ಹೆಣ್ಣು ಮಕ್ಕಳು ಭಾಗವನ್ನು ಕೇಳಲು ಸಾಧ್ಯವಿರುವ ಹಾಗೂ ಸಾಧ್ಯವಿರದ ಆಸ್ತಿಗಳು ಯಾವುವೂ ಗೊತ್ತ.? ಎಲ್ಲಾ ಆಸ್ತಿಯಲ್ಲೂ ಭಾಗ ಸಿಗಲ್ಲ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ವಿಚಾರ ಇದು.

ಕೆಲವು ವರ್ಷಗಳ ಹಿಂದೆ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಎಷ್ಟು ಹಕ್ಕಿದೆಯೋ ಹೆಣ್ಣು ಮಕ್ಕಳಿಗು ಸಹ ಅಷ್ಟೇ ಹಕ್ಕು ಇದೆ ಎನ್ನುವಂತಹ ಕಾನೂನು ಜಾರಿಗೆ ಬಂತು. ಮೂರು ತಲೆಮಾರುಗಳ ಪೂರ್ವಜರಿಂದ ಬಂದಂತಹ ಪಿತ್ರಾರ್ಜಿತ ಆಸ್ತಿಗಳಲ್ಲಿ ಹೆಣ್ಣುಮಕ್ಕಳು ಹುಟ್ಟಿನಿಂದಲೇ ಹಕ್ಕನ್ನು ಪಡೆದುಕೊಂಡು ಬಂದಿರುತ್ತಾಳೆ. ತಂದೆ ಹಾಗೂ ತಂದೆಯ ಅಣ್ಣತಮ್ಮಂದಿರು ಒಂದೇ ಕುಟುಂಬದಲ್ಲಿ ಜೊತೆಯಾಗಿ ಸೇರಿಕೊಂಡು ಸಂಪಾದನೆ ಮಾಡಿದಂತಹ ಆಸ್ತಿಯಲ್ಲಿಯೂ ಸಹ ಆ ಹೆಣ್ಣುಮಗಳು ಸಂಪೂರ್ಣ ಹಕ್ಕನ್ನು ಪಡೆದುಕೊಳ್ಳುತ್ತಾಳೆ ಇದನ್ನು ಜಂಟಿ ಕುಟುಂಬದ ಆಸ್ತಿ ಎಂದು ಕರೆಯಲಾಗುತ್ತದೆ.

WhatsApp Group Join Now
Telegram Group Join Now

ಹಾಗೆಯೇ ಯಾವುದಾದರೂ ಒಂದು ಜಮೀನು ಅಥವಾ ಆಸ್ತಿಯನ್ನು ಕುಟುಂಬದ ಜಂಟಿ ಬಂಡವಾಳ ವಿನಿಯೋಗ ಮಾಡಿ ಗಳಿಸಿದ್ದರೆ ಅದರಲ್ಲಿಯೂ ಸಹ ಹೆಣ್ಣು ಮಗಳು ಪಾಲುದಾರರಾಗಿರುತ್ತಾಳೆ. ಒಂದು ಕುಟುಂಬದಲ್ಲಿ ನಾಲ್ಕು ಜನ ಅಣ್ಣತಮ್ಮಂದಿರು ಇದ್ದರೆ ಅದರಲ್ಲಿ ಒಬ್ಬ ಸರ್ಕಾರಿ ಉದ್ಯೋಗದಲ್ಲಿ ಇದ್ದು ಆ ಕುಟುಂಬಕ್ಕೆ ತನ್ನ ಉಳಿತಾಯದಲ್ಲಿ ಯಾವುದಾದರೂ ಒಂದು ಆಸ್ತಿಯನ್ನು ಖರೀದಿ ಮಾಡಿ ಕುಟುಂಬಕ್ಕೆ ಬಿಟ್ಟು ಕೊಟ್ಟರೆ ಅದರಲ್ಲಿಯೂ ಸಹ ಹೆಣ್ಣು ಸಮನಾದಂತಹ ಪಾಲನ್ನು ಹೊಂದಿರುತ್ತಾಳೆ.

ಹಾಗೆಯೇ ಕೆಲವೊಂದು ಆಸ್ತಿಗಳಲ್ಲಿ ಹೆಣ್ಣು ಮಗಳು ಪಾಲುದಾರಳಾಗಿರುವುದಿಲ್ಲ ಅದು ಯಾವುವು ಎಂದು ನೋಡುವುದಾದರೆ ತನ್ನ ತಂದೆಗೆ ತಾಯಿಯ ಕಡೆಯಿಂದ ಬಂದಂತಹ ಆಸ್ತಿಯ ಮೇಲೆ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯಾದಂತಹ ಹಕ್ಕು ಇರುವುದಿಲ್ಲ. ತಂದೆಗೆ ವಿಲ್ ಮತ್ತು ದಾನದ ಕಡೆಯಿಂದ ಬಂದಂತಹ ಆಸ್ತಿಗಳಲ್ಲಿ ಹೆಣ್ಣು ಮಗಳು ಯಾವುದೇ ಪಾಲನ್ನು ಕೇಳುವಂತಹ ಅವಕಾಶ ಇರುವುದಿಲ್ಲ ಇದು ತನ್ನ ತಂದೆಯ ಇಚ್ಛೆಯ ಮೇರೆಗೆ ಯಾರಿಗಾದರೂ ಸಹ ಈ ಒಂದು ಆಸ್ತಿಯನ್ನು ಪಾಲು ಕೊಡುವಂತಹ ಅಧಿಕಾರವಿರುತ್ತದೆ.

ಸರ್ಕಾರದ ಯೋಜನೆಯ ಅಡಿಯಲ್ಲಿ ತಂದೆಗೆ ಮಂಜೂರು ಆಗಿರುವಂತಹ ಯಾವುದೇ ಆಸ್ತಿಯ ಮೇಲೆ ಹೆಣ್ಣು ಮಗಳಿಗೆ ಹಕ್ಕು ಇರುವುದಿಲ್ಲ ಅದು ತನ್ನ ತಂದೆಯ ಸ್ವಯಾರ್ಜಿತ ಆಸ್ತಿಯಾಗುತ್ತದೆ ಅಂತಹ ಆಸ್ತಿಯಲ್ಲಿ ಅವಳು ಪಾಲು ದಾರಳಾಗಲು ಸಾಧ್ಯವಿಲ್ಲ. ಒಂದು ವೇಳೆ ತನ್ನ ತಂದೆ ಸಾ’ವ’ನ್ನ’ಪ್ಪಿ’ದ ನಂತರ ಆಸ್ತಿ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಾಗುತ್ತದೆ ಅದರಲ್ಲಿ ಬೇಕಾದರೆ ಹೆಣ್ಣು ಮಕ್ಕಳು ಪಾಲುದಾರರಾಗಬಹುದು.

ಕುಟುಂಬದ ಸದಸ್ಯರು ತಮ್ಮ ಆಸ್ತಿಯ ಮೇಲೆ ಬ್ಯಾಂಕ್ ಅಥವಾ ಇನ್ನಿತರ ಕಡೆಗಳಲ್ಲಿ ಸಾಲವನ್ನು ಮಾಡಿದಾಗ ಆ ಸಾಲವನ್ನು ತೀರಿಸಲು ಸಾಧ್ಯವಿಲ್ಲದ ಕಾರಣ ಕುಟುಂಬದ ಯಾವುದಾದರೂ ಒಬ್ಬ ಸದಸ್ಯ ಸಾಲವನ್ನು ತೀರಿಸಿ ಆಸ್ತಿಯನ್ನು ತನ್ನದಾಗಿಸಿಕೊಳ್ಳುತ್ತಾನೆ ಅಂತಹ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲುದಾರಿಕೆಯನ್ನು ಪಡೆಯಲು ಸಾಧ್ಯವಿಲ್ಲ. ಒಬ್ಬ ತಂದೆ ತನ್ನ ಆಸ್ತಿಯನ್ನು ಎಲ್ಲ ಮಕ್ಕಳಿಗೆ ಹಂಚಿಕೆ ಮಾಡಿ ತನ್ನ ಭಾಗಕ್ಕೆ ಬಂದಂತಹ ಆಸ್ತಿಗೆ ಹಕ್ಕುದಾರನಾಗಿರುತ್ತಾನೆ.

ಇದನ್ನು ಆತ ಯಾರಿಗೆ ಬೇಕಾದರೂ ಸಹ ನೀಡಬಹುದು ಇದರಲ್ಲಿ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯಾದಂತಹ ಹಕ್ಕು ಇರುವುದಿಲ್ಲ. ವಿಭಾಗ ಪ್ರಕ್ರಿಯೆ ಆದ ನಂತರ ತಂದೆಗೆ ಉಳಿಯುವಂತಹ ಆಸ್ತಿ ಸ್ವಯಾರ್ಜಿತ ಆಸ್ತಿಯಾಗುತ್ತದೆ ಆದ್ದರಿಂದ ಹೆಣ್ಣು ಮಕ್ಕಳು ಇದರಲ್ಲಿ ಪಾಲು ಕೇಳುವಂತಿಲ್ಲ. ಒಬ್ಬ ತಂದೆ ತನ್ನ ಸ್ವಂತ ದುಡಿಮೆಯಿಂದ ಅಂದರೆ ಯಾವುದಾದರೂ ಸರ್ಕಾರಿ ಉದ್ಯೋಗದಲ್ಲಿ ಇದ್ದು ತಾನು ಹಣ ಗಳಿಕೆಯನ್ನು ಮಾಡಿದ್ದರೆ ಅಥವಾ ಇನ್ನಿತರ ಉದ್ಯಮವನ್ನು ಮಾಡಿ ಅದರಿಂದ ಗಳಿಸಿದಂತಹ ಹಣದಲ್ಲಿ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯಾದಂತಹ ಹಕ್ಕು ಚಲಾಯಿಸುವಂತಿಲ್ಲ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now