ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆ 2023….!! ಟೈಲರಿಂಗ್ ಕಲಿಯಲು ಆಸಕ್ತಿ ಇರುವವರು ಇಂದೇ ಅರ್ಜಿ ಸಲ್ಲಿಸಿ ಉಚಿತ ತರಬೇತಿ ಪಡೆಯಿರಿ.

ಡಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ ಕಡೆಯಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು. ಪ್ರತಿಯೊಬ್ಬ ಮಹಿಳೆಯರು ಕೂಡ ಈ ಒಂದು ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಹಿಂದುಳಿದ ವರ್ಗಗಳ ಮಹಿಳೆಯರಿಗೆ 2022 23ನೇ ಸಾಲಿನಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು. ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

WhatsApp Group Join Now
Telegram Group Join Now

ಹಾಗಾದರೆ ಹಿಂದುಳಿದ ವರ್ಗದ ಹೆಣ್ಣು ಮಕ್ಕಳು ಅಥವಾ ಮಹಿಳೆಯರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವುದು ಹೇಗೆ? ಇದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕು? ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾರೆಲ್ಲಾ ಅರ್ಹರು? ಹಾಗೂ ಈ ಅರ್ಜಿ ಹಾಕುವುದಕ್ಕೆ ಕೊನೆಯ ದಿನಾಂಕ ಯಾವುದು ಹೀಗೆ ಈ ವಿಷಯವಾಗಿ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.

ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದರ ಮೂಲಕ ಹಾಕುವುದು ಎಂದರೆ ಸೇವಾ ಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕವನ್ನು ಒನ್ ಸೇವಾ ಕೇಂದ್ರಗಳಲ್ಲಿ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಹಾಕಬಹುದು. ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಪ್ರಾರಂಭ ದಿನಾಂಕ ಯಾವುದು ಎಂದರೆ 05/01/2023 ರಿಂದ 20/02/2023 ರ ಒಳಗೆ ನೀವೇ ಅರ್ಜಿಯನ್ನು ಹಾಕಬಹುದು.

ಅದರಂತೆ ನೀವು ಅರ್ಜಿಯಲ್ಲಿ ಕೇಳುವ ಎಲ್ಲ ದಾಖಲಾತಿಗಳನ್ನು ಹಾಕುವುದರ ಮೂಲಕ ನೀವು ಅರ್ಜಿಯನ್ನು ಹಾಕಬಹುದು. ಅದರಲ್ಲೂ ನೀವು ಅರ್ಜಿಯನ್ನು ಹಾಕುವಂತಹ ಸಮಯದಲ್ಲಿ ನಿಮ್ಮ ಹೆಸರು, ನಿಮ್ಮ ಆಧಾರ್ ಕಾರ್ಡ್ ನಂಬರ್, ನೀವು ಯಾವ ಗ್ರಾಮದವರು, ಹೀಗೆ ಈ ವಿಷಯವಾಗಿ ಹಲವಾರು ಮಾಹಿತಿಗಳನ್ನು ಅಲ್ಲಿ ಕೇಳಲಾಗುತ್ತದೆ.

ನಂತರ ನೀವೇನಾದರೂ ವಿವಾಹವಾಗಿದ್ದರೆ, ಹಾಗೂ ನೀವೇನಾದರೂ ಅಂಗವಿಕಲರಾಗಿದ್ದರೆ, ಅಥವಾ ನೀವು ವಿಧವೆಯಾಗಿದ್ದರೆ, ಹೀಗೆ ಹಲವಾರು ಮಾಹಿತಿಗಳನ್ನು ಅಲ್ಲಿ ಕೇಳಲಾಗುತ್ತದೆ. ಈ ಎಲ್ಲಾ ಮಾಹಿತಿ ಗಳನ್ನು ನೀವು ಅಲ್ಲಿ ಭರ್ತಿ ಮಾಡಿ ನಂತರ ಅಲ್ಲಿ ಕೊಡುವಂತಹ ಕೋಡ್ ನಂಬರ್ ಅನ್ನು ಉಪಯೋಗಿಸಿ ನೀವು ಅರ್ಜಿಯನ್ನು ಸುಲಭವಾಗಿ ಹಾಕಬಹುದು.

ನಂತರ ನೀವು ಅರ್ಜಿಯನ್ನು ಹಾಕಿರುವುದಕ್ಕೆ ನೀವು ಅರ್ಹರ ಅಥವಾ ಅರ್ಹರಿಲ್ಲವ ಎನ್ನುವುದನ್ನು ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಆಯ್ಕೆ ಮಾಡಿಕೊಂಡು ನಂತರ ನಿಮಗೆ ಉಚಿತ ವಾಗಿ ಹೊಲಿಗೆ ಯಂತ್ರವನ್ನು ವಿತರಿಸಲಾಗುತ್ತದೆ. ಈ ರೀತಿ ಎಲ್ಲಾ ವಿಧಾನಗಳನ್ನು ಅನುಸರಿಸಿ ನೀವು ಅರ್ಜಿಯನ್ನು ಹಾಕಿದ ನಂತರ ಈ ಉಪಯೋಗ ಪಡೆಯಬಹುದು.

ಅದರಲ್ಲೂ ಹಳ್ಳಿಯಲ್ಲಿರುವ ಮಹಿಳೆಯರಿಗೆ ಈ ಒಂದು ಯೋಜನೆ ಬಹಳ ಉಪಯುಕ್ತವಾಗುತ್ತದೆ ಎಂದೇ ಹೇಳಬಹುದು. ಏಕೆಂದರೆ ಹಳ್ಳಿಯಲ್ಲಿರುವ ಜನರು ಯಾವುದೇ ರೀತಿಯ ಕೆಲಸ ಕಾರ್ಯಗಳಲ್ಲಿ ಮುಂದೆ ಇರುವುದಿಲ್ಲ ಅದರಲ್ಲೂ ಕೆಲವರು ಈ ವಿಷಯವಾಗಿ ಕೆಲ ವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡು, ಹೊಲಿಗೆ ಯಂತ್ರದ ಟ್ರೈನಿಂಗ್ ಪಡೆದುಕೊಂಡು ತಮ್ಮ ಮನೆಗಳಲ್ಲಿ ತಾವೇ ಈ ರೀತಿಯ ಕೆಲಸವನ್ನು ಮಾಡುವುದರ ಮುಖಾಂತರ ತಮ್ಮ ಜೀವನವನ್ನು ಸಾಗಿಸುತ್ತಿರುತ್ತಾರೆ.

ಆದರೆ ಕೆಲವೊಬ್ಬರಿಗೆ ಇದನ್ನು ಕೊಂಡುಕೊಳ್ಳಲು ಕೂಡ ಅಸಾಧ್ಯವಾಗುತ್ತಿರುವುದಿಲ್ಲ. ಅಂತಹ ಮಹಿಳೆಯರಿಗೆ ಡಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ ಕಡೆಯಿಂದ ಹಿಂದುಳಿದ ಮಹಿಳೆಯರಿಗೆ ಈ ರೀತಿಯಾಗಿ ಸಹಾಯವನ್ನು ಮಾಡುವುದರ ಮೂಲಕ ಅವರನ್ನು ಅಭಿವೃದ್ಧಿಪಡಿಸು ವುದು ಇವರ ಮುಖ್ಯ ಉದ್ದೇಶವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/4dOKT4LRJGc

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now