ಕರ್ನಾಟಕದಾದ್ಯಂತ ಎಲ್ಲಾ ನಿರುದ್ಯೋಗಿ ಯುವ ಜನತೆಗೆ ಸಿಹಿ ಸುದ್ದಿ. ಹಾಗೆಯೇ ಸರಕಾರಿ ಹುದ್ದೆ ಆಕಾಂಕ್ಷೆಗಳಿಗೂ ಕೂಡ ಇದು ಸದವಕಾಶ. ಯಾಕೆಂದರೆ ಕರ್ನಾಟಕದ ಕೃಷಿ ಇಲಾಖೆಯು ನೇಮಕಾತಿ ನಡೆಸುತ್ತಿದ್ದು, ಕೃಷಿ ವಿಜ್ಞಾನ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಈ ನೇಮಕಾತಿ ನಡೆಸಲಾಗುತ್ತಿದೆ. ಈಗಾಗಲೇ ಅದಕ್ಕೆ ಸಂಬಂಧಪಟ್ಟ ಹಾಗೆ ಇಲಾಖೆ ಅಧಿಸೂಚನೆಯನ್ನು ಕೂಡ ಹೊರಡಿಸಿದೆ. ಈ ಹುದ್ದೆಗಳಿಗೆ ಕರ್ನಾಟಕದಾದ್ಯಂತ ಇರುವ ಎಲ್ಲಾ ಅರ್ಹ ಹಾಗೂ ಆಸಕ್ತ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಇಲಾಖೆ ಹೊರಡಿಸಿರುವ ಅಧಿಕೃತ ಅಧಿಸೂಚನೆಯಲ್ಲಿರುವ ಪ್ರಮುಖ ಅಂಶಗಳಾದ ಹುದ್ದೆಗಳ ಸಂಖ್ಯೆ, ಹುದ್ದೆಗಳ ವಿವರ, ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಅರ್ಜಿ ಶುಲ್ಕ, ಆಯ್ಕೆ ವಿಧಾನ, ಅರ್ಜಿ ಸಲ್ಲಿಕೆಗೆ ಸಂಬಂಧಪಟ್ಟ ಹಾಗೆ ಇರುವ ಪ್ರಮುಖ ದಿನಾಂಕಗಳು ಇವುಗಳ ಬಗ್ಗೆ ತಿಳಿಸಿ ಕೊಡುವ ಪ್ರಯತ್ನವನ್ನು ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ತಿಳಿದುಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯು ನಿಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರಿಗೂ ಅನುಕೂಲವಾಗಬಹುದು, ಆ ಕಾರಣಕ್ಕಾಗಿ ಅವರ ಜೊತೆಗೂ ಕೂಡ ಶೇರ್ ಮಾಡಿಕೊಳ್ಳಿ.
ಇಲಾಖೆ :- ಕೃಷಿ ಇಲಾಖೆ
ಸಂಸ್ಥೆ :- ಕೃಷಿ ವಿಜ್ಞಾನ ಕೇಂದ್ರ
ಹುದ್ದೆಗಳ ಸಂಖ್ಯೆ :- 01 ಹುದ್ದೆ
ಉದ್ಯೋಗ ಸ್ಥಳ :- ದಾವಣಗೆರೆ
ಹುದ್ದೆ :- ಕಾರ್ಯಕ್ರಮ ಸಹಾಯಕ
ವೇತನ ಶ್ರೇಣಿ :- ಕಾರ್ಯಕ್ರಮ ಸಹಾಯಕ ಹುದ್ದೆಗೆ ಆಯ್ಕೆ ಆಗುವ ಅಭ್ಯರ್ಥಿಗೆ ಪ್ರತಿ ತಿಂಗಳಿಗೆ ರೂ.35,400 ವೇತನವಾಗಿ ಸಿಗಲಿದೆ.
ಶೈಕ್ಷಣಿಕ ವಿದ್ಯಾರ್ಹತೆ :- ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕೃಷಿ ವಿಷಯದಲ್ಲಿ ಪದವಿ ಪಡೆದಿರಬೇಕು.
ವಯೋಮಿತಿ :- ಈ ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೃಷಿ ಇಲಾಖೆ ಹೊರಡಿಸಿರುವ ಅಧಿಕೃತ ಅಧಿಸೂಚನೆ ಪ್ರಕಾರ ಕನಿಷ್ಠ 18 ವರ್ಷಗಳನ್ನು ಪೂರೈಸಬೇಕು ಗರಿಷ್ಠ 30 ವರ್ಷಗಳನ್ನು ಮೀರಿದಬಾರದು.
ವಯೋಮಿತಿ ಸಡಿಲಿಕೆ :-
●SC&ST ಅಭ್ಯರ್ಥಿಗಳಿಗೆ 5 ವರ್ಷ
● OBC ಅಭ್ಯರ್ಥಿಗಳಿಗೆ 3 ವರ್ಷ
ಅರ್ಜಿ ಶುಲ್ಕ :-
SC&ST ಅಭ್ಯರ್ಥಿಗಳು ಹಾಗೂ ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ ರೂ.1000 ಅರ್ಜಿ ಶುಲ್ಕ ನಿಗದಿ ಪಡಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ :-
●ಎಲ್ಲಾ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
●ಅಧಿಸೂಚನೆಯಲ್ಲಿ ತಿಳಿಸಲಾದ ವಿಳಾಸಕ್ಕೆ ಅರ್ಜಿ ಪತ್ರ ಬರೆದು ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ ನಿಖರತೆ ಬಗ್ಗೆ ಬೇಕಾದ ಪ್ರಮಾಣ ಪತ್ರಗಳ ಪ್ರತಿಯೊಂದಿಗೆ ಕಡೆ ದಿನಾಂಕದ ಒಳಗೆ ಕಳುಹಿಸಿಕೊಡಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ :-
ಕಾರ್ಯದರ್ಶಿ, ತರಳಬಾಳು ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ,
ICAR ತರಳಬಾಳು ಕೃಷಿ ವಿಜ್ಞಾನ ಕೇಂದ್ರ ,ಕದಳಿವನ, LIC ಕಾಲೋನಿ ಲೇಔಟ್, ತರಾಳಬಾಳು,
ಕೆವಿಕೆ ರಸ್ತೆ, ದಾವಣಗೆರೆ – 577004
ಕರ್ನಾಟಕ.
ಆಯ್ಕೆ ವಿಧಾನ :-
●ಲಿಖಿತ ಪರೀಕ್ಷೆ
●ಸಂದರ್ಶನ
●ದಾಖಲೆಗಳ ಪರಿಶೀಲನೆ
ಪ್ರಮುಖ ದಿನಾಂಕಗಳು :-
●ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 17.04.2023
●ಅರ್ಜಿ ಸಲ್ಲಿಸಲು ಕೊನೆ ದಿನಾಂಕ – 18.04.2023
●ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ – 18.04.2023