5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಬಂಪರ್ ಸುದ್ದಿ ಸರ್ಕಾರದ ಕಡೆಯಿಂದ ಒಂದು ಎಕರೆಗೆ 5000 ಸಿಗಲಿದೆ.

 

WhatsApp Group Join Now
Telegram Group Join Now

ಕೃಷಿ ಚಟುವಟಿಕೆಯು ಭಾರತದ ಆರ್ಥಿಕತೆಯ ಬೆನ್ನೆಲುಬು ಎನ್ನುವುದನ್ನು ನಾವೆಲ್ಲ ನಂಬಿದ್ದೇವೆ. ಹಾಗೆಯೇ ಆರ್ಥಿಕತೆ ವಿಚಾರವನ್ನು ಬಿಟ್ಟು ಮನುಷ್ಯನ ಜೀವನ ನಡೆಯುವುದಕ್ಕೆ ಪ್ರಮುಖ ಆಧಾರವೇ ಆಹಾರ. ಅಂತಹ ಆಹಾರವನ್ನು ಬೆಳೆದುಕೊಡಲು ರೈತನಿಗೆ ಮಾತ್ರ ಸಾಧ್ಯ, ಅವನಿಗೆ ಮಾತ್ರ ಆ ಶಕ್ತಿ ಇರುವುದು.

ಇತ್ತೀಚಿನ ದಿನಗಳಲ್ಲಿ ಕೃಷಿ ಕಡೆ ಒಲವು ಕಡಿಮೆ ಆಗುತ್ತಿರುವುದನ್ನು ಪರಿಕಂಡಿರುವ ಸರ್ಕಾರ ಮುಂದಾಗುವ ಗಂಭೀರ ಪರಿಣಾಮಗಳನ್ನು ಮನಗಂಡು ಕೃಷಿ ಕ್ಷೇತ್ರಕ್ಕೆ ಉತ್ಸಾಹಿ ಯುವಕರನ್ನು ಸೆಳೆಯುವ ಕಾರಣಕ್ಕಾಗಿ ಅನೇಕ ಯೋಜನೆಗಳ ಮೂಲಕ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರಗಳು ಕೃಷಿ ಚಟುವಟಿಕೆ ನಡೆಸುವವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಸಬ್ಸಿಡಿ ರೂಪದಲ್ಲಿ ಸಹಾಯಧನ ಕೊಡುವುದು.

ಕೃಷಿ ಚಟುವಟಿಕೆಗಳಿಗೆ ಬಳಸುವ ಪದಾರ್ಥಗಳನ್ನು ಮತ್ತು ಸಾಮಗ್ರಿಗಳನ್ನು ಖರೀದಿಸಲು ಸಹಾಯ ಮಾಡುವ ಕೆಲಸಗಳನ್ನು ಮಾಡುತ್ತಿವೆ. ಅದರಲ್ಲೂ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಆಡಳಿತಕ್ಕೆ ಬಂದಮೇಲೆ ರೈತರಿಗಾಗಿ ಪಿಎಮ್ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದಿದ್ದಾರೆ. ಈವರೆಗೆ 13 ಕಂತುಗಳ ಹಣ ಕೂಡ ಬಿಡುಗಡೆ ಆಗಿದ್ದು, ಪ್ರತಿ ಆರ್ಥಿಕ ವರ್ಷಕ್ಕೆ ಮೂರು ಕಂತುಗಳಲ್ಲಿ 2,000 ರೂಪಾಯಿಗಳು ದೇಶದ 14 ಕೋಟಿ ರೈತರ ಖಾತೆಗೆ ನೇರ ವರ್ಗಾವಣೆ ಮೂಲಕ ಜಮೆ ಆಗುತ್ತಿದೆ.

ಕಿಸಾನ್ ಫಸಲ್ ಭೀಮಾ ಯೋಜನೆ ಕೂಡ ಇತ್ತೀಚಿಗೆ ಹೆಚ್ಚು ಪ್ರಖ್ಯಾತಿ ಆಗುತ್ತಿದ್ದು ಜನರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿ ಒಂದು ವೇಳೆ ಬೆಳೆ ಹಾಳದ ಸಂದರ್ಭದಲ್ಲಿ ತಮ್ಮ ಬೆಳೆಗೆ ವಿಮೆ ಪರಿಹಾರ ಹಣ ಪಡೆಯುತ್ತಿದ್ದಾರೆ. ಇನ್ನು ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಹಾಗೆಯೇ ಪ್ರತಿ ರಾಜ್ಯದಲ್ಲೂ ಕೂಡ ರಾಜ್ಯ ಸರ್ಕಾರಗಳು ರೈತರಿಗಾಗಿ ಅನೇಕ ಅನುಕೂಲಗಳನ್ನು ಮಾಡಿ ಕೊಡುತ್ತಿವೆ.

ಕೆಲವು ಸಹಕಾರಿ ಸಂಘಗಳಲ್ಲಿ ಕೃಷಿ ಸಾಲ ಪಡೆಯುವವರಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ, ಜೊತೆಗೆ ಕರ್ನಾಟಕದಲ್ಲಿ ಸಿಎಂ ಕಿಸಾನ್ ಸಮ್ಮಾನ್ ಯೋಜನೆ ಕೂಡ ಜಾರಿಯಲ್ಲಿ ಇದೆ. ಕೇಂದ್ರದಲ್ಲಿ ಮೂರು ಕಂತುಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ಹಣ ಪಡೆಯುವ ರೈತರು ರಾಜ್ಯದಲ್ಲಿ ಮತ್ತೆ ಹೆಚ್ಚುವರಿ ಆಗಿ 4,000 ಗಳನ್ನು 2 ಕಂತುಗಳಲ್ಲಿ ಪಡೆಯಲಿದ್ದಾರೆ. ಇದೇ ರೀತಿಯ ಮತ್ತೊಂದು ಯೋಜನೆಯನ್ನು ಈಗ ಝಾರ್ಖಂಡ್ ಸರ್ಕಾರ ತನ್ನ ರಾಜ್ಯದ ರೈತರಿಗಾಗಿ ಜಾರಿಗೆ ತಂದಿದೆ.

ಸಣ್ಣ ರೈತರು ಹಾಗೂ ಅತಿ ಸಣ್ಣ ರೈತರಿಗಾಗಿ ಜಾರಿಗೆ ತಂದಿರುವ ಯೋಜನೆ ಇದಾಗಿದ್ದು ಈಗ ದೇಶದಾದ್ಯಂತ ಎಲ್ಲ ರೈತರ ಗಮನ ಸೆಳೆಯುತ್ತಿದೆ. ಕೃಷಿ ಆಶಿರ್ವಾದ್ ಯೋಜನೆ ಎನ್ನುವ ಹೆಸರಿನಲ್ಲಿ ಝಾರ್ಖಂಡ್ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಝಾರ್ಖಂಡ್ ರಾಜ್ಯದಲ್ಲಿ 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರುಗಳು ಈ ಬಾರಿ ತಮ್ಮ ಖಾರಿಫ್ ಬೆಳೆಗೂ ಮುನ್ನ ಸರ್ಕಾರದ ಕಡೆಯಿಂದ ಪ್ರತಿ ಎಕರೆಗೆ 5,000ಗಳನ್ನು ಪಡೆಯಲಿದ್ದಾರೆ.

ಈ ಬಗ್ಗೆ ಜಾರ್ಖಂಡ್ ಸರ್ಕಾರವೇ ಅಧಿಕೃತವಾಗಿ ಘೋಷಣೆ ಕೂಡ ಮಾಡಿದ್ದು ತನ್ನ ರಾಜ್ಯದ ರೈತರಿಗೆ ಸಿಹಿ ಸುದ್ದಿ ನೀಡಿದೆ. ಒಂದು ಎಕರೆಗೆ 5000 ಹೀಗೆ 5 ಎಕರೆಗೆ 25,000 ಗಳನ್ನು ರೈತರು ಪಡೆಯಲಿದ್ದಾರೆ. ಈ ಯೋಜನೆ ಬಗ್ಗೆ ಮತ್ತು ಇದು ನಮ್ಮ ರಾಜ್ಯದಲ್ಲಿ ಜಾರಿಗೆ ಬರುವ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now