ರೈತರಿಗೆ ಸಿಹಿಸುದ್ದಿ ಈ ಕೂಡಲೇ ಅರ್ಜಿ ಸಲ್ಲಿಸಿ ಉಚಿತವಾಗಿ ನಿಮ್ಮ ಜಮೀನಿನಲ್ಲಿ ಬೋರ್ವೆಲ್ ಹಾಕಿಸಿಕೊಳ್ಳಿ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ & ಕೊನೆಯ ದಿನಾಂಕ ನೋಡಿ.

ಸರ್ಕಾರವು (government) ರೈತರಿಗೆ (Farmer) ಅನುಕೂಲವಾಗುವಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ಹಲವು ರೀತಿಯಲ್ಲಿ ರೈತರಿಗೆ ಉಪಯೋಗ ಆಗಲು ಸಹಾಯ ಮಾಡುತ್ತಿದೆ. ಇಂತಹ ಯೋಜನೆಗಳಲ್ಲಿ ಗಂಗಾ ಕಲ್ಯಾಣ ಯೋಜನೆ ಕೂಡ ಒಂದು. ಮತ್ತೊಮ್ಮೆ ಸರ್ಕಾರ ಗಂಗಾ ಕಲ್ಯಾಣ ಯೋಜನೆ (Ganga kalyana yojane) ಅಡಿ ರೈತರಿಗೆ ಬೋರ್ವೆಲ್ ಕೊರೆಸಲು ಸಹಾಯ ಮಾಡುವ ನಿಟ್ಟಿನಲ್ಲಿ ಅರ್ಜಿ ಕರೆದಿದೆ.

ಇದರಲ್ಲಿ ಆಯ್ಕೆ ಆದ ಅರ್ಹ ರೈತರಿಗೆ ಸಬ್ಸಿಡಿ ಅಥವಾ ಉಚಿತವಾಗಿ ಬೋರ್ವೆಲ್ ಕೊರೆಸಿ ಕೊಡಲಾಗುವುದು, ಇದರ ಕುರಿತ ಮಾಹಿತಿ ಹೀಗಿದೆ. ಹಿಂದುಳಿದ ವರ್ಗಗಳ ಪ್ರವರ್ಗ ಮಡಿವಾಳ ಮತ್ತು ಇದರ ಉಪಜಾತಿಗಳ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಕಲ್ಪಿಸಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಯೋಜನೆಯ ಫಲಾನುಭವಿಗಳಾಗಲು ಇದಕ್ಕಿರಬೇಕಾದ ಅರ್ಹತೆಗಳು ಈ ರೀತಿ ಇವೆ. ಕರ್ನಾಟಕ ರಾಜ್ಯ ಮಡಿವಾಳ ಮಾಹಿತಿ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಒಳಪಡುವ ಮಡಿವಾಳ ಮತ್ತು ಇದರ ಉಪಜಾತಿಗೆ ಸೇರಿದ ರೈತರಾಗಿರಬೇಕು. ಇವರು ಹೊಂದಿರುವ ಜಮೀನು ಒಂದೇ ಕಡೆಗೆ ಹೊಂದಿಕೊಂಡಂತೆ ಕನಿಷ್ಠ ಎರಡು ಎಕರೆಗಳು ಆದರೂ ಇರಬೇಕು ಮುಖ್ಯವಾಗಿ ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.

ಇವರು ಅರ್ಜಿ ಸಲ್ಲಿಸುವಾಗ ಸಲ್ಲಿಸುವ ದಾಖಲೆ ಪತ್ರದ ಜಮೀನು, ಕುಷ್ಕಿಯಾಗಿದ್ದು ಯಾವುದೇ ಮೂಲದಿಂದ ಕೂಡ ಅದಕ್ಕೆ ನೀರಾವರಿ ಸೌಲಭ್ಯ ಇರಬಾರದು. ಇನ್ನು ರೈತರ ವಾರ್ಷಿಕ ಆದಾಯವು ಹಳ್ಳಿಗಾಡಿನ ರೈತರಿಗೆ 98,000 ಮತ್ತು ನಗರ ಪ್ರದೇಶದ ರೈತರಿಗೆ 12000 ರೂ ಮೀರಿರಬಾರದು. ಈ ಅರ್ಹತೆಗಳು ಇರುವ ರೈತರಿಗೆ ಈ ಗಂಗಾ ಕಲ್ಯಾಣ ಯೋಜನೆಯ ಪ್ರಯೋಜನ ಸಿಗಲಿದೆ.

ವೈಯಕ್ತಿಕ ಕೊಳವೆ ಬಾವಿ ಯೋಜನೆಯ ವೆಚ್ಚ ಎರಡುವರೆ ಲಕ್ಷ ರೂಪಾಯಿ ಈ ವೆಚ್ಚದ 2 ಲಕ್ಷ ರೂಪಾಯಿಗಳನ್ನು ಸಹಾಯಧನವಾಗಿ ಮತ್ತು ಇನ್ನುಳಿದ 50000 ಮೊತ್ತಕ್ಕೆ ನಿಗಮದ ಕಡೆಯಿಂದ ಶೇಕಡ ನಾಲ್ಕರಷ್ಟು ಬಡ್ಡಿಗೆ ಸಾಲ ಸೌಲಭ್ಯ ಸಿಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ರೈತರಿಗೆ ವೈಯುಕ್ತಿಕ ಕೊಳವೆಬಾವಿ ಘಟಕ ವೆಚ್ಚ

4 ಲಕ್ಷ ರೂಪಾಯಿಗಳು ಇದರಲ್ಲಿ ಮೂರುವರೆ ಲಕ್ಷ ರೂಪಾಯಿಗಳು ಇದನ್ನು ಮತ್ತು ಐವತ್ತು ಸಾವಿರ ರೂಗಳು ನಿಗಮದ ಕಡೆಯಿಂದ ಶೇಖಡ ನಾಲ್ಕರಲ್ಲಿ ಬಡ್ಡಿಗೆ ಸಾಲವಾಗಿ ಸಿಗಲಿದೆ. ಮುಖ್ಯವಾಗಿ ಈ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಾಗಲು ಬಯಸುವ ರೈತರುಗಳು ಕೆಲ ಅಗತ್ಯ ದಾಖಲಾತಿಗಳನ್ನು ಕೂಡ ತಪ್ಪದೆ ನೀಡಬೇಕು.

ಆಧಾರ್ ಕಾರ್ಡ್ ಮತ್ತು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಎರಡರಲ್ಲೂ ಸಹ ಹೆಸರು ಹೊಂದಾಣಿಕೆ ಆಗಬೇಕು. ಇದರೊಂದಿಗೆ ಪಾಸ್ಪೋರ್ಟ್ ಸೈಜ್ ಫೋಟೋ ಹೊಂದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಭೂಹಿಡುವಳಿ ಪತ್ರ ರೇಷನ್ ಕಾರ್ಡ್ ಜೆರಾಕ್ಸ್ ಮತ್ತು ವಾಸಸ್ಥಳ ಪ್ರಮಾಣ ಪತ್ರ ಹಾಗೂ ಜಮೀನಿನ ಪಹಣಿ ಮೂಲ ಪ್ರಮಾಣ ಪತ್ರಗಳನ್ನು ದಾಖಲಾತಿಗಳಾಗಿ ಕೊಡಬೇಕು.

ಈ ಎಲ್ಲದರಲ್ಲೂ ಆಧಾರ್ ಕಾರ್ಡ್ ಅಲ್ಲಿ ಇರುವಂತೆ ಹೆಸರು ಹೊಂದಾಣಿಕೆ ಆಗಬೇಕು. ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ಕರ್ನಾಟಕ ಸೇವಾ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಫೆಬ್ರವರಿ2023 ರಿಂದ ಅರ್ಜಿ ಆಹ್ವಾನ ಆರಂಭವಾಗಿದ್ದು ಮಾರ್ಚ್ 3, 2023 ಕ್ಕೆ ಮುಗಿಯಲಿದೆ. ಇಂತಹ ಉಪಯುಕ್ತ ಮಾಹಿತಿಯನ್ನು ತಪ್ಪದೇ ಇತರರ ಜೊತೆಗೆ ಹಂಚಿಕೊಳ್ಳಿ.

Leave a Comment

%d bloggers like this: