ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಇನ್ನು ಮುಂದೆ ರೇಷನ್ ಸಿಗುವುದಿಲ್ಲ.

 

WhatsApp Group Join Now
Telegram Group Join Now

ಪಡಿತರ ಚೀಟಿ ಹೊಂದಿರುವವರು ಸರ್ಕಾರದಿಂದ ಸಿಗುವ ಉಚಿತ ಪಡಿತರ ಪಡೆದುಕೊಂಡು ತಮ್ಮ ಜೀವನ ನಡೆಸುತ್ತಿದ್ದಾರೆ. ಈ ರೀತಿ ಬಡತನ ರೇಖೆಗಿಂತ ಕಡಿಮೆ ಇರುವವರಿಗೆ ಮೂಲ ಸೌಲಭ್ಯಗಳು ಅದರಲ್ಲೂ ಆಹಾರ ಧಾನ್ಯಗಳು ತಲುಪಬೇಕು ಎನ್ನುವುದು ಪಡಿತರ ಚೀಟಿಯ ಹಿಂದೆ ಇರುವ ಮುಖ್ಯ ಉದ್ದೇಶ. ಈಗಾಗಲೇ ರಾಜ್ಯದಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಹಾಗೂ ಎಪಿಎಲ್ ಎನ್ನುವ ಭಿನ್ನ ಮಾದರಿಯ ಕಾಡುಗಳಿದ್ದು ಅದರಲ್ಲಿರುವ ಸದಸ್ಯರುಗಳು ಕಾರ್ಡುಗಳಿಗೆ ಇರುವ ಅನುಕೂಲತೆಗಳನ್ನು ಪಡೆಯುತ್ತಿದ್ದಾರೆ.

ಜೊತೆಗೆ ರೇಷನ್ ಕಾರ್ಡ್ ಕುಟುಂಬದ ಆರ್ಥಿಕ ಸ್ಥಿತಿಯನ್ನು ತಿಳಿಸುವ ಒಂದು ಮಾನದಂಡ ಕೂಡ ಆಗಿದೆ ಎಂದು ಹೇಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಪಡಿತರಕ್ಕಾಗಿ ಇದ್ದ ಈ ಪಡಿತರ ಚೀಟಿಯ ಕುರಿತು ಹೊಸ ರೂಲ್ಸ್ ಒಂದನ್ನು ಸರ್ಕಾರ ಜಾರಿ ಮಾಡಿದೆ. ಅದನ್ನು ಪಾಲಿಸಿಲ್ಲ ಅಂದರೆ ನಿಮ್ಮ ಕಾರ್ಡ್ ರದ್ದಾಗಬಹುದು ರಾಜ್ಯ ಮಾಡಿರುವ ಹೊಸ ರೂಲ್ಸ್ ಏನೆಂದು ನೋಡುವುದಾದರೆ ರಾಜ್ಯ ಸರ್ಕಾರ ಈಗಾಗಲೇ ಪಡಿತರ ಚೀಟಿಯಲ್ಲಿ ಆಗಿರುವ ಸಾಕಷ್ಟು ಅವ್ಯವಹಾರಗಳ ಬಗ್ಗೆ ಗಮನ ಹರಿಸಿದೆ.

ಆ ಕಾರಣದಿಂದಾಗಿ ಈ ಬಾರಿ ಕಟ್ಟುನಿಟ್ಟಾಗಿ ಪಡಿತರ ಚೀಟಿಯ ದುರುಪಯೋಗ ಮಾಡಿಕೊಳ್ಳುತ್ತಿರುವಂತಹ ಸದಸ್ಯರನ್ನು ಆ ಪಟ್ಟಿಯಿಂದ ಕೈಬಿಡುವ ನಿರ್ಧಾರ ಮಾಡಿದೆ. ಹಾಗಾಗಿ ಅಂತಹವರ ಮೇಲೆ ಕಣ್ಣಿಟ್ಟಿರುವ ಸರ್ಕಾರವು ಕೆಲವೊಂದು ರೂಲ್ಸ್ ಗಳನ್ನು ಜಾರಿ ಮಾಡಿದೆ ಅದನ್ನು ಪಾಲಿಸದೆ ಇದ್ದಲ್ಲಿ ಆ ಕಾರ್ಡ್ಗಳನ್ನು ರದ್ದು ಮಾಡುತ್ತಿದೆ. ಆಧಾರ್ ಕಾರ್ಡ್ ಗೆ ಕೆವೈಸಿ ಮಾಡಬೇಕು ಎಂದು ಕಳೆದ ಎರಡು ವರ್ಷಗಳಿಂದಲೂ ಕೂಡ ಹೇಳಲಾಗುತ್ತಿದೆ. ಈ ಬಾರಿ ಅದನ್ನು ಕಡ್ಡಾಯ ಕೂಡ ಮಾಡಿದೆ.

ನೀವು ರೇಷನ್ ಕಾರ್ಡ್ ಹೊಂದಿದ್ದರೆ ಆ ಕಾರ್ಡ್ ಅಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಜೊತೆಗೆ ಹತ್ತಿರದಲ್ಲಿರುವ ಪಡಿತರ ಕೊಡುವ ಕೇಂದ್ರಕ್ಕೆ ಹೋಗಿ ಅಲ್ಲಿ ಈ ಕೆವೈಸಿ ಮಾಡಿಸಬಹುದು. ಇದರಿಂದ ಸುಲಭವಾಗಿ ನಖಲಿ ಕಾರ್ಡು ಹೊಂದಿರುವವರನ್ನು ಕಂಡುಹಿಡಿಯಬಹುದಾಗಿದೆ. ಹೇಗಂದರೆ ಯಾರಾದರೂ ಒಂದು ಕಾರ್ಡ್ಗಿಂತ ಹೆಚ್ಚು ಕಾಡಿನಲ್ಲಿ ಸದಸ್ತ್ವ ಹೊಂದಿದ್ದರೆ ಅಂತವರ ಹೆಸರು ಆ ಕಾರ್ಡಲ್ಲಿ ರದ್ದಾಗಲಿದೆ.

ಇದಕ್ಕೆ ಸದಸ್ಯರ ಆಧಾರ್ ಕಾರ್ಡ್ ಸಹಾಯಕ್ಕೆ ಬರಲಿದೆ. ಜೊತೆಗೆ ರಾಜ್ಯದಲ್ಲಿ ರೇಷನ್ ಕಾರ್ಡ್ ಹೊಂದಿ ಪರ ರಾಜ್ಯದಲ್ಲೂ ಕೂಡ ರೇಷನ್ ಕಾರ್ಡ್ ಹೊಂದಿರುವವರ ಸಂಖ್ಯೆ ಹೆಚ್ಚಾಗಿತ್ತು. ಅವರು ಎರಡು ರಾಜ್ಯದಲ್ಲೂ ಆಹಾರ ಧಾನ್ಯ ಪಡೆದು ಸರ್ಕಾರಕ್ಕೆ ವಂಚಿಸುತ್ತಿದ್ದರು. ಈ ಕ್ರಮದಿಂದ ಅವರ ಕಾರ್ಡ್ ಕೂಡ ರದ್ದಾಗಲಿದೆ ಮುಂದುವರೆದು ಮದುವೆಯಾಗಿ ಬೇರೆ ಊರು ಸೇರಿರುವ ಮಗಳ ಹೆಸರಿನಲ್ಲಿ ಮತ್ತು ಮೃತರಾಗಿರುವವರ ಹೆಸರನ್ನು ತೆಗೆಸದೆ ಅವರ ಹೆಸರಿನಲ್ಲಿ ಪಡಿತರ ಪಡೆಯುವವರ ಸಂಖ್ಯೆ ಹೆಚ್ಚಾಗಿತ್ತು ಇನ್ನು ಮುಂದೆ ಆ ಹೆಸರು ಕೂಡ ಬಿಟ್ಟು ಹೋಗಲಿವೆ.

ಕೆಲವು ಸದಸ್ಯರು ವಾರ್ಷಿಕವಾಗಿ ಒಂದು ಲಕ್ಷದ ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಆದಾಯ ಹೊಂದಿದ್ದು ಸರ್ಕಾರಿ ನೌಕರಿಯಲ್ಲಿ ಇದ್ದರು ಮನೆ ಮುಂದೆ ನಾಲ್ಕು ಚಕ್ರಗಳ ವಾಹನ ನಿಂತಿದ್ದರು ಉಚಿತ ಪಡಿತರ ಪಡೆಯುತ್ತಿದ್ದರು. ಇದರಿಂದ ಸಾಕಷ್ಟು ನಿಜವಾದ ಫಲಾನುಭವಿಗಳಿಗೆ ನಷ್ಟ ಆಗುತ್ತಿತ್ತು. ಈಗ ಅಂಥವರ ಮೇಲೆ ಕೂಡ ಕಣ್ಣಿಟ್ಟು ಹುಡಕಾಡಿ ಅವರ ಬಿಪಿಎಲ್ ಕಾರ್ಡ್ಗಳನ್ನು ಕೂಡ ರದ್ದು ಮಾಡುತ್ತಿದೆ. ನೀವು ಈ ಕೂಡಲೇ ಇ-ಕೆವೈಸಿ ಮಾಡಿಸುವ ಮೂಲಕ ನಿಮ್ಮ ಪಡಿತರ ಚೀಟಿಗೆ ರದ್ದಾಗದಂತೆ ನೋಡಿಕೊಳ್ಳಿ ಮತ್ತು ಈ ವಿಷಯ ಹೆಚ್ಚಿನ ಜನರಿಗೆ ತಲುಪುವಂತೆ ಶೇರ್ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now