ಕರ್ನಾಟಕದ 5 ಜಿಲ್ಲೆಗಳಿಗೆ 5ನೇ ಹಂತದ ಬೆಳೆ ಹಾನಿ ಪರಿಹಾರದ ಹಣ ಬಿಡುಗಡೆ ಆಗಿದೆ. ನಿಮ್ಮ ಜಿಲ್ಲೆಗೂ ಕೂಡ ಹಣ ಜಮಾ ಆಗಿದೆಯೇ ಇಲ್ಲವೋ ತಿಳಿಯಲು ಈ ರೀತಿ ಚೆಕ್ ಮಾಡಿ.

 

WhatsApp Group Join Now
Telegram Group Join Now

ರಾಜ್ಯದ ರೈತರುಗಳಿಗೆ ಬೆಳೆ ಹಾನಿ ಬಗ್ಗೆ ಮತ್ತೊಂದು ಮಾಹಿತಿ ಹೊರಬಿದ್ದಿದೆ. ರಾಜ್ಯದಲ್ಲಿ ನಾಲ್ಕನೇ ಹಂತದಲ್ಲಿ ಕೆಲವು ಜಿಲ್ಲೆಗಳು ಪರಿಹಾರ ಪಡೆದಿವೆ. ಕಲ್ಬುರ್ಗಿ, ದಾವಣಗೆರೆ, ಧಾರವಾಡ ಮತ್ತು ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳ ರೈತರುಗಳು ಇದರ ಪರಿಹಾರ ಪಡೆದಿದ್ದಾರೆ. 2039 ಫಲಾನುಭವಿಗಳಿಗೆ 2.15 ಕೋಟಿ ರೂಪಾಯಿ ಬೆಳೆ ಹಾನಿ ಪರಿಹಾರ ಹಣ ರೈತರ ಖಾತೆಗೆ ಸೇರಿದೆ. ಈ ಬಗ್ಗೆ ಅಧಿಕೃತವಾಗಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೇ ಮಾಹಿತಿ ಕೂಡ ಕೊಟ್ಟಿದ್ದಾರೆ.

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಕೂಡ ಈ ರೀತಿ ರಾಜ್ಯದ ರೈತರ ಬೆಳೆಯಾದಾಗ ಪರಿಹಾರ ನೀಡಿದೆ. ಈಗ ರಾಜ್ಯ ಸರ್ಕಾರವು ಕೂಡ ಕೇಂದ್ರ ಸರ್ಕಾರ ನೀಡುತ್ತಿರುವ ಮಾದರಿಯಲ್ಲಿಯೇ ಬೆಳೆಹಾನಿ ಪರಿಹಾರ ಹಣವನ್ನು ನೀಡುತ್ತಿದೆ. ಒಣ ಬೇಸಾಯಕ್ಕೆ 13,500 ರೂ, ನೀರಾವರಿಗೆ ಬರೋಬ್ಬರಿ 25,000 ರೂ ಮತ್ತು ತೋಟಗಾರಿಕೆ ಬೆಳೆ ಹಾಳಾದಾಗ 28,000ಗಳನ್ನು ಪರಿಹಾರ ಧನವಾಗಿ ನೀಡುತ್ತಿದೆ. 5ನೇ ಹಂತದ ಬೆಳೆ ಪರಿಹಾರಕ್ಕೆ ಕೂಡ ಸಾಕಷ್ಟು ಮಂದಿ ರೈತರು ಮನವಿ ಸಲ್ಲಿಸಿದ್ದರು.

ರಾಜ್ಯ ಸರ್ಕಾರದ ನಿರ್ದೇಶನದಂತೆ ಹಲವು ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿನ ಪ್ರವಾಹ ಮತ್ತು ಅಕಾಲಿಕ ಮಳೆಗೆ ಬೆಳೆ ಹಾನಿಯಾಗಿ, ಆ ಸಂದರ್ಭದಲ್ಲಿ ಅತಿಯಾದ ಮಳೆಯಿಂದ ಬೆಳೆ ಕಳೆದುಕೊಂಡ ರೈತರ ಗಳಿಗೆ ಇತರ ಭೂಮಿ ಪರಿಹಾರ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ತಿಳಿಸಲಾಗಿತ್ತು. ಈ ಪೈಕಿ 5ನೇ ಹಂತದಲ್ಲಿ ನಮ್ಮ 2574 ರೈತರಿಗೆ ರಾಜ್ಯ ಸರ್ಕಾರದ ಕಡೆಯಿಂದ 2.23 ಕೋಟಿ ಇನ್ಪುಟ್ ಸಬ್ಸಿಡಿ ಹಣವನ್ನು ಜಮೆ ಮಾಡಲು ಅನುಮೋದಿಸಲಾಗಿದೆ.

ಸರ್ಕಾರದ ಈ ಸೂಚನೆಯಂತೆ ಅತಿ ಶೀಘ್ರದಲ್ಲಿ ಆಧಾರ್ ಕಾರ್ಡ್ ಲಿಂಕ್ ಹೊಂದಿರುವ ಎಲ್ಲಾ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗಲಿದೆ. ಇನ್ನುಳಿದ ರೈತರ ಖಾತೆಗಳಿಗೂ ಸಹ ಹಂತ ಹಂತವಾಗಿ ಈ ಹಣ ಜಮೆ ಆಗಲಿದೆ. ರೈತರ ಹಿತ ದೃಷ್ಟಿಯಿಂದಾಗಿ ಸರ್ಕಾರ ಇಂತಹದೊಂದು ಯೋಜನೆಯನ್ನು ಕೈಗೆತ್ತಿಕೊಂಡಿದೆ. ನೀವು ಸಹ ಈ ರೀತಿ ಐದನೇ ಹಂತದ ಬೆಳೆ ಪರಿಹಾರ ಹಣಕ್ಕಾಗಿ ಅರ್ಜಿ ಸಲ್ಲಿಸಿದ್ದರೆ, ನಿಮ್ಮ ಜಿಲ್ಲೆಗೂ ಕೂಡ ಹಣ ವರ್ಗಾವಣೆ ಆಗಿದೆಯಾ ಇದರ ಫಲಾನುಭವಿಗಳ ಲಿಸ್ಟ್ ನಲ್ಲಿ ನೀವು ಇದ್ದೀರಾ ಎನ್ನುವುದನ್ನು ನಿಮ್ಮ ಮೊಬೈಲ್ ಮೂಲಕವೇ ಚೆಕ್ ಮಾಡಿಕೊಳ್ಳಬಹುದಾಗಿದೆ.

ಮೊದಲನೇಯದಾಗಿ. parihara.karnataka.gov.in ಎಂಬ ಅಫಿಷಿಯಲ್ ವೆಬ್ ಸೈಟ್ ಗೆ ಭೇಟಿ ನೀಡಬೇಕು. ಓಪನ್ ಆದ ತಕ್ಷಣ ಸೇವೆಗಳಲ್ಲಿ ಪರಿಹಾರ ನಿಧಿ ಎನ್ನುವುದನ್ನು ಕ್ಲಿಕ್ ಮಾಡಬೇಕು. ಪರಿಹಾರ ನಿಧಿ ಸಂದಾಯ ವರದಿ ಎನ್ನುವ ಪೇಜ್ ಓಪನ್ ಆಗುತ್ತದೆ. ಪರಿಹಾರ ನಮೂದೆ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಎನ್ನುವ ಎರಡು ಆಪ್ಷನ್ ಇರುತ್ತದೆ, ಯಾವುದಾದರೂ ಒಂದರ ಮೇಲೆ ಕ್ಲಿಕ್ ಮಾಡಿ ಅದನ್ನು ಎಂಟರ್ ಮಾಡಿ ಯಾವ ವಿಧವಾದ ಬೆಳೆ ಪರಿಹಾರ ಆಗಿದೆ ಎನ್ನುವ ಆಪ್ಷನ್ ಅಲ್ಲಿ ಆಯ್ಕೆ ಮಾಡಬೇಕು.

ಯಾವ ವರ್ಷದಲ್ಲಿ ಬೆಳೆ ಹಾನಿಯಾಗಿದೆ ಎನ್ನುವುದನ್ನು ಸಹ ಆಯ್ಕೆ ಮಾಡಬೇಕು. ಕೊನೆಯಲ್ಲಿ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಎಂಟರ್ ಮಾಡಿ ಫೆಚ್ ಡಿಟೈಲ್ಸ್ ಎನ್ನುವಲ್ಲಿ ಕ್ಲಿಕ್ ಮಾಡಬೇಕು. ಪೇಮೆಂಟ್ ಡೀಟೇಲ್ಸ್ ಮತ್ತು ಕ್ರಾಪ್ ಡೀಟೇಲ್ಸ್ ಎನ್ನುವ ಆಪ್ಷನ್ ಬರುತ್ತದೆ ಅದರಲ್ಲಿ ಸೀರಿಯಲ್ ಸಂಖ್ಯೆ, ಡಿಸ್ಟ್ರಿಕ್, ಬ್ಯಾಂಕ್ ಖಾತೆ ವಿವರ ಮತ್ತು ಪೇಮೆಂಟ್ ಸ್ಟೇಟಸ್ ಅಲ್ಲಿ ಹಣ ಜಮಾ ಆಗಿದೆಯಾ ಇಲ್ಲವಾ ಎನ್ನುವ ವಿವರ ಇರುತ್ತದೆ ಯಾವ ಸೀಸನ್ ಅಲ್ಲಿ ಹಣ ಜಮೆ ಆಗಿದೆ ಎನ್ನುವ ಮಾಹಿತಿ ಕೂಡ ಇರುತ್ತದೆ ಅಲ್ಲಿ ನೋಡಬಹುದಾಗಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now