ನೀರಾವರಿ ಇಲಾಖೆಯಲ್ಲಿ ಖಾಲಿ ಇರುವ ಕ್ಲರ್ಕ್ ಮತ್ತು ಮೀಟರ್ ರೀಡರ್ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಸರ್ಕಾರ ಹೊರಡಿಸಿರುವ ಈ ಪ್ರಕಟಣೆ ಪ್ರಕಾರ ನೀರಾವರಿ ಇಲಾಖೆಯಲ್ಲಿ ಖಾಲಿ ಇರುವ ಕ್ಲಾತ್ ಮತ್ತು ಮೀಟರ್ ರೀಡರ್ ಹುದ್ದೆಗಳ ಅರ್ಜಿ ಸಲ್ಲಿಸಲು ತಿಳಿದುಕೊಳ್ಳಬೇಕಾದ ಅಗತ್ಯ ಮಾಹಿತಿಗಳಾದ ಹುದ್ದೆಯ ವಿವರ, ವೇತನ ಶ್ರೇಣಿ, ಶೈಕ್ಷಣಿಕ ವಿದ್ಯಾರ್ಹತೆ, ವಯೋಮಾನ ನಿಗದಿ ಮತ್ತು ವಯೋಮಾನ ಸಡಿಲಿಕೆ, ಉದ್ಯೋಗ ಸ್ಥಳ.
ಅರ್ಜಿ ಶುಲ್ಕ ಅರ್ಜಿ ಸಲ್ಲಿಸಲು ಆರಂಭ ದಿನಾಂಕ ಮತ್ತು ಅಂತಿಮ ದಿನಾಂಕ ಅಭ್ಯರ್ಥಿಗಳ ಆಯ್ಕೆ ವಿಧಾನ ಮತ್ತು ಅರ್ಜಿ ಸಲ್ಲಿಸುವ ವಿಧಾನ ಇನ್ನು ಮುಂತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ತಪ್ಪದೇ ಈ ಲೇಖನವನ್ನು ಪೂರ್ತಿಯಾಗಿ ಓದಿ. ಈಗ ಹೊರಡಿಸಿರುವ ಅಧಿಸೂಚನೆ ಪ್ರಕಾರ ನೀರಾವರಿ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ 7300+. ಮೀಟರ್ ರೀಡರ್ ಮತ್ತು ಕ್ಲರ್ಕ್ ಗ್ರೇಡ್ ಟು ಹುದ್ದೆಗಳಿಗಾಗಿ ನೇಮಕಾತಿ ನಡೆಯುತ್ತಿದೆ.
ಜಲ ವಿಭಾಗ ಭಾರತ ಈ ಸಂಸ್ಥೆಯು ಮೇಲ್ಕಂಡ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಸುತ್ತದೆ. ಈ ನೇಮಕಾತಿಯಲ್ಲಿ ಅರ್ಹ ಆದ ಅಭ್ಯರ್ಥಿಗಳು ಭಾರತದಾದ್ಯಂತ ಯಾವುದೇ ಭಾಗದಲ್ಲಿ ಆದರೂ ಕೆಲಸ ಮಾಡಲು ತಯಾರಿರಬೇಕಾಗುತ್ತದೆ ಯಾವ ಸ್ಥಳಗಳಲ್ಲಿ ಈ ಹುದ್ದೆಗಳು ಭರ್ತಿ ಆಗಬೇಕಾಗಿದೆಯೋ ಆ ಸ್ಥಳಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ನೇಮಿಸಲಾಗುತ್ತದೆ. ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವರು ಕಡ್ಡಾಯವಾಗಿ ಭಾರತದಾದ್ಯಂತ ಮಾನ್ಯತೆ ಪಡೆದ ಯಾವುದೇ ಮಂಡಳಿಯಿಂದ 12 ತರಗತಿ ಅಂದರೆ ದ್ವಿತೀಯ ಪಿ.ಯು.ಸಿ ಅಥವಾ ತತ್ಸಮಾನ ಪರೀಕ್ಷೆಯನ್ನು ಉತ್ತೀರ್ಣ ಆಗಿರಬೇಕು.
ಎಲ್ಲ ಸರ್ಕಾರಿ ಹುದ್ದೆಗಳು ಕೂಡ ವಯ್ಯೋಮನೆ ನಿಗದಿ ಇರುತ್ತದೆ ಅದೇ ಪ್ರಕಲವಾಗಿ ಈ ಹುದ್ದೆಗಳಿಗೂ ಕೂಡ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಸರಿಯಾಗಿ 18 ವರ್ಷ ಪೂರ್ಣಗೊಳಿಸಬೇಕು ಮತ್ತು ಆ ದಿನಾಂಕಕ್ಕೆ ಸರಿಯಾಗಿ 40 ವರ್ಷ ಮೀರಿರಬಾರದು ಎಂದು ಸ್ಪಷ್ಟವಾಗಿ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೂ ಸಹ ವಯೋಮಾನ ಸಡಿಲಿಕೆ ಇದ್ದು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳು ಮತ್ತು ಎಸ್ಸಿ ಎಸ್ಟಿ ಅಭ್ಯರ್ಥಿಗಳು ಗಳಿಗೆ ಐದು ವರ್ಷಗಳ ವಯೋಮಾನ ಸಡಿಲಿಕೆ ನೀಡಲಾಗಿದೆ.
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕ ಪಾವತಿ ಮಾಡಬೇಕಾದ ಅಗತ್ಯ ಇಲ್ಲ, ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಮತ್ತೊಂದು ಪ್ರಮುಖ ವಿಚಾರ ಏನು ಎಂದರೆ ಈ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಪರೀಕ್ಷೆ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿಲ್ಲ, ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿದೆ.
ಅರ್ಜಿ ಸಲ್ಲಿಸಲು 15.03.2023 ಪ್ರಾರಂಭ ದಿನಾಂಕವಾಗಿದ್ದು, 18.04.2023 ಅಂತಿಮ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದ ಹಾಗೂ ಸ್ನೇಹಿತರ ಜೊತೆ ಹಂಚಿಕೊಂಡು ಸಹಾಯ ಮಾಡಿ. ನಿರುದ್ಯೋಗಿಗಳು ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಅಥವಾ ಈಗಾಗಲೇ ಹುದ್ದೆಯಲ್ಲಿದ್ದು ಅದನ್ನು ಬದಲಾಯಿಸುವ ಯೋಚನೆಯಲ್ಲಿರುವವರು ಈ ಸದುಪಯೋಗವನ್ನು ಬಳಸಿಕೊಂಡು ಭಾರತದ ಜಲ ವಿಭಾಗದ ಭಾಗವಾಗಿ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಳ್ಳಿ.