2023ರ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಅರ್ಜಿಸಲ್ಲಿಸಿ ಹುದ್ದೆಗೆ ಆಯ್ಕೆ ಆಗಬಹುದು. ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ನೇಮಕಾತಿಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ ಇಲ್ಲಿ ನೇಮಕಗೊಳ್ಳಲು ಆಯ್ಕೆಯ ವಿಧಾನ ನೋಡುವುದಾದರೆ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು ಇರುತ್ತದೆ ಹಾಗೆಯೇ ದೈಹಿಕ ಸಾಮರ್ಥ್ಯ ಪರೀಕ್ಷೆಗಳು ಸಹ ನೀವು ನಡೆಸಬೇಕಾಗುತ್ತದೆ ದೇಹದಾಢ್ಯತೆ ಪರೀಕ್ಷೆ, ಟ್ರೇಡ್ ಟೆಸ್ಟ್ ದಾಖಲೆಗಳ ಪರಿಶೀಲನೆ ಹಾಗು ವೈದ್ಯಕೀಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಹಾಗೆ ನಿರ್ದಿಷ್ಟ ವಯೋಮಿತಿ ಸಹ ಕೇಳಲಾಗುತ್ತದೆ ಕಾನ್ಸ್ಟೇಬಲ್ ಡ್ರೈವರ್ ಹುದ್ದೆಗೆ ಕನಿಷ್ಠ 21 ವರ್ಷ ಆಗಿರಬೇಕು ಹಾಗೆಯೇ ಗರಿಷ್ಠ 27 ವರ್ಷ ವಯೋಮಿತಿ ಇರಬೇಕು ಉಳಿದಂತಹ ಕಾನ್ಸ್ಟೇಬಲ್ ಹುದ್ದೆಗೆ ಕನಿಷ್ಟ 18 ವರ್ಷ ಗರಿಷ್ಠ 23 ವರ್ಷ ವಯಸ್ಸಾಗಿರಬೇಕು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಕೆ ಸಡಿಲಿಕೆಯನ್ನು ನೀಡಲಾಗಿದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ಇರುತ್ತದೆ. ಹುದ್ದೆಗೆ ತಕ್ಕ ಹಾಗೆ ವೇತನವನ್ನು ನೀವು ಪಡೆದುಕೊಳ್ಳಬಹುದು 21,700 ರಿಂದ 69,100 ವರೆಗೆ ನೀವು ಮಾಸಿಕ ವೇತನವನ್ನು ಪಡೆದುಕೊಳ್ಳುತ್ತೀರ.
ಸಾಕಷ್ಟು ಜನರಿಗೆ ಅರ್ಜಿ ಸಲ್ಲಿಸುವ ವಿಧಾನ ತಿಳಿದಿರುವುದಿಲ್ಲ ಅಂತಹವರು ಅರ್ಜಿ ಸಲ್ಲಿಸಲು ಇಲಾಖೆಯ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ಲೈನ್ ಮುಖಾಂತರ ನೀವು ಅರ್ಜಿಯನ್ನು ಸಲ್ಲಿಸಬಹುದು. ನಿಮ್ಮ ಹತ್ತಿರದ ಕಂಪ್ಯೂಟರ್ ಮಾಹಿತಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25.04.2023 SC ST ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯಾದಂತಹ ಅರ್ಜಿ ಶುಲ್ಕ ಇರುವುದಿಲ್ಲ ಉಳಿದಂತೆ ಎಲ್ಲರೂ ಸಹ 100 ರೂಪಾಯಿಗಳು ಅರ್ಜಿ ಶುಲ್ಕವನ್ನು ನೀಡಿ ಈ ಹುದ್ದೆಗೆ ಅರ್ಜಿಯನ್ನು ಹಾಕಬಹುದು.
ಅರ್ಜಿ ಶುಲ್ಕವನ್ನು ನೀವು ಆನ್ಲೈನ್ ಮೂಲಕ ಮಾಡಬಹುದು ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ನೀವು ಕಾನ್ಸ್ಟೇಬಲ್ ಹುದ್ದೆಯ ಅರ್ಜಿಗೆ ಶುಲ್ಕವನ್ನು ಪಾವತಿ ಮಾಡಬಹುದು. ಕಾನ್ಸ್ಟೇಬಲ್ ಟೆಕ್ನಿಕಲ್, ಟ್ರೇಡ್ಸ್ ಮೆನ್ ಹುದ್ದೆಗಳು ಖಾಲಿ ಇದ್ದು ಇದಕ್ಕೆ ಪುರುಷ ಮತ್ತು ಮಹಿಳೆ ಎಂಬಂತಹ ಯಾವುದೇ ಭೇದವಿಲ್ಲ ಇಬ್ಬರು ಸಹ ಅರ್ಜಿಯನ್ನು ಸಲ್ಲಿಸಬಹುದು ಒಟ್ಟಾರೆಯಾಗಿ 9,223 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಕರ್ನಾಟಕದಲ್ಲಿ ಒಟ್ಟು 466 ಹುದ್ದೆಗಳು ಖಾಲಿ ಇದೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಆಯ್ಕೆಯಾಗಬಹುದು. ಹುದ್ದೆಗೆ ಆಯ್ಕೆಯಾದ ನಂತರ ನೀವು ಭಾರತದ ಎಲ್ಲೆಡೆ ಉದ್ಯೋಗ ನಿರ್ವಹಿಸಬಹುದು.
ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆಯನ್ನು ಸಹ ಕೇಳಲಾಗಿದೆ ಕಾನ್ಸ್ಟೇಬಲ್ ಡ್ರೈವರ್ ಹುದ್ದೆಗೆ 10ನೇ ತರಗತಿ ಮತ್ತು ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ಕಾನ್ಸ್ಟೇಬಲ್ ಮೆಕಾನಿಕಲ್ ಮೋಟಾರ್ ವೆಹಿಕಲ್ ಈ ಹುದ್ದೆಗೆ 10ನೇ ತರಗತಿ ಅಥವಾ ದ್ವಿತೀಯ ಪಿಯುಸಿ ಜೊತೆಗೆ ಮೆಕಾನಿಕಲ್ ವೆಹಿಕಲ್ ನಲ್ಲಿ ಎರಡು ವರ್ಷ ಐಟಿಐ ಸರ್ಟಿಫಿಕೇಟ್ ಹೊಂದಿರಬೇಕು. ಟ್ರೇಡ್ಸ್ಮೆನ್ ಉದ್ದಕ್ಕೆ ಹತ್ತನೇ ತರಗತಿ ಜೊತೆಗೆ ಟ್ರೇಡ್ ಗಳಲ್ಲಿ ಪ್ರವೀಣರಾಗಿರಬೇಕು ಮತ್ತು ಕೆಲಸ ನಿರ್ವಹಿಸಬೇಕು ಕಾನ್ಸ್ಟೇಬಲ್ ಪ್ಲಂಬರ್ ಅಥವಾ ಎಲೆಕ್ಟ್ರಿಷಿಯನ್ ಹುದ್ದೆಗೆ 10ನೇ ತರಗತಿಯ ಜೊತೆಗೆ ಆಯಾ ಟ್ರೇಡ್ಗಳಲ್ಲಿ ಒಂದು ವರ್ಷ ಅನುಭವ ಹೊಂದಿರಬೇಕು. ಕೊನೆಯ ದಿನಾಂಕ 27/04/2023 ರಿಂದ 25/04/2023 ಸಲ್ಲಿಕೆ ಮಾಡಬಹುದು ಇದಕ್ಕೆ ತಾತ್ಕಾಲಿಕ ಕಂಪ್ಯೂಟರ್ ಆಧಾರಿತ ಪರೀಕ್ಷೆ ಕೂಡ ಇರುತ್ತದೆ ಇದರ ದಿನಾಂಕ 1/07/2023 13/07/2023ರವರೆಗೆ ಇರುತ್ತದೆ.