ಕರೆಂಟ್ ಬಿಲ್ ಸಿಕ್ಕಾಪಟ್ಟೆ ಜಾಸ್ತಿ ಬರುತ್ತಿದೆಯಾ, ಈ ಉಪಕರಣವನ್ನು ಅಳವಡಿಸಿ ಶೇಕಡ 50%ರಷ್ಟು ವಿದ್ಯುತ್ ವೆಚ್ಚ ಉಳಿಸಿ ಇತ್ತೀಚಿನ ದಿನಗಳಲ್ಲಿ ತಿಂಗಳು ಪೂರ್ತಿ ದುಡಿದು ತಂದ ಸಂಬಳವೆಲ್ಲಾ ತಿಂಗಳ ಖರ್ಚಿಗೆ ಸರಿ ಹೋಗುವುದೂ ಅನುಮಾ, ಅಷ್ಟರ ಮಟ್ಟಿಗೆ ದುಬಾರಿ ದುನಿಯಾ ನಮ್ಮನ್ನು ಆಳುತ್ತಿದೆ. ಈಗಾಗಲೇ ಗ್ಯಾಸ್, ಪೆಟ್ರೋಲ್ ರೇಟ್ ಜಾಸ್ತಿ ಆಗಿದೆ. ದಿನಸಿ ಪದಾರ್ಥಗಳ ಬೆಲೆ ಏರಿಕೆ ಆಗಿದೆ, ತರಕಾರಿ ಹಣ್ಣುಗಳ ಬೆಲೆಯಂತೂ ಗಗನ ಮುಟ್ಟಿದೆ. ಇದೆಲ್ಲದ ನಡುವೆ ವಿದ್ಯುತ್ ಬಿಲ್ ಕೂಡ ವಿಪರೀತವಾಗಿ ನಮ್ಮನ್ನು ಸುಸ್ತು ಮಾಡುತ್ತಿವೆ.
ಕಾರಣ ನಾವು ಇಂದು ಸಮಯ ಉಳಿಸಿಕೊಳ್ಳುವುದಕ್ಕೆ ಹಾಗೂ ಕೆಲಸವನ್ನು ಸುಲಭ ಮಾಡಿಕೊಳ್ಳುವುದಕ್ಕೆ ನಾನಾ ವಿದ್ಯುತ್ ಉಪಕರಣಗಳ ಸಹಾಯವನ್ನು ಪಡೆಯುತ್ತಿದ್ದೇವೆ. ಮನೆ ಪೂರ್ತಿ ಈಗ ಎಲೆಕ್ಟ್ರಿಕಲ್ ಸಾಧನೆಗಳೇ ತುಂಬಿಕೊಂಡಿವೆ ಎಂದರು ತಪ್ಪಾಗಲಾರದು. ಅಡುಗೆ ಮಾಡಲು ಉಪಯೋಗಿಸುವ ಎಲೆಕ್ಟ್ರಿಕಲ್ ಸ್ಟವ್ ಇಂದ ಹಿಡಿದು ಐರನ್ ಮಾಡಲು, ಮಿಕ್ಸರ್, ಸ್ನಾನಕ್ಕೆ ನೀರು ಕಾಯಿಸಲು, ವಾಷಿಂಗ್ ಮಿಷನ್, ಫ್ರಿಡ್ಜ ಮೊಬೈಲ್ ಚಾರ್ಜಿಂಗ್ ಈ ರೀತಿಯಾಗಿ ನಮ್ಮ ದಿನನಿತ್ಯ ಚಟುವಟಿಕೆಯ ಶೇಕಡ 95% ಕೆಲಸಗಳು ಇದರಿಂದಲೇ ನಡೆಯುತ್ತಿದೆ ಎನ್ನಬಹುದು.
ಆದರೆ ತಿಂಗಳ ಅಂತ್ಯ ಬಂದಾಗ ಮಾತ್ರ ವಿದ್ಯುತ್ ಗಾಗಿ ಖರ್ಚು ಮಾಡಬೇಕಾಗಿರುವ ವೆಚ್ಚಕ್ಕೆ ಯೋಚನೆ ಮಾಡುತ್ತಾ ಕೂರುವಂತೆ ವಿದ್ಯುತ್ ಬಿಲ್ ರಶೀತಿ ಅಲ್ಲಿ ತೋರುತ್ತಿರುತ್ತದೆ. ಆಗ ನಿಜಕ್ಕೂ ನಾವು ಇಷ್ಟೊಂದು ಎಲೆಕ್ಟ್ರಿಸಿಟಿ ಖರ್ಚು ಮಾಡುತ್ತಿದ್ದೇವಾ ಎನ್ನುವ ಅನುಮಾನವೂ ಹುಟ್ಟದೆ ಇರದು. ಇಂತಹ ಸಮಸ್ಯೆಯಲ್ಲಿ ನೀವು ಇದ್ದರೆ ನಿಮಗೂ ನಿಮ್ಮ ಕರೆಂಟ್ ಬಿಲ್ ಹೆಚ್ಚಾಗುತ್ತಿದೆ ಎನಿಸುತ್ತಿದ್ದರೆ ಅದಕ್ಕಾಗಿ ಹೆಚ್ಚು ಹಣ ಕಟ್ಟುತ್ತಿದ್ದೇವೆ ಎಂದು ಮನಸ್ಸು ಭಾರವಾಗುತ್ತಿದ್ದರೇ ಈಗಲೇ ಈ ಉಪಾಯವನ್ನು ಮಾಡಿ.
ಇದರಿಂದ ಇದ್ದಕ್ಕಿದ್ದಂತೆ ನಿಮ್ಮ ಮನೆ ಕರೆಂಟ್ ಬಿಲ್ ಅರ್ಧಕ್ಕೆ ಅದಷ್ಟು ಕಡಿಮೆ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಎಂಡಿ ಪ್ರೊ ಎಲೆಕ್ಟ್ರಾ ಪವರ್ ಸೇವರ್ ಎನ್ನುವ ಸಾಧನ ಒಂದು ಮಾರ್ಕೆಟ್ ಅಲ್ಲಿ ಬಂದಿದೆ. ಈ ಸಾಧನವನ್ನು ಅಳವಡಿಸುವುದರಿಂದ ನಿಮ್ಮ ಎಲೆಕ್ಟ್ರಿಕಲ್ ಬಿಲ್ ಅರ್ಧಕ್ಕೆ ಅರ್ಧದಷ್ಟು ಕಡಿಮೆ ಆಗುತ್ತದೆ. ಇದೊಂದು ಪವರ್ ಸೇವರ್ ಮಾಡುವ ಸಾಧನ ಎಂದು ಇದನ್ನು ತಯಾರಿಸಿರುವ ಕಂಪನಿ ಹೇಳಿಕೊಂಡಿದೆ.
ಈ ಸಾಧನವನ್ನು ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಿಂದ ಅಥವಾ ವೆಬ್ ಸೈಟ್ ಗಳಿಂದ ಕೂಡ ಖರೀದಿಸಬಹುದು. ಸಾಮಾನ್ಯವಾಗಿ ಇದರ ಬೆಲೆ ಸಾವಿರಕ್ಕಿಂತಲೂ ಕಡಿಮೆಯೇ ಇರುತ್ತದೆ ಒಮ್ಮೆ ಇಷ್ಟು ಹಣ ತೆತ್ತು ಖರೀದಿಸಿದರೆ ಪ್ರತಿ ತಿಂಗಳು ನೀವು ಸಾವಿರಕ್ಕಿಂತ ಹೆಚ್ಚಿಗೆ ಕರೆಂಟ್ ಬಿಲ್ ಕಟ್ಟುವ ತಾಪತ್ರಯ ತಪ್ಪುತ್ತದೆ. ಜೊತೆಗೆ ಕೆಲ ಈ ಕಾಮರ್ಸ್ ಆನ್ಲೈನ್ ಶಾಪಿಂಗ್ ಆಪ್ ಗಳಲ್ಲಿ ಆಕರ್ಷಣೀಯ ಆಫರ್ಗಳು ಸಹ ಇರುವುದರಿಂದ ಇನ್ನೂ ಕಡಿಮೆ ಬೆಲೆಗೆ ಇದನ್ನು ಖರೀದಿಸಬಹುದು.
ಇದನ್ನು ಅಳವಡಿಸಿಕೊಳ್ಳುವುದು ಕೂಡ ಬಹಳ ಸುಲಭ. ಈಗಾಗಲೇ ಇದನ್ನು ತಯಾರಿಸುವ ಕಂಪನಿ ಕೊಟ್ಟಿರುವ ಸೂಚನೆಗಳ ಪ್ರಕಾರ ನಿಮಗೆ ಸ್ವಲ್ಪ ಈ ಬಗ್ಗೆ ಅನುಭವ ಇದ್ದರೆ ನೀವೇ ಅಳವಡಿಸಿಕೊಳ್ಳಬಹುದು ಅಥವಾ ಎಲೆಕ್ಟ್ರಿಷಿಯನ್ ಗಳ ಸಹಾಯ ಪಡೆದು ಅಳವಡಿಸಬಹುದು. ಈ ಉಪಯುಕ್ತ ಮಾಹಿತಿಯನ್ನು ಬಳಸಿಕೊಂಡು ನಿಮ್ಮ ಮನೆಯ ವಿದ್ಯುತ್ ಶಕ್ತಿ ವೆಚ್ಚ ಕಡಿಮೆ ಆಗುವಂತೆ ಮಾಡಿಕೊಳ್ಳಿ ಜೊತೆಗೆ ಇದನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಜೊತೆಗೂ ಹಂಚಿಕೊಂಡು ಅವರಿಗೂ ಈ ಸಲಹೆ ನೀಡಿ.