ಈಗ ದೇಶದ ಎಲ್ಲಾ ಬ್ಯಾಂಕ್ ಗಳು ಕೂಡ ಕ್ರೆಡಿಟ್ ಕಾರ್ಡ್ ಸೇವೆ ನೀಡುತ್ತಿವೆ. ಅಲ್ಲದೆ ತನ್ನ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಖರೀದಿಸುವಂತೆ ಗ್ರಾಹಕರಿಗೆ ನಾನಾ ಆಫರ್ ಗಳನ್ನು ನೀಡುವ ಮೂಲಕ ಅವರನ್ನು ಅಟ್ರಾಕ್ಟ್ ಮಾಡುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ ದೇಶದ ಶೇಖಡವಾರು ಹೆಚ್ಚು ಜನಸಂಖ್ಯೆ ತಮ್ಮ ಬ್ಯಾಂಕ್ ಖಾತೆ ಇರುವ ಬ್ಯಾಂಕ್ ಗಳಿಂದ ಕ್ರೆಡಿಟ್ ಕಾರ್ಡ್ ಸೌಲಭ್ಯ ಪಡೆದು ತಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಬಳಸಿಕೊಳ್ಳುತ್ತಿದ್ದಾರೆ.
ಈವರೆಗೂ ಕೂಡ ನೀವು ಕ್ರೆಡಿಟ್ ಕಾರ್ಡ್ ಖರೀದಿಸಿಲ್ಲ ಎಂದರೆ ಅಥವಾ ಹೊಸ ಕ್ರೆಡಿಟ್ ಕಾರ್ಡನ್ನು ಮಾಡಿಸುವ ಯೋಚನೆಯಲ್ಲಿ ಇದ್ದರೆ ಈ ಲೇಖನವನ್ನು ಪೂರ್ತಿ ಓದಿ. ಏಕೆಂದರೆ ಇನ್ನೊಂದು ಬ್ಯಾಂಕ್ ಹೊಸ ರೀತಿಯ ಕ್ರೆಡಿಟ್ ಕಾರ್ಡ್ ಅನ್ನು ನೀಡುವ ಮೂಲಕ ಹಿಂದೆಂದೂ ಕಾಣದಂತಹ ಆಫರ್ ನೀಡುತ್ತಿದೆ.
ಕೋಟಕ್ ಮಹೀಂದ್ರಾ ಬ್ಯಾಂಕ್ ಈ ಬ್ಯಾಂಕ್ ಸದ್ಯಕ್ಕೆ ದೇಶದಾದ್ಯಂತ ವಿಸ್ತರಿಸಿಕೊಂಡಿರುವ ಬ್ಯಾಂಕ್, ಹಳ್ಳಿ ಹಳ್ಳಿಯಲ್ಲೂ ಕೂಡ ಈಗ ಕೋಟಕ್ ಮಹೀಂದ್ರಾ ಬ್ಯಾಂಕ್ ಪರಿಚಯ ಇದೆ. ನಿಮ್ಮ ಕುಟುಂಬದ ಒಬ್ಬ ಸದಸ್ಯರಾದರು ಕೋಟಕ್ ಮಹೀಂದ್ರಾ ಬ್ಯಾಂಕ್ ಅಲ್ಲಿ ತಮ್ಮ ಖಾತೆ ತೆರೆದಿರುತ್ತಾರೆ. ಅಲ್ಲದೇ ಕೋಟಕ್ ಮಹೇಂದ್ರ ಬ್ಯಾಂಕ್ ಕೊಡುತ್ತಿರುವ ಅನೇಕ ಯೋಜನೆಗಳ ಅಥವಾ ಸಾಲದ ಸೇವೆಯ ಉಪಯೋಗವನ್ನು ಪಡೆಯುತ್ತಾ ಇರುತ್ತಾರೆ.
ಇಷ್ಟೆಲ್ಲಾ ಫೇಮಸ್ ಆಗುತ್ತಿರುವ ಕೋಟಕ್ ಮಹೇಂದ್ರ ಬ್ಯಾಂಕ್ ಒಂದು ಹೆಜ್ಜೆ ಮುಂದೆ ಹೋಗಿ ಕ್ರೆಡಿಟ್ ಕಾರ್ಡ್ ವಿಷಯದಲ್ಲಿ ಹೊಸ ಆಫರ್ ಅನ್ನು ನೀಡಿದೆ. ಹೊಸ ರೀತಿಯ ಕ್ರೆಡಿಟ್ ಕಾರ್ಡ್ ಲಾಂಚ್ ಮಾಡುವ ಮೂಲಕ ದೇಶದಾದ್ಯಂತ ಎಲ್ಲಾ ಬ್ಯಾಂಕ್ ಗ್ರಾಹಕರ ಗಮನವನ್ನು ತನ್ನತ್ತ ಸೆಳೆದುಕೊಂಡಿದೆ. ಈ ರೀತಿ ಆಫರ್ ದೇಶದಲ್ಲಿ ಮೊದಲ ಬಾರಿಗೆ ಈ ಬ್ಯಾಂಕ್ ನೀಡುತ್ತಿದೆ ಎಂದು ಹೇಳಬಹುದು.
ಕೋಟಕ್ ಮಹೀಂದ್ರಾ ಬ್ಯಾಂಕ್ ಇಂಡಿಯನ್ ಆಯಿಲ್ ಸಹಭಾಗಿತ್ವದಲ್ಲಿ ಹೊಸ ಕ್ರೆಡಿಟ್ ಕಾರ್ಡ್ ಅನ್ನು ತಂದಿದೆ. ಇದೂ ಸಹ ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಆಗಿದ್ದು, ಕ ಕಾರ್ಡ್ ಇಂದ ವಾಹನ ಸವಾರರಿಗೆ ಬಹಳ ಪ್ರಯೋಜನವಾಗಲಿದೆ. ಹೇಗೆಂದರೆ ಹೊಸ ರೀತಿಯ ಕ್ರೆಡಿಟ್ ಕಾರ್ಡನ್ನು ಇಂಡಿಯನ್ ಆಯಿಲ್ ಕೋಟಕ್ ಮಹೀಂದ್ರಾ ಬ್ಯಾಂಕ್ ರೂಪೇ ಕಾರ್ಡ್ ಮಾದರಿಯಲ್ಲಿ ಜಾರಿಗೆ ತಂದಿದೆ.
ಈ ಕಾರ್ಡ್ ಸಹಾ ರೂಪೇ ಕಾರ್ಡ್ ನೆಟ್ವರ್ಕ್ ಮೇಲೆ ಕೆಲಸ ಮಾಡಲಿದೆ ಕ್ರೆಡಿಟ್ ಕಾರ್ಡ್ ಖರೀದಿಸುವವರಿಗೆ ರಿವಾರ್ಡ್ ಪಾಯಿಂಟ್ ಗಳು ಸಿಗಲಿದ್ದು ಅದನ್ನು ಉಪಯೋಗಿಸಿಕೊಂಡು ಅವರು ಇಂಡಿಯನ್ ಆಯಿಲ್ ಕೇಂದ್ರಗಳಲ್ಲಿ ಪೆಟ್ರೋಲ್ ಡೀಸೆಲ್ ತುಂಬಿಸುವಾಗ ಆಫರ್ ಗಳನ್ನು ಪಡೆದುಕೊಳ್ಳಬಹುದು. ಕೆಲವೊಂದು ಮೂಲಗಳ ಪ್ರಕಾರ 60 ಲೀಟರ್ ಉಚಿತ ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಪಡೆದುಕೊಳ್ಳಬಹುದು ಎನ್ನುವ ಮಾಹಿತಿಯು ಇದೆ.
ಇಂಧನಗಳು ಮಾತ್ರ ಅಲ್ಲದೆ ಊಟ, ತಿಂಡಿ, ದಿನಸಿ ಇತ್ಯಾದಿ ಖರೀದಿಗಳ ಕೂಡ 2% ಪರ್ಸೆಂಟ್ ಅಷ್ಟು ರಿಯಾಯಿತಿಯನ್ನು ಈ ಕಾರ್ಡ್ ಹೊಂದಿರುವವರು ಪಡೆಯುತ್ತಾರೆ. ಈ ಕಾರ್ಡ್ ಖರೀದಿಸುವವರಿಗೆ 48 ದಿನಗಳವರೆಗೆ ಯಾವುದೇ ರೀತಿಯ ಬಡ್ಡಿ ವಿಧಿಸುವುದಿಲ್ಲ ಹಾಗಾಗಿ ಬಡ್ಡಿ ರಹಿತ ಅವಧಿ 48 ದಿನ ಸಿಕ್ಕ ಹಾಗೆ ಆಗುತ್ತದೆ ಇಷ್ಟೆಲ್ಲ ಉಪಯೋಗ ಇರುವ ಈ ಕಾರ್ಡನ್ನು ಹಿಂದೆ ಮಾಡಿಸಿಕೊಳ್ಳಿ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಬ್ಯಾಂಕಿನ ಅದಕ್ಕಿಂತ ವೆಬ್ ಸೈಟ್ ಗೆ ಭೇಟಿ ಕೊಡಿ ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಅಥವಾ ಹತ್ತಿರದಲ್ಲಿರುವ ಬ್ಯಾಂಕ್ ಶಾಖೆಗೆ ಭೇಟಿ ಕೊಡಿ.