ಜಮೀನುಗಳ ಸರ್ವೇ ನಂಬರ್ ಚೇಂಜ್‌ ಸ್ವಂತ ಜಮೀನು ಇದ್ದವರು ತಪ್ಪದೇ ನೋಡಿ.

ಸರ್ವೆ ನಂಬರ್ ಅಥವಾ ಭೂಮಿ ನಂಬರ್ ಎನ್ನುವುದು ಸ್ಥಳೀಯ ಪುರಸಭೆಯ ಪ್ರಾಧಿಕಾರದಿಂದ ಪ್ರತಿಯೊಂದು ಭೂಮಿಗೆ ಹಂಚಿಕೆಯಾದ ವಿಶಿಷ್ಟ ಐಡಿ ಯಾಗಿದೆ. ಉದಾಹರಣೆಗೆ, ಕರ್ನಾಟಕದಲ್ಲಿ ಭೂ ಸಮೀಕ್ಷೆ ಸಂಖ್ಯೆಗೆ ಸಂಬಂಧಿಸಿದ ಮಾಹಿತಿಯನ್ನು ಆನ್‌ಲೈನ್ ವಿವರಗಳನ್ನು ಸರ್ವೆ ನಂಬರ್ ಬಳಸಿ ಪಡೆಯಬಹುದಾಗಿದೆ.‌ ಭೂ ಸರ್ವೆ ನಂಬರ್ ಎಂದರೆ ಮೂಲತಃ ಒಂದು ತುಂಡು ಭೂಮಿಯನ್ನು ಗುರುತಿಸಲು ಬಳಸುವ ನಂಬರ್‌.

WhatsApp Group Join Now
Telegram Group Join Now

ವಿವಿಧ ಜಮೀನುಗಳ ದಾಖಲೆಗಳನ್ನು ಭೂಮಿಯ ಸರ್ವೆ ಸಂಖ್ಯೆಗಳ ಸಹಾಯದಿಂದ ನಿರ್ವಹಿಸಲಾಗುತ್ತದೆ. ಈ ಸರ್ವೆ ನಂಬರ್ ಗಳಿಗೆ ಸಂಬಂಧಿಸಿದಂತೆ ಒಂದು ಹೊಸ ನಿಯಮವನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರವು ಮುಂದಾಗಿದೆ. ಅದು ಯಾವ ನಿಯಮ ಮತ್ತು ಅದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಸಚಿವ ರಾಗಿರುವ ಆರ್ ಅಶೋಕ್ ರವರು ಇಡೀ ರಾಜ್ಯದಾದ್ಯಂತ ಕಂದಾಯ ವ್ಯವಸ್ಥೆಯಲ್ಲಿ ಒಂದು‌ದೊಡ್ಡ ಬದಲಾವಣೆಯನ್ನು ಮಾಡಲು ಯೋಜನೆ ನಡೆಸುತ್ತಿದ್ದಾರೆ. ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಜಮೀನುಗಳ ಸರ್ವೆ ನಂಬರ್ ನಲ್ಲಿ ದೊಡ್ಡ ಬದಲಾವಣೆಯನ್ನು ಮಾಡಲು ಮುಂದಾಗಿದ್ದು, ಸ್ವಂತ ಜಮೀನು ಹೊಂದಿರುವ ರೈತರು ತಿಳಿಯಬೇಕಾದ ಸಂಗತಿ ಇದು.

ಅದೇನೆಂದರೆ ಸರ್ಕಾರದ ಜಮೀನು, ಗೋಮಾಳದಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಪಿ ನಂಬರ್ ತೆಗೆದು ಅದೇ ಜಮೀನಿಗೆ ಹೊಸ ಸರ್ವೆ ನಂಬರ್ ಅನ್ನು ನೀಡುವಂತಹ ಪದ್ದತಿ ಆಗಿದೆ. ಈ ಪದ್ದತಿಯನ್ನು ಕರ್ನಾಟಕ ರಾಜ್ಯದಾದ್ಯಂತ ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ಕಂದಾಯ ಸಚಿವರು ಪತ್ರಿಕಾ ಗೋಷ್ಠಿ ಒಂದರಲ್ಲಿ ತಿಳಿಸಿದ್ದಾರೆ.

ವಿಧಾನ ಪರಿಷತ್ ನಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ ಅವರು ಹಲವಾರು ವರ್ಷಗಳಿಂದ ಸರ್ಕಾರದ ಗೋಮಾಳ ಜಮೀನುಗಳಲ್ಲಿ ರೈತರು ಕೃಷಿ ಮಾಡುತ್ತಾ ಇದ್ದು ಈ ಭೂಮಿಗಳನ್ನು ಆಧರಿಸಿ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಆಗುತ್ತಿಲ್ಲ. ಆದ್ದರಿಂದ ಈಗಾಗಲೆ ಕೋಲಾರ ಜಿಲ್ಲೆಯಲ್ಲಿ ಸರ್ಕಾರದ ಗೋಮಾಳ ಜಮೀನುಗಳಿಗೆ ಪಿ ನಂಬರ್ ತೆಗೆದು ಹೊಸ ಸರ್ವೆ ನಂಬರ್ ಗಳನ್ನು ಕೊಡುವ ಮೂಲಕ ಅಲ್ಲಿ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಹೀಗಾಗಿ ಇದೇ ರೀತಿ ರಾಜ್ಯದಾದ್ಯಂತ ಈ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ಆರ್ ಅಶೋಕ್ ಅವರು ಹೇಳಿದ್ದಾರೆ. ಗೋಮಾಳ ಅಥವಾ ಸರ್ಕಾರಿ ಜಮೀನಿನ ಪ್ರಮಾಣ ಇರುವುದಕ್ಕಿಂತ ಕಡಿಮೆ ಜಮೀನನ್ನು ರೈತರಿಗೆ ಕೊಟ್ಟಿದ್ದರೆ ಮಾತ್ರ ಪಿ ನಂಬರ್ ಕೊಡುವ ಚಿಂತನೆ ಇದೆ. ಕೆಲ ಕಡೆ ನಕಲಿ ದಾಖಲೆ ಸೃಷ್ಟಿಸಿರುವ ಪರಿಣಾಮ ಗೋಮಾಳ ಪ್ರದೇಶ ಇರುವ ವಿಸ್ತೀರ್ಣಕ್ಕಿಂತ ಹೆಚ್ಚು ಪ್ರದೇಶದ ಹಕ್ಕು ಕೇಳಿ ಅರ್ಜಿ ಸಲ್ಲಿಸಲಾಗುತ್ತಿದೆ.

ಇಂತಹ ಪ್ರದೇಶಗಳ ಕಡೆ ಪಿ ನಂಬರ್ ಕೊಡುವುದು ಕಷ್ಟ ವಾಗಿದೆ. ಆದ್ದರಿಂದ ಸರ್ವೆ ನಂಬರ್ ಕೊಡುವ ಕಾರ್ಯ ಕೈಗೊಳ್ಳಲಾಗುವುದು. ಈ ಹೊಸ ನಿಯಮ ಜಾರಿಗೆ ತರಲು ಪ್ರತಿನಿಧಿಗಳ ಸಭೆ ಕರೆಯಲಾಗಿದೆ. ಈ ಸಮಸ್ಯೆ ಗೆ ಪರಿಹಾರ ಕಂಡು ಕೊಳ್ಳಲಾಗುವುದು ಎಂದು ಹೇಳಿದ್ದಾರೆ ಕಂದಾಯ ಸಚಿವರಾಗಿ ಇರುವ ಆರ್ ಅಶೋಕ್ ಅವರು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now