ಕೆಲವರ ದೇಹ ಗಂಡಾಗಿದ್ದರು ಮಾನಸಿಕವಾಗಿ ಮತ್ತು ಹಾರ್ಮೋನ್ ಗಳ ವ್ಯತ್ಯಾಸದಿಂದ ಹೆಣ್ಣಾಗಿರುವುದನ್ನು, ಹಾಗೆಯೇ ದೇಹ ಹೆಣ್ಣಾಗಿದ್ದರು ಭಾವನೆಯಿಂದ ಗಂಡಾಗಿದ್ದು, ನಿತ್ಯ ತಮ್ಮಲ್ಲಿ ಸೆಣಸಾಡುವಂತಹ ಹಲವರನ್ನು ನಾವು ನೋಡುತ್ತಲೇ ಇರುತ್ತೀವಿ.ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಲಿಂಗ ಪರಿವರ್ತನೆ ಎನ್ನುವ ಸರ್ಜರಿಯನ್ನು ಮಾಡಿಸಿಕೊಳ್ಳುವುದು ಎಲ್ಲರಿಂದಲೂ ಕೂಡ ಸಾಧ್ಯವಾಗುವುದಿಲ್ಲ.
ಆದರೆ ಪರಮೇಶ್ವರ್ ಅವರ ಮಗನಾದಂತಹ ಶಶಾಂಕ್ ಧಿಟ್ಟ ನಿರ್ಧಾರ ವನ್ನು ಮಾಡಿ ಲಿಂಗ ಪರಿವರ್ತನೆ ಸರ್ಜರಿಯನ್ನು ಮಾಡಿಸಿಕೊಂಡು, ಶಾನ್ ಆಗಿ ಬದಲಾಗಿದ್ದಾರೆ.ಡಾ ಜಿ ಪರಮೇಶ್ವರ್ ಇವರು ಯಾರು ಎನ್ನುವುದು ನಿಮಗೀಗಾಗಲೇ ಚೆನ್ನಾಗಿ ಗೊತ್ತಿರಬಹುದು.ಇವರು ಒಂದು ಕಾಲದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿಯಾಗಿದ್ದವರು,ಹಾಗೂ ಕಾಂಗ್ರೆಸ್ ನಾಯಕರು ಕೂಡ ಆಗಿದ್ದವರು ಇವರಿಗೆ ಒಬ್ಬ ಮಗ ಇದ್ದ.
ಆದರೆ ಈಗ ಅವರು ಮಗನಾಗಿ ಇಲ್ಲ ಬದಲಿಗೆ ಮಗಳಾಗಿ ಬದಲಾಗಿದ್ದಾರೆ!ಹೌದು,ಪರಮೇಶ್ವರ್ ಅವರ ಮಗ ಲಿಂಗ ಪರಿವರ್ತನೆ ಸರ್ಜರಿಯನ್ನು ಮಾಡಿಸಿಕೊಂಡು ಮಗಳಾಗಿ ಬದಲಾಗಿದ್ದಾರೆ ಎನ್ನುವ ವಿಚಾರ ನಿಮಗೀಗಾಗಲೇ ಗೊತ್ತಿರಬಹುದು. ಈ ಮಗಳು ಸಾಮಾನ್ಯ ಮಗಳಲ್ಲ, ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಹಾಗಾದರೆ ಈ ದಿನ ಡಾಕ್ಟರ್ ಜಿ ಪರಮೇಶ್ವರ್ ಅವರ ಮಗಳ ಬಗ್ಗೆ ಕುರಿತು ಅವರು ತಮ್ಮ ಜೀವನದಲ್ಲಿ ಯಾಕೆ ಈ ರೀತಿಯಾದಂತಹ ನಿರ್ಧಾರವನ್ನು ತೆಗೆದುಕೊಂಡರು.
ಹಾಗೂ ಇವರು ಹೆಣ್ಣಾಗುವುದರ ಮೂಲಕ ಯಾವುದೆಲ್ಲ ಸಾಧನೆಯನ್ನು ಮಾಡಿದ್ದಾರೆ ? ಇವರ ಉದ್ದೇಶವಾದರೆ ಏನಾಗಿತ್ತು? ಹೀಗೆ ಇವರಿಗೆ ಸಂಬಂಧಪಟ್ಟ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ. ಪರಮೇಶ್ವರ್ ಅವರ ಮಗ ಶಶಾಂಕ್ ಹುಟ್ಟಿದ್ದು ಬೆಂಗಳೂರಿನಲ್ಲಿ ಆದರೆ ಬೆಳೆದಿದ್ದು ಓದಿದ್ದು ಎಲ್ಲಾ ವಿದೇಶದಲ್ಲಿ, ಅವರು ಮಲೇಶಿಯಾದಲ್ಲಿ ವ್ಯಾಸಂಗ ಮಾಡುವಾಗ ತಮ್ಮ ಲಿಂಗ ಪರಿವರ್ತನೆ ಮಾಡಿಸಿಕೊಳ್ಳುವುದರ ಮೂಲಕ ಒಂದು ಸರ್ಜರಿಯನ್ನು ಮಾಡಿಸಿಕೊಳ್ಳುತ್ತಾರೆ.
ಈ ರೀತಿ ಹುಡುಗಿಯಾಗಿ ಬದಲಾದ ಅವರು ಶಾನ ಪರಮೇಶ್ವರ್ ಎಂದು ಹೆಸರನ್ನು ಕೂಡ ಬದಲಾಯಿಸಿಕೊಳ್ಳುತ್ತಾರೆ. ಈ ವಿಷಯ ಆಗ ಸ್ವಲ್ಪ ತಡವಾಗಿ ಬೆಳಕಿಗೆ ಬಂತು.! ಆದರೆ 6 ತಿಂಗಳ ನಂತರ ಶಾನ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಫೋಟೋವನ್ನು ಶೇರ್ ಮಾಡಿದ್ದರು. ಆದರೆ ಆಗ ಅವರಿಗೆ ಎಲ್ಲಿಲ್ಲದ ಮೆಚ್ಚುಗೆ ಮತ್ತು ಬೆಂಬಲ ವ್ಯಕ್ತವಾಯಿತು ಶಾನ ಪರಮೇಶ್ವರ್ ಅವರು ಸಮಾಜ ನನಗೆ ಏನು ಹೇಳುತ್ತದೆ ಎನ್ನುವುದನ್ನು ಕೂಡ ಯೋಚನೆ ಮಾಡದೆ ಅವರಿಗೆ ಅವರೆ ಒಂದು ದೃಢ ನಿರ್ಧಾರವನ್ನು ತೆಗೆದುಕೊಂಡರು.
ನಿಜಕ್ಕೂ ಅವರು ಮಾಡಿರುವ ಕೆಲಸದಲ್ಲಿ ಯಾವುದೇ ತಪ್ಪು ಕೂಡ ಇಲ್ಲ ಅಂಥವರಿಗೆ ಸಮಾಜ ಗೌರವವನ್ನು ಕೊಡಬೇಕೆ ಹೊರತು ಕಾಲೆಳೆದು ಮನಸ್ಸು ನೋಯಿಸುವ ಕೆಲಸ ಮಾಡಬಾರದು. ಇನ್ನು ಇವರು ತಮ್ಮ ಜೀವನದಲ್ಲಿ ಮಾಡಿರುವ ಸಾಧನೆ ಏನು ಎಂದು ನೋಡುವುದಾದರೆ, ಈಗಾಗಲೇ ನಿಮಗೆ ಮೊದಲೇ ಹೇಳಿದಂತೆ ಇವರು ತಮ್ಮ ವಿದ್ಯಾಭ್ಯಾಸವನ್ನು ಮಲೇಶಿಯಾದಲ್ಲಿ ಮುಗಿಸಿದ್ದರು ಆದರೆ ಅವರಿಗೆ ವಿಮಾನ ಓಡಿಸುವ ಅಂದರೆ ಪೈಲೆಟ್ ಆಗುವ ಆಸೆ ಇತ್ತು.
ಇದೇ ಕಾರಣಕ್ಕೆ ಅವರು ನ್ಯೂಜಿಲ್ಯಾಂಡ್ ಗೆ ಹೋಗುತ್ತಾರೆ, ಅಲ್ಲಿ ಇವರು ಅದಕ್ಕೆ ಬೇಕಾದ ಎಲ್ಲಾ ಕೋರ್ಸ್ ಗಳನ್ನು ಕೂಡ ಕಂಪ್ಲೀಟ್ ಮಾಡುತ್ತಾರೆ .ಇದಲ್ಲದೆ ಶಾನ ಅವರಿಗೆ ಚಿಕ್ಕ ವಯಸ್ಸಿನಿಂದಲೂ ರೇಸ್ ಕಾರ್ ಗಳ ಕ್ರೇಜ್ ಇತ್ತು! ಇವರು ಈಗ ಪ್ರೊಫೆಷನಲ್ ರೇಸ್ ಕಾರ್ ಡ್ರೈವರ್ ಕೂಡ ಆಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.