ಅಪ್ಪು ಜೊತೆ ಆಕ್ಟ್ ಮಾಡಲು ಆಫರ್ ಸಿಕ್ರು ಅದನ್ನು ತಿರಸ್ಕರಿಸಿದ ಮೇಘಾನ ರಾಜ್ ಕಾರಣವೇನು ಗೊತ್ತ.?

ನಮ್ಮ ಕನ್ನಡ ಚಲನಚಿತ್ರ ರಂಗಕ್ಕೆ ಪುನೀತ್ ರಾಜ್‌ಕುಮಾರ್ ಅವರು ನೀಡಿರುವಂತಹ ಕೊಡುಗೆ ಅಪಾರವಾದದ್ದು ತಮ್ಮ ನಟನೆಯ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದರು ಎಂದರೆ ತಪ್ಪಾಗುವುದಿಲ್ಲ, ಪುನೀತ್ ರಾಜ್‌ಕುಮಾರ್ ಯಾವುದೇ ಪಾತ್ರವನ್ನು ಕೊಟ್ಟರು ಸಹ ಲೀಲಾ ಜಲವಾಗಿ ನಿರ್ವಹಿಸುತ್ತಾ ಇದ್ದರು ಹಾಗೆಯೇ ಎಲ್ಲಾ ಜವಾಬ್ದಾರಿಗಳನ್ನು ಸಹ ಅಚ್ಚುಕಟ್ಟಾಗಿ ನಡೆಸಿಕೊಡುತ್ತಾ ಇದ್ದರು. ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಅವರು ಬದುಕಿದ್ದಂತಹ ಸಮಯದಲ್ಲಿ ತಿಳಿದಿರುವುದಕ್ಕಿಂತ ಅವರು ನಮ್ಮೆಲ್ಲರನ್ನು ಅ’ಗ’ಲಿ’ದ ನಂತರ ಅವರ ಬಗ್ಗೆ ಇನ್ನಷ್ಟು ಮಾಹಿತಿಗಳು ನಮಗೆ ದೊರೆಯುತ್ತಿದೆ. ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ನಮಗೆ ತಿಳಿಯದಂತಹ ಒಂದಷ್ಟು ಮಾಹಿತಿಗಳು ಈಗ ಸಿಗುತ್ತಿವೆ ಅದನ್ನು ಕೇಳಿದರೆ ಪ್ರತಿಯೊಬ್ಬರೂ ಕೂಡ ಆಶ್ಚರ್ಯ ವ್ಯಕ್ತಪಡಿಸುತ್ತಾ ಇದ್ದಾರೆ.

WhatsApp Group Join Now
Telegram Group Join Now

ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವಂತಹ ಸುಂದರ ರಾಜ್ ಅವರ ಬಗ್ಗೆ ನಿಮ್ಮೆಲ್ಲರಿಗೂ ಸಹ ತಿಳಿದೇ ಇದೆ ಕನ್ನಡ ಚಲನಚಿತ್ರ ರಂಗದಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿ ಸಾಕಷ್ಟು ಹೆಸರು ಮಾಡಿರುವಂತಹ ಸುಂದರ್ ರಾಜ್ ಅವರಿಗೆ ಒಬ್ಬಳು ಮುದ್ದಾದ ಮಗಳು ಇದ್ದಾರೆ ಅವರೇ ನಟಿ ಮೇಘನಾ ರಾಜ್ ಮೊದಲಿನಿಂದಲೂ ಕೂಡ ಕನ್ನಡ ಚಿತ್ರರಂಗವನ್ನು ನಟಿ ಮೇಘನಾ ರವರು ಚೆನ್ನಾಗಿ ಬಲ್ಲವರು. ನಟಿ ಮೇಘನಾ ರಾಜ್ ಅವರು ಚಿಕ್ಕವರಿರಬೇಕಾದರೆ ಅಣ್ಣ ಅವರ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಅಣ್ಣಾವ್ರ ಮನೆಯಲ್ಲಿದ್ದವರು ಹಾಗೂ ಅಣ್ಣಾವ್ರು ಸೇರಿದಂತೆ ಎಲ್ಲರೂ ಕೂಡ ಅಪ್ಪು ಜೊತೆಗೆ ಸಿನಿಮಾ ಮೂಲಕ ಈಕೆಯನ್ನು ಪರಿಚಯಿಸಬೇಕು ಎಂದು ಮಾತನ್ನು ಆಡಿದರಂತೆ,

ಆದರೆ ಸುಂದರ್ ರಾಜ್ ಅವರು ಮನೆಗೆ ಬಂದ ನಂತರ ಮೇಘನಾ ರಾಜ್ ರವರು ಇನ್ನಷ್ಟು ಚೆನ್ನಾಗಿ ಓದಲಿ ಎಂಬ ಉದ್ದೇಶದಿಂದ ಸಿನಿಮ ರಂಗಕ್ಕೆ ಹೋಗಲು ಬಿಡಲಿಲ್ಲ, ಇಲ್ಲದಿದ್ದರೆ ಪುನೀತ್ ರಾಜ್‌ಕುಮಾರ್ ಅವರ ಮೊದಲ ಸಿನಿಮಾದಲ್ಲಿ ನಟಿ ಮೇಘನಾ ರಾಜ್ ಅವರೆ ನಾಯಕಿಯಾಗಿ ಲಾಂಚ್ ಆಗಬೇಕಿತ್ತು ಎಂದು ಸ್ವತಹ ಸುಂದರ್ ರಾಜ್ ಅವರೇ ಹೇಳಿದ್ದಾರೆ. ನಮ್ಮ ಕನ್ನಡ ಚಲನಚಿತ್ರ ರಂಗದ ಅದ್ಭುತ ಪ್ರತಿಭೆ ಎಂದರೆ ಅದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಯಾವುದೇ ಒಂದು ಪಾತ್ರವನ್ನು ಕೊಟ್ಟರು ಸಹ ಅದನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಇದ್ದರು ಹಾಗೆಯೇ ಶೂಟಿಂಗ್ ಇರುವಂತಹ ಸಮಯಕ್ಕೆ ಸರಿಯಾಗಿ ಬರುತ್ತಿದ್ದರು ಎಲ್ಲರೂ ಸಹ ಅಪ್ಪು ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಕಲಿತಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಪುನೀತ್ ರಾಜ್‌ಕುಮಾರ್ ಅವರು ತಮ್ಮ ಸಹನಟರನ್ನು ಸಹ ಸ್ನೇಹಿತರಂತೆ ಮಾತನಾಡಿಸುತ್ತಿದ್ದರು ಯಾರನ್ನು ಸಹ ಮೇಲು-ಕೀಳು ಎನ್ನುವಂತಹ ಭಾವನೆಯಲ್ಲಿ ಕಂಡವರಲ್ಲ. ಯಾವುದೇ ಸ್ವಾರ್ಥವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದಂತಹ ನಮ್ಮ ಪುನೀತ್ ರಾಜ್‌ಕುಮಾರ್ ಅವರು ದೇವರಿಗೂ ಸಹ ಇಷ್ಟವಾದರು ಆದ್ದರಿಂದಲೇ ದೇವರು ತನ್ನ ಬಳಿಗೆ ಕರೆಸಿಕೊಂಡಿದ್ದಾನೆ. ಕೇವಲ ಚಿತ್ರರಂಗಕ್ಕೆ ಕೊಡುಗೆಯನ್ನು ನೀಡದೆ ಪುನೀತ್ ರಾಜ್‌ಕುಮಾರ್ ಅವರು ಸಮಾಜಮುಖಿ ಸಾಕಷ್ಟು ಕೆಲಸಗಳನ್ನು ನಿರ್ವಹಿಸಿದ್ದಾರೆ ಎಷ್ಟೋ ಜನರಿಗೆ ಇವರು ದೇವರ ರೂಪದಲ್ಲಿ ಕಂಡಿದ್ದಾರೆ ಇಂದಿಗೂ ಸಹ ಅದೆಷ್ಟೋ ಜನರು ಇವರ ಫೋಟೋವನ್ನು ದೇವರ ಮನೆಯಲ್ಲಿ ಇಟ್ಟುಕೊಂಡು ಪೂಜಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now