ತೆರೆ ಮೇಲೆ ಕಾಣುವ ಹೀರೋಗಳು ಎಂದರೆ ನಾವು ನಿಜ ಜೀವನದಲ್ಲಿ ಕೂಡ ಅವರು ಹಾಗೆ ಇರುತ್ತಾರೆ ಎಂದು ಕೊಡುತ್ತೇವೆ. ಎಷ್ಟೋ ಜನರು ನಿಜ ಜೀವನದಲ್ಲಿ ವಿರುದ್ಧವಾಗಿರುತ್ತಾರೆ. ಏಕೆಂದರೆ ಅವರ ಕಲಾವಿದರು ಅವರ ಮೇಲೆ ಬರಿ ಪಾತ್ರವನ್ನು ಅನುಸರಿಸಿ ಆ ರೀತಿ ಅಭಿನಯ ಮಾಡುತ್ತಿದ್ದಾರೆ ಆದರೆ ಹಿಂದೆ ಅವರಿಗೊಂದು ವೈಯಕ್ತಿಕ ಬದುಕಿದೆ ಎಷ್ಟೋ ಜನ ಕಲಾವಿದರು ತೆರೆ ಮೇಲೆ ಖಳನಾಯಕನಾಗಿ ಅಭಿನಯ ಮಾಡಿದರೂ ನಿಜ ಜೀವನದಲ್ಲಿ ತುಂಬಾ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದರು. ಎಷ್ಟೋ ಜನರು ತೆರೆ ಮೇಲೆ ಹೀರೋಗಳಾಗಿದ್ದರು ಕೂಡ ಅವರು ಅಂತಹ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳದೆ ಅವರ ಬಣ್ಣ ಬಯಲಾಗಿದ್ದರೆ ಎಲ್ಲರಿಗೂ ಇರುತ್ತದೆ.
ಯಾವುದೇ ಸಿನಿಮಾ ಹಾಗೂ ವೈಯಕ್ತಿಕ ಬದುಕು ಒಂದೇ ರೀತಿ ಇದೆ ಎಂದು ನೂರಕ್ಕೆ ನೂರರಷ್ಟು ಹೇಳುವುದು ಕಷ್ಟ ಆದರೆ ಕೆಲವೇ ಕೆಲವು ಬೆರಳಣಿಕೆಯಷ್ಟು ಹೀರೋಗಳು ಮಾತ್ರ ಈ ರೀತಿ ಜನರಿಗೆ ಸಂದೇಶ ಕೊಡುತ್ತಾರೆ ನಿಜ ಜೀವನದಲ್ಲಿಯೂ ಕೂಡ ಹಾಗೆ ನಡೆದುಕೊಂಡು ಹೋಗುತ್ತಾರೆ ಎಲ್ಲರಿಗೂ ಆದರ್ಶವಾಗುತ್ತಾರೆ. ತೆರೆ ಮೇಲೆ ಕಾಣುವ ಹೀರೋಗಳ ವಿಚಾರವಾಗಿ ಹೇಳುವುದಾದರೆ ಆಗಿನ ಕಾಲದಲ್ಲಿ ಹೀರೋಗಳು ಎಂದರೆ ಅವರ ಚಿತ್ರಣವೇ ಬೇರೆಯಾಗಿತ್ತು. ಹಿಂದೆ ಡಾಕ್ಟರ್ ರಾಜಕುಮಾರ್ ಅವರ ಕಾಲದಲ್ಲಿ ಮೂಡಿ ಬರುತ್ತಿದ್ದ ಸಿನಿಮಾಗಳಲ್ಲಿ ಸಿನಿಮಾದ ನಾಯಕ ಎಂದರೆ ಎಲ್ಲರೂ ಕೂಡ ಅವರನ್ನು ತುಂಬಾ ಭಕ್ತಿಭಾವದಿಂದ ನೋಡುತ್ತಿದ್ದರು. ನಿಜ ಜೀವನದಲ್ಲಿ ಕೂಡ ಅದೇ ರೀತಿ ಬದುಕಬೇಕು ಎಂದು ಪ್ರಯತ್ನ ಪಡುತ್ತಿದ್ದರು.
ಡಾಕ್ಟರ್ ರಾಜಕುಮಾರ್ ಅಥವಾ ವಿಷ್ಣುವರ್ಧನ್, ಶಂಕರ್ ನಾಗ್ ಇವರ ಸಿನಿಮಾಗಳು ಈ ರೀತಿ ಜನಕ್ಕೆ ಅನುಕೂಲವಾಗುವ ರೀತಿ ಸಂದೇಶಗಳು ಹಾಗೂ ಆ ರೀತಿಯ ಒಳ್ಳೆಯ ಭಾವನೆಗಳಿರುವ ದೃಶ್ಯಗಳಿಂದ ಕೂಡಿರುತ್ತಿದ್ದವು. ಈಗಿನ ಕಾಲದ ಸಿನಿಮಾಗಳು ಮೊದಲ ದೃಶ್ಯವೇ ಶುರುವಾಗುವುದು ಹೀರೋನ ಹೀರೋಯಿಸಂ ತೋರಿಸುವುದರಿಂದ ಈಗಿನ ಕಾಲದ ಹೀರೋಯಿಸಂ ಎಂದರೆ ನಾಲ್ಕು ಜನರಿಗೆ ಹೊಡೆಯುವುದು, ಸಿಗರೇಟ್ ಸೇದುತ್ತಾ ಹೊಗೆ ಬಿಡುತ್ತಾ ಕೈಯಲ್ಲಿ ಮಧ್ಯದ ಬಾಟಲಿಗಳನ್ನು ಹಿಡಿದುಕೊಂಡು ತಂದೆ ತಾಯಿ ಗುರು ಹಿರಿಯರಿಗೆ ಎದುರು ಮಾತನಾಡುತ್ತಾ ಸಿನಿಮಾ ಆರಂಭದಲ್ಲೇ ಈ ರೀತಿಯ ದುರ್ವರ್ತನೆಗಳನ್ನು ಸಿನಿಮಾವರೆಗೂ ಮುಂದುವರಿಸಿಕೊಂಡು ಹೋಗುತ್ತಾರೆ.
ಇಂತಹ ಸಿನಿಮಾಗಳನ್ನು ನೋಡುವ ಯುವ ಜನತೆಯ ಮನಸ್ಸಿನಲ್ಲಿ ಇದೆ ಹೀರೋಯಿಸಂ ಎಂಬ ಒಂದು ಬಲವಾದ ಮೌಢ್ಯತೆ ಆವರಿಸಿಕೊಳ್ಳುತ್ತದೆ. ಅವರು ಕೂಡ ನಾನು ಹೀರೋ ಆಗಬೇಕು ನನ್ನನ್ನು ಜನ ನೋಡಿ ಮೆಚ್ಚಿಕೊಳ್ಳಬೇಕು ಎಂದು ಇಂತಹ ವರ್ತನೆಗಳನ್ನು ಅನುಸರಿಸಲು ಶುರುಮಾಡುತ್ತಾರೆ. ಈ ರೀತಿ ಇರುವ ಹುಡುಗರು ಸಾರ್ವಜನಿಕವಾಗಿ ಈ ರೀತಿ ಕಾಣಿಸಿಕೊಳ್ಳುತ್ತಾರೆ ಹಾಗೂ ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಜನ ಎಡುವುತ್ತಿರುವುದು ಇಲ್ಲಿಯೇ ತೆರೆ ಮೇಲೆ ಇಂತಹ ಸನ್ನಿವೇಶಗಳು ಬರುವಾಗಲೇ ಧೂಮಪಾನ ಹಾಗೂ ಮಧ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬ ಶೀರ್ಷಿಕೆಯು ಬರುತ್ತದೆ ಹಾಗೂ ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸುವ ಸಂದರ್ಭದಲ್ಲಿ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಎಲ್ಲಾ ಜಾಗರೂಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ದಯವಿಟ್ಟು ಯಾವುದೇ ಮುಂಜಾಗ್ರತ ಕ್ರಮವಿಲ್ಲದೆ ಯಾರು ಈ ರೀತಿ ನಡೆದುಕೊಳ್ಳಬಾರದು ಎನ್ನುವುದನ್ನು ಕೂಡ ಅಲ್ಲಿ ಬರೆದಿದ್ದಾರೆ ಆದರೆ ಇವುಗಳನ್ನು ಯಾರೂ ಗಮನಿಸುವುದಿಲ್ಲ ಬರಿ ಹೀರೋ ಹಾಗೂ ಆತನ ನಟನೆಯ ಮೇಲೆ ಗಮನ ಕೊಡುವ ಇವರು ಅದನ್ನು ಅನುಸರಿಸಿ ಹಲವಾರು ಅವಾಂತರಗಳನ್ನು ಸೃಷ್ಟಿಸುತ್ತಾರೆ ಆದರೆ ಸಿನಿಮಾ ಮತ್ತು ಧಾರಾವಾಹಿಗಳು ಇತರ ಸಂದರ್ಭಗಳಲ್ಲಿ ಆ ಪಾತ್ರಗಳಿಗೆ ಮಾತ್ರ ಹೀರೋಗಳು ಹಾಗೆ ನಡೆದುಕೊಳ್ಳುತ್ತಾರೆ ಆದರೆ ವೈಯುಕ್ತಿಕ ಬದುಕಿನಲ್ಲಿ ಅವರು ಸುಂದರವಾಗಿ ಅವರ ಜೀವನವನ್ನು ಕಟ್ಟಿಕೊಂಡಿರುತ್ತಾರೆ ಇನ್ನು ನಮ್ಮ ಜನಕ್ಕೆ ಸರಿಯಾಗಿ ಮನವರಿಕೆ ಆಗಿಯೇ ಇಲ್ಲ.
ಉದಾಹರಣೆಗೆ ಹೇಳಬೇಕು ಎಂದರೆ ಸಿನಿಮಾಗಳಲ್ಲಿ ಧೂಮಪಾನ ಮದ್ಯಪಾನ ಮಾಡುವ ಎಷ್ಟೋ ನಟರು ನಿಜ ಜೀವನದಲ್ಲಿ ಕೈಯಲ್ಲಿ ಮುಟ್ಟುವುದಿಲ್ಲ ಅಂತಹ ಸೂಚನೆ ಡಾಕ್ಟರ್ ರಾಜಕುಮಾರ್ ಅವರಿಂದ ಶುರುವಾಗುತ್ತದೆ. ಅಣ್ಣಾವ್ರು ಕರ್ನಾಟಕದ ಎಷ್ಟೋ ಜನರ ಪಾಲಿನ ಆದರ್ಶ ಹಾಗೂ ಅಣ್ಣಾವ್ರ ಬಂಗಾರದ ಮನುಷ್ಯ ಎನ್ನುವ ಸಿನಿಮಾವನ್ನು ನೋಡಿ ಎಷ್ಟೋ ಜನ ಪಟ್ಟಣ ಸೇರಿದ್ದ ಯುವಕರು ಮತ್ತೆ ಹಳ್ಳಿಗಳಿಗೆ ಹೋಗಿ ವ್ಯವಸಾಯ ಮಾಡಲು ಶುರು ಮಾಡಿದರು. ಏಕೆಂದರೆ ಅಣ್ಣ ಅವರ ಒಂದೊಂದು ಮಾತು ಮತ್ತು ಅವರ ಒಂದೊಂದು ಸಿನಿಮಾವು ಜನರ ಮನಸ್ಸಿನಲ್ಲಿ ಇಂತಹದೊಂದು ಒಳ್ಳೆಯ ಪರಿವರ್ತನೆಗೆ ಕಾರಣವಾಗಿತ್ತು.
ಸನ್ನಿವೇಶಗಳಿಗೆ ಅವಶ್ಯಕತೆ ಇದ್ದಾಗ ಧೂಮಪಾನ ಮತ್ತು ಮಧ್ಯಪಾನ ಮಾಡುವಂತೆ ಕಾಣಿಸಿಕೊಂಡರು ಕೂಡ ನಿಜ ಜೀವನದಲ್ಲಿ ಇವುಗಳಿಂದ ದೂರವಿದ್ದರು. ಇವರ ಹಾದಿಯಲ್ಲೇ ಕಿರಿಯ ಪುತ್ರ ಪುನೀತ್ ರಾಜ್ ಕುಮಾರ್ ಅವರು ಸಹ ನಡೆಕೊಂಡರು. ಅಪ್ಪು ಅವರು ಕೂಡ ಸಾಧ್ಯವಾದಷ್ಟು ಇಂತಹ ಪಾತ್ರಗಳನ್ನು ಕಡಿಮೆ ಮಾಡಿಕೊಂಡೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಸಿನಿಮಾಗಳನ್ನು ಕುಟುಂಬ ಸಮೇತವಾಗಿ ಕುಳಿತು ನೆಮ್ಮದಿಯಾಗಿ ಯಾವುದೇ ಮುಜುಗರವಿಲ್ಲದೇ ನೋಡಬಹುದಾಗಿತ್ತು. ಅಂತಹ ಮೌಲ್ಯಯುತ ಕಥೆಗಳು ಪುನೀತ್ ರಾಜ್ ಕುಮಾರ್ ಅವರ ಸಿನಿಮಾದಲ್ಲಿ ಇರುತ್ತಿತ್ತು. ಇವರು ಕೂಡ ನಿಜ ಜೀವನದಲ್ಲಿ ಯಾವಾಗಲೂ ಧೂಮಪಾನ ಮಾಡಿದವರಲ್ಲ ಹಾಗೂ ಮಧ್ಯವನ್ನು ಮುಟ್ಟಿದವರಲ್ಲ.
ಹಾಗೆ ಕಿಚ್ಚ ಸುದೀಪ್ ಅವರು ಕೂಡ ಮುಂದೆ ಸಿಗರೇಟ್ ಅನ್ನು ಸೇದುತ್ತಿದ್ದರು ಆದರೆ 10 ವರ್ಷಗಳ ಹಿಂದೆ ಅವರಿಗೆ ಅನಾರೋಗ್ಯ ಸಮಸ್ಯೆಯಾಗಿ ಅಂದಿನಿಂದ ಆ ಚಟವನ್ನು ಅವರು ಇಷ್ಟಪಟ್ಟು ಬಿಟ್ಟವರು ಸಹ ಅದನ್ನು ಮುಟ್ಟುವುದಿಲ್ಲ ಮತ್ತು ಇದುವರೆಗೂ ಒಂದು ಸಲವೂ ಮದ್ಯಪಾನ ಕೂಡ ಮಾಡಿಲ್ಲವಂತೆ. ಇನ್ನು ಎಲ್ಲರಿಗಿಂತ ಹೆಚ್ಚಾಗಿ ರವಿಚಂದ್ರನ್ ಸರ್ ಅವರ ಸಿನಿಮಾ ನೋಡಿದವರು ಖಂಡಿತ ಒಬ್ಬ ಕುಡುಕ ಎಂದುಕೊಳ್ಳುತ್ತಾರೆ. ಆದರೆ ನಿಜ ಜೀವನದಲ್ಲಿ ರವಿಚಂದ್ರನ್ ಅವರು ಸಹ ಧೂಮಪಾನ ಮಧ್ಯಪಾನ ಇಂತಹ ದುಶ್ಚಟಗಳಿಂದ ದೂರವಿದ್ದು ಒಳ್ಳೆಯ ಜೀವನ ನಡೆಸುತ್ತಿದ್ದಾರೆ ಹಾಗೂ ಇದೇ ಹಾದಿಯಲ್ಲಿ ವಿಜಯ ರಾಘವೇಂದ್ರ ಅವರು ಕೂಡ ಇದ್ದಾರೆ. ಎಲ್ಲರನ್ನೂ ಅಮೂಲ್ ಬೇಬಿ ಎನ್ನುತ್ತಾರೆ ನಿಜವಾಗಿಯೂ ಅದೇ ರೀತಿಯ ಮಗುವಿನಂತಹ ಗುಣಗಳು ವಿಜಯ ರಾಘವೇಂದ್ರ ಅವರಿಗಿದೆ.