ಕೇವಲ 5 ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕವೇ ಆಧಾರ್ ಕಾರ್ಡ್ ತಿದ್ದುಪಡಿ ಮಾಡುವ ವಿಧಾ‌ನ.

 

WhatsApp Group Join Now
Telegram Group Join Now

ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವಂತಹ ನಿಮ್ಮ ಅಡ್ರೆಸ್ ಏನಾದ್ರೂ ತಪ್ಪಾಗಿದ್ದರೆ ಅದನ್ನು ಹೇಗೆ ಮೊಬೈಲ್ ನಲ್ಲಿ ಆನ್ಲೈನ್ ಮೂಲಕ ಚೇಂಜ್ ಮಾಡಿಕೊಳ್ಳಬಹುದು ಎಂಬುದನ್ನು ನಾವಿಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಮೊದಲಿಗೆ ನೀವು ಕ್ರೋಮ್ ಬ್ರೌಸರ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಂಡು ಅದರಲ್ಲಿ ಆಧಾರ್ ಎಂದು ಟೈಪ್ ಮಾಡಿ ನಂತರ Uidai ಎಂಬಂತಹ ವೆಬ್ಸೈಟ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಭಾಷೆಯ ಆಯ್ಕೆ ಕೇಳುತ್ತದೆ ನೀವು ಯಾವ ಭಾಷೆಯಲ್ಲಿ ನಿಮ್ಮ ಆಧಾರ್ ಕಾರ್ಡನ್ನು ಚೇಂಜ್ ಮಾಡಿಕೊಳ್ಳುತ್ತಿರೋ ಭಾಷೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.

ಭಾಷೆ ಆಯ್ಕೆ ಮಾಡಿಕೊಂಡ ನಂತರ ಅಪ್ಡೇಟ್ ಆಧಾರ್ ಎನ್ನುವಂತಹ ಒಂದು ಆಪ್ಷನ್ ಕಾಣುತ್ತದೆ ನಂತರ ನೀವು ಅದರ ಮೇಲೆ ಕ್ಲಿಕ್ ಮಾಡಿದರೆ ಮತ್ತೊಂದು ಪೇಜ್ ನಿಮಗೆ ಓಪನ್ ಆಗುತ್ತದೆ ಅದರಲ್ಲಿ ನೀವು ಅಪ್ಡೇಟ್ ಅಡ್ರೆಸ್ ಇನ್ ಯುವರ್ ಆಧಾರ್ ಎಂಬಂತಹ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ಮತ್ತೊಂದು ವೆಬ್ಸೈಟ್ ಓಪನ್ ಆಗುತ್ತದೆ ಇಲ್ಲಿ ಲಾಗಿನ್ ಆಪ್ಷನ್ ಇರುತ್ತದೆ ಅಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ನನ್ನು ಹಾಕಿ ನಂತರ ಮೇಲೆ ಕಾಣುವ ಕ್ಯಾಪ್ಚಾ ಕೊಡನ್ನು ನೀವು ಅಲ್ಲಿ ನಮೂದಿಸಬೇಕಾಗುತ್ತದೆ.

ಆಧಾರ್ ಕಾರ್ಡ್ ನಲ್ಲಿ ನೀವು ಯಾವ ಒಂದು ಮೊಬೈಲ್ ನಂಬರ್ ಕೊಟ್ಟಿರುತ್ತೀರೋ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ ಅದನ್ನು ಎಂಟರ್ ಮಾಡಿದ ನಂತರ ಲಾಗಿನ್ ಆಪ್ಷನ್ ಮೇಲೆ ಕ್ಲಿಕ್ ಮಾಡಿದ ಅಲ್ಲಿ ಸಾಕಷ್ಟು ಆಪ್ಷನ್ಗಳು ಇರುತ್ತದೆ ಅದರಲ್ಲಿ ನೀವು ಆನ್ಲೈನ್ ಅಪ್ಡೇಟೆಡ್ ಸರ್ವಿಸಸ್ ಇದರ ಮೇಲೆ ಕ್ಲಿಕ್ ಮಾಡಿ.

ನಂತರ ಅಪ್ಡೇಟ್ ಆಧಾರ್ ಆನ್ಲೈನ್ ಎನ್ನುವಂತಹ ಆಪ್ಷನ್ ಬರುತ್ತದೆ ಇದರ ಮೇಲೆ ಕ್ಲಿಕ್ ಮಾಡಿದ ನಂತರ ಪ್ರೊಸೀಡ್ ಅಪ್ಡೇಟ್ ಆಧಾರ್ ಎನ್ನುವಂತಹ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಇಲ್ಲಿ ನೀವು ಯಾವೆಲ್ಲ ಚೇಂಜಸ್ ಮಾಡಿಕೊಳ್ಳಬಹುದು ಎಂಬುವಂತಹ ಆಪ್ಷನ್ ಗಳನ್ನು ಕೊಟ್ಟಿರುತ್ತಾರೆ ಹೆಸರು, ಡೇಟ್ ಆಫ್ ಬರ್ತ್, ಜೆಂಡರ್, ಅಡ್ರೆಸ್ ನಿಮ್ಮ ಆಧಾರ್ ನಲ್ಲಿ ಇದಿಷ್ಟು ನೀವು ಚೇಂಜ್ ಮಾಡಿಕೊಳ್ಳಬಹುದು.

ನೀವೇನಾದರೂ ನಿಮ್ಮ ಹೆಸರನ್ನು ಆನ್ಲೈನ್ ಮೂಲಕ ಚೇಂಜ್ ಮಾಡಿಕೊಳ್ಳಬೇಕು ಎಂದರೆ ಆದ ಎರಡು ಬಾರಿ ಮಾತ್ರ ಸಾಧ್ಯ ಹಾಗೆ ನಿಮ್ಮ ಡೇಟ್ ಆಫ್ ಬರ್ತ್ ಮತ್ತು ಜೆಂಡರ್ ಅನ್ನು ಒಂದು ಬಾರಿ ಮಾತ್ರ ಚೇಂಜ್ ಮಾಡಿಕೊಳ್ಳಬಹುದು. ನಿಮ್ಮ ಅಡ್ರೆಸ್ ಅನ್ನು ಎಷ್ಟು ಬಾರಿ ಬೇಕಾದರೂ ನೀವು ಆನ್ಲೈನ್ ಮೂಲಕ ಚೇಂಜ್ ಮಾಡಿಕೊಳ್ಳಬಹುದು. ನೀವು ಚೇಂಜ್ ಮಾಡಿಕೊಳ್ಳಬೇಕಾಗಿರುವುದನ್ನು ಟೈಪ್ ಮಾಡಿ ನಂತರ ಪ್ರೊಸೀಡ್ ಅಪ್ಡೇಟ್ ಆಧಾರ್ ಎನ್ನುವಂತಹ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಕರೆಂಟ್ ಡೀಟೇಲ್ಸ್ ತೋರಿಸುತ್ತದೆ ಹಾಗೆ ನೀವು ಚೇಂಜಸ್ ಮಾಡುವಂತದ್ದನ್ನು ನೀವು ಎಂಟರ್ ಮಾಡಬೇಕಾಗುತ್ತದೆ.

ನಿಮ್ಮ ಅಡ್ರೆಸ್ ಬಿಲ್ಡಿಂಗ್ ನಂಬರ್ ಅಥವಾ ಹೌಸ್ ನಂಬರ್ ಸ್ಟೀಟ್ ರೋಡ್ ಹಾಗೆ ನಿಮ್ಮ ಲ್ಯಾಂಡ್ ಮಾರ್ಕ್ ಪಿನ್ ಕೋಡ್ ಇದನ್ನು ಟೈಪ್ ಮಾಡಿದ ನಂತರ ಇಲ್ಲಿ ಒಂದು ಡಾಕ್ಯುಮೆಂಟ್ ಸಬ್ಮಿಟ್ ಮಾಡಬೇಕಾಗುತ್ತದೆ ನಿಮ್ಮ ಬ್ಯಾಂಕ್ ಪಾಸ್ ಬುಕ್ ಅಥವಾ ಡ್ರೈವಿಂಗ್ ಲೈಸೆನ್ಸ್ ಎಲೆಕ್ಟ್ರಿಸಿಟಿ ಬಿಲ್ ಇದನ್ನು ನೀವು ಕೊಡಬಹುದಾಗಿದೆ ಇದನ್ನು ಕೊಟ್ಟರೆ ನಂತರ ನೆಕ್ಸ್ಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ರೂ.50 ಪೆಮೆಂಟ್ ಮಾಡಿದರೆ ನಿಮ್ಮ ಆಧಾರ್ ಕಾರ್ಡ್ ಚೇಂಜಸ್ ಆಗಿರುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now