ಸಾನಿಯಾ ಆಟಕ್ಕೆ ಬ್ರೇಕ್, ಮನೆಯಿಂದ ಹೊರ ಬಿದ್ದ ಸಾನಿಯಾ ಅಯ್ಯರ್…

ಈ ಬಾರಿಯ ಕನ್ನಡದ ಬಿಗ್ ಬಾಸ್ ಹಲವು ವಿಶೇಷತೆಗಳಿಂದ ಕೂಡಿದೆ. ಕೆಲವೊಂದು ಹೊಸ ಪ್ರಯೋಗಗಳೊಂದಿಗೆ ಶುರು ಆದ ಬಿಗ್ ಬಾಸ್ ಮನೆಗೆ ಓಟಿಪಿ ಅಲ್ಲಿ ಪ್ರಸಾರಗೊಂಡು ನಂತರ ಅದರಲ್ಲಿ ಗೆದ್ದ ನಾಲ್ಕು ಮಂದಿ ಜೊತೆಗೆ ಕಳೆದ ಸೀಸನ್ ಗಳಲ್ಲಿ ಪಾಲ್ಗೊಂಡಿದ್ದ ಮತ್ತಷ್ಟು ಸ್ಪರ್ಧಿಗಳನ್ನು ಸೇರಿಸಿ ಪ್ರವೀಣರ ಜೊತೆ ನವೀನರನ್ನು ಕಳುಹಿಸಲಾಗಿದೆ. ಒಟಿಟಿ ಅಲ್ಲಿ ಗೆದ್ದಿದ್ದ ಸ್ಪರ್ಧಿಗಳನ್ನು ಕೂಡ ಪ್ರವೀಣರು ಎಂದೇ ಪರಿಗಣನೆ ಮಾಡಿ ಆಟ ಆಡಿಸಲಾಗುತ್ತಿತ್ತು. ಇದೀಗ ಮನೆಯಿಂದ ಒಬ್ಬ ಪ್ರವೀಣೆ ಆಚೆ ಬಿದ್ದಿದ್ದಾರೆ, ಈ ವಾರದ ಎಲಿಮಿನೇಟ್ ಆಗಿರುವ ಸ್ಪರ್ಧಿ ಬೇರೆ ಯಾರು ಅಲ್ಲ ಎಂಟರ್ಟೈನ್ಮೆಂಟ್ ಹಾಗೂ ಟಾಸ್ಕ್ ವಿಚಾರದಷ್ಟೇ, ಕನ್ನಡದ ಸ್ಪಷ್ಟತೆ ವಿಷಯದಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ಸಾನಿಯಾ ಅವರು ಆರೇ ವಾರಕ್ಕೆ ಮನೆಯಿಂದ ಆಚೆ ಹೋಗಿದ್ದಾರೆ. ಇದೀಗ ಈ ವಿಷಯ ಬಿಗ್ ಬಾಸ್ ಪ್ರೇಕ್ಷಕರು ಸೇರಿದಂತೆ ಮನೆ ಮಂದಿಗೂ ಕೂಡ ಶಾಕ್ ಆಗಿದೆ.

WhatsApp Group Join Now
Telegram Group Join Now

ಓಟಿಟಿ ದಿನಗಳಿಂದಲೂ ಟಾಸ್ಕಳಲ್ಲಿ ಬಹಳ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದ ಇವರು ಟಾಸ್ಕ್ ವಿಷಯ ಬಂದರೆ ಹುಡುಗರ ಸಮಕ್ಕೆ ಪೈಪೋಟಿ ನೀಡುತ್ತಿದ್ದ ಗಟ್ಟಿಗಿತ್ತಿ. ಇನ್ನು ಇವರು ಇಷ್ಟು ಚೆನ್ನಾಗಿ ಕನ್ನಡದ ಭಾಷಾಜ್ಞಾನ ಹೊಂದಿದ್ದಾರೆ ಎನ್ನುವುದು ಬಿಗ್ ಬಾಸ್ ಮನೆಯಲ್ಲಿ ಅವರ ಮಾತುಗಳನ್ನು ಕೇಳುವವರೆಗೂ ಹೆಚ್ಚಿನ ಜನಕ್ಕೆ ತಿಳಿದಿರಲಿಲ್ಲ. ಬಹಳ ನಿರರ್ಗಳವಾಗಿ ಕನ್ನಡ ಮಾತನಾಡುವ ಹಿಡಿತ ಬಲ್ಲವರಾಗಿದ್ದರು ಸಾನ್ಯ ಅವರು, ಇವರ ಈ ವಿಷಯವು ಕೂಡ ಹೆಚ್ಚಿನ ಮಂದಿ ಇವರನ್ನು ಇಷ್ಟಪಡಲು ಒಂದು ಕಾರಣವಾಗಿತ್ತು. ಜೊತೆಗೆ ಮೊದಲಿನಿಂದಲೂ ರೂಪೇಶ್ ಶೆಟ್ಟಿ ಜೊತೆ ಇವರು ಹೊಂದಿದ್ದ ಸ್ನೇಹ ಬಾಂಧವ್ಯ ಇಷ್ಟು ದಿನ ಇವರು ಮನೆ ಒಳಗೆ ಇರಲು ಪ್ಲಸ್ ಪಾಯಿಂಟ್ ಆಗಿತ್ತು ಎಂದು ಹೆಚ್ಚಿನವರ ಅಭಿಪ್ರಾಯ. ಇದೇ ವಿಷಯದಿಂದ ಬಿಗ್ ಹೆಚ್ಚು ಬಾರಿ ಸುದ್ದಿ ಆಗಿದ್ದರು ಮತ್ತು ಕೆಲವೊಮ್ಮೆ ಅತಿರೇಕದ ವರ್ತನೆಯಿಂದ ಮನೆಯ ಇತರ ಸದಸ್ಯರ ಟೀಕೆಗೆ ಹಾಗೂ ಕೆಲವೊಮ್ಮೆ ಪಂಚಾಯಿತಿ ಕಟ್ಟೆಯಲ್ಲೂ ಕೂಡ ಸುದೀಪ್ ಅವರಿಂದ ಕಟು ಮಾತುಗಳನ್ನು ಕೇಳಿದ್ದರು.

ತಮ್ಮದೇ ಆದ ಒಂದು ಸ್ಟಾಟರ್ಜಿ ಇಟ್ಟುಕೊಂಡು ಲೆಕ್ಕಾಚಾರ ಹಾಕಿ ಆಡುತ್ತಿದ್ದ ಆಟಕ್ಕೀಗ ಬ್ರೇಕ್ ಬಿದ್ದು ಸಾನಿಯಾ ಔಟ್ ಆಗಿದ್ದಾರೆ. ಆದರೆ ಇಷ್ಟು ಬೇಗ ಇವರು ಮನೆಯಿಂದ ಆಚೆ ಹೋಗುತ್ತಾರೆ ಎಂದು ಯಾರು ಊಹಿಸಿರಲಿಲ್ಲ, ಇದುವರೆಗೂ ಇವರು ಫೈನಲ್ ತನಕ ಬರುವ ಸ್ಟ್ರಾಂಗ್ ಕಂಟೆಸ್ಟೆಂಟ್ ಇಂದ ಎಲ್ಲರೂ ಅಂದುಕೊಂಡಿದ್ದರು. ಆದರೆ ಇತ್ತೀಚೆಗೆ ಸಾನಿಯಾ ಅವರ ವರ್ತನೆಗಳು ಜನರಿಗೆ ಇಷ್ಟವಾಗದ ಕಾರಣ ಕಡಿಮೆ ವೋಟ್ ಪಡೆದ ಇವರು ಕಡಿಮೆ ಸಮಯದಲ್ಲಿ ಔಟ್ ಆಗಲು ಕಾರಣ ಆಗಿದೆ. ಬಾಲ ಕಲಾವಿದೆ ಆಗಿ ಅರಸಿ ಹಾಗೂ ಪುಟ್ಟಗೌರಿ ಮದುವೆ ಎನ್ನುವ ಉತ್ತಮ ಕಥೆಯ ಧಾರಾವಾಹಿಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದ ಸಾನಿಯಾ ಅವರು ಡ್ಯಾನ್ಸಿಂಗ್ ರಿಯಾಲಿಟಿ ಶೋಗಳಲ್ಲೂ ಕೂಡ ಹೆಸರು ಪಡೆದಿದ್ದರು.

ಇತ್ತೀಚೆಗೆ ಸಿನಿಮಾ ಕಡೆ ಮುಖ ಮಾಡಿ ಅದರಲ್ಲಿ ಕೆರಿಯರ್ ಇಂಪ್ರೂವ್ ಮಾಡಿಕೊಳ್ಳಲು ತಾಲೀಮು ನಡೆಸುತ್ತಿರುವ ಸಾನಿಯಾ ಅವರ ಮುಂದಿನ ಪ್ರಾಜೆಕ್ಟ್ ಗಳಿಗೆ ಶುಭವಾಗಲಿ ಎಂದು ಹರಸುತ್ತಾ ಆದಷ್ಟು ಬೇಗ ಅವರನ್ನು ಆಗುವ ತೆರೆಯಲ್ಲಿ ಹೀರೋಯಿನ್ ಆಗಿ ನೋಡುವ ಸಮಯ ಬರಲಿ ಎಂದು ಹಾರೈಸೋಣ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now