ಕನ್ನಡ ಚಿತ್ರರಂಗದ ಕಂಡಂತಹ ಹಿರಿಯ ನಟರಾದಂತಹ ಲೋಹಿತಾಶ್ವ ಅವರು ವಿಧಿವಶರಾಗಿದ್ದಾರೆ. ಹೌದು ಕನ್ನಡದ ಹಿರಿಯ ನಟ ಲೋಹಿತಾಶ್ವ ಅವರು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೆಳಿದಿದ್ದಾರೆ ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಲೋಹಿತಾಶ್ವ ನಿವೃತ್ತ ಉಪನ್ಯಾಸಕರು ಆಗಿದ್ದು ರಂಗ ಕಲಾವಿದರು ಆಗಿದ್ದರು. ಇವರ ಪುತ್ರ ಶರತ್ ಲೋಹಿತಾಶ್ವ ಅವರು ಕೂಡ ಚಿತ್ರರಂಗದಲ್ಲಿ ಮಿಂಚಿದ್ದಾರೆ, ಖಳನಾಯಕನ ಪಾತ್ರದಲ್ಲಿ ಮಿಂಚಿದ ಶರತ್ ಅವರು ಕೂಡ ಸ್ಯಾಂಡಲ್ ವುಡ್ ನಲ್ಲಿ ಅನೇಕ ಹಿಟ್ ಸಿನಿಮಾಗಳಲ್ಲಿ ಖಳನಾಯಕನ ಪಾತ್ರವನ್ನು ಮಾಡಿ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಇದ್ದು ತಂದೆಯ ಆರೋಗ್ಯದ ಬಗ್ಗೆ ಮಾಧ್ಯಮಕ್ಕೆ ಮಾಹಿತಿಯನ್ನು ಕೊಡುತ್ತಿದ್ದರು ತಮ್ಮ ತಂದೆಯವರ ಆರೋಗ್ಯದ ಸ್ಥಿತಿ ತುಂಬಾ ಗಂಭೀರವಾಗಿದೆ ಅವರಿಗೆ ಯುರಿನರಿ ಇನ್ಫೆಕ್ಷನ್ ಆಗಿತ್ತು.
ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೆವು ಚಿಕಿತ್ಸೆ ಕೊಡುವಾಗ ಅವರಿಗೆ ಹೃದಯಘಾತವಾಗಿ ಹೃದಯ ಬಡಿತ ಸಂಪೂರ್ಣ ನಿಂತಿತ್ತು ಎನ್ನುವಂತಹ ಮಾಹಿತಿಯನ್ನು ಕೊಟ್ಟರು. ಚಿಕಿತ್ಸೆಯ ಮೂಲಕ ಆಸ್ಪತ್ರೆ ವೈದ್ಯರು ಮತ್ತೆ ಹೃದಯ ಕೆಲಸ ಮಾಡುವಂತೆ ಮಾಡಿದರು ಆದರೆ ತುಂಬಾ ಸಮಯ ಹೃದಯ ಬಡಿತ ನಿಂತ ಕಾರಣ ಬಹು ಅಂಗಾಂಗ ವೈಫಲ್ಯವಾಗಿದೆ. ಈ ಕಾರಣದಿಂದಾಗಿ ಲೊಹಿತಶ್ವ ಅವರು ವಿಧಿವಶರಾಗಿದ್ದಾರೆ ಚಂದನ ವನದಲ್ಲಿ ಲೋಹಿತಾಶ್ವ ಅವರು ಅನೇಕ ವರ್ಷಗಳ ಅನುಭವ ಇಟ್ಟುಕೊಂಡಿದ್ದರು ಡಾಕ್ಟರ್ ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಶಂಕರ್ ನಾಗ್ ಮುಂತಾದ ಸ್ಟಾರ್ ನಟರುಗಳ ಜೊತೆ ನಟಿಸಿಕೊಂಡಿದ್ದರು. ಇವರ ನಿಧನದ ಸುದ್ದಿಯನ್ನು ತಿಳಿದು ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ. ಲೋಹಿತಶ್ವ ಅವರಿಗೆ 80 ವರ್ಷ ವಯಸ್ಸಾಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಆರೋಗ್ಯದಿಂದ ಬಳಲುತ್ತಾ ಇದ್ದರು.
ಗುಣಮುಖರಾಗುತ್ತಾ ಇದ್ದಾರೆ ಎನ್ನುವಂತಹ ಸ್ಥಿತಿಯಲ್ಲಿ ಹೃದಯಘಾತದಿಂದ ನಿಧನರಾದರು ಅವರ ಹುಟ್ಟೂರಾದ ತುಮಕೂರಿನ ತೊಂಡೆಗೆರೆ ಗ್ರಾಮದಲ್ಲಿ ಅಂತಿಮ ಕ್ರಿಯೆ ನಡೆಸಲಾಗಿದೆ. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಲೋಹಿತಾಶ್ವಾ ಅವರು ಆಕ್ಟ್ ಮಾಡಿದ್ದರು. ಚಿಕ್ಕ ವಯಸ್ಸಿನಿಂದಲೂ ಇವರಿಗೆ ನಟನೆಯ ಮೇಲೆ ಆಸಕ್ತಿ ಇತ್ತು. ನಟನೆ ಒಂದೇ ಅಲ್ಲದೆ ಇವರು 40 ವರ್ಷಗಳ ಕಾಲ ಬೇರೆ ಬೇರೆ ಕಡೆಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಇದೀಗ ಲೋಹಿತಾಶ್ವ ಅವರ ಆಸ್ತಿಯ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ ಸುಮಾರು 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವಂತಹ ಲೋಹಿತಾಶ್ವ ಅವರು ಗಳಿಸಿರುವಂತಹ ಆಸ್ತಿಯ ಬಗ್ಗೆ ನಾವು ನೋಡುವುದಾದರೆ
ಲೋಹಿತಾಶ್ವಾ ಅವರ ಹುಟ್ಟೂರಾದ ತೊಂಡೆಗೆರೆಯಲ್ಲಿ ಒಂದು ಸ್ವಂತ ಮನೆಯನ್ನು ಕಟ್ಟಿಸಿದ್ದಾರೆ ಅಷ್ಟೇ ಅಲ್ಲದೆ ಮೂರು ಐಷಾರಾಮಿ ಕಾರುಗಳನ್ನು ಸಹ ಹೊಂದಿದ್ದರು. ಅಲ್ಲದೆ ನಾಲ್ಕು ಕೋಟಿ ಆಸ್ತಿ ಕೂಡ ಹೊಂದಿದ್ದರು ತಮ್ಮ ಆಸ್ತಿಯನ್ನು ನಾಲ್ಕು ಜನ ಮಕ್ಕಳಿಗೆ ಸಮಭಾಗವಾಗಿ ಎಲ್ಲಾ ವಿಭಜನೆ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬರುತ್ತಿದೆ. ಕನ್ನಡ ಚಿತ್ರರಂಗ ಕಂಡಂತಹ ಒಬ್ಬ ಹೆಮ್ಮೆಯ ನಟ ಎಂದೇ ಹೇಳಬಹುದು 500 ಸಿನಿಮಾ ಮಾಡುವುದು ಸಾಮಾನ್ಯದ ಕೆಲಸವಲ್ಲ ಕಲೆ ಎನ್ನುವುದು ಯಾರಿಲ್ಲರಿಗೂ ಸಹ ಒಲಿದು ಬರುವುದಿಲ್ಲ ಅಂತಹ ಕಲೆ ಲೋಹಿತಾಶ್ವ ಅವರಿಗೆ ಒಲಿದು ಬಂದಿತ್ತು ಇವರು ಇದೀಗ ವಿಧಿವಶರಾಗಿದ್ದಾರೆ ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕನ್ನಡ ಜನತೆ ಹೇಳುತ್ತಿದ್ದಾರೆ. ಲೋಹಿತಾಶ್ವ ಅವರ ಆತ್ಮಕ್ಕೆ ಶಾಂತಿ ಸಿಗಲು ಓಂ ಶಾಂತಿ ಎಂದು ಕಮೆಂಟ್ಸ್ ಮೂಲಕ ತಿಳಿಸಿ.