ಆಧಾರ್ ಸಂಖ್ಯೆಯು 12 ಅಂಕಿಗಳ ವಿಶಿಷ್ಟ ನಂಬರ್ ಆಗಿದ್ದು ಇದು ಭಾರತದಾದ್ಯಂತ ಪ್ರತಿಯೊಬ್ಬ ನಾಗರೀಕರು ಹೊಂದಿರಬೇಕು. ಆಧಾರ್ ಕಾರ್ಡ್ ಅನ್ನು ಇಂದು ಪ್ರತಿಯೊಂದು ಕೆಲಸಕ್ಕೂ ದಾಖಲೆಯಾಗಿ ನೀಡಬೇಕಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು, ಸಬ್ಸಿಡಿ ಪಡೆಯಲು, ಯಾವುದಾದರು ಹುದ್ದೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು, ಬ್ಯಾಂಕ್ ವ್ಯವಹಾರಗಳಿಗೆ ಕಡ್ಡಾಯವಾಗಿ ಬೇಕಾಗಿದ್ದು ಈ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಲಿಂಕ್ ಮಾಡಿರುವುದು ಸಹ ಬಹು ಮುಖ್ಯವಾಗಿದೆ.
ಕೆಲವು ವೇಳೆ ಮೊಬೈಲ್ ನಂಬರ್ ಬದಲಾಯಿಸಿದ್ದು ಆ ನಂಬರ್ ಅನ್ನು ಆಧಾರ್ ಕಾರ್ಡ್ ಗೆ ಅಪ್ಡೇಟ್ ಮಾಡಿಸುವುದು ಕಡ್ಡಾಯ ಆಗಿದೆ. ನೀವು ಏನಾದರೂ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಚೇಂಜ್ ಮಾಡಲು ಬಯಸಿದರೆ ಅಥವಾ ಮೊಬೈಲ್ ನಂಬರ್ ಅಪ್ಡೇಟ್ ಮಾಡಲು ಬಯಸಿದರೆ ಮನೆಯಲ್ಲಿಯೇ ಕುಳಿತು ಆನ್ ಲೈನ್ ನಲ್ಲಿ ಮೊಬೈಲ್ ಮೂಲಕ ಮಾಡಿಕೊಳ್ಳ ಬಹುದಾಗಿದೆ. ಅದು ಹೇಗೆ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಇಲ್ಲಿ ತಿಳಿಯೋಣ.
ಇಂಡಿಯನ್ ಪೋಸ್ಟ್ ಬ್ಯಾಂಕ್ ಪೇಮೆಂಟ್ ನವರು ಡೋರ್ ಸ್ಟೆಪ್ ಮೂಲಕ ಆಧಾರ್ ಅಪ್ಡೇಟ್ ಸರ್ವಿಸ್ ಅನ್ನು ಒದಗಿಸುತ್ತಿದ್ದಾರೆ. ಇವರು ಆಧಾರ್ ಅಪ್ಡೇಟ್ ಮಾಡುವ ಸಲುವಾಗಿ ಒಂದು ಅರ್ಜಿ ನಮುನೆಯನ್ನು ಸ್ಥಾಪಿಸಿದ್ದಾರೆ. ಈ ಅರ್ಜಿಯನ್ನು ಭರ್ತಿ ಮಾಡಿ ಅವರಿಗೆ ಸಲ್ಲಿಸುವ ಮೂಲಕ ಮನೆಯಲ್ಲಿಯೇ ಕುಳಿತು ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಅಪ್ಡೇಟ್ ಅಥವಾ ಲಿಂಕ್ ಮಾಡ ಬಹುದಾಗಿದೆ. ಮೊದಲಿಗೆ Service Request Form ಅನ್ನು ಭರ್ತಿ ಮಾಡಿ ಸಲ್ಲಿಸಿ ನಂತರ ಅವರೆ ನಿಮ್ಮ ಮನೆ ಬಾಗಿಲಿಗೆ ಬಂದು ಅದರ ಅಪ್ಡೇಟ್ ಮಾಡಿ ಕೊಡುತ್ತಾರೆ.
ಅದು ಹೇಗೆ ಎಂದರೆ, ಮೊದಲಿಗೆ ನೀವು Ippbonline.com ಎಂಬ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ Service Request ಅನ್ನು ಕ್ಲಿಕ್ ಮಾಡಿ ಅದರ ಕೆಳಗೆ Non ippb costumer ಎಂದು ಆಯ್ಕೆ ಮಾಡಿ ಅದರಲ್ಲಿ Door step banking ಅನ್ನು ಕ್ಲಿಕ್ ಮಾಡಿದಾಗ Service request form ಓಪನ್ ಆಗುತ್ತದೆ. ಅಲ್ಲಿ ಆಧಾರ್ ಅಪ್ಡೇಟ್ ಬಟನ್ ಅನ್ನು ಕ್ಲಿಕ್ ಮಾಡಿದಾಗ ಒಂದಷ್ಟು ಮಾಹಿತಿ ಕೇಳುತ್ತದೆ ಆ ಮಾಹಿತಿಗಳನ್ನು ಭರ್ತಿ ಮಾಡಿ Submit ಬಟನ್ ಕ್ಲಿಕ್ ಮಾಡಿ.
ನಂತರ ಅರ್ಜಿಯು ಯಶಸ್ವಿಯಾಗಿ ಸಲ್ಲಿಕೆಯಾಗಿ ಇರುತ್ತದೆ. ನಂತರ ಇಂಡಿಯಾ ಪೋಸ್ಟ್ ಬ್ಯಾಂಕ್ ಅವರು ನಿಮ್ಮ ಕೋರಿಕೆಯನ್ನು ತೆಗೆದುಕೊಂಡು ಒಂದು ವಾರದ ಒಳಗೆ ಅವರು ನೀವು ಕೊಟ್ಟಿರುವ ವಿಳಾಸಕ್ಕೆ ಬಂದು ಅಥವಾ ನೀವು ಸಲ್ಲಿಅರುವ ಮೊಬೈಲ್ ನಂಬರ್ ಗೆ ಕರೆ ಮಾಡಿ ನಿಮ್ಮ ಮನೆ ಬಾಗಿಲಿಗೆ ಬಂದು ಆಧಾರ್ ಅಪ್ಡೇಟ್ ಸೇವೆಯನ್ನು ಪೂರ್ಣವಾಗಿ ಮಾಡಿಕೊಡುತ್ತಾರೆ.
ಅಲ್ಲದೇ ನಿಮ್ಮ ಕೋರಿಕೆಯು ಇಂಡಿಯನ್ ಪೋಸ್ಟ್ ಬ್ಯಾಂಕ್ ಅವರಿಗೆ ಸರಿಯಾಗಿ ತಲುಪಿಲ್ಲದಿದ್ದರೆ ಅದರ ವೆಬ್ ಸೈಟ್ ಅಲ್ಲಿ ನೀಡಿರುವ ಮೊಬೈಲ್ ನಂಬರ್ ಗೆ ಕರೆ ಮಾಡಿ ಮಾತನಾಡಿ ಸರಿಪಡಿಸಿಕೊಳ್ಳಲು ಅವರಿಗೆ ತಿಳಿಸಬಹುದು ಹೀಗೆ ಮಾಡಿದರೂ ಸಹ ಅವರು ನಿಮ್ಮ ಮನೆ ಬಾಗಿಲಿಗೆ ಬಂದು ಆಧಾರ್ ಅಪ್ಡೇಟ್ ಮಾಡಿಕೊಡುತ್ತಾರೆ.