Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಹಣ ಬೇಕು ಎಂದಾಗ ಬ್ಯಾಂಕಿಗೆ ಹೋಗಿ ಚೆಕ್ ಬರೆದು ಕೊಟ್ಟು ಹಣ ಡ್ರಾ ಮಾಡಿಕೊಂಡು ಬರುತ್ತಿದ್ದ ಕಾಲ ದಶಕಗಳ ಹಿಂದೆ ಹೋಯಿತು. ಈಗ ಆನ್ಲೈನಲ್ಲಿ ಎಲ್ಲಾ ಆರ್ಥಿಕ ಚಟುವಟಿಕೆ ವ್ಯವಹಾರವು ಮುಗಿಯುವುದರಿಂದ ಜನ ನಗದು ಹಣದ ಬಳಕೆ ಕಡಿಮೆ ಮಾಡಿದ್ದಾರೆ. ಒಂದು ವೇಳೆ ಹಣ ಬೇಕಾದಾಗ ಈಗ ಎಲ್ಲರೂ ಕೂಡ ತಮ್ಮ ಖಾತೆ ಸಂಖ್ಯೆಗಳಿಗೆ ಎಟಿಎಂ ಕಾರ್ಡ್ ಗಳನ್ನು ಹೊಂದಿರುವುದರಿಂದ ಎಟಿಎಂ ಮಿಷನ್ ಗಳ ಬಳಿ ಹೋಗಿ ಹಣ ಡ್ರಾ ಮಾಡಿಕೊಂಡು ಖರ್ಚು ಮಾಡುತ್ತಾರೆ.
ಆದರೆ ಈ ರೀತಿ ಎಟಿಎಂ ಮಿಷನ್ ಗಳಿಗೆ ಹೋಗಿ ನಿಮ್ಮ ಎಟಿಎಂ ಕಾರ್ಡ್ ಹಾಕಿ ಹಣ ಪಡೆಯುವ ವೇಳೆ ದುಷ್ಕರ್ಮಿಗಳ ಕಣ್ಣು ನಿಮ್ಮ ಕಾರ್ಡ್ ಮೇಲೆ ಬಿದ್ದು ಕ್ಷಣದಲ್ಲೇ ಖಾತೆ ಪೂರ್ತಿ ಹಣ ಕೊಳ್ಳೆ ಆಗಬಹುದು. ಈಗ ಹಣದ ವ್ಯವಹಾರ ಎಷ್ಟು ಅನುಕೂಲಕರವಾಗುತ್ತಿದೆಯೋ ಹಾಗೂ ಸರಳವಾಗುತ್ತಿದೆಯೋ ಅದೇ ರೀತಿ ಹಣಕ್ಕೆ ಅಪಾಯ ಆಪತ್ತು ಅಭದ್ರತೆ ಕಾಣುತ್ತಿದೆ. ಯಾಕೆಂದರೆ ದುಷ್ಕರ್ಮಿಗಳು ಈ ರೀತಿ ಅವಕಾಶಗಳಿಗಾಗಿ ಹೊಂಚು ಹಾಕುತ್ತಾ ಮುಗ್ಧರ ಹಣ ಹೊಡೆಯುವ ಹುನ್ನಾರ ನಡೆಸುತ್ತಿದ್ದಾರೆ.
ಅದರಲ್ಲೂ ಎಟಿಎಂ ಕಾರ್ಡ್ ಗಳು ಇಂತಹ ವಿಚಾರಗಳಲ್ಲಿ ಎಷ್ಟು ಜಾಗೃತಿಯಿಂದ ಇದ್ದರೂ ಸಾಲದು. ಹಾಗಾಗಿ ಎಟಿಎಂಗೆ ಹೋಗಿ ಹಣ ಡ್ರಾ ಮಾಡುವವರು ತಪ್ಪದೇ ಕೆಲ ವಿಚಾರಗಳ ಬಗ್ಗೆ ಗಮನ ವಹಿಸಬೇಕು. ಇಲ್ಲವಾದರೆ ಕ್ಷಣಾರ್ಧದಲ್ಲಿ ನಿಮ್ಮ ಖಾತೆ ಪೂರ್ತಿ ಹಣ ಕೈಗೆ ಸಿಗದಂತೆ ಆಗಬಹುದು. ಅದಕ್ಕಾಗಿ ನೀವು ಎಟಿಎಂ ಮಿಷಿನ್ ಗಳ ಬಳಿ ಹೋದಾಗ ಕಾರ್ಡ್ ಹಾಕುವ ಸ್ಲಾಟ್ ಬೆಳಕಿನ ಬಣ್ಣವನ್ನು ಪರೀಕ್ಷಿಸಿ. ಒಂದು ವೇಳೆ ಅದು ಹಸಿರು ಬಣ್ಣದಲ್ಲಿದ್ದರೆ ಮಾತ್ರ ನಿಮ್ಮ ಕ್ರಿಯೆ ಮುಂದುವರೆಸಿ.
ಒಂದು ವೇಳೆ ಅದು ಕೆಂಪು ಬಣ್ಣದಲ್ಲಿದ್ದರೆ ಅಥವಾ ಬಣ್ಣವೇ ಬರದಿದ್ದರೆ ಅಲ್ಲಿ ಯಾವುದೋ ಸಮಸ್ಯೆ ಇದೆ ಎಂದು ಅರ್ಥ, ಆಗ ಯಾವುದೇ ಕಾರಣಕ್ಕೂ ಎಟಿಎಂ ಕಾರ್ಡ್ ಹಾಕಿ ಹಣ ತೆಗೆದುಕೊಳ್ಳಲು ಹೋಗಬೇಡಿ. ಜೊತೆಗೆ ಸ್ಲಾಟ್ ಬಹಳ ಸಡಿಲವಾಗಿದ್ದರೂ ಕೂಡ ನೀವು ಹಣ ಪಡೆಯಲು ಹೋಗಬೇಡಿ ಯಾಕೆಂದರೆ ಸ್ಲಾಟಿನ ಮೇಲ್ಭಾಗದಲ್ಲಿ ಡಮ್ಮಿಯನ್ನು ಸ್ಥಾಪಿಸುವ ಸಾಧ್ಯತೆ ಇರುತ್ತದೆ. ಇದರ ಉಪಯೋಗ ಪಡೆದು ನಿಮ್ಮನ್ನು ವಂಚಿಸುವ ಕೆಲಸ ನಡೆಯುತ್ತದೆ. ಹಾಗಾಗಿ ಈ ವಿಷಯಗಳ ಬಗ್ಗೆ ಎಚ್ಚರಿಕೆಯಿಂದ ಇರಿ.
ಮತ್ತೊಂದು ಸೂಚನೆ ಏನೆಂದರೆ ಎಟಿಎಂ ಮಿಷನ್ಗಳ ಬಳಿ ಇತ್ತೀಚೆಗೆ ಸುರಕ್ಷತೆಗಾಗಿ ಹಾಗೂ ಕಣ್ಗಾವಲಿಗಾಗಿ ಸಿಸಿಟಿವಿ ಕ್ಯಾಮೆರಾ ಹಾಕಿರುತ್ತಾರೆ ಆದರೆ ಅದು ಕೂಡ ಅಪಾಯ ತರುವ ಸಾಧ್ಯತೆ ಇದೆ ಯಾಕೆಂದರೆ ದುಷ್ಪರ್ಮಿಗಳು ಹ್ಯಾಕ್ ಮಾಡಿ ಅದರಲ್ಲಿ ನೀವು ಬಳಸುವ ಪಿನ್ ಕೋಡ್ ಗಳನ್ನು ಗಮನಿಸಿ ನಿಮ್ಮ ಖಾತೆಗೆ ಕನ್ನ ಹಾಕಬಹುದು. ಆದ ಕಾರಣ ನೀವು ಎಟಿಎಂ ಕಾರ್ಡ್ ಹಾಕಿ, ಹಣ ಬಿಡಿಸುವ ವೇಳೆ ನಿಮ್ಮ ಸೀಕ್ರೆಟ್ ಕೋಡ್ ಹಾಕುವಾಗ ಎಡಗೈಯಿಂದ ಅದನ್ನು ಕವರ್ ಮಾಡಿ ಮತ್ತು ನಿಮ್ಮನ್ನು ಹೊರತು ಪಡಿಸಿ ನಿಮ್ಮ ಸೀಕ್ರೆಟ್ ನಂಬರ್ ಮತ್ತೆ ಯಾರಿಗೂ ಗೊತ್ತಾಗದಂತೆ ಯಾವಾಗಲೂ ಗೌಪ್ಯತೆ ಕಾಯ್ದುಕೊಳ್ಳಿ.
ಇತ್ತೀಚೆಗೆ ಕಾರ್ಡ್ ಕ್ಲೋನಿಂಗ್ ಟ್ರೆಂಡಿ ಆಗಿದೆ. ಕಾರ್ಡ್ ಕ್ಲೋನಿಂಗ್ ಮಾಡಿದ ನಂತರ ಅವರಿಗೆ ಪಿನ್ ಕೋಡ್ ಪಡೆಯುವ ಅವಶ್ಯಕತೆ ಇರುತ್ತದೆ ಆದಕಾರಣ ಈ ವಿಚಾರದಲ್ಲಿ ನೀವು ಸದಾ ಜಾಗದಿಂದ ಇರಿ. ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರ ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಸಹಾಯ ಮಾಡಿ.