ಗ್ರಾಮೀಣ ಹಾಗೂ ನಗರ ಪ್ರದೇಶದ ವಸತಿ ರಹಿತ ಮತ್ತು ನಿವೇಶನ ರಹಿತ ಬಡ ಜನರಿಗೆ ಕೈಗೆಟಕುವ ದರದಲ್ಲಿ ಚಿಕ್ಕದಾದ ಚೊಕ್ಕ ದಾದ ಸುಂದರವಾದ ಸುಭದ್ರ ಸೂರು ಒದಗಿಸಬೇಕು ಎನ್ನುವುದು ಸರ್ಕಾರದ ಆಶಯ. ಈ ನಿಟ್ಟಿನಲ್ಲಿ ಪ್ರಸ್ತುತ ರಾಜ್ಯ ಸರ್ಕಾರವು ಅಸಂಘಟಿತ ಕಾರ್ಮಿಕ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರು, ಬೀಡಿ ಕಾರ್ಮಿಕರು, ಆಟೋ ಚಾಲಕರು, ಚಿತ್ರರಂಗದ ಕಾರ್ಮಿಕರು ಸಣ್ಣ ಗುತ್ತಿಗೆದಾರರು, ಐಟಿ ಅಥವಾ ಐಟಿಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ.
ಬೆಂಗಳೂರು ನಗರ ಮತ್ತು ಬೆಂಗಳೂರು ಜಿಲ್ಲೆಯ ವಾರ್ಷಿಕ ಆದಾಯ 3 ಲಕ್ಷ ಹೊಂದಿರುವ ನಿವಾಸಿಗಳಿಗೆ ಮತ್ತು ಇತರೆ ಜಿಲ್ಲೆಯ ವಾರ್ಷಿಕ ಆದಾಯ 2 ಲಕ್ಷ ಹೊಂದಿರುವ ನಿವಾಸಿಗಳಿಗೆ ಶಾಶ್ವತವಾದ ನೆಲೆ ಒದಗಿಸಲು ಮೊಟ್ಟಮೊದಲ ಬಾರಿಗೆ ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ನನ್ನ ಮನೆ ವಸತಿ ಯೋಜನೆ ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ತಂದಿರುವ ಹೊಸ ಯೋಜನೆ ಇದಾಗಿದ್ದು ಈ ಯೋಜನೆಯ ಮೂಲಕ ರಸ್ತೆ, ನೀರು, ವಿದ್ಯುತ್, ಚರಂಡಿ ಮುಂತಾದ ಮೂಲ ಸೌಲಭ್ಯಗಳನ್ನು ಹೊಂದಿರುವ ವಿನೂತನವಾದ ನನ್ನ ಮನೆ ಭಾಗ್ಯ ಸಂಪದ ಯಶಸ್ಸು ಯೋಜನೆ ಅಡಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಈ ಯೋಜನೆಯು ನಿಗಮದ ಹಂಚಿಕೆ ನಿಯಮಾವಳಿಗಳಿಗೆ ಅನುಸಾರವಾಗಿ ಫ್ಲಾಟ್ ಗಳನ್ನು ಹೊಂದಲು ಬಯಸುವ ಆಸಕ್ತ ಹಾಗೂ ಅರ್ಹ ಸಾರ್ವಜನಿಕರಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರಿಗಾಗಿ ಈ ಲೇಖನದಲ್ಲೂ ಸಹ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು ದಾಖಲೆಗಳು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತು ಅಂತಿಮ ದಿನಾಂಕ ಮುಂತಾದ ವಿಷಯದ ಬಗ್ಗೆ ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಬಯಸುವವರಿಗೆ ಬೇಕಾದ ಅರ್ಹತೆ ಮತ್ತು ಪ್ರಮುಖ ದಾಖಲೆಗಳು :-
●ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು ಬೆಂಗಳೂರು ನಗರ/ ಬೆಂಗಳೂರು ಗ್ರಾಮಾಂತರ/ ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಕನಿಷ್ಟ 5 ವರ್ಷಗಳಿಂದ ವಾಸವಿರಬೇಕು, ಈ ಬಗ್ಗೆ ಕಂದಾಯ ಇಲಾಖೆಯಿಂದ ಧೃಡೀಕರಣ ಪತ್ರ ಪಡೆದಿರಬೇಕು.
● ಆಧಾರ್ ಸಂಖ್ಯೆ ಮತ್ತು ಪಡಿತರ ಚೀಟಿಯನ್ನು ಹೊಂದಿರಬೇಕು
● ಚುನಾವಣಾ ಆಯೋಗದಿಂದ ಪಡೆದ ಪಡಿತರ ಚೀಟಿ ಹೊಂದಿರಬೇಕು
● ಅರ್ಜಿ ಸಲ್ಲಿಸುವವರು ಅಥವಾ ಅವರ ಕುಟುಂಬದ ಯಾವುದೇ ಸದಸ್ಯರು ಸ್ವಂತ ನಿವೇಶನ ಅಥವಾ ಮನೆಗಳನ್ನು ಹೊಂದಿರಬಾರದು
● ಬೆಂಗಳೂರು ಜಿಲ್ಲೆಯ ನಿವಾಸಿಗಳಿಗೆ ಆದಾಯ ಮಿತಿ ವಾರ್ಷಿಕವಾಗಿ 3 ಲಕ್ಷ ಇತರ ಜಿಲ್ಲೆಯ ನಿವಾಸಿಗಳಿಗೆ ಆದಾಯ ಮಿತಿ ವಾರ್ಷಿಕವಾಗಿ 2 ಲಕ್ಷದ ಒಳಗಿರಬೇಕು.
● ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಹೊಂದಿರಬೇಕು
● ಪ್ರತಿ ಕುಟುಂಬಕ್ಕೆ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಲು ಅವಕಾಶ ಇರುತ್ತದೆ.
● ಅರ್ಜಿದಾರರು ವಿಕಲಚೇತನರಾಗಿದ್ದಲ್ಲಿ ವಿಕಲಚೇತನ ಪ್ರಮಾಣ ಪತ್ರವನ್ನು ನೀಡಬೇಕು.
ಅರ್ಜಿ ಸಲ್ಲಿಸುವ ವಿಧಾನ :- ಯಾವುದೇ ಬ್ರೌಸಿಂಗ್ ಸೆಂಟರ್ ಅಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಗೆ ಸಂಬಂಧಪಟ್ಟ ಪ್ರಮುಖ ಮಾಹಿತಿಗಳು :-
● ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಪಟ್ಟ ಎಲ್ಲ ಮಾರ್ಗಸೂಚಿಗಳು ಪ್ರಮುಖ ಪತ್ರಗಳು ಸುತ್ತೋಲೆಗಳು ಹಾಗೂ ನಮೂನೆಗಳು ಮತ್ತು ಗ್ರಾಹಕರಿಗೆ ಬೇಕಾದ ಅಗತ್ಯ ಮಾಹಿತಿಗಳನ್ನು ನಿಗಮದ ಅಧಿಕೃತ ವೆಬ್ಸೈಟ್ ಆದ https://ashraya.karnataka.gov.in ಅಲ್ಲಿ ಪಡೆಯಬಹುದು.
● ನಿಗಮದ ಮೇಲ್ಕಂಡ ಅಧಿಕೃತ ವೆಬ್ಸೈಟ್ ಅಲ್ಲಿ ಅರ್ಜಿ ಸಲ್ಲಿಸಿ ಸ್ವೀಕೃತಿ ಪ್ರತಿಯನ್ನು ಪಡೆಯಬಹುದು.
● ಅರ್ಹತೆ ಬಗ್ಗೆ ಮಾಹಿತಿ SMS ಅಲ್ಲಿ ಪಡೆದ ನಂತರ ಮುಂಗಡ ಹಣ ಮೂರು ಲಕ್ಷ ರೂಗಳನ್ನು IDBI ಗಾಂಧಿನಗರ ಇಲ್ಲಿ ಪಾವತಿಸಬೇಕು.
● ಈ ಯಶಸ್ಸು ಯೋಜನೆಯ ಮನೆಯ ಘಟಕದ ವೆಚ್ಚ 13,25,000 ರೂಗಳು ಆಗಿದ್ದು, ಸಂಪೂರ್ಣ ಮೊತ್ತವನ್ನು ಫಲಾನುಭವಿಯ ವಂತಿಕೆ ಮತ್ತು ಬ್ಯಾಂಕ್ ಸಾಲದ ಮೂಲಕ ಭರಿಸಲಾಗುವುದು.
● 25.07.2024 ರಿಂದ ಆನ್ಲೈನಲ್ಲಿ ಅರ್ಜಿ ಸ್ವೀಕೃತಿ
ಪ್ರಕ್ರಿಯೆ ಆರಂಭವಾಗಲಿದ್ದು ಮುಂದಿನ 15 ತಿಂಗಳ ಒಳಗೆ ಫಲಾನುಭವಿಗಳಿಗೆ ನಿವೇಶನ ದೊರೆಯಲಿದೆ. ●ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ ಭೇಟಿ ಕೊಡಬಹುದು ಅಥವಾ ದೂರವಾಣಿ ಸಂಖ್ಯೆ 080 – 2311 8888/ 2210 6888 ಕರೆ ಮಾಡಬಹುದು.