ಕೆಲವು ವರ್ಷಗಳ ಹಿಂದೆ ತವರಿನ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲನ್ನು ಪಡೆದುಕೊಳ್ಳಬೇಕು ಎಂಬಂತಹ ಕಾನೂನು ಜಾರಿಯಾಗುತ್ತದೆ ಈ ಕಾನೂನು ಜಾರಿಯಾದ ನಂತರ ಸಾಕಷ್ಟು ಹೆಣ್ಣು ಮಕ್ಕಳು ತಮ್ಮ ತವರು ಮನೆಯಿಂದ ಆಸ್ತಿಯ ಪಾಲನ್ನು ಪಡೆದುಕೊಂಡಿದ್ದಾರೆ. ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನವಾದಂತಹ ಆಸ್ತಿ ನೀಡಬೇಕು ಎನ್ನುವಂತಹ ಕಾನೂನನ್ನು 2005 ರ ಹಿಂದೂ ಉತ್ತರಾಧಿಕಾರದ ಕಾಯ್ದೆಯಲ್ಲಿ ತಿಳಿಸಲಾಗಿದೆ. ತಂದೆ ತಾಯಿಯರಿಗೆ ಸ್ವಯಾರ್ಜಿತ ಆಸ್ತಿ ಇದ್ದು ಅದನ್ನು ತಮ್ಮ ಒಬ್ಬ ಹೆಣ್ಣು ಮಗಳಿನ ಹೆಸರಿನಲ್ಲಿ ದಾನ ಪತ್ರವಾಗಿ ಆಸ್ತಿಯನ್ನು ವರ್ಗಾವಣೆ ಮಾಡುತ್ತಾರೆ ಹಾಗೆಯೇ ಅವರು ತಮ್ಮ ಮಗಳ ಜೊತೆ ವಾಸವಾಗಿರುತ್ತಾರೆ.
ದಾನ ಪತ್ರ ಬರೆಸುವಂತಹ ಸಂದರ್ಭದಲ್ಲಿ ಕೊನೆಯವರೆಗೂ ನಿನ್ನ ಜೊತೆಯಲ್ಲಿ ನಾವು ಇರುತ್ತೇವೆ ನಮ್ಮ ಎಲ್ಲಾ ರೀತಿಯಾದಂತಹ ಹಾಗೂ ಹೋಗುಗಳನ್ನು ನೀನೆ ನೋಡಿಕೊಳ್ಳ ಬೇಕಾಗುತ್ತದೆ ಎಂದು ದಾನ ಪತ್ರದಲ್ಲಿ ಬರೆಸಿರಲಾಗುತ್ತದೆ. ಒಂದು ವೇಳೆ ತಮ್ಮ ಮಗಳು ಚೆನ್ನಾಗಿ ನೋಡಿಕೊಳ್ಳದೆ ಇರುವಂತಹ ಸಂದರ್ಭದಲ್ಲಿ ಅಥವಾ ತಂದೆ ತಾಯಿಯನ್ನು ಮನೆಯಿಂದ ಹೊರಗೆ ಹಾಕಿದಂತಹ ಸಂದರ್ಭದಲ್ಲಿ ತಂದೆ-ತಾಯಿಯರು ದಾನ ನೀಡಿರುವಂತಹ ಆಸ್ತಿಯನ್ನು ಪುನಃ ವಾಪಸ್ ಪಡೆದುಕೊಳ್ಳಬಹುದಾಗಿದೆ.
ಸೀನಿಯರ್ ಸಿಟಿಜನ್ ಆಕ್ಟ್ ಕೆಳಗೆ ಕೇಸ್ ಅನ್ನು ಫೈಲ್ ಮಾಡಿ ತಾವು ದಾನವಾಗಿ ನೀಡಿರುವಂತಹ ಆಸ್ತಿಯನ್ನು ಇವರು ಹಿಂತಿರುಗಿ ಪಡೆದುಕೊಳ್ಳಬಹುದು. ಈ ರೀತಿಯ ಕಾನೂನು ನಮ್ಮಲ್ಲಿದ್ದು ತಂದೆ ತಾಯಿಗಳಿಗೆ ಅನ್ಯಾಯದ ವಿರುದ್ಧ ನ್ಯಾಯ ಪಡೆದುಕೊಳ್ಳಲು ಇರುವುದರಿಂದ ಆಸ್ತಿ ಪಡೆದುಕೊಂಡ ಮೇಲೆ ಹೆಣ್ಣು ಮಕ್ಕಳು ಕೂಡ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಬೇಕಾಗುತ್ತದೆ. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ ಚಿಕ್ಕವರಿದ್ದಾಗ ತಂದೆ ತಾಯಿಯರು ನಮ್ಮನ್ನು ಲಾಲನೆ ಪಾಲನೆ ಪೋಷಣೆ ಮಾಡಿರುತ್ತಾರೆ.
ಅದೇ ರೀತಿಯಲ್ಲಿ ಅವರಿಗೆ ವಯಸ್ಸಾದಂತಹ ಸಂದರ್ಭದಲ್ಲಿ ಅವರನ್ನು ಮಕ್ಕಳಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಆದರೆ ಆಸ್ತಿಯನ್ನು ಪಡೆದುಕೊಂಡ ಮೇಲು ಸಹ ಸಾಕಷ್ಟು ಮಕ್ಕಳು ತಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳದೆ ವೃದ್ಧಾಶ್ರಮಕ್ಕೆ ಅಥವಾ ಅನಾಥಾಶ್ರಮಗಳಿಗೆ ಸೇರಿಸಿರುವಂತಹ ಸಾಕಷ್ಟು ಉದಾಹರಣೆಗಳನ್ನು ನಾವು ನಮ್ಮ ಕಣ್ಣಾರೆ ಕಂಡಿದ್ದೇವೆ.
ಇದು ಕೇವಲ ಆಸ್ತಿಯನ್ನು ಪಡೆದುಕೊಂಡಂತಹ ಹೆಣ್ಣು ಮಕ್ಕಳಿಗೆ ಮಾತ್ರವಲ್ಲದೆ ಹೆಣ್ಣು ಹಾಗೂ ಗಂಡು ಮಕ್ಕಳಿಗೂ ಕೂಡ ಅನ್ವಯವಾಗುತ್ತದೆ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ. ಹೀಗೆ ತಂದೆಯ ಸ್ವಯಾರ್ಜಿತ ಆಸ್ತಿ ಮಾತ್ರವಲ್ಲದೆ ಪಿತ್ರಾರ್ಜಿತ ಆಸ್ತಿಗೂ ಕೂಡ ಅನ್ವಯವಾಗುತ್ತದೆ ಪಿತ್ರಾರ್ಜಿತವಾಗಿ ಬಂದಂತಹ ಆಸ್ತಿಯನ್ನು ಪಾಟ್ನರ್ ಶಿಪ್ ಮಾಡಲಾಗುತ್ತದೆ ಅಂದರೆ ಎರಡು ಗಂಡು ಹಾಗೂ ಮೂರು ಹೆಣ್ಣು ಮಕ್ಕಳು ಇದ್ದರೆ ತಂದೆ ತಾಯಿಗೆ ಒಂದು ಪಾಲು ಹಾಗೆಯೇ ಉಳಿದಂತಹ ಐದು ಜನ ಮಕ್ಕಳಿಗೂ ಸಹ ಸಮಾನವಾಗಿ ಪಾಲು ಮಾಡಲಾಗುತ್ತದೆ.
ಅದರಲ್ಲಿ ಯಾರಾದರೂ ಒಬ್ಬ ಮಕ್ಕಳು ತಮ್ಮ ತಂದೆ ತಾಯಿಯನ್ನು ನೋಡಿಕೊಳ್ಳುವುದಾಗಿ ಒಪ್ಪಿಕೊಂಡಾಗ ಆ ಮಕ್ಕಳಿಗೆ ದಾನದ ರೂಪದಲ್ಲಿ ತಂದೆ ತಾಯಿಯ ಪಾಲಿಕೆ ಬಂದಿರುವಂತಹ ಆಸ್ತಿಯನ್ನು ಬರೆದ ಕೊಡಲಾಗುತ್ತದೆ. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳದೆ ಇದ್ದರೂ ಆಗ ಸಹ ತಂದೆ ತಾಯಿಗಳು ಕೋರ್ಟ್ ಮೊರೆ ಹೋಗಿ ತಾವು ದಾನವಾಗಿ ನೀಡಿರುವಂತಹ ಆಸ್ತಿಯನ್ನು ಹಿಂತಿರುಗಿ ಪಡೆದುಕೊಳ್ಳಬಹುದಾಗಿದೆ. ಕೇವಲ ಆಸ್ತಿಗಾಗಿ ಮಾತ್ರವಲ್ಲದೇ ತಂದೆ ತಾಯಿಯನ್ನು ನಾವು ದೇವರ ಸಮಾನ ಕರೆಯುತ್ತೇವೆ ನಮಗೆ ಜನ್ಮ ನೀಡಿದಂತಹ ನಮ್ಮ ತಂದೆ ತಾಯಿಯರನ್ನು ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.