ನಿಮ್ಮ ಬಳಿ ಕೂಡ ವಿಶೇಷವಾದ ಈ ಐದು ರೂ ನಾಣ್ಯ ಇದ್ದರೆ, ಅದರಿಂದ ಲಕ್ಷ ಲಕ್ಷ ಸಂಪಾದಿಸಬಹುದು ಚಿಕ್ಕ ವಯಸ್ಸಿನಲ್ಲಿ ನಾವೆಲ್ಲರೂ ಈ ಒಂದು ಆಟವನ್ನು ಖಂಡಿತ ಆಡಿರುತ್ತೇವೆ. ಮಣ್ಣಿನಲ್ಲಿ ನಾಣ್ಯಗಳನ್ನು ಬಚ್ಚಿಡುವುದು ಮರುದಿನ ಬಂದು ಅದು ಎರಡಾಗಿದೆಯಾ ಎಂದು ಚೆಕ್ ಮಾಡುವುದು, ಹಿರಿಯರಿಗೆ ಗೊತ್ತಾದಾಗ ದುಡ್ಡು ದುಡ್ಡನ್ನು ಮರಿ ಆಗುವುದಿಲ್ಲ ಎಂದು ಬೈಸಿಕೊಳ್ಳುವುದು. ಆದರೆ ಈಗ ಅದು ಆ ವಿಧಾನದಲ್ಲಿ ಅಲ್ಲದಿದ್ದರೂ ಮತ್ತೊಂದು ವಿಧಾನದಿಂದ ನಿಜ ಆಗಿದೆ.
ಈಗ ಹಣವಿದ್ದರೆ ಅದರಿಂದ ಹಣ ಪಡೆಯುವುದು ಅಥವಾ ಲಾಭ ಮಾಡಿಕೊಳ್ಳುವುದು ಬಹಳ ಸುಲಭ ಮತ್ತು ಅದೇ ಇಂದು ನಮ್ಮ ನಿಮ್ಮೆಲ್ಲರ ಉದ್ದೇಶವು ಆಗಿದೆ. ಒಂದು ಕಡೆ ಇನ್ವೆಸ್ಟ್ ಅಥವಾ ಮತ್ತಿತರ ಕಾರಣಗಳಿಂದ ಹಣದಿಂದ ಹಣ ಪಡೆಯುತ್ತಿದ್ದರೆ ಮತ್ತೊಂದೆಡೆ ಎಂದೋ ಎಲ್ಲೋ ಬೇಡ ಎಂದು ಇಟ್ಟಿದ್ದ ಹಳೆ ನಾಣ್ಯದಿಂದ ಕೂಡ ಲಕ್ಷ ಲಕ್ಷ ಗಳಿಸುವ ಹೊಸ ಟ್ರೆಂಡ್ ಶುರು ಆಗಿದೆ. ನಿಮಗೂ ಸಹ ಈ ಹಳೆ ನಾಣ್ಯ ಎತ್ತಿಡುವ ಅಭ್ಯಾಸ ಇದ್ದರೆ ಇದನ್ನು ಪೂರ್ತಿಯಾಗಿ ಓದಿ.
ಎಷ್ಟೋ ಜನರಿಗೆ ಈ ರೀತಿ ಹಳೆ ಮತ್ತು ಪುರಾತನ ನಾಣ್ಯಗಳನ್ನು ಮತ್ತು ವಿಶೇಷವಾದ ನಾಣ್ಯಗಳನ್ನು ಕೂಡಿಡುವ ಅಭ್ಯಾಸ ಇರುತ್ತದೆ. ಬಾಲ್ಯದಿಂದಲೂ ಹಲವಾರು ಜನ ಈ ರೀತಿ ಕುತೂಹಲವನ್ನು ಬೆಳೆಸಿಕೊಂಡು ಬಂದಿರುತ್ತಾರೆ. ಈಗ ಅದರಿಂದ ಲಕ್ಷ ಸಂಪಾದಿಸುವ ಸಮಯ ನಿಮ್ಮದಾಗಿದೆ. ಅದೇನೆಂದರೆ ನಿಮ್ಮ ಹಳೆಯ ನಾಣ್ಯಗಳನ್ನು ಕೆಲವೊಂದು ವೆಬ್ಸೈಟ್ ಮೂಲಕ ಲಕ್ಷ ಲಕ್ಷಕ್ಕೆ ಮಾರಬಹುದು ನೀವು ಕೇಳಿದಷ್ಟು ಹಣ ತೆತ್ತೂ ಇದನ್ನು ಖರೀದಿಸುವವರೂ ಇದ್ದಾರೆ.
ಈಗ ಅದೇ ಟ್ರೆಂಡಿಂಗ್ ಆಗಿದೆ ಸದ್ಯಕ್ಕೆ ಆ ಟ್ರೆಂಡಿಂಗ್ ಅಲ್ಲಿ ಐದೂ ನೂರು ನಾಣ್ಯ ಚಲಾವಣೆ ಆಗುತ್ತಿದೆ ನಾವು ಎಂದಾದರೂ ಈ ನಾಣ್ಯವನ್ನು ನೋಡಿರುತ್ತೇವೆ ಒಂದು ಕಡೆ ಅಶೋಕಸ್ಥಂಭ ಅದರ ಹಿಂದೆ ನೆಹರು ಅವರ ಫೋಟೋ ಇದೆ. ತಾಮ್ರದಿಂದ ತಯಾರಿಸಲಾಗಿದ್ದ 12.6 ಗ್ರಾಮಿನ ಈ ನಾಣ್ಯವನ್ನು 1989ರಲ್ಲಿ ನೆಹರು ಅವರ ಜನ್ಮದಿನದ ಶತಮಾನೋತ್ಸವ ಸಂಭ್ರಮಕ್ಕಾಗಿ ಅದರ ಸವಿ ನೆನಪಿಗಾಗಿ ಟಂಕಿಸಲಾಗಿತ್ತು.
ನೆಹರು ಅವರ ಫೋಟೋ ಸುತ್ತ ಹಿಂದಿ ಮತ್ತು ಇಂಗ್ಲಿಷ್ ಅಲ್ಲಿ ಜವಹರ್ ಲಾಲ್ ನೆಹರು ಸೆಂಚುರಿ ಮತ್ತು ಜವಾಹರಲಾಲ್ ನೆಹರು ಶತಸ್ಪತಿ ಎಂದು ಮುದ್ರಿಸಲಾಗಿದೆ. ನಮ್ಮ ದೇಶದಲ್ಲಿ ನಾಲ್ಕು ಕಡೆ ನಾಣ್ಯಗಳನ್ನು ಮುದ್ರಿಸಲಾಗುತ್ತದೆ. ಆ ಸಮಯದಲ್ಲಿ ಐದು ನೂರು ನಾಣ್ಯದಂತೆ ಇಪ್ಪತ್ತು ಹಾಗೂ 100 ಪೈಸೆ ನಾಣ್ಯವನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ 20 ರೂಪಾಯಿ ಮೌಲ್ಯದ ಸ್ಮರಣಾರ್ಥ ನಾಣ್ಯಕ್ಕೆ ಚಿನ್ನದ ಬೆಲೆ ಬಂದಿದೆ ಇದನ್ನು ನೀವು ಹೊಂದಿದ್ದರೆ ಹುಡುಕಿ ಕೆಲವು ವೆಬ್ಸೈಟ್ ಮೂಲಕ ಮಾರಾಟ ಮಾಡಿ ಲಕ್ಷಾಂತರ ಹಣ ಗಳಿಸಬಹುದು.
Indianmart.com.www.coinbazzr.com ಅಥವಾ www.ebay.com ಇಂತಹ ಪೋರ್ಟಲ್ ಗೆ ಹೋಗಿ ಮುಖ ಪುಟದಲ್ಲಿ ನೋಂದಾಯಿಸಿಕೊಂಡು, ನಂತರ ಮಾರಾಟಗಾರರಾಗಲು ನೋಂದಾಯಿಸಿಕೊಂಡು ಅದರಲ್ಲಿ ನಿಮ್ಮ ಕಾಯಿನ್ ಇಮೇಜನ್ನು ಸ್ಪಷ್ಟವಾಗಿ ಫೋಟೋ ತೆಗೆದು ಅಪ್ಲೋಡ್ ಮಾಡಿ ಗ್ರಾಹಕರನ್ನು ಸೆಳೆದು ಮಾರಬಹುದು. ಅಂತಿಮವಾಗಿ ನಾಣ್ಯವು ಮಾರಾಟವಾಗುವ ಬೆಲೆಯೂ ಖರೀದಿದಾರರ ಆಸಕ್ತಿ ಮತ್ತು ನಾಣ್ಯದ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ.
ನೀವು ಹೈದರಾಬಾದ್ ಅಥವಾ ಮುಂಬೈ ಅಲ್ಲಿ ಟಂಕಿಸಿದ್ದ ಐದು ರೂ ನೆಹರು ಅವರ ಫೋಟೋ ಇರುವ ನಾಣ್ಯವನ್ನು ಮಾರಾಟ ಮಾಡಿದರೆ 50 ರಿಂದ 100 ರೂಪಾಯಿಗೆ ಮಾರಾಟವಾಗಬಹುದು, ಆದರೆ ಅದೇ ರೂ. 20 ರ ಸ್ಮರಣಾರ್ಥ ನಾಣ್ಯವನ್ನು ಮಾರಾಟ ಮಾಡಿದರೆ 5 ಲಕ್ಷದವರೆಗೂ ಕೂಡ ಅದು ಮಾರಾಟವಾಗಬಹುದು. ನಿಮ್ಮ ಬಳಿ ನಾಣ್ಯ ಇದ್ದರೆ ಹುಡುಕಿ ಲಾಭ ಮಾಡಿಕೊಳ್ಳಿ. ಇದೊಂದು ಗೋಲ್ಡನ್ ಅವಕಾಶ ಅಂತಾನೇ ಹೇಳಬಹುದು.