ಕನ್ನಡ ಕಿರುತೆರೆ ಲೋಕ ಕಂಡಂತಹ ಖ್ಯಾತ ಹಾಗೂ ನಂಬರ್ ಒನ್ ಪಟ್ಟ ಅಲಂಕರಿಸಿ ಹೆಸರುವಾಸಿ ಆಗಿರುವಂತಹ ನಿರೂಪಕಿ ಎಂದರೆ ಅದು ಅನುಶ್ರೀ ಹೌದು ನಟಿ ನಿರೂಪಕಿ ಅನುಶ್ರೀ ಅವರು ಕರ್ನಾಟಕದಲ್ಲಿ ಎಷ್ಟೆಲ್ಲ ಜನಪ್ರಿಯತೆಯನ್ನು ಪಡೆದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿರುವ ನಿರೂಪಕಿ ಅನುಶ್ರೀ ಅವರು ಕನ್ನಡದ ಬಹು ಬೇಡಿಕೆಯ ಹಾಗೂ ದುಬಾರಿ ನೂರುಪಕಿ ಎಂದು ಹೇಳಿದರೆ ತಪ್ಪಾಗಲಾರದು. ಸರಿಗಮಪ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹೀಗೆ ಹಲವಾರು ರಿಯಾಲಿಟಿ ಕಾರ್ಯಕ್ರಮಗಳ ಹಲವು ಸೀಸನ್ ಗಳನ್ನು ಅನುಶ್ರೀ ಅವರು ನಿರೂಪಣೆ ಮಾಡಿಕೊಂಡು ಬರುತ್ತಿದ್ದು. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಸರಿಗಮಪ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಅನುಶ್ರೀ ಅವರಿಗೆ ಯಶಸ್ಸು ಒಂದೇ ಸಲ ಸಿಕ್ಕಿಲ್ಲ ಮಂಗಳೂರಿನಿಂದ ಬೆಂಗಳೂರಿಗೆ ಬಂದು ತುಂಬಾ ಕಷ್ಟದ ದಿನಗಳನ್ನು ಕಳೆದಿದ್ದಾರೆ ನಿರೂಪಣೆಯನ್ನು ಮಾಡುತ್ತಾ ದಶಕಗಳನ್ನು ಕಳೆದಿರುವ ಇವರು ಕೆಲವು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.
ಇವರ ಜನಪ್ರಿಯತೆ ಯಾವ ಸಿನಿಮಾ ಕಲಾವಿದರಿಗೂ ಕೂಡ ಕಡಿಮೆ ಇಲ್ಲ ಅಲ್ಲದೆ ಕನ್ನಡದಲ್ಲಿ ನಿರೂಪಕಿ ಎಂದ ತಕ್ಷಣ ಪ್ರತಿಯೊಬ್ಬರಿಗೂ ನೆನಪಿಗೆ ಬರುವುದು ಅನುಶ್ರೀ ಅವರು ಪಟಪಟ ಎಂದು ಮಾತನಾಡುತ್ತ ಎಲ್ಲರ ಮುಖದಲ್ಲೂ ನಗು ಮೂಡಿಸುತ್ತಾರೆ. ಕನ್ನಡ ಕಿರುತೆರೆಯ ನಿರೂಪಣೆ ಹಾಗೂ ಸಿನಿಮಾ ಪ್ರೀ ರಿಲಿಸ್ ಕಾರ್ಯಕ್ರಮಗಳು ಇನ್ನಿತ ಯಾವುದೇ ಕಾರ್ಯಕ್ರಮಗಳು ಇದ್ದರೂ ಅನುಶ್ರೀ ಅವರನ್ನು ನಿರೂಪಕಿಯಾಗಿ ತೆಗೆದುಕೊಳ್ಳುತ್ತಾರೆ ಕಾರಣ ಅವರಲ್ಲಿ ಇರುವಂತಹ ನಿರೂಪಣಾ ಕಲೆ ಎಂದು ಹೇಳಬಹುದು. ಅನುಶ್ರೀ ತಮ್ಮದೇ ಆದಂತಹ ಒಂದು ಯುಟ್ಯೂಬ್ ಚಾನೆಲ್ ಅನ್ನು ಸಹ ತೆರೆದಿದ್ದು ಸ್ಟಾರ್ ನಟ ನಟಿಯರ ಸಂದರ್ಶನವನ್ನು ಸಹ ಮಾಡುತ್ತಾರೆ ಇಷ್ಟೊಂದು ಜನಪ್ರಿಯತೆಯನ್ನು ಹೊಂದಿರುವಂತಹ ಅನುಶ್ರೀ ಅವರಿಗೆ ಪುನೀತ್ ರಾಜ್ಕುಮಾರ್ ಎಂದರೆ ಪಂಚಪ್ರಾಣ.
ಅಪ್ಪು ಅವರ ದೊಡ್ಡ ಅಭಿಮಾನಿ ಆದಂತಹ ಅನುಶ್ರೀ ಈ ವಿಷಯವನ್ನು ಸಾಕಷ್ಟು ಕಾರ್ಯಕ್ರಮಗಳಲ್ಲಿ ಹೊರ ಹಾಕಿದ್ದಾರೆ. ಅಪ್ಪು ಅವರು ಹಗಲಿದ ನಂತರ ಸಾಕಷ್ಟು ವೇದಿಕೆಗಳ ಮೇಲೆ ಅನುಶ್ರೀ ಕಣ್ಣೀರನ್ನು ಹಾಕಿದ್ದಾರೆ. ಅನುಶ್ರೀ ನಿರೂಪಣೆಯ ಕಾರ್ಯಕ್ರಮಗಳಿಗೆ ಒಳ್ಳೆಯ ಟಿಆರ್ಪಿ ಬರುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಪುನೀತ್ ಅವರ ನೆನಪಿನಲ್ಲಿ ಕೆಲವೊಂದಷ್ಟು ಕಾರ್ಯಕ್ರಮಗಳನ್ನು ನಡೆಸಲಾಯಿತು ಉದಾಹರಣೆಗೆ ಪುನೀತಪರ್ವ, ಪುನೀತ ನಮನ ಹಾಗೆಯೇ ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದಂತಹ ಸಂದರ್ಭ ಈ ಎಲ್ಲಾ ಕಾರ್ಯಕ್ರಮಗಳಿಗೂ ಸಹ ಅನುಶ್ರೀ ಅವರು ಭಾಗಿಯಾಗಿದ್ದರು ಹಾಗೆ ಅಪ್ಪು ಅವರ ಮೇಲಿನ ಪ್ರೀತಿಯನ್ನು ವೇದಿಕೆಯ ಮೇಲೆ ತಿಳಿಸಿದರು.
ಅಪ್ಪು ಅವರ ಕೊನೆಯ ಸಿನಿಮವಾದಂತಹ ಗಂಧದಗುಡಿ ಸಿನಿಮಾ ರಿಲೀಸ್ ಆಗಿದ್ದು ಸಾಕಷ್ಟು ಅಭಿಮಾನಿಗಳು ಕನ್ನಡ ಚಿತ್ರರಂಗದ ನಟ ನಟಿಯರು ಹಾಗೆ ಅನುಶ್ರೀ ಅವರು ಸಹ ಚಿತ್ರಮಂದಿರಕ್ಕೆ ಹೋಗಿ ಸಿನಿಮಾವನ್ನು ನೋಡಿ ಕಣ್ಣೀರು ಹಾಕಿದ್ದಾರೆ ಹೌದು. ಅಪ್ಪು ಅವರ ಸಿನಿಮಾವನ್ನು ನೋಡಿ ಬಂದ ನಂತರ ಮಾಧ್ಯಮದವರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವಂತಹ ಸಂದರ್ಭದಲ್ಲಿ ಕಣ್ಣೀರು ಹಾಕಿದ್ದಾರೆ ಇದನ್ನು ನೋಡಿದಂತಹ ಪ್ರೇಕ್ಷಕರು ಅನುಶ್ರೀ ಅವರು ಅವರ ಓವರ್ ಆಕ್ಟಿಂಗ್ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅಪ್ಪು ಅವರ ಹೆಸರಿನಲ್ಲಿ ಇವರು ಖ್ಯಾತಿಯನ್ನು ಪಡೆದುಕೊಳ್ಳುವ ಸಲುವಾಗಿ ಈ ರೀತಿಯಾಗಿ ಮಾಡುತ್ತಿದ್ದಾರೆ ಎಂದು ಸಾಕಷ್ಟು ಜನರು ಕಮೆಂಟ್ಸ್ ಗಳನ್ನು ಮಾಡುತ್ತಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.