ಇಂಗ್ಲಿಷ್ ಔಷಧಿ ಕೆಲಸ ಮಾಡದಂತಹ ಎಷ್ಟೋ ಕಾಯಿಲೆಗಳಿಗೆ ಆಯುರ್ವೇದಿಕ್ ಔಷಧಿ ಅಥವಾ ನಾಟಿ ಔಷಧಿಗಳು ಕೆಲಸ ಮಾಡುತ್ತವೆ. ಈಗಾಗಲೇ ಸಾವಿರಾರು ಇಂತಹ ಉದಾಹರಣೆಗಳು ಸಾಕ್ಷಿಯಾಗಿ ನಮಗೆ ಕೇಳ ಸಿಗುತ್ತವೆ. ಅಂತಹದೇ ಒಂದು ಕಾಯಿಲೆ ಆದ ಬಿಳಿ ತೊನ್ನು ಸಮಸ್ಯೆಗೆ ಕೂಡ ಈ ಔಷಧಿಯೇ ರಾಮಬಾಣ ಆಗಿದೆ. ಬಿಳಿ ತೊನ್ನು ಸಮಸ್ಯೆ ದೈಹಿಕ ಅಥವಾ ಚರ್ಮ ಸಮಸ್ಯೆ ಮಾತ್ರ ಅಲ್ಲದೆ ಮಾನಸಿಕ ಸಮಸ್ಯೆ ಆಗಿ ಕಾಡಿ ಬಿಡುತ್ತದೆ.
ಯಾಕೆಂದರೆ ತೊನ್ನು ಆದವರನ್ನು ಜನ ಹತ್ತಿರಕ್ಕೆ ಸೇರಿಸಿಕೊಳ್ಳುವುದಿಲ್ಲ, ಅವರನ್ನು ಕಂಡರೆ ಅಸಹ್ಯ ಪಡುತ್ತಾರೆ. ಅವರ ಪೂರ್ವ ಜನ್ಮದ ಕರ್ಮದಿಂದ ಈ ರೀತಿ ಹುಟ್ಟಿದ್ದಾರೆ ಎಂದು ಅವಮಾನಿಸುತ್ತಾರೆ. ಆದರೆ ಇದು ನಿಜವಾಗಿ ಒಂದು ಹಾರ್ಮೋನ್ ವ್ಯತ್ಯಾಸದಿಂದ ಉಂಟಾಗುವ ಕಾಯಿಲೆ ಆಗಿದೆ ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಆಗಿದ್ದು ಸೌಂದರ್ಯವನ್ನು ಕುಂಟಿಸುವ ಕಾರಣ ಇದಕ್ಕೆ ಒಳಗಾಗಿರುವವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಮುಜುಗರ ಪಡುತ್ತಾರೆ.
ಆದರೆ ಇಂತಹ ಸಮಸ್ಯೆಗಳಿಗೆ ಇಂಗ್ಲೀಷ್ ಮೆಡಿಸನ್ ಇಂದ ಚಿಕಿತ್ಸೆ ಇದ್ದರೂ ಅದು ಫಲ ಕೊಡಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಅಥವಾ ಸಂಪೂರ್ಣವಾಗಿ ಇದು ಗುಣವಾಗದೆ ಉಳಿದೂ ಬಿಡಬಹುದು. ಅದರ ಬದಲು ಈಗ ನಾವು ಹೇಳುವ ಈ ನಾಟಿ ಔಷಧಿಯನ್ನು ಪರೀಕ್ಷಿಸಿ ನೋಡಿದರೆ ಖಂಡಿತ ಇದರ ಫಲ ತಿಂಗಳೊಳಗೆ ನಿಮಗೆ ಸಿಗುತ್ತದೆ. ಮೊದಲಿಗೆ ಅದಕ್ಕೆ ಪಥ್ಯೆ ಇರುವುದು ಮುಖ್ಯ.
ಈ ರೀತಿ ನಾಟಿ ಚಿಕಿತ್ಸೆ ತೆಗೆದುಕೊಳ್ಳುವವರು ಯಾವುದೇ ಕಾರಣಕ್ಕೂ ಟೀ, ಕಾಫಿ ಇವುಗಳನ್ನು ಸೇವನೆ ಮಾಡಬಾರದು. ಯಾವುದೇ ದುಶ್ಚಟ ಇದ್ದರೂ ಕೂಡ ಅದನ್ನು ಬಿಟ್ಟುಬಿಡಬೇಕು, ಆಹಾರ ಪದಾರ್ಥಗಳ ಪಥ್ಯೆಯನ್ನು ಕೂಡ ಇರಬೇಕಾಗುತ್ತದೆ,ಜೊತೆಗೆ ಒಳ್ಳೆ ಜೀವನ ಶೈಲಿಯನ್ನು ರೂಡಿಸಿಕೊಳ್ಳುವುದು ಶೀಘ್ರ ಫಲಿತಾಂಶವನ್ನು ನೀಡುತ್ತದೆ. ಇವರು ತ್ರಿಫಲ ಚೂರ್ಣವನ್ನು ಲೋಳೆಸರದ ರಸದ ಜೊತೆ ಮಿಕ್ಸ್ ಮಾಡಿ ಪ್ರತಿದಿನ ಕೂಡ ತಪ್ಪದೆ ಸೇವಿಸಬೇಕು. ಈ ರೀತಿ ಮಾಡುವುದು ಚಿಕಿತ್ಸೆಯ ಒಂದು ಭಾಗವೇ ಆಗಿದೆ.
ಇದರ ಜೊತೆಗೆ ಕಾಡು ಕೊತ್ತಂಬರಿ ಸೊಪ್ಪು ಎನ್ನುವ ಈ ಸೊಪ್ಪು ಬಿಳಿ ತೊನ್ನು ತೊಲಗಿಸಲು ದಿವ್ಯ ಔಷಧಿಯಂತೆ ಕೆಲಸ ಮಾಡುತ್ತದೆ. ಕಾಡು ಕೊತ್ತಂಬರಿ ಸೊಪ್ಪನ್ನು ಹುಡುಕಿ ತಂದು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಅದನ್ನು ಒಂದು ಕಾಟನ್ ಬಟ್ಟೆಗೆ ಹಾಕಿ ಚೆನ್ನಾಗಿ ಹಿಂಡಿ ರಸವನ್ನು ಶೋಧಿಸಿ ಕೊಳ್ಳಬೇಕು. ಎಷ್ಟು ರಸ ಇರುತ್ತದಯೋ ಅಷ್ಟೇ ಪ್ರಮಾಣದ ಕೊಬ್ಬರಿ ಎಣ್ಣೆಯನ್ನು ಇದರ ಜೊತೆ ಸೇರಿಸಿ ಒಂದು ಗಾಜಿನ ಬಾಟಲಿಗೆ ತುಂಬಿ ಮುಚ್ಚಳವನ್ನು ಹಾಕಬೇಕು.
ಇದನ್ನು ಚೆನ್ನಾಗಿ ಅಲುಗಾಡಿಸಿ ಎರಡು ಬೆರೆಯುವಂತೆ ಮಾಡಬೇಕು. ನಂತರ ಪ್ರತಿದಿನ ಸೂರ್ಯೋದಯ ಸಮಯಕ್ಕೆ ಇದನ್ನು ತೆಗೆದು ಕೊಂಡು ಹೋಗಿ ಬಿಸಿಲು ಬರುವ ಜಾಗಕ್ಕೆ ಇಡಬೇಕು, ನಂತರ ಸಂಜೆ ಹಿಮ ಬೆಳದಂತೆ ಬೇರೆ ಕಡೆ ಇಟ್ಟು ನೋಡಿಕೊಳ್ಳಬೇಕು. 20 ದಿನಗಳವರೆಗೆ ಯಾವುದೇ ಕಾರಣಕ್ಕೂ ಇದರ ಮುಚ್ಚಳವನ್ನು ಬಿಚ್ಚಬಾರದು.
20 ದಿನಗಳು ಆದ ನಂತರ ನಿಮ್ಮ ದೇಹದಲ್ಲಿ ಎಲ್ಲೆಲ್ಲಿ ತೊನ್ನು ಆಗಿದೆ ಅಲ್ಲೆಲ್ಲ ಚೆನ್ನಾಗಿ ಹಚ್ಚಬೇಕು. ಮೂರು ತಿಂಗಳವರೆಗೆ ಪ್ರತಿದಿನ ಕೂಡ ತಪ್ಪದೇ ಈ ರೀತಿ ಹಚ್ಚುತ್ತಲೇ ಇರಬೇಕು. ಒಂದು ದಿನ ಮಿಸ್ ಮಾಡಿದರು ಕೂಡ ನಿಮ್ಮ ಕಾಯಿಲೆ ಗುಣವಾಗುವ ದಿನಗಳು ಮುಂದೆ ಹೋಗಿಬಿಡುತ್ತದೆ. ಇದನ್ನು ಹಚ್ಚಿಕೊಂಡು ನಿಮ್ಮ ದಿನನಿತ್ಯದ ಕೆಲಸಗಳನ್ನು ಕೂಡ ತೊಡಗಿ ಕೊಳ್ಳಬಹುದು, ಯಾವುದೇ ಅಡ್ಡಿ ಇರುವುದಿಲ್ಲ ಈ ರೀತಿ ಮಾಡಿದರೆ ಶೀಘ್ರವಾಗಿ ಈ ಕಾಯಿಲೆ ಗುಣವಾಗುತ್ತದೆ.