ದೇಶದ ಎಲ್ಲ ರೈತರಿಗೂ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರವು ರೈತರಿಗೆ ಹೊಸ ರೀತಿಯಾದ ರಸಗೊಬ್ಬರವನ್ನು ನೀಡಲು ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ 99%ರಷ್ಟು ಎಲ್ಲಾ ರೈತರು ರಸ ಗೊಬ್ಬರವನ್ನೇ ತಮ್ಮ ಬೆಳೆಗಳಿಗೆ ಹಾಕುತ್ತಿದ್ದಾರೆ. ಇದನ್ನು ಗಮನಿಸಿದ ಕೇಂದ್ರ ಸರ್ಕಾರ ರೈತರಿಗಾಗಿ ಹೊಸ ಗೊಬ್ಬರವನ್ನು ನೀಡಲು ಮಹತ್ವದ ಕ್ರಮಕ್ಕೆ ಮುಂದಾಗಿದೆ. ಇದು ಮೋದಿ ಸರ್ಕಾರದ ಮತ್ತೊಂದು ಮಹತ್ವದ ನಿರ್ಧಾರ.
ನ್ಯಾನೋ ಲಿಕ್ವಿಡಿಂಗ್ ಡಿಎಪಿ ತರಲು ಯೋಚಿಸಲಾಗಿದೆ. ದೇಶದ ಅತ್ಯಂತ ರಸಗೊಬ್ಬರಗಳ ಬಳಕೆ ಹೆಚ್ಚಾಗಿದೆ ಆದರೆ ಅಗತ್ಯ ಸಮಯಕ್ಕೆ ಅದರ ಪೂರೈಕೆ ಆಗುತ್ತೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಮನಗೊಂಡ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈ ರೀತಿಯಾಗಿ ಅದನ್ನು ಪರಿಹಾರ ಮಾಡಲು ಪ್ರಯತ್ನ ಮಾಡುತ್ತಿದೆ. ರೈತರು ರಸಗೊಬ್ಬರ ಚೀಲಗಳಿಗಾಗಿ ಸರತಿ ಸಾಲಿನಲ್ಲಿ ದಿನಗಟ್ಟಲೆ ನಿಲ್ಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಅದರಂತೆ ನ್ಯಾನೋ ಯೂರಿಯಾವನ್ನು 2021 ರಲ್ಲೇ ತರಲು ಕೇಂದ್ರ ಸರ್ಕಾರವು ಹರ ಸಾಹಸ ಪಟ್ಟಿತ್ತು. ಇಪ್ಕೋ ತಯಾರಿಸಿದ ನ್ನಾನೋ ಲಿಕ್ವಿಡ್ ಯೂರಿಯಾವನ್ನು ಮಾರುಕಟ್ಟೆಯಲ್ಲಿ ಪರಿಚಯಿಸಲು ಅನುಮೋದಿಸಿತ್ತು. ಅದರ ನಂತರ ಈ ನ್ಯಾನೋ ಯೂರಿಯಾವನ್ನು ಮಾರುಕಟ್ಟೆಗೆ ತರಲಾಯಿತು. ಇದರಿಂದ ಯೂರಿಯ ಚೀಲಗಳಿಗಾಗಿ ಸರತಿ ನಿಲ್ಲುವುದು, ಮುಂದೆ ಕಾಯುತ್ತಾ ಕೂರುವುದು ಇಂತಹ ಪರಿಸ್ಥಿತಿ ತಪ್ಪುವಂತೆ ಆಗಿದೆ. ಸದ್ಯಕ್ಕೆ ಮುಂಬರುವ ಮಳೆಗಾಲವನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರಗಳ ರಸಗೊಬ್ಬರಗಳ ಬಳಕೆಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಮುಂದಿನ ದಿನಗಳಲ್ಲಿಯೂ ನ್ಯಾನೋ ಲಿಕ್ವಿಡ್ ಡಿಎಪಿ ತರಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ವಿಷಯವನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನ್ ಸಕ್ ಮಾಂಡವೀಯ ಟ್ವೀಟ್ ಮಾಡಿದ್ದಾರೆ. ನ್ಯಾನೋ ಯೂರಿಯಾ ಬಂದ ನಂತರ ನ್ಯಾನೋ ಡಿಎಪಿಗೂ ಕೂಡ ಅನುಮೋದನೆ ಮಾಡಲಾಗಿದೆ ಎನ್ನುವ ವಿಷಯವನ್ನು ಟ್ವೀಟ್ ಅಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ದೇಶದ ಅಸಂಖ್ಯಾತ ರೈತರಿಗೆ ಬಹಳಷ್ಟು ಅನುಕೂಲ ಆಗಲಿದೆ ಎಂದು ಮಾಂಡವೀಯ ಅವರು ಹೇಳಿದ್ದಾರೆ.
ಒಂದು ಡಿಎಪಿ ಚೀಲದ ಬೆಲೆ 1350ರೂ ಆದರೆ ದ್ರವರೂಪದಲ್ಲಿ ಬರುತ್ತಿರುವ 500 ಎಂಎಲ್ ಡಿಎಪಿ ಅನ್ನು 600 ರೂಗೆ ನಿಗದಿಪಡಿಸಲಾಗಿದೆ. ಹಾಗೆಯೇ 500 ಎಂ ಎಲ್ ದ್ರವರೂಪದ ಡಿಎಪಿ ಒಂದು ಚೀಲ ಡಿಎಪಿ ಗೆ ಸಮವಾಗಿರಲಿದೆ ಎಂದು ಸಹ ಹೇಳಲಾಗುತ್ತಿದೆ. ನ್ಯಾನೋ ಯೂರಿಯ ತಯಾರಿಕರಾದ ಐಎಫ್ಎಫ್ಸಿಓ (IFFCO) ಈ ನ್ಯಾನೋ ಲಿಕ್ವಿಡ್ ಡಿಎಪಿಯನ್ನು ತಯಾರಿಸುತ್ತಿದೆ. ದೇಶದಲ್ಲಿ ಯೂರಿಯಾ ನಂತರ ಹೆಚ್ಚು ಬಳಕೆ ಆಗುವ ಗೊಬ್ಬರ ಡಿಎಪಿ ಆಗಿದೆ.
ಅಂದ ಹಾಗೆ ಸರ್ಕಾರ ನ್ಯಾನೋ ಯೂರಿಯಾಗೆ ಸಬ್ಸಿಡಿಯನ್ನು ನೀಡುತ್ತಿಲ್ಲ. ನಾನು ಲಿಕ್ವಿಡ್ ಯೂರಿಯ ಪ್ರತಿ ಬಾಟಲಿಗೆ 240 ರುಪಾಯಿ. ಅದೇ ಯೂರಿಯಾ ಚೀಲ 280 ರೂಪಾಯಿ. ಅಲ್ಲದೆ ಒಂದು ಬ್ಯಾಗ್ ಡಿಎಪಿ 1350ರೂ ಆಗಿದ್ದರೆ ಅದಕ್ಕೆ ಸಮನಾದ 500ml ಲಿಕ್ವಿಡ್ ಡಿಎಪಿ ಗು ಆನೂರು ರೂಪಾಯಿಗೆ ಸಿಗಲಿದೆ. ಸರ್ಕಾರ ಕೈಗೊಂಡಿರುವ ಈ ನಿರ್ಧಾರದಿಂದ ರೈತರಿಗೆ ಬಹಳ ಅನುಕೂಲವಾಗಲಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.