ನಮ್ಮ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮನೆ ಕುಟುಂಬ ಮಿನಿ ಚಿತ್ರರಂಗ ಇದ್ದಂತೆ ಇಲ್ಲಿರುವಂತಹ ಎಲ್ಲ ನಟರುಗಳು ಸಹ ತಮ್ಮದೇ ಆದಂತಹ ಸೇವೆಯನ್ನು ಸಿನಿ ರಂಗಕ್ಕೆ ಅರ್ಪಿಸುತ್ತಿದ್ದಾರೆ ಅದರಲ್ಲಿಯೂ ಡಾಕ್ಟರ್ ರಾಜ್ಕುಮಾರ್ ಅವರು ತಮ್ಮ ನಟನೆಯ ಮೂಲಕ ಅದ್ಭುತವಾದಂತಹ ಒಂದು ದಾಖಲೆಯನ್ನೇ ಸೃಷ್ಟಿ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ಅವರ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೆ ಪುನೀತ್ ರಾಜ್ಕುಮಾರ್ ಅವರು ಸಹ ತಮ್ಮ ನಟನೆಯಿಂದ ಕನ್ನಡಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಇನ್ನು ರಾಘವೇಂದ್ರ ರಾಜ್ಕುಮಾರ್ ಅವರ ಮಕ್ಕಳಾದಂತಹ ವಿನಯ್ ರಾಜ್ಕುಮಾರ್ ಹಾಗೂ ಯುವರಾಜ್ ಕುಮಾರ್ ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ವಿನಯ್ ಅವರಿಗೂ ಸಿನಿಮಾ ರಂಗದ ನಂಟು ಚಿಕ್ಕ ವಯಸ್ಸಿನಿಂದಲೂ ಇತ್ತು, ಚಿಕ್ಕ ವಯಸ್ಸಿನಿಂದಲೇ ಚಿತ್ರರಂಗದಲ್ಲಿ ಕಾಣಿಸಿಕೊಂಡಿರುವಂತಹ ವಿನಯ್ ರಾಜ್ಕುಮಾರ್ ಒಡಹುಟ್ಟಿದವರು, ಆಕಸ್ಮಿಕ, ಅನುರಾಗದ ಅಲೆಗಳು ಈ ಚಿತ್ರಗಳಲ್ಲಿ ಬಾಲ ನಟನಾಗಿ ಕಾಣಿಸಿಕೊಂಡಿದ್ದಾರೆ.
ಇನ್ನು ಬಾಲ ನಟನಾಗಿ ನಟಿಸಿದಂತಹ ವಿನಯ್ ಅವರು ಸಿದ್ದಾರ್ಥ ಸಿನಿಮಾದ ಮೂಲಕ ನಾಯಕನಟನಾಗಿ ಕನ್ನಡ ಚಿತ್ರರಂಗಕ್ಕೆ ಹೊರಹೊಮ್ಮಿದರು. ಇನ್ನೂ ರಾಘವೇಂದ್ರ ರಾಜ್ಕುಮಾರ್ ಅವರ ಹಿರಿಯ ಮಗನಾದಂತಹ ವಿನಯ್ ರಾಜ್ಕುಮಾರ್ ಅವರು ಯಾಕಿನ್ನು ಮದುವೆಯಾಗಿಲ್ಲ ಎನ್ನುವಂತಹ ಸಾಕಷ್ಟು ಪ್ರಶ್ನೆಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ವಿನಯ್ ರಾಜ್ ತಮ್ಮ ಯುವರಾಜ್ ಕುಮಾರ್ ಅವರು ಮದುವೆಯಾಗಿ ಸಂಸಾರವನ್ನು ನಡೆಸುತ್ತಿದ್ದಾರೆ ಆದರೆ ಅಣ್ಣನಾದಂತಹ ವಿನಯ್ ರಾಜ್ಕುಮಾರವರು ಯಾಕಿನ್ನು ಮದುವೆಯಾಗಿಲ್ಲ ಎಂದು ನೆಟ್ಟಿಗರು ಪ್ರಶ್ನೆಯನ್ನು ಮಾಡುತ್ತಿದ್ದಾರೆ. ವಿನಯ್ ರಾಜ್ಕುಮಾರ್ ಅವರಿಗೆ ಈಗಾಗಲೇ 30 ವರ್ಷ ದಾಟಿದೆ ಆದರೂ ಸಹ ಇವರು ದಾಂಪತ್ಯ ಜೀವನಕ್ಕೆ ಕಾಲಿಡದೆ ಇರಲು ಕಾರಣಗಳೇನು ಎನ್ನುವಂತಹ ಸಾಕಷ್ಟು ವಿಮರ್ಶೆಗಳು ಸಹ ನಡೆಯುತ್ತಿದೆ. ಇದಕ್ಕೆ ಬಲ ನೀಡುವಂತೆ ಯುವರಾಜ್ ಅವರು ತಮ್ಮ 25ನೇ ವಯಸ್ಸಿಗೆ ಶ್ರೀದೇವಿ ಭೈರಪ್ಪ ಎನ್ನುವವರನ್ನು ವಿವಾಹವಾಗಿದ್ದಾರೆ.
ವಿನಯ್ ರಾಜಕುಮಾರ್ ಅವರಿಗೆ ತಮ್ಮನ ಮದುವೆಯಾಯಿತು ನೀವಿನ್ನು ಯಾಕೆ ಮದುವೆ ಆಗಿಲ್ಲ ಎಂದು ಸಾಕಷ್ಟು ಸಂದರ್ಷನಗಳಲ್ಲಿ ಇವರಿಗೆ ಪ್ರಶ್ನೆಗಳನ್ನು ಸಹ ಕೇಳಲಾಗುತ್ತದೆ. ಕೆಲವು ದಿನಗಳ ಹಿಂದೆಯಷ್ಟೇ ಯುವರಾಜ್ ಅವರ ಹೆಸರು ನಟಿ ವೃಕ್ಷ ಹಾಗೆಯೇ ಪಾರ್ವತಿ ನಾಯರ್ ಅವರ ಹೆಸರಿನೊಂದಿಗೆ ಕೆಲವೊಂದಷ್ಟು ಚರ್ಚೆಗಳು ಸಹ ನಡೆಯಿತು ಅದೇನೆಂದರೆ ಯುವರಾಜ್ ಸಿನಿಮಾದ ನಟಿಯರಾದ ವೃಕ್ಷ ಹಾಗೂ ಪಾರ್ವತಿ ನಾಯರ್ ಅವರನ್ನು ಪ್ರೀತಿಸುತ್ತಿದ್ದಾರೆ ಎನ್ನುವಂತಹ ಸಾಕಷ್ಟು ವಿಚಾರಗಳು ಹಬ್ಬಿಕೊಂಡಿದ್ದವು ಆದರೆ ಈ ವಿಷಯದ ಸ್ಪಷ್ಟನೆ ನೀಡಿರುವ ಯುವರಾಜ್ ಅವರು ನಾನು ಸಿನಿಮಾ ಕೆಲಸಗಳಿಗೋಸ್ಕರ ಈ ಇಬ್ಬರು ನಟಿಯರ ಜೊತೆಯಲ್ಲಿ ಹೋಡಾಡುತ್ತಿದೆ ಇದನ್ನು ಬಿಟ್ಟರೆ ಮತ್ಯಾವ ಸಂಬಂಧ ಇಲ್ಲ ನಾವು ಒಳ್ಳೆಯ ಸ್ನೇಹಿತರು ಅಷ್ಟೇ ಎಂದು ತಿಳಿಸಿದ್ದಾರೆ.
ನಾನು ಯಾರನ್ನು ಪ್ರೀತಿಸಿಲ್ಲ ನನಗೆ ಯಾರು ಸಹ ಪ್ರೀತಿಯಲ್ಲಿ ಮೋಸ ಮಾಡಿಲ್ಲ ಕೇವಲ ನನ್ನ ಜೊತೆಯಲ್ಲಿ ಓಡಾಡುವವರು ಸ್ನೇಹಿತರು ಅಷ್ಟೇ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಘವೇಂದ್ರ ರಾಜ್ಕುಮಾರ್ ಅವರು ನನ್ನ ದೊಡ್ಡ ಮಗನಿಗೆ ನಾನು ಈಗಲೇ ಮದುವೆ ಮಾಡುವುದಿಲ್ಲ ಅವನಿಗೆ ಮನೆಯ ಜವಾಬ್ದಾರಿಗಳು ಹೆಚ್ಚಾಗಿ ಇರುವುದರಿಂದ ಸದ್ಯಕ್ಕೆ ಅವನ ಮದುವೆಯನ್ನು ಮಾಡುವ ಉದ್ದೇಶ ಇಲ್ಲ ಅವನು ಚಿತ್ರರಂಗದಲ್ಲಿ ಬೆಳೆದು ನನ್ನ ತಂದೆ ರಾಜ್ ಕುಮಾರ್ ಅವರ ಆಸೆಯನ್ನು ಹೀಡೇರಿಸದ ನಂತರ ಯಶಸ್ಸನ್ನು ಸಾಧಿಸಿದ ನಂತರ ಆತನ ಮದುವೆಯನ್ನು ಮಾಡುತ್ತೇನೆ ಎಂದು ರಾಘವೇಂದ್ರ ರಾಜ್ಕುಮಾರ್ ಅವರು ತಿಳಿಸಿದರು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತೆ ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ