ಅಪ್ಪು ಗಂಧದಗುಡಿ ಸಿನಿಮಾ ನೋಡಿ ಥಿಯೇಟರ್ ನಲ್ಲಿಯೇ ಕಣ್ಣೀರು ಹಾಕಿದ ನಟ ನಟಿಯರು. ಈ ವಿಡಿಯೋ ನೋಡಿ.

ಗಂಧದಗುಡಿ ಅಪ್ಪು ಬದುಕಿನಲ್ಲಿ ವಿಷೇಶವಾದ ಭಾಗ ಎಂದೇ ಹೇಳಬಹುದು ಈ ಸಿನಿಮಾ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳನ್ನು ಭಾವುಕರನ್ನಾಗಿ ಮಾಡಿದೆ. ಕಾಡಿನ ಕಥೆಗಳ ಜೊತೆ ಅಪ್ಪು ಅವರ ಸಿಂಪಲ್ ಜೀವನ ಚಿತ್ರದಲ್ಲಿ ಅನಾವರಣವಾಗಿದೆ ಅಪ್ಪು ಅವರ ಕೊನೆಯ ಸಿನಿಮಾವನ್ನು ಕಣ್ತುಂಬಿ ಕೊಂಡ ಬಳಿಕ ಸಿನಿಮಾ ಸ್ಟಾರ್ ಗಳು ಕಣ್ಣೀರು ಹಾಕಿದ್ದಾರೆ. ಪ್ರತಿಯೊಬ್ಬರು ಸಹ ಈ ಒಂದು ಸಿನಿಮಾಗಳನ್ನು ನೋಡಲೇಬೇಕು ಅದ್ಭುತವಾದಂತಹ ಒಂದು ಮಾಹಿತಿ ಇದರಿಂದ ಸಿಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಈ ಸಿನಿಮಾವನ್ನು ತಪ್ಪದೇ ನೋಡಲೇಬೇಕು ಎಂದು ಸ್ಟಾರ್ ನಟ ನಟಿಯರು ತಿಳಿಸಿದ್ದಾರೆ. ಡಾಕ್ಯುಮೆಂಟರಿ ಸಿನಿಮಾವು ವಲ್ಡ್ ಕ್ಲಾಸ್ ಸಿನಿಮಾ ವಾಗಿದ್ದು ಇದರಲ್ಲಿನ ಪ್ರತಿಯೊಂದು ದೃಶ್ಯಗಳು ಸಹ ಅಪ್ಪು ಅವರು ನಮ್ಮ ಕಣ್ಣು ಮುಂದೆ ಇದ್ದಾರೆ ಎನ್ನುವಂತಹ ಭಾವನೆಯನ್ನು ಉಂಟುಮಾಡುತ್ತದೆ.

WhatsApp Group Join Now
Telegram Group Join Now

ಅಪ್ಪು ಅವರು ಈ ಒಂದು ಸಿನಿಮಾವನ್ನು ನಾಡಿಗೆ ಕೊಟ್ಟಿರುವಂತಹ ಒಂದು ಕೊಡುಗೆ ಎಂದು ಹೇಳಿದ್ದಾರೆ ಅಷ್ಟೇ ಅಲ್ಲದೆ ನಮ್ಮ ಮುಂದಿನ ತಲೆಮಾರಿಗೆ ನೀಡಿರುವಂತಹ ದಿಕ್ಸೂಚಿ, ಅಪ್ಪು ಇಲ್ಲದ ನೋವು ನಮ್ಮನ್ನು ಕಾಡುತ್ತಿದೆ ಇದರ ನಡುವೆ ಅವರ ಕೊನೆಯ ಸಿನಿಮ ಗಂಧದಗುಡಿ ರಿಲೀಸ್ ಆಗಿರುವುದು ಒಂದಷ್ಟು ಸ್ವಲ್ಪ ನೆಮ್ಮದಿಯ ಭಾವನೆಯನ್ನು ಉಂಟುಮಾಡುತ್ತದೆ. ಪ್ರೀಮಿಯರ್ ಶೋ ವೀಕ್ಷಿಸಿದಂತಹ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಗಂಧದಗುಡಿ ದರ್ಶನ ಪಡೆದು ಭಾವುಕರಾಗಿದ್ದಾರೆ ಗಂಧದಗುಡಿ ಚಿತ್ರ ಪುನೀತ್ ರಾಜ್‌ಕುಮಾರ್ ತಾವು ಒಬ್ಬ ಸ್ಟಾರ್ ನಟ ಎಂಬ ಅಮ್ಮು ಬಿಮ್ಮು ಇಲ್ಲದೆ ಸೀದಾ ಸಾದಾ ವ್ಯಕ್ತಿಯಾಗಿ ನಟಿಸಿರುವಂತಹ ಒಂದು ಸಿನಿಮಾ. ಗಂಧದಗುಡಿಯಲ್ಲಿ ಪ್ರಕೃತಿಯ ಶಕ್ತಿಯನ್ನು ನಮಗೆಲ್ಲರಿಗೂ ತೋರಿಸಿದ್ದಾರೆ ಇಂದು ವಿಶ್ವದಾದ್ಯಂತ ಈ ಒಂದು ಚಿತ್ರ ತೆರೆಕಂಡಿದೆ ಇನ್ನು ಈ ಚಿತ್ರದ ಪ್ರೀಮಿಯರ್ ಶೋ ಅನ್ನು ನೆನ್ನೆ ಏರ್ಪಡಿಸಲಾಗಿತ್ತು. ನಮ್ಮ ಸ್ಯಾಂಡಲ್ ವುಡ್ ನಾಯಕ ನಟ ಮತ್ತು ನಟಿಯರು ಸಿನಿಮಾ ನೋಡಿ ಭಾವುಕರಾಗಿದ್ದಾರೆ.

ರಮ್ಯಾ, ರಕ್ಷಿತ್, ಅಜಯ್ ರಾವ್, ಪ್ರೇಮ್, ಪ್ರಜ್ವಲ್ ದೇವರಾಜ್, ದೇವರಾಜ್, ಅನುಶ್ರೀ, ಸುಧಾ ಮೂರ್ತಿ ಹೀಗೆ ಹಲವು ಗಣ್ಯರು ಆಗಮಿಸಿದ್ದರು. ಸಿನಿಮಾ ನೋಡುತ್ತಿದ್ದಂತೆ ಅವರ ಕಣ್ಣಲ್ಲಿ ಅರಿವಿಲ್ಲದೆ ಕಣ್ಣೀರು ಅರಿಯತೊಡಗಿದೆ ಅಂದರೆ ಅಷ್ಟರ ಮಟ್ಟಿಗೆ ನಮ್ಮ ಪುನೀತ್ ರಾಜ್‌ಕುಮಾರ್ ಅವರು ಸಿನಿಮಾವನ್ನು ತೋರಿಸಿದ್ದಾರೆ. ಈ ಒಂದು ಸಿನಿಮಾವು ಕಾಡಿನ ಸಂರಕ್ಷಣೆ ಹಾಗೆಯೇ ನದಿ, ನೀರು ಸಂರಕ್ಷಣೆ ಪ್ರಾಣಿಗಳ ಸಂರಕ್ಷಣೆ ಈ ರೀತಿ ಉತ್ತಮ ಸಂದೇಶವನ್ನು ಮುಂದಿನ ಪೀಳಿಗೆಗೆ ನೀಡುವಂತಹ ಸಿನಿಮಾವಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಸಿನಿಮಾವನ್ನು ನೋಡಲೇಬೇಕು. ಇನ್ನು ಸಿನಿಮಾವನ್ನು ಇಡೀ ದೊಡ್ಮಮನೆ ಕುಟುಂಬ ಕೂಡ ನೋಡಿ ಅಕ್ಷರ ಸಹ ಭಾವುಕರಾಗಿದ್ದಾರೆ, ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್, ಸಿನಿಮಾ ನೋಡಿ ಭಾವುಕರಾಗಿದ್ದಾರೆ.

ಅಪ್ಪು ಅವರ ಜೊತೆಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಕೆಲಸ ಮಾಡಿದಂತಹ ನಿರ್ದೇಶಕರಾದ ಸಂತೋಷ ಆನಂದ್ ರಾವ್, ಮಹೇಶ್ ಬಾಬು, ಜೇಮ್ಸ್ ಚೇತನ್ ಹೀಗೆ ಹಲವರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಇದು ಅಪ್ಪು ಅವರ ಕನಸಿನ ಚಿತ್ರವಾಗಿತ್ತು ಆದ್ದರಿಂದ ಎಲ್ಲರೂ ಸಹ ಈ ಒಂದು ಸಿನಿಮಾವನ್ನು ನೋಡಿ ಅವರಿಗೆ ಗೌರವವನ್ನು ಈ ಮೂಲಕ ಸೂಚಿಸಬೇಕು ಎಂದು ನಿರ್ದೇಶಕರು ತಿಳಿಸಿದ್ದಾರೆ. ಗಂಧದಗುಡಿಯ ಸಿನಿಮಾದಲ್ಲಿ ಪಯಣದಲ್ಲಿ ಅಪ್ಪು ಮಾನವೀಯ ಸಂದೇಶವನ್ನು ಕೊಟ್ಟು ವಿಶ್ವ ಮಾನವನಾಗಿ ಕೈಮುಗಿದ ಸನ್ನಿವೇಶ ನಿಜಕ್ಕೂ ಮೂಕ ವಿಸ್ಮಿತರನ್ನಾಗಿಸುತ್ತದೆ‌. ಈ ಸಿನಿಮಾದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now