ ಇವರ ಹೆಸರನ್ನು ರಾಜ್ ಕುಮಾರ್ ಎಂದು ಬದಲಾಯಿಸಲಾಯಿತು.
ರಾಜ್ ಕುಮಾರ ಅವರ ಜೀವನವು ಸಹ ಸಾಮಾನ್ಯವಾಗಿ ಎಲ್ಲರ ಜೀವನದಂತೆಯೇ ಇತ್ತು 1953 ರಲ್ಲಿ ಡಾ. ರಾಜ್ ಕುಮಾರ್ ಅವರು ತಮ್ಮ ತಂದೆಯನ್ನು ಕಳೆದುಕೊಳ್ಳುತ್ತಾರೆ ಅಂತಹ ಸಮಯದಲ್ಲಿ ಖಿನ್ನತೆಗೆ ಒಳಗಾದಂತಹ ರಾಜ್ಕುಮಾರ ಆ-ತ್ಮ-ಹ-ತ್ಯೆ ಮಾಡಿಕೊಳ್ಳಲು ಮುಂದಾಗುತ್ತಾರೆ ಆಗ ರಾಜ್ ಕುಮಾರ್ ಅವರ ತಾಯಿ ನೀನು ಆ-ತ್ಮ-ಹ-ತ್ಯೆ ಮಾಡಿಕೊಂಡರೆ ನಿನ್ನ ತಂದೆಯ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಮೋಕ್ಷ ಸಿಗುವುದಿಲ್ಲ ಆದ್ದರಿಂದ ಈ ರೀತಿಯಾಗಿ ಮಾಡುವುದು ಸರಿಯಲ್ಲ ಎಂದು ಹೇಳುತ್ತಾರೆ. ನಂತರದಲ್ಲಿ ಡಾಕ್ಟರ್ ರಾಜ್ಕುಮಾರ್ ಅವರು ಖಿನ್ನತೆಯಿಂದ ಹೊರಗೆ ಬರುತ್ತಾರೆ. ನಂತರದಲ್ಲಿ ಡಾಕ್ಟರ್ ರಾಜ್ಕುಮಾರ್ ಹಾಗೂ ಪಾರ್ವತಮ್ಮ ಅವರ ವಿವಾಹವು ಸಹ ನಡೆಯುತ್ತದೆ.
1953ರಲ್ಲಿ ಡಾಕ್ಟರ್ ರಾಜಕುಮಾರ್ ಅವರ ಜೀವನವನ್ನೇ ಬದಲಾಯಿಸುವಂತಹ ಒಂದು ಘಟನೆ ನಡೆಯುತ್ತದೆ ಅದು ಏನೆಂದರೆ ಬೇಡರ ಕಣ್ಣಪ್ಪ ಚಿತ್ರಕ್ಕಾಗಿ ಡಾಕ್ಟರ್ ರಾಜ್ಕುಮಾರ್ ಅವರಿಗೆ ಒಂದು ಕರೆಯನ್ನು ಮಾಡಲಾಗುತ್ತದೆ ನಂತರದಲ್ಲಿ ಅಲ್ಲಿಂದ ರಾಜ್ಕುಮಾರ ಅವರ ಸಿನಿಮಾ ಪ್ರಯಾಣ ಪ್ರಾರಂಭವಾಗುತ್ತದೆ. ಡಾಕ್ಟರ್ ರಾಜ್ಕುಮಾರ್ ಅವರನ್ನು ನಮ್ಮ ಕರ್ನಾಟಕದಲ್ಲಿ ಕಲಾವಿದರಿಂದ ಹಿಡಿದು ಸಾಮಾನ್ಯ ಜನರೆಲ್ಲರಲ್ಲು ಪ್ರೀತಿ ಮತ್ತು ಗೌರವ ಇದೆ, ಇವರನ್ನು ಇಷ್ಟಪಡದೇ ಇರುವಂತಹ ಜನರೇ ಇಲ್ಲ ಎಂದು ಹೇಳಬಹುದು. ರಾಜ್ಕುಮಾರರು ಯಾವಾಗಲೂ ಮಾತು ಕಡಿಮೆ ಹಾಗೂ ಕೆಲಸ ಜಾಸ್ತಿ ಮಾಡುತ್ತಿದ್ದರು ಇವರು ತಮ್ಮ ಸೈಲೆನ್ಸ್ ನಿಂದಲೇ ಜಗತ್ತನ್ನು ಗೆದ್ದರೂ ಎಂದು ಹೇಳಬಹುದು ನಮ್ಮ ಕರ್ನಾಟಕದಲ್ಲಿ ಮಾತ್ರವಲ್ಲದೆ ಇತರ ಕಡೆಗಳಲ್ಲಿಯೂ ರಾಜ್ಕುಮಾರ್ ಅವರ ಹೆಸರು ಇನ್ನೂ ಸಹ ಉಳಿದುಕೊಂಡಿದೆ ಅವರು ನಮ್ಮನ್ನು ಅಗಲಿದ್ದರೂ ಸಹ ಅವರ ನೆನಪು ಮಾತ್ರ ಸದಾ ನಮ್ಮ ಮನಸ್ಸಿನಲ್ಲಿ ಇರುತ್ತದೆ.
ಸರಳತೆಯ ಸಾಹುಕಾರ ಡಾಕ್ಟರ್ ರಾಜ್ಕುಮಾರ್ ಅವರು ತಮ್ಮ ಮಕ್ಕಳಿಗೆ ಉತ್ತಮವಾದಂತಹ ಸಂಸ್ಕಾರವನ್ನು ನೀಡಿ ಬೆಳೆಸಿದ್ದಾರೆ ದೊಡ್ಡ ಮನೆಯ ಮಕ್ಕಳು ಅಣ್ಣಾವ್ರ ಹಾದಿಯಲ್ಲಿಯೇ ನಡೆದುಕೊಂಡು ಬಂದಿದ್ದಾರೆ. ಅದರಲ್ಲಿಯೂ ಪುನೀತ್ ರಾಜ್ಕುಮಾರ್ ಅವರು ತಮ್ಮ ನಗುವಿನ ಮೂಲಕವೇ ಎಲ್ಲರ ಮನಸ್ಸನ್ನು ಗೆದ್ದು ಹೋಗಿದ್ದಾರೆ. ತಂದೆಗೆ ತಕ್ಕ ಮಗನಾದಂತಹ ಪುನೀತ್ ರಾಜ್ಕುಮಾರ್ ಅವರು ಸಹ ತಂದೆಯ ರೀತಿಯಲ್ಲಿ ಸರಳತೆ ಇಂದ ಕೂಡಿದ್ದರು. ಡಾಕ್ಟರ್ ರಾಜ್ಕುಮಾರ್ ಮತ್ತು ಡಾಕ್ಟರ್ ಪುನೀತ್ ರಾಜಕುಮಾರ್ ಅವರು ಆಡಂಬರದ ಜೀವನದಿಂದ ತುಂಬಾ ದೂರ ಇದ್ದರು ಸಾಮಾನ್ಯರಲ್ಲಿ ಸಾಮಾನ್ಯರು ಆಗಿದ್ದರು ಎಂದು ಹೇಳಿದರೆ ತಪ್ಪಾಗಲಾರದು. ಡಾಕ್ಟರ್ ರಾಜ್ಕುಮಾರ್ ಅವರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.