ಸ್ವಂತ ವಾಹನ ಇರುವ ಎಲ್ಲರೂ ಸಹ ನೋಡಲೇಬೇಕಾದ ಸುದ್ದಿ. ಸರ್ಕಾರದಿಂದ ಹೊಸ ರೂಲ್ಸ್ ಜಾರಿ, ರೂಲ್ಸ್ ತಪ್ಪಿದ್ರೆ ದಂಡ & ಶಿಕ್ಷೆ ಗ್ಯಾರಂಟಿ.

 

WhatsApp Group Join Now
Telegram Group Join Now

ಸರ್ಕಾರವು ಸದಾಕಾಲ ಒಂದಲ್ಲ ಒಂದು ಹೊಸ ನಿಯಮಗಳನ್ನು ಜಾರಿಗೆ ತರುವ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮಗೊಳಿಸುವ ಹಾಗೂ ಸುಧಾರಿಸುವ ಕೆಲಸವನ್ನು ಮಾಡುತ್ತಿದೆ. ಕೆಲವೊಮ್ಮೆ ಸಂಚಾರಿ ವಾಹನಗಳ ಮೇಲೂ ಈ ರೀತಿ ನಿಯಮಗಳನ್ನು ಹೇರಬೇಕಾಗುತ್ತದೆ. ಈಗಾಗಲೇ ಸಾಕಷ್ಟು ಸಂಚಾರಿ ನಿಯಮಗಳು ರಾಜ್ಯದಲ್ಲಿ ಇವೆ ಜೊತೆಗೆ ವಾಹನಗಳ ಕುರಿತು ಕೂಡ ಸಾಕಷ್ಟು ರೂಲ್ಸ್ ಮತ್ತು ರೆಗುಲೇಶನ್ ಗಳನ್ನು ಜಾರಿ ಮಾಡಲಾಗಿದೆ.

ಸದ್ಯಕ್ಕೆ ಈಗ ಹೊಸ ಬಗೆಯೊಂದನ್ನು ಸರ್ಕಾರ ವಾಹನಗಳ ಬಗ್ಗೆ ಬಿಡುಗಡೆ ಮಾಡಿದ್ದು ಅದನ್ನು ತಪ್ಪಿದಲ್ಲಿ ದೊಡ್ಡ ಮೊತ್ತದ ದಂಡ ಹಾಗೂ ಕ.ಠಿ.ಣ ಶಿ.ಕ್ಷೆಯನ್ನು ಜಾರಿ ಮಾಡುವುದಾಗಿ ತಿಳಿಸಿದೆ. ನೀವು ಸಹ ಸ್ವಂತ ವಾಹನಗಳನ್ನು ಹೊಂದಿ, ಆ ವಾಹನಗಳ ಮಾಲೀಕರಾಗಿದ್ದರೆ ತಪ್ಪದೆ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ. ಕೇಂದ್ರ ಮೋಟಾರು ವಾಹನಗಳ ಕಾಯ್ದೆ ಅಡಿಯಲ್ಲಿ ಕರ್ನಾಟಕ ರಾಜ್ಯ ಎಲ್ಲಾ ಸಾರಿಗೆ ವಾಹನಗಳಿಗೆ ರೆಟ್ರೋ ರಿಫ್ಲೆಕ್ಟಿಂಗ್ ಟಾಪ್ ಅಂಡ್ ರಿಯಲ್ ಮಾರ್ಕಿಂಗ್ ಪ್ಲೇಟ್ ಅಳವಡಿಕೆ ಮಾಡುವುದು ಕಡ್ಡಾಯ ಎಂದು ತಿಳಿಸಿದೆ.

ಕೇಂದ್ರ ಮೋಟಾರ್ ವಾಹನದ ನಿಯಮಗಳು 1989ರ ನಿಯಮ 104ರ ಅಡಿ ರಾಜ್ಯದ ಎಲ್ಲಾ ವಿವಿಧ ಸಾರಿಗೆ ವರ್ಗದ ವಾಹನಗಳಿಗೆ ಅರ್ಹತೆ ಪತ್ರ ಮತ್ತು ಪತ್ರ ನಿರ್ವಹಣಾ ಸಂದರ್ಭದಲ್ಲಿ ಇದನ್ನು ನಿಯಮ ಪಾಲಿಸಬೇಕು, ಆ ವೇಳೆಯಲ್ಲಿ ಈ ರೆಟ್ರೋ ರಿಫ್ಲೆಕ್ಟಿಂಗ್ ಮಾರ್ಕಿಂಗ್ ಪ್ಲೇಟ್ ಅನ್ನು ಅಳವಡಿಸಬೇಕು ಎಂದು ಆದೇಶ ನೀಡಿದೆ. ವಾಹನಗಳ ಅರ್ಹತಾ ಪತ್ರ ಮತ್ತು ಪತ್ರ ನವೀಕರಣ ಸಂದರ್ಭದಲ್ಲಿ ವೆಬ್ ಆಧಾರಿತ ಸಾಫ್ಟ್ವೇರ್ ಪರೀಕ್ಷಿಸಬೇಕು ಮತ್ತು ಹಿಂದಿನ ಆದೇಶದ ಮಾರ್ಗ ಸೂಚಿಯನ್ನು ಕೂಡ ತಪ್ಪದೇ ಪಾಲಿಸಬೇಕು.

ಈ ಬಗ್ಗೆ ಏನೇ ದೂರುಗಳು ಇದ್ದರೂ ಕೂಡ ನಿಯಮಗಳನ್ನು ತಪ್ಪದೆ ಕಡ್ಡಾಯವಾಗಿ ಪಾಲಿಸಬೇಕು ಎಂದು ಕಟ್ಟುನಿಟ್ಟಾದ ಆದೇಶ ನೀಡಿದೆ. ಸರ್ಕಾರ ಈ ನಿರ್ಧಾರ ಕೈಗೊಳ್ಳುವ ಹಿಂದೆ ಕೂಡ ಒಂದು ಬಲವಾದ ಕಾರಣವಿದೆ. ಅದೇನೆಂದರೆ ಇತ್ತೀಚೆಗೆ ಮೋಟಾರ್ ವಾಹನಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಕಂಪನಿಗಳು ಪರೀಕ್ಷೆಗೆ ಒಳಪಡಿಸಬೇಕಿದ್ದ ಸಂಸ್ಥೆಗಳಿಗೆ ವಾಹನಗಳನ್ನು ಪರೀಕ್ಷೆಗೆ ಒಳಪಡಿಸದೆ ರೆಟ್ರೋ ರಿಫ್ಲೆಕ್ಟಿಂಗ್ ಮಾರ್ಕಿಂಗ್ ಪ್ಲೇಟನ್ನು ತಾವೇ ಅಳವಡಿಸುತ್ತಿವೆ.

ಇದು ಸರ್ಕಾರದ ಗಮನಕ್ಕೂ ಬಂದಿರುವುದರಿಂದ ಇವುಗಳಿಗೆಲ್ಲ ಕಡಿವಾಣ ಹಾಕಲು ಇಂತಹದೊಂದು ಮಹತ್ತರವಾದ ನಿಯಮವನ್ನು ಜಾರಿ ಮಾಡಿದೆ. ಈ ನಿಯಮ ಜಾರಿ ಮಾಡುವ ಮೂಲಕ ಇನ್ನು ಮುಂದೆ ಇಂತಹ ಘಟನೆಗಳು ಆಗದಂತೆ ತಡೆಯುವ ಪ್ರಯತ್ನವನ್ನು ಮಾಡುತ್ತಿದೆ. ಈಗಾಗಲೇ ಸರ್ಕಾರ ನೀಡಿರುವ ಸೂಚನೆಯಂತೆ ರೆಟ್ರೋ ರಿಫ್ಲೆಕ್ಟ್ಟಿಂಗ್ ಟಾಪ್ ಅಂಡ್ ರಿಯರ್ ಮಾರ್ಕಿಂಗ್ ಪ್ಲೇಟ್ ಅಳವಡಿಸುವಾಗ ಅವುಗಳ ನೈಜತೆಯನ್ನು ಪರೀಕ್ಷಿಸಲು QR ಕೋಡ್ ನ ಅವಶ್ಯಕತೆ ಕೂಡ ಇದೆ.

ಹಾಗಾಗಿ ರೆಟ್ರೋ ರಿಫ್ಲೆಕ್ಟಿಂಗ್ ಮಾರ್ಕಿಂಗ್ ಪ್ಲೇಟ್ ಅಳವಡಿಕೆ ಮಾಡುವಾಗ QR ಕೋಡ್ ಕೂಡ ಅಳವಡಿಸುವುದನ್ನು ಕಡ್ಡಾಯ ಮಾಡಿದೆ. ಫೆಬ್ರವರಿ 27ರಿಂದಲೇ ನಿಯಮ ಜಾರಿಗೆ ಬರುವಂತೆ ಸೂಚಿಸಲಾಗಿದ್ದು. ಪ್ಲೇಟ್ ಮತ್ತು ಕ್ಯೂಆರ್ ಕೋಡ್ ಅಳವಡಿಕೆ ಬಗ್ಗೆ ಗಮನ ಹರಿಸಿ ನಂತರ ವಾಹನ ತಪಾಸಣೆ ಮಾಡಿ ಅರ್ಹತಾ ಪತ್ರ ನೀಡಬೇಕು ಎಂದು ಸರ್ಕಾರವು ಜಂಟಿ ಸಾರಿಗೆ ಆಯುಕ್ತರ ಮತ್ತು ಅಧೀನ ಹಿರಿಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶಿಸಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now