ಕೇಂದ್ರ ಸರ್ಕಾರದ ಹೊಸ ಯೋಜನೆ ರೈತರಿಗೆ ಇನ್ನು ಮುಂದೆ ಸಿಗಲಿದೆ 42,000 ಸಹಾಯ ಧನ ಈ ಯೋಜನೆ ಪಡೆಯಲು ಈ ಚಿಕ್ಕ ಕೆಲಸ ಮಾಡಿ ಸಾಕು.

 

WhatsApp Group Join Now
Telegram Group Join Now

 

ಸರ್ಕಾರವು ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಲೇ ಇರುತ್ತದೆ ಅಂತಹ ಯೋಜನೆಗಳಲ್ಲಿ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯು ಕೂಡ ಒಂದು. ರೈತರು ನಮ್ಮ ದೇಶದ ಬೆನ್ನೆಲುಬು ಅವರಿಂದಲೇ ನಾವು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ ರೈತರು ಬೆವರು ಹರಿಸಿ ಬೆಳೆಯುವಂತಹ ಬೆಳೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಅಂತಹ ರೈತರಿಗೆ ಸರ್ಕಾರವು ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಲೇ ಇರುತ್ತದೆ, ಕೇಂದ್ರ ಸರ್ಕಾರವು ರೈತರಿಗಾಗಿ ಇದೀಗ 42,000 ಗಳನ್ನು ನೀಡಲು ಮುಂದಾಗಿದೆ ಈ ಇದರ ಪ್ರಯೋಜನವನ್ನು ಪ್ರತಿಯೊಬ್ಬ ರೈತರು ಕೂಡ ಪಡೆದುಕೊಳ್ಳಬಹುದು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು 6 ಸಾವಿರದವರೆಗೆ ಉಚಿತ ಹಣವನ್ನು ನೀಡುತ್ತದೆ ಆದರೆ ಈ ಹಣವು ರೈತರ ಖಾತೆಗೆ ಒಟ್ಟಿಗೆ ಜಮೆ ಆಗುವುದಿಲ್ಲ ಬದಲಿಗೆ ಕಂತುಗಳ ರೂಪದಲ್ಲಿ ಬರುತ್ತದೆ ನಾಲ್ಕು ತಿಂಗಳಿಗೊಮ್ಮೆ ವರ್ಷಕ್ಕೆ ಮೂರು ಬಾರಿ ಹಣ ಪಾವತಿಯಾಗುತ್ತದೆ. ರೈತರ ಖಾತೆಗೆ ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೆ 2 ಸಾವಿರದಂತೆ ವರ್ಷಕ್ಕೆ 6 ಸಾವಿರ ರೂಪಾಯಿ ರೈತರಿಗೆ ದೊರೆಯುತ್ತದೆ.

ಹಾಗೆ ಕೇಂದ್ರ ಸರ್ಕಾರದ ಮತ್ತೊಂದು ಯೋಜನೆ ಎಂದರೆ ಪಿಎಂ ಕಿಸಾನ್ ಮನ್ ಧನ್ ಯೋಜನೆಯು ಕೂಡ ಒಂದಾಗಿದ್ದು ಭಾರತ ಸರ್ಕಾರವು ರೈತರಿಗೆ ನೆರವಾಗಲು ಈ ಒಂದು ಯೋಜನೆಯನ್ನು ರೂಪಿಸಲಾಗಿದೆ ರೈತರು ಪಿ ಎಂ ಕಿಸಾನ್ ಮನ್ ದನ್ ಯೋಜನೆಗೆ ಸೇರುವ ಮೂಲಕ ತಿಂಗಳಿಗೆ 3000 ಪಡೆದುಕೊಳ್ಳುತ್ತಾರೆ ಅಂದರೆ ವರ್ಷಕ್ಕೆ 36,000 ಪಡೆಯುತ್ತಾರೆ. ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುವವರು 18 ವರ್ಷ ಮೇಲ್ಪಟ್ಟ ವಯಸ್ಸಿನವರು ತಿಂಗಳಿಗೆ 55 ರೂಪಾಯಿಗಳಿಂದ ಗರಿಷ್ಟ 200 ರೂಪಾಯಿಗಳವರೆಗೆ ಸರ್ಕಾರಕ್ಕೆ ಪಾವತಿ ಮಾಡಬೇಕು‌.

ಈ ಯೋಜನೆಯ ಅಡಿಯಲ್ಲಿ ರೈತರಿಗೆ 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು ಸಹ ಮೂರು ಸಾವಿರ ಹಣದಂತೆ ನಿಮ್ಮ ಖಾತೆಗೆ ಜಮೆಯಾಗಲಿದೆ. ಈ ಯೋಜನೆಗೆ ಸೇರ್ಪಡೆಯಾದಂತಹ ವ್ಯಕ್ತಿಯು ಮ’ರ’ಣ ಹೊಂದಿದ ನಂತರ ಪಾವತಿಸಿದ ಮೊತ್ತವನ್ನು ಬಡ್ಡಿಯ ದರದಲ್ಲಿ ನೀಡಲಾಗುತ್ತದೆ. ಅಂದರೆ ಮ’ರ’ಣ ಹೊಂದಿದ ವ್ಯಕ್ತಿಯ ಪಾಲುದಾರರು ಯಾರು ಇರುತ್ತಾರೆ ಅಂತಹವರಿಗೆ ಈ ಹಣ ದೊರೆಯುತ್ತದೆ ಹಾಗೆಯೇ ವ್ಯಕ್ತಿ ಮೃತಪಟ್ಟರೆ ಪಾಲುದಾರನಿಗೆ 1500 ರೂಪಾಯಿ ಪಿಂಚಣಿ ಸಹ ದೊರೆಯುತ್ತದೆ. ಕೇಂದ್ರ ಸರ್ಕಾರವು ರೈತರಿಗೆ ನೆರವಾಗಬೇಕು ಎನ್ನುವಂತಹ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಆಗಾಗ ರೂಪಿಸುತ್ತಲೇ ಇರುತ್ತಾರೆ.

ಕರೋನ ಬಂದ ನಂತರ ರೈತರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ ಅವರ ಸಂಕಷ್ಟಗಳನ್ನು ನೀಗಿಸುವ ಸಲುವಾಗಿ ಕೇಂದ್ರ ಸರ್ಕಾರವು ಈ ರೀತಿಯಾದಂತಹ ಯೋಜನೆಗಳನ್ನು ರೂಪಿಸಿ ರೈತರಿಗೆ ನೆರವಾಗುತ್ತಿದೆ ಈ ಯೋಜನೆ ಅಡಿಯಲ್ಲಿ ಹಲವಾರು ರೈತರು ಚೇತರಿಸಿಕೊಂಡಿದ್ದಾರೆ ಹಾಗೆಯೇ ಅವರ ವೃತ್ತಿಯನ್ನು ನಡೆಸಲು ಇದು ಪ್ರೋತ್ಸಾಹ ನೀಡಿದಂತೆ ಆಗುತ್ತದೆ. ಯಾವೆಲ್ಲ ರೈತರು ಈ ಒಂದ ಕೇಂದ್ರ ಸರ್ಕಾರದ ಈ ಯೋಜನೆಗಳ ಫಲವನ್ನು ಪಡೆದುಕೊಂಡಿಲ್ಲ ಅಂತಹವರು ಈ ಯೋಜನೆಯ ಫಲವನ್ನು ಪಡೆದುಕೊಳ್ಳಲು ಇದು ಸುವರ್ಣ ಅವಕಾಶ ಎಂದೇ ಹೇಳಬಹುದು. ನಿಮಗೆ ಇನ್ನೂ ಸಹ ಅವಕಾಶ ಇದೆ ಬೇಕಾದಂತಹ ದಾಖಲಾತಿಗಳ ಮೂಲಕ ನೀವು ಈ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಹಾಗೂ ಪಿಎನ್ ಕಿಸಾನ್ ಧನ್ ಮನ್ ಯೋಜನೆಗೆ ನೀವು ಸಹ ಸೇರ್ಪಡೆಯಾಗಿ ಯೋಜನೆಯ ಲಾಭ ಪಡೆದುಕೊಳ್ಳಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now