LIC ಪಾಲಿಸಿ ಮಾಡಿಸಿರುವ & ಮಾಡಿಸಬೇಕು ಅಂತ ಅಂದುಕೊಂಡಿರುವವರು ತಪ್ಪದೆ ಈ ಸುದ್ದಿ ನೋಡಿ ಶೀಘ್ರದಲ್ಲೇ ಈ ಪಾಲಿಸಿಗಳು ಬಂದ್ ಆಗಲಿವೆ.

 

WhatsApp Group Join Now
Telegram Group Join Now

LIC ಭಾರತದಾತ್ಯಂತ ಎಲ್ಲಾ ಸಾಮಾನ್ಯ ವರ್ಗದ ಜನರಿಗೂ ಕೂಡ ಪರಿಚಯ ಇರುವ ಒಂದು ವಿಮೆ ಸಂಸ್ಥೆ. ಹಲವು ವರ್ಷಗಳಿಂದ ಭಾರತೀಯರ ನಂಬಿಕೆ ಗಿಟ್ಟಿಸಿಕೊಂಡಿರುವ ಈ LIC ತನ್ನ ಪಾಲಿಸಿಗಳನ್ನು ಖರೀದಿಸುವ ಗ್ರಾಹಕರುಗಳಿಗೆ ಆಕರ್ಷಕ ರೀತಿಯ ಯೋಜನೆಗಳನ್ನು ಜಾರಿಗೆ ತಂದು ಪ್ರತಿ ವರ್ಷ ಕೂಡ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.

ಇಂದು ಭಾರತದ ಪ್ರತಿಯೊಂದು ಕುಟುಂಬದಲ್ಲೂ ಕೂಡ ತಮ್ಮ ಭವಿಷ್ಯಕ್ಕಾಗಿ ಒಂದಾದರೂ ಪಾಲಿಸಿ ಖರೀದಿಸೋಣ ಎನ್ನುವ ಮನಸ್ಥಿತಿಗೆ ಬರುವಷ್ಟರ ಪಟ್ಟಿಗೆ ಭಾರತೀಯರ ಮನಸ್ಸನ್ನು LIC ಪಾಲಿಸಿಗಳು ಬದಲಾಯಿಸಿವೆ. ತಾವು ಇರದಿದ್ದರೂ ಕೂಡ ತನ್ನ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುತ್ತದೆ, ಪ್ರೀಮಿಯಂ ಒತ್ತುಗಳು ಕೂಡ ಕಡಿಮೆ ಮೊತ್ತದಾಗಿರುತ್ತದೆ ಎನ್ನುವ ಕಾರಣಕ್ಕಾಗಿ ಅನೇಕ ಮಂದಿ ಪಾಲಿಸಿಗಳನ್ನು ಮಾಡಿಸುತ್ತಿದ್ದಾರೆ.

ಸರ್ಕಾರ ಕೂಡ ಈಗ ಎಲ್ಐಸಿ ಸಂಸ್ಥೆಯ ಜೊತೆ ಸೇರಿ ಭಾರತೀಯ ಪ್ರಜೆಗಳಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆ ಯೋಜನೆಗಳಲ್ಲಿ ಎರಡು ಯೋಜನೆಗಳು ಶೀಘ್ರದಲ್ಲೇ ಬಂದ್ ಆಗುತ್ತಿವೆ. ನಿಮಗೆ ಈ ಯೋಜನೆಗಳ ಬಗ್ಗೆ ಇದುವರೆಗೆ ಅರಿವು ಇಲ್ಲ ಎಂದರೆ ಅಂಕಣವನ್ನು ಪೂರ್ತಿ ಓದಿ. ಇಲ್ಲಿ ಯೋಜನೆಗಳ ವಿವರವನ್ನು ವಿವರಿಸಲಾಗಿದೆ ಹಾಗೂ ಅದನ್ನು ಖರೀದಿಸುವ ಬಗೆಯನ್ನು ಕೂಡ ತಿಳಿಸಲಾಗಿದೆ.

ಶೀಘ್ರದಲ್ಲೇ ಬಂದ್ ಆಗಲಿರುವ ಈ ಜನಪ್ರಿಯ ಯೋಜನೆಗಳ ಮಾಹಿತಿ ತಿಳಿದುಕೊಂಡು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರ ಜೊತೆಗೂ ಕೂಡ ಈ ಮಾಹಿತಿ ಹಂಚಿಕೊಳ್ಳಿ. ಕರ್ನಾಟಕ ಸರ್ಕಾರ ಜಾರಿಗೆ ತಂದ ಪ್ರಧಾನಮಂತ್ರಿ ವಯೋ ವಂದನ ಯೋಜನೆ ಮತ್ತು ಪ್ರಧಾನಮಂತ್ರಿ ಧನ ವರ್ಷ ಯೋಜನೆ ಖರೀದಿಯ ಗಡುವು ಸದ್ಯದಲ್ಲೇ ಅಂತ್ಯಗೊಳ್ಳುತ್ತಿದೆ.

ಎರಡು ಯೋಜನೆಗಳಲ್ಲಿ ಒಂದು ಸ್ಥಿರ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಜನರು ಹೆಚ್ಚಿನ ಲಾಭವನ್ನು ಪಡೆಯಬಹುದಾಗಿತ್ತು. ಇವುಗಳನ್ನು ಎಲ್ಐಸಿ ಮೂಲಕ ಖರೀದಿ ಮಾಡಬಹುದಾಗಿದೆ. ಎಲ್ಐಸಿ ಪ್ರಧಾನ ಮಂತ್ರಿ ವಯೋವಂದನ ಯೋಜನೆಯಲ್ಲಿ ನೀವು ಕನಿಷ್ಠ 1.5 ಲಕ್ಷದಿಂದ ಗರಿಷ್ಠ 15 ಲಕ್ಷ ದವರೆಗೆ ಹಣವನ್ನು ಹೂಡಿಕೆ ಮಾಡಬಹುದು.

ಇದರಿಂದ ನಿಮಗೆ ವಾರ್ಷಿಕವಾಗಿ ಒಂದು 1,000 ದಿಂದ 9,250 ರೂಗಳು ಮಾಸಿಕವಾಗಿ ಬಡ್ಡಿರೂಪದ ಹಣವಾಗಿ ನಿಮ್ಮ ಖಾತೆಗೆ ವರ್ಗಾವಣೆ ಆಗಲಿದೆ. ಇಷ್ಟು ಲಾಭದಾಯಕವಾಗಿರುವ ಈ ಯೋಜನೆ ಹಿರಿಯ ನಾಯಕರಿಗಾಗಿ ಹೇಳಿ ಮಾಡಿಸಿದ ಯೋಜನೆಯಾಗಿದೆ ಎಂದೂ ಹೇಳಬಹುದು. ಈ ಯೋಜನೆಯನ್ನು ಸಾಕಷ್ಟು ಜನ ಈಗಾಗಲೇ ಖರೀದಿಸಿದ್ದಾರೆ. ಇದರೊಂದಿಗೆ LIC ಯ ಪ್ರಧಾನ ಮಂತ್ರಿ ಧನ ವರ್ಷ ಯೋಜನೆ ಕೂಡ ಇಂತಹದೇ ಒಂದು ಯೋಚನೆ ಆಗಿದೆ.

10 ವರ್ಷಗಳವರೆಗೆ ಅಥವಾ 15 ವರ್ಷಗಳವರೆಗೆ ಈ ಯೋಜನೆಯನ್ನು ಖರೀದಿಸಿ ನೀವು ಇದರಲ್ಲಿ ಹಣ ಹೂಡುತ್ತಾ ಬರಬಹುದು. ಪ್ರಧಾನಮಂತ್ರಿ ಧನ ವರ್ಷ ಯೋಜನೆಯೂ ಕೂಡ ದೇಶದ ಎಲ್ಲಾ ನಾಗರಿಕರ ಗಮನ ಸೆಳೆದಿದೆ. ನೀವು ಸಹ ಈ ಯೋಜನೆಗಳನ್ನು ಖರೀದಿಸುವ ಇಚ್ಛೆ ಇದ್ದರೆ ಎಲ್ಐಸಿ ಅಧಿಕೃತ ವೆಬ್ಸೈಟ್ ಆದ www.licindia.in ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ ಖರೀದಿಸಬಹುದು ಅಥವಾ ನಿಮ್ಮ ಹತ್ತಿರದ ಎಲ್ಐಸಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಆಫ್ಲೈನ್ ಮೂಲಕ ಕೂಡ ಖರೀದಿಸಬಹುದು.

ಹೆಚ್ಚಿನ ವಿವರಗಳಿಗೆ LIC ಕೇಂದ್ರಗಳಿಗೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಳ್ಳಿ ಅಥವಾ ಅಧಿಕೃತ ವೆಬ್ಸೈಟ್ಗೆ ಹೋಗಿ ಮಾಹಿತಿ ಪಡೆದುಕೊಂಡು ಆದಷ್ಟು ಬೇಗ ಈ ಯೋಜನೆಗಳನ್ನು ಖರೀದಿಸಿ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಶೇರ್ ಮಾಡಿ

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now