ಕೆಲವೊಮ್ಮೆ ಮನೆಯಲ್ಲಿ ಮೊದಲನೇ ಹೆಂಡತಿ ತೀರಿ ಹೋದರೆ ಎರಡನೇ ಮದುವೆ ಮಾಡುತ್ತಿದ್ದರು, ಏಕೆಂದರೆ ಮನೆಯಲ್ಲಿ ಹೆಂಗಸು ಇರುವುದಿಲ್ಲ ಎಂದರೆ ಆ ಮನೆಗೆ ಯಾವುದೇ ಕಾರಣಕ್ಕೂ ಬೆಳೆಯುವುದಿಲ್ಲ ಆ ಮನೆಗೆ ಒಂದು ಹೆಣ್ಣು ಮಗಳ ಆಶ್ರಯ ಬೇಕು ಹಾಗೂ ಆ ಮನೆಯಲ್ಲಿರುವ ಗಂಡನಿಗೂ ಕೂಡ ಹೆಂಡತಿಯ ಆಸರೆ ಇರಲೇಬೇಕು ಎನ್ನುವ ಉದ್ದೇಶದಿಂದ ಆಗಿನ ಕಾಲದಿಂದಲೂ ಕೂಡ ಮೊದಲನೇ ಹೆಂಡತಿ ಕಡಿಮೆ ಸಮಯದಲ್ಲಿ, ಅಂದರೆ ಬೇಗ ತೀರಿ ಹೋದರೆ ಎರಡನೇ ಮದುವೆ ಮಾಡುವುದರ ಮುಖಾಂತರ ಮೊದಲನೇ ಹೆಂಡತಿಯ ಮಕ್ಕಳಿದ್ದರೂ ಕೂಡ ಎರಡನೇ ಹೆಂಡತಿ ಮದುವೆಯಾಗಿ ಬಂದು ಆ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಇರಿಸುತ್ತಿದ್ದರು.
ಅದೇ ರೀತಿಯಾಗಿ ಆಗಿನ ಕಾಲದಲ್ಲಿ ಎರಡನೇ ಹೆಂಡತಿಯು ತನ್ನ ಮಕ್ಕಳಿಗಿಂತ ಮೊದಲನೇ ಹೆಂಡತಿಯ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಇತ್ತು. ಅದೇ ರೀತಿ ಮೊದಲನೇ ಸ್ಥಾನವನ್ನು ಕೂಡ ಮೊದಲನೇ ಹೆಂಡತಿಯ ಮಕ್ಕಳಿಗೆ ಕೊಡುತ್ತಿದ್ದರು ಹಾಗೂ ಎಲ್ಲರೂ ಕೂಡ ಅಷ್ಟೇ ಗೌರವದಿಂದ ಎಲ್ಲರಿಗೂ ಬೆಲೆಯನ್ನು ಕೊಡುವುದರ ಮುಖಾಂತರ ಎಲ್ಲರೂ ಅನ್ಯೋನ್ಯವಾಗಿ ಇರುತ್ತಿದ್ದರು. ಆದರೆ ಕಾಲ ತುಂಬಾ ಬದಲಾಗಿದೆ ಬದಲಿಗೆ ಮೊದಲನೇ ಹೆಂಡತಿಯ ಮಕ್ಕಳನ್ನು ಎರಡನೇ ಹೆಂಡತಿ ಹಾಗೂ ಅವರ ಮಕ್ಕಳು ಸರಿಯಾಗಿ ನೋಡಿಕೊಳ್ಳುವುದಿಲ್ಲ.
ಬದಲಿಗೆ ಕೆಲವೊಮ್ಮೆ ಮೊದಲನೇ ಹೆಂಡತಿ ಇದ್ದರೂ ಎರಡನೇ ಹೆಂಡತಿಯನ್ನು ಮದುವೆಯಾದರೂ ಎರಡನೇ ಹೆಂಡತಿ ಹಾಗೂ ಅವರ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಒಬ್ಬ ಪುರುಷ ಮೊದಲನೇ ಹೆಂಡತಿ ತೀರಿ ಹೋದ ನಂತರ ಎರಡನೇ ಮದುವೆಯನ್ನು ಮಾಡಿಕೊಳ್ಳುತ್ತಾನೆ. ಆದರೆ ಮೊದಲನೇ ಹೆಂಡತಿಗೆ ಈಗಾಗಲೇ ಒಬ್ಬ ಮಗ ಇದ್ದು ಎರಡನೇ ಹೆಂಡತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಇದ್ದರೆ ತಂದೆಯ ಆಸ್ತಿಯಲ್ಲಿ ಮೊದಲನೇ ಹೆಂಡತಿಯ ಮಕ್ಕನಿಗೆ ಹಾಗೂ ಎರಡನೇ ಹೆಂಡತಿಯ ಮಕ್ಕಳಿಗೆ ಎಷ್ಟು ಆಸ್ತಿ ಸೇರುತ್ತದೆ ಎನ್ನುವಂತಹ ವಿಷಯದ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.
ಸಾಮಾನ್ಯವಾಗಿ ಕೋರ್ಟ್ ಆದೇಶದ ಮೇರೆಗೆ ಮೊದಲನೇ ಹೆಂಡತಿ ತೀರಿ ಹೋದ ನಂತರ ಎರಡನೇ ಮದುವೆ ಮಾಡಿಕೊಳ್ಳುವುದು ಯಾವುದೇ ರೀತಿಯ ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಬದಲಿಗೆ ತಂದೆ ಎಲ್ಲರನ್ನೂ ಸರಿಸಮನಾಗಿ ನೋಡಿಕೊಳ್ಳುತ್ತಿದ್ದರೆ ಅದರಲ್ಲಿ ಯಾವುದೇ ಕಾರಣಕ್ಕೂ ನಾವು ತಪ್ಪನ್ನು ಹುಡುಕುವುದಕ್ಕೆ ಸಾಧ್ಯವಾಗುವುದಿಲ್ಲ. ಅದೇ ರೀತಿಯಾಗಿ ತಂದೆ ಮರಣವನ್ನು ಹೊಂದಿದರೆ ತಂದೆಯ ಆಸ್ತಿಯಲ್ಲಿ ಮೊದಲನೇ ಹೆಂಡತಿಯ ಮಗನಿಗೆ ಹಾಗೂ ಎರಡನೇ ಹೆಂಡತಿಯ ಇಬ್ಬರು ಮಕ್ಕಳಿಗೆ ಆಸ್ತಿ ಎಷ್ಟು ಪಾಲು ಸೇರುತ್ತದೆ ಎಂದು ನೋಡುವುದಾದರೆ.
ತಂದೆಯ ಆಸ್ತಿಯಲ್ಲಿ ಇಬ್ಬರೂ ಹೆಂಡತಿಯರ ಮಕ್ಕಳಿಗೆ ಸಮನಾದ ಭಾಗ ಸಿಗುತ್ತದೆ ಜೊತೆಗೆ ಇದರಲ್ಲಿ ಯಾರಿಗೂ ಕೂಡ ಹೆಚ್ಚು ಯಾರಿಗೂ ಕೂಡ ಕಡಿಮೆ ಎನ್ನುವಂತೆ ಭಾಗವನ್ನು ಮಾಡಿರುವುದಿಲ್ಲ, ಬದಲಿಗೆ ಮೊದಲ ಹೆಂಡತಿಗೆ ಒಬ್ಬ ಮಗ ಇದ್ದರೆ ಎರಡನೇ ಹೆಂಡತಿಗೆ ಇಬ್ಬರು ಮಕ್ಕಳಿದ್ದರೆ ಎಲ್ಲರಿಗೂ ಸಮನಾದ ಹಂಚಿಕೆ ಬರುತ್ತದೆ. ಉದಾಹರಣೆಗೆ 100ರಲ್ಲಿ ಮೂರು ಭಾಗ ಎಂಬಂತೆ ಎಲ್ಲರಿಗೂ ಸಮನಾದ ಪಾಲು ಸಿಗುತ್ತದೆ ಆದ್ದರಿಂದ ಇಂತಹ ವಿಷಯಗಳ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.