ಕೆಲವೊಂದಷ್ಟು ಜನ ಕಷ್ಟಪಟ್ಟು ಹಣವನ್ನು ಕೂಡಿಟ್ಟು ಅದನ್ನು ಬೇರೆಯವರಿಗೆ ಬಡ್ಡಿ ನೀಡಿ ಅವರಿಂದ ಮೋಸ ಹೋಗುತ್ತಾರೆ. ಅಂತಹವರು ಈ ಒಂದು ಗೌರ್ನಮೆಂಟ್ ಸ್ಕೀಮ್ ಅಂದರೆ ಪೋಸ್ಟ್ ಆಫೀಸ್ನಲ್ಲಿ ಮಂತ್ಲಿ ಸ್ಕೀಮ್ ಅಡಿಯಲ್ಲಿ ಹಣ ಇಡುವುದರಿಂದ ನಿಮಗೆ ಬಡ್ಡಿಯು ಬರುತ್ತದೆ ಹಾಗೆ ನಿಮ್ಮ ಹಣ ಯಾರಿಂದಲೂ ಮೋಸ ಹೋಗುವುದಿಲ್ಲ.
ಹಾಗಾದರೆ ಪೋಸ್ಟ್ ಆಫೀಸ್ ನಾ ಈ ಒಂದು ಮಂತ್ಲಿ ಸ್ಕೀಮ್ ಬಗ್ಗೆ ತಿಳಿದುಕೊಳ್ಳುವುದಾದರೆ. ಫೈನಾನ್ಸ್ ಮಿನಿಸ್ಟರ್ ನಿರ್ಮಲಾ ಸೀತಾರಾಮ್ ಅವರು 2023 ಬಜೆಟ್ ಮಂಡನೆಯಲ್ಲಿ ಈ ಒಂದು ಪೋಸ್ಟ್ ಆಫೀಸ್ನ ಮಂತ್ಲಿ ಸ್ಕೀಮ್ ನಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಿದ್ದಾರೆ.
ಮೊದಲು ಪೋಸ್ಟ್ ಆಫೀಸ್ನಲ್ಲಿ 4.5 ಲಕ್ಷದವರೆಗೆ ಮಾತ್ರ ಡೆಪಾಸಿಟ್ ಮಾಡಬಹುದಾಗಿತ್ತು ಆದರೆ 2023ರ ಬಜೆಟ್ ಮಂಡನೆಯಲ್ಲಿ 9 ಲಕ್ಷದವರೆಗೆ ಡೆಪಾಸಿಟ್ ಮಾಡಬಹುದಾಗಿದೆ ನೀವು ಹಣವನ್ನು ಡೆಪಾಸಿಟ್ ಮಾಡಿ ತಿಂಗಳಿಗೆ ಬಡ್ಡಿಯನ್ನು ಪಡೆದುಕೊಳ್ಳಬಹುದಾಗಿದೆ. ಇದು ಏಪ್ರಿಲ್ 1ನೇ ತಾರೀಖಿನ ನಂತರ ಜಾರಿಗೆ ಬರುತ್ತದೆ. ಈ ಒಂದು ಪೋಸ್ಟ್ ಆಫೀಸ್ನ ಯೋಜನೆ ಅಡಿಯಲ್ಲಿ ಮಾಸಿಕ ಆದಾಯದ ಬಡ್ಡಿ ದರವನ್ನು ನೋಡುವುದಾದರೆ ಐದು ವರ್ಷಗಳ ಹೂಡಿಕೆಯ ಅವಧಿ ಇರುತ್ತದೆ ಹಾಗೆ ನಿಮಗೆ ಇದರಲ್ಲಿ 7.1% ನಷ್ಟು ಬಡ್ಡಿ ದರ ಇರುತ್ತದೆ.
ಮೊದಲು ಹಿರಿಯ ನಾಗರಿಕರಿಗೆ ಈ ಒಂದು ಸ್ಕೀಮ್ ಅಡಿಯಲ್ಲಿ ಹೂಡಿಕೆ ಮಾಡುವಂತಹ ಅವಕಾಶ ಇರಲಿಲ್ಲ ಆದರೆ 2023 ರಿಂದ ನಿರ್ಮಲಾ ಸೀತಾರಾಮ ಅವರು ಹಿರಿಯ ನಾಗರಿಕರು ಸಹ ಈ ಒಂದು ಮಾಸಿಕ ಆದಾಯದ ಯೋಜನೆಯಡಿಯಲ್ಲಿ ಹೂಡಿಕೆ ಮಾಡಬಹುದು ಎನ್ನುವಂತಹ ಘೋಷಣೆಯನ್ನು ನೀಡಿದ್ದಾರೆ.
ನೀವು ಇಲ್ಲಿ 1000 ರೂಪಾಯಿಯಿಂದ ಹೂಡಿಕೆಯನ್ನು ಪ್ರಾರಂಭ ಮಾಡಬಹುದು ಇದು ಐದು ವರ್ಷಗಳ ಸ್ಕೀಮ್ ಆಗಿರುವುದರಿಂದ ಐದು ವರ್ಷದ ನಂತರ ಮೆಚುರಿಟಿ ಹೊಂದುತ್ತದೆ ನಂತರ ನೀವು ಹಣವನ್ನು ಪಡೆದುಕೊಳ್ಳಬಹುದು. ಅಲ್ಲಿಯವರೆಗೆ ನೀವು ತಿಂಗಳಿಗೆ ಬಡ್ಡಿಯನ್ನು ಪಡೆದುಕೊಳ್ಳುತ್ತೀರಾ. ಉದಾಹರಣೆಗೆ ನೀವು ನಿಮ್ಮ ಖಾತೆಯಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ನಿಮಗೆ ತಿಂಗಳಿಗೆ 591 ರೂಪಾಯಿಗಳು ಬಡ್ಡಿಯ ದರ ಸಿಗುತ್ತದೆ.
ಹಾಗೆ 3 ಲಕ್ಷ ಹೂಡಿಕೆ ಮಾಡಿದ್ದರೆ 1775 ಬಡ್ಡಿ ಸಿಗುತ್ತದೆ. 9 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ 5,325 ಬಡ್ಡಿಯ ದರ ಸಿಗುತ್ತದೆ. ಪೋಸ್ಟ್ ಆಫೀಸ್ ನಾ ಮಾಸಿಕ ವೇತನದ ಅಡಿಯಲ್ಲಿ ಅಕೌಂಟನ್ನು ಓಪನ್ ಮಾಡಲು 10 ವರ್ಷ ವಯಸ್ಸಿಗಿಂತ ಹೆಚ್ಚು ಇರಬೇಕು.
ಖಾತೆಯನ್ನು ತೆರೆದ ದಿನಾಂಕದಿಂದ 5 ವರ್ಷಗಳ ನಂತರ ನಿಮಗೆ ಮೆಚುರಿಟಿ ಹೊಂದುತ್ತದೆ ನಂತರ ನೀವು ಡೆಪಾಸಿಟ್ ಮಾಡಿದ್ದಂತಹ ಪೂರ್ಣ ಹಣವನ್ನು ಪಡೆದುಕೊಳ್ಳಬಹುದು. ಅಕೌಂಟ್ ಹೋಲ್ಡರ್ ಅಂದರೆ ಖಾತೆದಾರರು ಮ’ರ’ಣ ಹೊಂದಿದರೆ ಅವಧಿಗಿಂತ ಮೊದಲೇ ಖಾತೆಯನ್ನು ಮುಚ್ಚಬಹುದು ಹಾಗೆಯೇ ಮೊತ್ತವನ್ನು ನಾಮ ನಿರ್ದೇಶಕ ಅಂದರೆ ಯಾರು ನಾಮಿನಿ ಇರುತ್ತಾರೆ ಅವರು ಈ ಒಂದು ಹಣವನ್ನು ಹಿಂತಿರುಗಿ ಪಡೆದುಕೊಳ್ಳಬಹುದು.
ಹಾಗೆ ಇದಕ್ಕೂ ಸಹ ಬಡ್ಡಿಯನ್ನು ಪಾವತಿಸಲಾಗುತ್ತದೆ ನಿಗದಿತ ಅರ್ಜಿ ನಮೂನೆಯನ್ನು ಸಲ್ಲಿಸುವ ಮೂಲಕ ಈ ಒಂದು ಖಾತೆಯನ್ನು ಮುಚ್ಚಬಹುದು. ನಾವು ಕಷ್ಟಪಟ್ಟು ದುಡಿದಿರುವಂತಹ ಹಣವನ್ನು ಮತ್ತೊಬ್ಬರಿಗೆ ನೀಡಿ ಅವರಿಂದ ಮೋಸ ಹೋಗುವ ಬದಲು ಈ ಸ್ಕೀಮ್ ನ ಅಡಿಯಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡುವುದರಿಂದ ಬಡ್ಡಿಯು ದೊರೆಯುತ್ತದೆ ಹಾಗೆ ನಮ್ಮ ಹಣ ಸೇಫ್ ಆಗಿ ಇರುತ್ತದೆ.