ದಾರಿ ತಪ್ಪಿದ ಗಂಡನನ್ನು ಅಥವಾ ಹೆಂಡತಿಯನ್ನು ಸರಿದಾರಿಗೆ ತರುವುದು ಹೇಗೆ ಗೊತ್ತಾ.? 2 ನಿಮಿಷ ಈ ಮಾತು ಕೇಳಿ ಸಾಕು.

ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಮದುವೆ ಎನ್ನುವ ಪವಿತ್ರವಾದ ಸಂಬಂಧವು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎನಿಸುತ್ತದೆ. ಮದುವೆ ಎನ್ನುವ ಬಂಧನ ಅಥವಾ ಚೌಕಟ್ಟು ಬಹಳ ಶ್ರೇಷ್ಠವಾದದ್ದು. ಹಿರಿಯರು ಕಟ್ಟು ಕೊಟ್ಟಿರುವ ಇಂತಹ ವ್ಯವಸ್ಥೆಯನ್ನು ಇಂದಿನ ಯುವ ಪೀಳಿಗೆ ಅರ್ಥವಿಲ್ಲದ ರೀತಿ ಬಳಸಿಕೊಂಡು ಅದರ ಘನತೆಗೆ ಧಕ್ಕೆ ತರುತ್ತಿದ್ದಾರೆ.

ಮದುವೆ ಎನ್ನುವುದು ಎಲ್ಲರಿಗಿಂತ ಹೆಚ್ಚಾಗಿ ಒಂದು ಹೆಣ್ಣು ಹಾಗು ಗಂಡು ಇನ್ನು ಮುಂದೆ ಇಬ್ಬರು ಒಂದೇ ಎನ್ನುವ ರೀತಿ ಬದುಕು ನಡೆಸುತ್ತೇವೆ ಎಂದು ಅವರಿಗೆ ಅವರೇ ಒಪ್ಪಿಕೊಂಡು ಮಾಡಿಕೊಳ್ಳುವ ಒಂದು ಒಪ್ಪಂದ. ಈ ಒಪ್ಪಂದದ ಆಧಾರವೇ ನಂಬಿಕೆ. ಆದರೆ ಪರಸ್ಪರರಲ್ಲಿ ನಂಬಿಕೆ ಕಡಿಮೆ ಆದಾಗ ಅಥವಾ ಆ ನಂಬಿಕೆಗೆ ಮೋಸ ಆದಾಗ ಸಂಬಂಧದಲ್ಲಿ ಬಿರುಕು ಮೂಡುತ್ತದೆ.

ಇಂತಹ ಒಂದು ಆಚಾತುರ್ಯ ಆಗದಂತೆ ಎಚ್ಚರ ವಹಿಸುವುದು ಹಾಗೂ ಆದಾಗ ಆಗುವ ತಪ್ಪನ್ನು ತಿದ್ದುಕೊಳ್ಳುವುದು ಒಳ್ಳೆಯದು. ಇಂತಹ ಮದುವೆ ವಿಷಯದಲ್ಲಿ ಇಬ್ಬರ ನಡುವೆ ವೈ ಮನಸು ಮೂಡಿ ಅದು ವಿಚ್ಛೇದನದ ಹಂತದ ತನಕ ತಲುಪಲು ಮುಖ್ಯ ಕಾರಣವಾಗಿರುವ ವಿಷಯ ಅಕ್ರಮ ಸಂಬಂಧಗಳು. ನಮ್ಮ ದೇಶದ ಕಾನೂನೇ ಆಗಲಿ ಅಥವಾ ಧಾರ್ಮಿಕ ನಂಬಿಕೆಗಳೇ ಆಗಲಿ ಇಂತಹ ಒಂದು ವಿಚಾರವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.

ಯಾಕೆಂದರೆ ಮದುವೆ ಆದ ಬಳಿಕ ಗಂಡ ಹಾಗೂ ಹೆಂಡತಿ ನಡುವೆ ಮತ್ತೊಬ್ಬರು ಬಂದರೆ ಅದು ಅಪರಾಧವೇ ಸರಿ. ಹಾಗಾಗಿ ಯಾರೂ ಇಂತಹ ಒಂದು ಸಂಬಂಧವನ್ನು ಪೋಷಿಸಿ ಗೌರವಿಸುವುದಿಲ್ಲ. ಮೊದಲಿಗೆ ಈ ರೀತಿ ಅಕ್ರಮ ಸಂಬಂಧಗಳು ಆಗುವುದಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳಬೇಕು ಪತಿ ಅಥವಾ ಪತ್ನಿಯಲ್ಲಿ ಲೋಪಗಳಿದ್ದಾಗ ಮಾತ್ರ ಅವರು ಭಾವನಾತ್ಮಕ ಆಸರೆಗಳಿಗಾಗಿ ಅಥವಾ ದೈಹಿಕ ಬಯಕೆಗಳಿಗಾಗಿ ಮತ್ತೊಬ್ಬರ ಸಾಂಗತ್ಯ ಬಯಸುತ್ತಾರೆ.

ಹಾಗಾಗಿ ಪತಿಯಾಗಲಿ ಪತ್ನಿ ಆಗಲಿ ಇದಕ್ಕೆ ಆಸ್ಪದ ಕೊಡದೆ ಪರಸ್ಪರ ಒಬ್ಬರಿಗೊಬ್ಬರು ಸಮಯ ಕೊಟ್ಟಾಗ ಇದು ಬಗೆಹರಿಯುತ್ತದೆ. ಒಂದು ವೇಳೆ ಪತಿ ಅಥವಾ ಪತ್ನಿಗೆ ಅಕ್ರಮ ಸಂಬಂಧ ಇದೆ ಎನ್ನುವ ಕಾರಣಕ್ಕೆ ಮತ್ತೊಬ್ಬರು ಸಹ ಅದೇ ರೀತಿ ತಪ್ಪು ಮಾಡುತ್ತೇವೆ ಎಂದು ನಿರ್ಧಾರ ಮಾಡಿದರೆ ಇದಕ್ಕೆ ಅರ್ಥವೇ ಇರುವುದಿಲ್ಲ ಹಾಗೂ ಆ ಬದುಕು ಬೀದಿಗೆ ಬರುವುದರಲ್ಲಿ ಅನುಮಾನವಿಲ್ಲ.

ಒಂದು ವೇಳೆ ನಿಮ್ಮ ಪತಿ ಅಥವಾ ಪತ್ನಿಯ ಇಂತಹ ನಡವಳಿಕೆ ಕಂಡು ಬಂದಾಗ ಒಬ್ಬರಿಗೊಬ್ಬರು ಮುಕ್ತವಾಗಿ ಮಾತನಾಡಿ ಆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಒಂದು ವೇಳೆ ಇಬ್ಬರಲ್ಲೂ ಸಹ ಒಬ್ಬರಿಗೊಬ್ಬರು ಆಸಕ್ತಿ ಇಲ್ಲ ದೂರ ಆಗುವುದೇ ಒಳ್ಳೆಯದು ಎನಿಸಿದರೆ ಅದಕ್ಕೂ ಅವಕಾಶಗಳಿವೆ, ಅದು ಅಪರಾಧ ಕೂಡ ಅಲ್ಲ. ಆದರೆ ಒಬ್ಬರ ಜೊತೆ ಬದುಕು ಹಂಚಿಕೊಂಡು ಮತ್ತೊಬ್ಬರನ್ನು ಸಹ ಬಯಸುವುದು ದ್ರೋಹ ಎನಿಸಿಕೊಳ್ಳುತ್ತದೆ.

ಇಂತಹ ವಿವಾಹೇತರ ಸಂಬಂಧಗಳಿಂದ ಅನುಮಾನಗಳು ಹೆಚ್ಚುತ್ತದೆ. ಕೆಲವೊಮ್ಮೆ ಅದು ಅಕ್ರಮ ಸಂಬಂಧ ಇಲ್ಲದೆ ಇದ್ದಾಗಲೂ ಅಂತಹ ಅನುಮಾನಗಳು ಮೂಡುತ್ತದೆ. ಎಲ್ಲಾ ಸಂಬಂಧಗಳನ್ನು ಅಕ್ರಮ ಸಂಬಂಧ ಎಂದು ಹೋಲಿಸಲು ತಪ್ಪು. ಕೂಲಂಕುಶವಾಗಿ ಅದರ ಬಗ್ಗೆ ತಿಳಿದುಕೊಂಡು ವರ್ತಿಸುವುದು ಒಳ್ಳೆಯದು. ಕೆಲವೊಮ್ಮೆ ಸಮಾನ ಆಸಕ್ತಿಗಳಿದ್ದಾಗ ಅಥವಾ ಕೆಲಸದ ವಿಚಾರದಲ್ಲಿ ಪತಿ ಅಥವಾ ಪತ್ನಿಗಿಂತ ಬೇರೆಯವರ ಜೊತೆ ಹೆಚ್ಚು ಸಮಯ ಕಳೆಯುವ ಅನಿವಾರ್ಯತೆ ಉಂಟಾಗಬಹುದು.

ಆದರೆ ಅಷ್ಟೆಂದ ಮಾತ್ರಕ್ಕೆ ಅದು ಅಕ್ರಮವಾಗುವುದಿಲ್ಲ. ಇದರ ಕುರಿತು ಮತ್ತೊಬ್ಬರ ಸಂಗಾತಿಗೆ ಯಾವುದೇ ತೊಂದರೆ ಇಲ್ಲ ಎಂದಾಗ ಆ ಕುಟುಂಬಕ್ಕೆ ಏನು ಸಮಸ್ಯೆ ಇಲ್ಲ ಎಂದಾಗ ಯಾರಿಗೂ ಅದರ ಬಗ್ಗೆ ಆಕ್ಷೇಪವಿರುವುದಿಲ್ಲ. ಅದನ್ನು ಬಿಟ್ಟು ಸುಮ್ಮನೆ ಅನುಮಾನ ಪಟ್ಟು ಅವರಿಗೆ ಗೊತ್ತಿಲ್ಲದಂತೆ ಅವರನ್ನು ಪರೀಕ್ಷಿಸಿದರೆ ಆ ಸಂಬಂಧದಲ್ಲಿ ಇರುವುದಕ್ಕಿಂತ ಬಿಟ್ಟು ಬದುಕುವುದೇ ಒಳ್ಳೆಯದು ಎನ್ನುವ ಆಲೋಚನೆ ಬರಬಹುದು. ಈ ವಿಷಯದ ಬಗ್ಗೆ ಕರ್ನಾಟಕದ ಉಚ್ಚ ನ್ಯಾಯಾಲಯದ ಹಿರಿಯ ವಕೀಲೆ ಎಸ್ ಸುಶೀಲ್ ಅವರ ಸಲಹೆಗಳನ್ನು ಕೇಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

%d bloggers like this: