ಗಂಧದ ಗುಡಿ ಸಿನಿಮಾದ ಶೂಟಿಂಗ್ ವೇಳೆ ಅಪ್ಪು ಅವರು ಹೇಳಿದಂತಹ ಈ ಒಂದು ಮಾತು ಕೇಳಿದರೆ ಎಲ್ಲರನ್ನೂ ಭಾವುಕರನ್ನಾಗಿ ಮಾಡುತ್ತದೆ ಹೌದು. ಅಪ್ಪು ಅವರು ಗಂಧದಗುಡಿ ಸಿನಿಮಾದ ಶೂಟಿಂಗ್ ನಲ್ಲಿ ಸಾಕಷ್ಟು ಅನುಭವಗಳನ್ನು ಪಡೆದುಕೊಂಡಿದ್ದಾರೆ. ಅಪ್ಪು ಅವರು ಏನು ಹಾಗೆ ಅಪ್ಪು ಅವರಿಗೆ ಕರ್ನಾಟಕದ ಮೇಲಿರುವಂತಹ ಪ್ರೀತಿ ಈ ಒಂದು ಚಿತ್ರವನ್ನು ನೋಡಿದರೆ ನಿಮಗೆ ಖಂಡಿತವಾಗಿಯೂ ಅರ್ಥವಾಗುತ್ತದೆ. ಅಪ್ಪು ಅವರ ನಟನೆಯ ಗಂಧದಗುಡಿ ಸಿನಿಮಾ ಡಾಕ್ಯುಮೆಂಟರಿ ಚಿತ್ರ ಇದಾಗಿದ್ದು ಇಂದು ನಮ್ಮ ಕರ್ನಾಟಕ ರಾಜ್ಯದಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ ಈ ಚಿತ್ರದ ಒಂದು ವಿಶೇಷತೆ ಏನೆಂದರೆ ನಮ್ಮ ಪುನೀತ್ ರಾಜ್ಕುಮಾರ್ ಅವರು ಅವರಾಗಿಯೇ ಕಾಣಿಸಿಕೊಂಡಿದ್ದಾರೆ.
ಯಾವುದೇ ಮೇಕಪ್ ಇಲ್ಲದೆ, ಹಾಗೆಯೇ ಬೇರೆ ಸಿನಿಮಾಗಳಲ್ಲಿ ಬರುವಂತಹ ಯಾವುದೇ ಡೈಲಾಗ್ ಗಳು ಇಲ್ಲದೆ ಸರಳವಾಗಿ ನಮ್ಮ ಅಪ್ಪು ಸಹಜವಾಗಿ ಕಾಣಿಸಿಕೊಂಡಿದ್ದಾರೆ ಹಾಗಾಗಿ ಪುನೀತ್ ರಾಜ್ಕುಮಾರ್ ಅವರು ಎಲ್ಲರಿಗೂ ಸಹ ಇನ್ನಷ್ಟು ಹತ್ತಿರವಾಗುತ್ತಾರೆ. ಈ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಕಾಡಿನ ಮಧ್ಯಭಾಗದಕ್ಕೆ ಹೋದಾಗ ಅಲ್ಲಿ ಇರುವಂತಹ ವಿಷ ಸರ್ಪಗಳು, ಹುಲಿ, ಚಿರತೆ ಇನ್ನಿತರ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತದೆ ಈ ಸಂದರ್ಭದಲ್ಲಿ ಅವಪ್ಪು ಅವರು ಒಂದು ಮಾತನ್ನು ಹೇಳುತ್ತಾರೆ ಈ ಮಾತನ್ನು ನಾವು ಕೇಳಿದರೆ ಅಕ್ಷರ ಸಹ ನಮ್ಮ ಕಣ್ಣಂಚಲ್ಲಿ ನೀರು ಬರುವ ಹಾಗೆ ಆಗುತ್ತದೆ. ಕಾಡಿನ ಒಳಗಡೆ ಹೋದಾಗ ಹಾವು ಕಾಣಿಸುತ್ತದೆ ಆಗ ಅಪ್ಪು ಅವರು ನಿರ್ದೇಶಕರಾದ ಅಮೋಘ ವರ್ಷ ಅವರ ಜೊತೆಯಲ್ಲಿ ತಮಾಷೆಯಾಗಿ ಈ ರೀತಿಯಾಗಿ ಹೇಳುತ್ತಾರೆ. ಹಾವು ನೋಡುತ್ತಾ ‘ಹೆಂಡತಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬಂದಿದ್ದೇನೆ ಸೇಫ್ ಆಗಿ ಮನೆಗೆ ಸೇರ್ತಿನಿ ತಾನೇ’ ಎಂದು ಪ್ರಶ್ನೆ ಮಾಡುತ್ತಾರೆ ಈ ಒಂದು ಮಾತನ್ನು ಕೇಳುತ್ತಿದ್ದರೆ ನಮ್ಮನ್ನು ಭಾವುಕರನ್ನಾಗಿಸುತ್ತದೆ.
ಚಿತ್ರೀಕರಣವನ್ನು ಮುಗಿಸಿಕೊಂಡು ಸೇಫ್ ಆಗಿ ಬಂದಂತಹ ಅಪ್ಪು ಅವರು ಅನಂತರ ಆಸ್ಪತ್ರೆಗ ಹೋಗುತ್ತಾರೆ ಅಲ್ಲಿಂದ ಮತ್ತೆ ಸೇಫ್ ಆಗಿ ಬರುವುದೇ ಇಲ್ಲ ಅಪ್ಪು ಅವರು ಆಡಿದಂತಹ ಆ ಒಂದು ಮಾತು ಇಂದು ನಮ್ಮೆಲ್ಲರ ಕಣ್ಣಲ್ಲಿ ನೀರು ಬರುವಂತೆ ಮಾಡುತ್ತದೆ. ನಟ ಪುನೀತ್ ರಾಜ್ಕುಮಾರ್ ಹಾಗೂ ನಿರ್ದೇಶಕ ಅಮೋಘ ವರ್ಷ ಅವರು ಗಂಧದಗುಡಿ ಎಂಬ ಸಿನಿಮಾದ ಹೆಸರಿನಲ್ಲಿ ಡಾಕ್ಯುಮೆಂಟರಿಯನ್ನು ಮಾಡಿದ್ದಾರೆ. ಈ ಒಂದು ಸಿನಿಮಾವು ನಮ್ಮ ಕರ್ನಾಟಕದ ಸೊಬಗನ್ನು ಚೆಲ್ಲುತ್ತದೆ, ಸಿನಿಮಾದ ಬಗ್ಗೆ ಸಾಕಷ್ಟು ಜನರು ನೆಗೆಟಿವ್ ಆಗಿ ಮಾತಾಡಿದ್ದು ಉಂಟು ಸಾಕಷ್ಟು ಡಿಸ್ಕವರಿ ಚಾನೆಲ್ ಗಳು ಎಲ್ಲವನ್ನು ನಮ್ಮ ಕಣ್ಣೆದುರೇ ನಡೆಯುವಂತೆ ತೋರಿಸುವಾಗ ಅಪ್ಪು ಅವರು ಈ ಸಿನಿಮಾದಲ್ಲಿ ಏನು ಮಾಡಲಿದ್ದಾರೆ ಎನ್ನುವಂತಹ ಪ್ರಶ್ನೆ ಸಾಕಷ್ಟು ಜನರಲ್ಲಿ ಮೂಡಿತ್ತು.
ಆದರೆ ಇಂತಹವರ ಮಾತಿಗೆ ಗಂಧದಗುಡಿ ಸಿನಿಮಾ ಅವರನ್ನು ಮೂಕರನ್ನಾಗಿ ಮಾಡಿಸಿದೆ ಹೌದು ಸಿನಿಮಾವನ್ನು ನೋಡಿದರೆ ಅಪ್ಪು ಅವರು ಈ ಒಂದು ಸಿನಿಮಾದಲ್ಲಿ ತೋರಿಸಿರುವಂತಹ ಎಲ್ಲಾ ಸನ್ನಿವೇಶಗಳು ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಪ್ರತ್ಯಕ್ಷವಾಗಿ ಕಾಡಿನ ಮಧ್ಯದಲ್ಲಿ ಹೋಗಿ ಅಲ್ಲಿನ ಕಾಡುಪ್ರಾಣಿಗಳ ಮಧ್ಯೆ ನಿಂತು ಸಿನಿಮಾವನ್ನು ಮಾಡಬೇಕು ಎಂದರೆ ನಿಜಕ್ಕೂ ಧೈರ್ಯ ಬೇಕು ಅಂತಹ ಧೈರ್ಯವನ್ನು ನಮ್ಮ ಪುನೀತ್ ರಾಜ್ಕುಮಾರ್ ಮಾಡಿದ್ದಾರೆ ನಮ್ಮ ಕರ್ನಾಟಕವು ಸಂಸ್ಕೃತಿಗಳ ತವರು ಕಾಡು, ಮೇಡು, ಭಟ್ಟ, ಪ್ರದೇಶ, ಹೊಳೆ, ಜರಿ, ನದಿ ಈ ರೀತಿಯಾದಂತಹ ಸೊಭನ್ನು ಒಳಗೊಂಡಿರುವುದು ವಿಶೇಷ. ಅಪ್ಪು ಅವರ ಮಾತು ನಿಮ್ಮನ್ನು ಭಾವುಕರಾಗಿಸಿದರೆ ಕಾಮೆಂಟ್ ಮೂಲಕ ತಿಳಿಸಿ.